Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಿಪ್ಸ್ ತಿಂತಿರಾ.. ಹಾರ್ಟ್ ಅಟ್ಯಾಕ್ ಆಗುತ್ತೆ! ಸತ್ಯ ತಿಳಿದ್ರೆ, ಜೀವನದಲ್ಲಿ ಮತ್ತೆಂದೂ ಮುಟ್ಟಲ್ಲ
ಚಿಪ್ಸ್ ಎಂದರೆ ಎಲ್ಲರ ಬಾಯಲ್ಲಿ ನೀರು ಬರುವುದು ಸಹಜ. ಮಕ್ಕಳಿಂದಿಡಿದು ವಯಸ್ಸಾದವರಿಗೂ ಈ ಚಿಪ್ಸ್ (Chips) ಫೇವರಿಟ್. ಆದರೆ, ಆಲೂಗಡ್ಡೆ ಚಿಪ್ಸ್ ತಿನ್ನುವುದರಿಂದ ಹೃದಯಾಘಾತ (Heart attack) ಸಂಭವಿಸಬಹುದೇ? ಸತ್ಯ ತಿಳಿದರೆ, ನೀವು ಜೀವನದಲ್ಲಿ ಅಪ್ಪಿ ತಪ್ಪಿಯೂ ಮತ್ತೆಂದೂ ಚಿಪ್ಸ್ ಮುಟ್ಟಲ್ಲ. ಹೌದು, ಕ್ಯಾನ್ಸರ್ ವಿಚಾರದಲ್ಲಿ ನೋಡುವುದಾದರೆ ಆಲೂಗೆಡ್ಡೆ ಚಿಪ್ಸ್ (Potato Chips) ಡೇಂಜರ್. ಏಕೆಂದರೆ ಇದನ್ನು ಹೆಚ್ಚಿನ ತಾಪಮಾನದಲ್ಲಿ ಎಣ್ಣೆಯಲ್ಲಿ ಬೇಯಿಸಿರುತ್ತಾರೆ. ಇದರಲ್ಲಿ ಅಕ್ರಿಲಾಮೈಡ್ ಎಂಬ ಕ್ಯಾನ್ಸರ್ ಕಾರಕ ರಾಸಾಯನಿಕ ಇರುತ್ತದೆ. ನಿರಂತರವಾಗಿ ಯಾರು ಆಲೂಗಡ್ಡೆ ಚಿಪ್ಸ್ ತಿನ್ನುತಾರೆ, ಅವರಿಗೆ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಬರುವುದು ಗ್ಯಾರಂಟಿ.
ಚಿಪ್ಸ್ ತಯಾರಿಸುವಾಗ ಬಹಳಷ್ಟು ಅಡುಗೆ ಎಣ್ಣೆ ಮತ್ತು ಉಪ್ಪು ಬಳಸುತ್ತಾರೆ. ಅದಕ್ಕಾಗಿಯೇ ಅವುಗಳನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅವು ಯಾವುವು ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಆಲೂಗಡ್ಡೆ ಚಿಪ್ಸ್ ಎಲ್ಲಾ ವಯಸ್ಸಿನವರಿಗೂ ಇಷ್ಟವಾದ ತಿಂಡಿಯಾಗಿರುವುದರಿಂದ, ಹಲವರಿಗೆ ಇಷ್ಟವಾದ ತಿಂಡಿಯಾಗಿ ಮಾರ್ಪಟ್ಟಿದೆ. ಚಿಪ್ಸ್ ವಿಶೇಷವಾಗಿ ಚಿಕ್ಕ ಮಕ್ಕಳ ಫೇವರಿಟ್ ಆಗಿದೆ. ಆದರೆ, ಚಿಪ್ಸ್ ಅನ್ನು ಆಗಾಗ್ಗೆ ತಿನ್ನುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದು ಹೃದಯ ಕಾಯಿಲೆ ಮತ್ತು ಕ್ಯಾನ್ಸರ್ ಸೇರಿದಂತೆ ಇನ್ನಿತರೆ ಕಾಯಿಲೆಗಳಿಗೆ ಕಾರಣವಾಗಬಹುದು.

