Latest Updates
-
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್
International Yoga Day 2025: ಮಾನಸಿಕ ಆರೋಗ್ಯಕ್ಕೆ ಯೋಗ ಬಲ ನೀಡೋದು ಹೇಗೆ? ಯಾವ ಭಂಗಿ ಮಾಡಬೇಕು?
International Yoga Day 2025: ಯೋಗ ದೈಹಿಕವಾಗಿಯೂ ಹಾಗೆ ಮಾನಸಿಕವಾಗಿಯೂ ನಿಮ್ಮನ್ನು ಆರೋಗ್ಯವಾಗಿಡುವ ಅತ್ಯಂತ ಪ್ರಭಾವಿ ಅಂಶಗಳಲ್ಲಿ ಒಂದು ಎನ್ನಬಹುದು. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಯೋಗಭ್ಯಾಸದ ಕುರುಹುಗಳು ಇತಿಹಾಸದ ಪುಟದಲ್ಲಿರುವುದು ನೋಡಬಹುದು. ಹಾಗೆ ಯೋಗವು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹಾಗೂ ಖಿನ್ನತೆಯ ಲಕ್ಷಣಗಳಿಗೂ ಪರಿಹಾರವಾಗಬಲ್ಲದು ಎಂದು ಇತ್ತೀಚಿನ ವರದಿಯೊಂದು ಹೇಳಿದೆ.
ಇತ್ತೀಚಿನ ದಿನಗಳಲ್ಲಿ ದೈಹಿಕ ಆರೋಗ್ಯಕ್ಕೆ ಜನರು ಎಷ್ಟು ಮಹತ್ವ ನೀಡುತ್ತಾರೋ ಅದೇ ರೀತಿ ಮಾನಸಿಕ ಆರೋಗ್ಯಕ್ಕೂ ಕೂಡ ಅಷ್ಟೇ ಮಹತ್ವ ನೀಡುತ್ತಾರೆ. ಅದರರ್ಥ ಜನರು ಈಗ ಮಾನಸಿಕವಾಗಿಯೂ ಸದೃಢವಾಗಲು ಹಲವು ರೀತಿಯ ಪ್ರಯತ್ನದಲ್ಲಿ ತೊಡಗುವುದು ನೋಡಬಹುದು. ಒತ್ತಡದ ದಿನಗಳಲ್ಲಿ ನಮ್ಮ ದೇಹಕ್ಕೆ ವಿಶ್ರಾಂತಿ ನೀಡಿದಂತೆ ಮನಸ್ಸಿಗೂ ನೀಡುವುದು ಅವಶ್ಯ ಎಂಬುದನ್ನು ಅವರು ಕೂಡ ಅರಿತಿದ್ದಾರೆ.

ದೇಹಕ್ಕೆ ಅಗತ್ಯವಾದ ವ್ಯಾಯಾಮಕ್ಕಾಗಿ ಹೇಗೆ ವಾಕಿಂಗ್, ಡಯೆಟ್, ಉಪವಾಸ, ಜಿಮ್ ಸೇರಿದಂತೆ ಹಲವು ರೀತಿಯ ಕ್ರಮಕ್ಕೆ ಮುಂದಾಗುವುದು ನೋಡಬಹುದು. ಅದೇ ರೀತಿ ಮಾನಸಿಕ ಆರೋಗ್ಯ ಕಾಪಾಡಲು ಕೂಡ ವಿಶ್ರಾಂತಿ, ಪ್ರವಾಸ, ದೇವಾಲಯ ಭೇಟಿ ಇದರ ಜೊತೆಗೆ ಯೋಗ ಕೂಡ ಉತ್ತಮ ಅಭ್ಯಾಸ ಆಗಿರಲಿದೆ.
ನಾವಿಂದು ಯೋಗದಿಂದ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ. ಅದರಲ್ಲೂ ಈ ಅಂತರರಾಷ್ಟ್ರೀಯ ಯೋಗ ದಿನದ ಸಮಯದಲ್ಲಿ ಇದನ್ನು ತಿಳಿಯುವುದು ಮತ್ತಷ್ಟು ಮುಖ್ಯ ಎನಿಸಿದೆ.
'ಯೋಗವು ಆಳವಾದ ಉಸಿರಾಟ, ಧ್ಯಾನ ಮತ್ತು ಸಾವಧಾನತೆಯ ಅಂಶದೊಂದಿಗೆ ದೈಹಿಕ ಚಲನೆಯ ಈ ಪ್ರಬಲ ಸಂಯೋಜನೆಯನ್ನು ಹೊಂದಿರುವಂತೆ ತೋರುತ್ತದೆ' ಎಂದು ಹೂಸ್ಟನ್ ಮೆಥೋಡಿಸ್ಟ್‌ನ ಮನೋವೈದ್ಯಶಾಸ್ತ್ರ ಮತ್ತು ಟೆಲಿಸೈಕಿಯಾಟ್ರಿಯ ವೈದ್ಯಕೀಯ ನಿರ್ದೇಶಕಿ ಕೊರಿನ್ನಾ ಕೀನ್‌ಮನ್ ಹೇಳುತ್ತಾರೆ.
ಹಾಗಾದ್ರೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯಾವೆಲ್ಲಾ ಯೋಗ ಭಂಗಿ ಮಾಡಬೇಕು?
ಬಾಲಾಸನ: ನೀವು ಆಮೆಯಂತೆ ಕುಳಿತುಕೊಳ್ಳುವ ಯೋಗ ಭಂಗಿ ಇದಾಗಿದೆ. ನಿಮ್ಮ ಕೈಗಳನ್ನು ಮುಂದಕ್ಕೆ ಚಾಚಿರಬೇಕು, ಎರಡು ಕಾಲುಗಳ ನಡುವೆ ನಿಮ್ಮ ಇಡೀ ದೇಹವು ನೆಲದತ್ತ ಬಾಗಬೇಕು. ಮೇಲಿನಂತೆ ನೋಡಿದರೆ ಆಮೆಯಂತೆ ಕಾಣಬೇಕು. ನಿಮಗೆ ಮಾನಸಿಕ ವಿಶ್ರಾಂತಿ ಬೇಕೆನಿಸಿದಾಗಲೆಲ್ಲ ಈ ಆಸನ ಮಾಡಬಹುದು.
ಮಾರ್ಜರಿಯಾಸನ: ಈ ಯೋಗ ಭಂಗಿಯನ್ನು ಬೆಕ್ಕಿನಂತೆ ಮೂಳೆ ಬಾಗಿಸುವುದು ನೋಡಬಹುದು. ಮೊದಲು ಮುಂಗಾಲುಗಳನ್ನು ನೆಲಕ್ಕೆ ತಾಕಿಸಿ ಎರಡು ಕೈಗಳ ನೆಲಕ್ಕೆ ಇಟ್ಟು ತೆಲೆಯನ್ನು ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆ ಎತ್ತುವುದು ಹಾಗೆ ಕೆಳಗೆ ಮಾಡುವುದರಿಂದ ಉಸಿರಾಟ ಪ್ರಕ್ರಿಯೆ ಸರಾಗವಾಗಿ ನಡೆಯಲಿದೆ. ಇದು ನಿಮ್ಮ ಮಾನಸಿಕ ಆರೋಗ್ಯ ಕಾಪಾಡಲು ಬಹಳ ಉತ್ತಮ ಯೋಗವಾಗಿದೆ.
ಸುಖಾಸನ: ಈ ಆಸನದಲ್ಲಿ ಕಾಲನ್ನು ಮಡಚಿಕೊಂಡು ಕುಳಿತು ಹಾಗೆ ನೇರವಾಗಿ ಕುಳಿತು ಕೈಯನ್ನು ಮುಗಿದು ಕಣ್ಮುಚ್ಚಿ ಕುಳಿತುಕೊಳ್ಳುವುದರಿಂದ ಶಾಂತಿ ನೆಲೆಸಲಿದೆ. ಇದು ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಇದನ್ನು ಮಾಡಬೇಕಾಗುತ್ತದೆ.
ಬುದ್ಧ ಕೋನಾಸನ: ಈ ಭಂಗಿಯಲ್ಲಿ ನೀವು ಆರಾಮವಾಗಿ ಕುಳಿತುಕೊಂಡು ನಂತರ ಕಾಲಿನ ತುದಿಯನ್ನು ಎಷ್ಟು ಸಾಧ್ಯವೋ ಅಷ್ಟು ಒಳಗೆ ಎಳೆದುಕೊಳ್ಳಬೇಕು. ಈ ಭಂಗಿಯಲ್ಲಿ ನಿಮಗೆ ರಕ್ತ ಪರಿಚಲನೆ ವೇಗವಾಗಲಿದೆ.
ಉತ್ಥಾನಾಸನ: ಈ ಯೋಗ ಭಂಗಿಯಲ್ಲಿ ನಿಮ್ಮ ಮಾನಸಿಕ ಗೊಂದಲಗಳ ನಿವಾರಣೆ ಮಾಡಬಹುದು. ಮೊದಲು ನೇರವಾಗಿ ನಿಂತು ಬಳಿಕ ತಲೆಯನ್ನು ಮುಂಗಾಲಿಗೆ ತಾಕಿಸುವಂತೆ ಬಾಗಬೇಕು. ಕೈಗಳು ನೆಲಕ್ಕೆ ತಾಗಬೇಕು. ಈ ರೀತಿ ಹಲವು ಬಾರಿ ಮಾಡುವುದು ನಿಮ್ಮ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ.