ಚಿಪ್ಸ್ ತಿನ್ನುವವರಿಗೆ ಶೇ.28 ರಷ್ಟು ಹೃದಯದ ಸಮಸ್ಯೆ
ವೈದ್ಯರು, ಹೆಚ್ಚು ಚಿಪ್ಸ್ ತಿನ್ನುವುದರಿಂದ ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಮಗೆ ತಿಳಿದಂತೆ ಚಿಪ್ಸ್‌ನಲ್ಲಿ ಬಹಳಷ್ಟು ಎಣ್ಣೆ ಮತ್ತು ಉಪ್ಪು ಇರುತ್ತದೆ. ಇವು ಅಧಿಕ ರಕ್ತದೊತ್ತಡ ಮತ್ತು ಹೃದಯ ಬಡಿತ ಕಡಿಮೆಯಾಗುವಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚು ಚಿಪ್ಸ್ ತಿನ್ನುವ ಜನರಿಗೆ ಹೃದಯದ ಸಮಸ್ಯೆಯ ಅಪಾಯವು ಶೇ.28 ರಷ್ಟು ಹೆಚ್ಚಾಗಿದೆ ಎಂದು 2019ರ 'ಹಾರ್ಟ್' ಜರ್ನಲ್ ಅಧ್ಯಯನ ಬಹಿರಂಗಪಡಿಸಿದೆ.
ಅತಿಯಾಗಿ ಚಿಪ್ಸ್ ತಿಂದರೆ ಹೊಟ್ಟೆ ನೋವು
ಅಮೇರಿಕನ್ ಕ್ಯಾನ್ಸರ್ ಅಸೋಸಿಯೇಷನ್ ಸಹ ಅಧ್ಯಯನ ನಡೆಸಿದೆ. ಇದರ ವರದಿಯ ಪ್ರಕಾರ, ಚಿಪ್ಸ್‌ನಲ್ಲಿ ಕಂಡುಬರುವ 'ಅಕ್ರಿಲಾಮೈಡ್' ಎಂಬ ರಾಸಾಯನಿಕವು ಕ್ಯಾನ್ಸರ್ ಅನ್ನು ಹೆಚ್ಚಿಸುವ ಅಪಾಯಕಾರಿ ವಸ್ತು ಎಂದು ಗುರುತಿಸಲಾಗಿದೆ. ಅಲ್ಲದೆ, ಹೆಚ್ಚು ಚಿಪ್ಸ್ ತಿನ್ನುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ಉಂಟಾಗಬಹುದು. ಚಿಪ್ಸ್‌ನಲ್ಲಿ ಕೊಬ್ಬು ಅಧಿಕವಾಗಿದೆ. ಇದು ದೇಹವು ಅವುಗಳನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅತಿಯಾಗಿ ಚಿಪ್ಸ್ ಸೇವಿಸುವುದರಿಂದ ಹೊಟ್ಟೆ ನೋವು, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗಬಹುದು.
ಇದಲ್ಲದೆ, ಆಲೂಗೆಡ್ಡೆ ಚಿಪ್ಸ್ ನಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಇದು ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಂತಹ ದಾಳಿಗಳಿಗೆ ನಮ್ಮ ದೇಹವನ್ನು ಕಡಿಮೆ ಸಿದ್ಧಪಡಿಸುತ್ತದೆ. ಅಲ್ಲದೆ, ಚಿಪ್ಸ್ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ. ಮಲಬದ್ಧತೆ ಮತ್ತು ಖಿನ್ನತೆ ಸಹ ಉಂಟಾಗುತ್ತದೆ. ಇತ್ತೀಚೆಗೆ ತೂಕ ಹೆಚ್ಚಿಸಿಕೊಂಡವರು ಅಥವಾ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಚಿಪ್ಸ್ ಸೇವಿಸುವುದನ್ನು ತಪ್ಪಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ನೀವು ಮನೆಯಲ್ಲಿಯೇ ಆರೋಗ್ಯಕರ ಚಿಪ್ಸ್ (aloo chips) ಮಾಡಿ ತಿಂದರೆ ಒಳ್ಳೆಯದು.