ಯೋಗಭ್ಯಾಸದಿಂದ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವೇ?
ಇಂತಹ ಹಲವು ಆಸನಗಳು ನಿಮ್ಮ ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿಯಾಗಲಿದೆಯಂತೆ. ಹಾಗೆ ನಿತ್ಯವೂ ಈ ಯೋಗ ಭಂಗಿಗಳ ಅಭ್ಯಾಸ ಮಾಡುವುದು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ನೆಮ್ಮದಿಗೆ ಕಾರಣವಾಗಲಿದೆಯಂತೆ. 'ಯೋಗ ಅಭ್ಯಾಸವು ಖಂಡಿತ ಲಾಭದಾಯಕ. ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ, ನಮ್ಮ ಮನಸ್ಸಿನ ಮೇಲೆ ಹಿಡಿತ ಸಾಧಿಸಬೇಕಾದರೆ ಯೋಗ ಮಾಡುವುದು ಸಹಕಾರಿ. ಒತ್ತಡ ನಿವಾರಿಸಲು ಯೋಗಕ್ಕಿಂತ ಸುಲಭ ಹಾಗೆ ಉತ್ತಮ ದಾರಿ ಮತ್ತೊಂದಿಲ್ಲ. ಯೋಗ ಮಾಡಲು ಯಾವುದೇ ವಯಸ್ಸಿನ ಮಿತಿ ಕೂಡ ಇಲ್ಲ. ನೀವು ಯಾವುದೇ ಪರಿಸ್ಥಿತಿಯಲ್ಲಿದ್ದಾಗಲೂ ಕೂಡ ಯೋಗ ಮಾಡಬಹುದು. ಸಾಮಾನ್ಯವಾಗಿ ಯೋಗವು ಒತ್ತಡದ ಹಾರ್ಮೋನ್‌ಗಳ ಬಿಡುಗಡೆಯನ್ನು ಕಡಿಮೆ ಮಾಡಲಿವೆ. ಮನಸ್ಸಿನ ಮೇಲೆ ಹಿಡಿತ ಸಾಧಿಸುವುದರಿಂದ ನಿಮ್ಮ ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿರಲಿದೆ' ಎಂದು ಕ್ಲೀನಿಕಲ್ ಸೈಕಾಲಜಿಸ್ಟ್ ಅರುಣ್ ಕುಮಾರ್ ಹೇಳಿದ್ದಾರೆ.
ಯೋಗವು ಮಾನಸಿಕ ನೆಮ್ಮದಿಗೆ ಕಾರವಾಗುವ ಹಾರ್ಮೋನ್‌ಗಳ ಹರಿವು ಅಥವಾ ಬಿಡುಗಡೆಗೆ ಕಾರಣವಾಗಲಿದೆ. ಎಂಡಾರ್ಫಿನ್-ಗಾಮಾ ಅಮಿನೊಬ್ಯುಟ್ರಿಕ್ ಆಮ್ಲದಂತಹ ರಾಸಾಯನಿಕ ಬಿಡುಗಡೆಗೆ ಕಾರಣವಾಗಲಿದೆ. ಇದು ನಿಮ್ಮ ಆತಂಕ, ಗೊಂದಲ, ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಲಿದೆ. ಯೋಗವು ಉತ್ತಮ ಸಂಗೀತ ಕೇಳುವುದು, ನೈಸರ್ಗಿಕ ಸೌಂದರ್ಯ ಸವಿಯುವುದಕ್ಕೆ ಹೋಲಿಸಲಾಗುತ್ತದೆ.
ಯೋಗವು ನಮ್ಮ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುವ ಮೂಲಕ ಮತ್ತು ಖಿನ್ನತೆ, ಆತಂಕ ಮತ್ತು ಕೋಪದಂತಹ ನಕಾರಾತ್ಮಕ ಭಾವನೆಗಳನ್ನು ಕಡಿಮೆ ಮಾಡುವ ಮೂಲಕ ನಮ್ಮ ಮನಸ್ಸನ್ನು ಶಾಂತವಾಗಿಸಲು ಸಹಕಾರಿಯಾಗಲಿದೆ. ದಿನದಲ್ಲಿ ಕೇವಲ 15 ನಿಮಿಷಗಳ ಗಾಢವಾದ ಯೋಗವು ನಿಮ್ಮಲ್ಲಿ ನೆಮ್ಮದಿಯ ಭಾವನೆ ಮೂಡಿಸಲು ನೆರವಾಗಲಿದೆಯಂತೆ.



Click it and Unblock the Notifications
