ಆಲೂಗಡ್ಡೆ ಚಿಪ್ಸ್ ಮಾಡಲು ಬೇಕಾಗುವ ಪದಾರ್ಥಗಳು
- ಆಲೂಗಡ್ಡೆ
- ಕಾರ್ನ್ ಫ್ಲೋರ್
- ಅರಶಿಣ
- ಇಂಗು
- ಖಾರದ ಪುಡಿ
- ಉಪ್ಪು
- ಅಡುಗೆ ಎಣ್ಣೆ
- ಕರಿಬೇವು
ಆಲೂಗಡ್ಡೆ ಚಿಪ್ಸ್ ಮಾಡುವ ವಿಧಾನ
ಮೊದಲು, ಎರಡು ಆಲೂಗಡ್ಡೆ ತಗೆದುಕೊಂಡು, ಸಿಪ್ಪೆ ತೆಗೆದು ನೀರಿನಲ್ಲಿ ಹಾಕಿ. ಬಳಿಕ ಸಣ್ಣ ಸಣ್ಣ ಕಡ್ಡಿಗಳಾಗಿ ತುರಿದುಕೊಳ್ಳಿ. ಕಟರ್ ಬಳಸಿ ತುರಿದುಕೊಳ್ಳಬಹುದು ಅಥವಾ ಚಾಕುವಿನಿಂದ ಸಣ್ಣದಾಗಿ ಕತ್ತರಿಸಿಕೊಳ್ಳಬಹುದು. ಈಗ ಆಲೂಗಡ್ಡೆಯನ್ನು ನೀರಿನಲ್ಲಿ ನೆನೆಯಲು ಬಿಡಿ. ಬಳಿಕ ಚೆನ್ನಾಗಿ ಈ ಆಲೂಗಡ್ಡೆಯನ್ನು ತೊಳೆಯಿರಿ. ಮೂರು ಬಾರಿ ಹೊಸ ನೀರು ಹಾಕಿ ತೊಳೆದರೆ ಒಳ್ಳೆಯದು. ಬಳಿಕ ಅದನ್ನು ಬಟ್ಟೆ ಮೇಲೆ ಹರಡಿ. ಇವು ಚೆನ್ನಾಗಿ ಒಣಗಲು ಬಿಡಿ. ಆಲೂಗಡ್ಡೆಯಲ್ಲಿರುವ ನೀರಿನ ಅಂಶ ಹೋಗುವವರೆಗೆ ಒಣಗಿಸಿ.
ಇದಾದ ಬಳಿಕ, ಈ ಆಲೂಗಡ್ಡೆ ತೆಗೆದುಕೊಂಡು ಅದಕ್ಕೆ ಉಪ್ಪು, ಇಂಗು, ಅರಶಿಣ, ಖಾರದ ಪುಡಿ ಹಾಕಿಕೊಂಡಿ ಮಿಕ್ಸ್ ಮಾಡಿ. ಬಳಿಕ ಅದಕ್ಕೆ ಕಾರ್ನ್ ಫ್ಲೋರ್ ಮಿಕ್ಸ್ ಮಾಡಿಕೊಳ್ಳಿ. ಆಲೂಗಡ್ಡೆ ಎಷ್ಟು ಒಣಗಿರುತ್ತದೆಯೋ ಅಷ್ಟು ಕ್ರಿಸ್ಪಿಯಾಗಿ ಚಿಪ್ಸ್ ಇರುತ್ತದೆ. ಬಳಿಕ ನೀವು ಒಂದು ಪಾತ್ರೆಯಲ್ಲಿ ಅಡುಗೆ ಎಣ್ಣೆ ಹಾಕಿ, ಒಲೆ ಮೇಲೆ ಇಡಿ. ಅದಕ್ಕೆ ಕತ್ತರಿಸಿಕೊಂಡ ಆಲೂಗಡ್ಡೆ ಹಾಕಿ. ಆಲೂಗಡ್ಡೆ ಬ್ರೌನ್ ಕಲರ್‌ಗೆ ಬರುವವರೆಗೂ ಚೆನ್ನಾಗಿ ಬೇಯಿಸಿ. ಈಗ ಕೊನೆಯದಾಗಿ ಕರಿಬೇವು ಹಾಕಿಕೊಂಡಿ ಎಣ್ಣೆಯಿಂದ ಎತ್ತಿಟ್ಟುಕೊಳ್ಳಿ. ಎಣ್ಣೆ ಇಳಿಯುವವರೆಗೂ ಹೊರಗಡೆ ಇಡಿ. ಇಷ್ಟು ಮಾಡಿದರೆ, ಆರೋಗ್ಯಕರ ಚಿಪ್ಸ್ ಮನೆಯಲ್ಲೇ ಸಿದ್ಧವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications