Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಒಮಿಕ್ರಾನ್ ಹರಡುತ್ತಿರುವಾಗ ಬಟ್ಟೆಯ ಮಾಸ್ಕ್ ಸುರಕ್ಷಿತವಲ್ಲ!
ಕೊರೊನಾ ಬಂದಾಗಿನಿಂದ ಅನೇಕ ರೂಪಾತರಗಳನ್ನು ನೊಡಿದ್ದೇವೆ. ಅದರಲ್ಲಿ ಡೆಲ್ಟಾ ತುಂಬಾ ಅಪಾರಿಯಾಗಿತ್ತು. ಇದೀಗ ಕೋವಿಡ್ 19ನ ಹೊಸ ರೂಪಾಂತರ ಒಮಿಕ್ರಾನ್ ಡೆಲ್ಟಾಗಿಂತ ವೇಗವಾಗಿ ಹರಡುತ್ತಿದೆ. ವಿಶ್ವದೆಲ್ಲಡೆ ಈ ಒಮಿಕ್ರಾನ್ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದೆ. ಭಾರತದಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಕೋವಿಡ್ 19 ಹರಡುವುದನ್ನು ತಡೆಗಟ್ಟಲು ಮತ್ತೊಮ್ಮೆ ನಾವು ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅದರಲ್ಲೂ ಹೊರಗಡೆ ಹೋಗುವಾಗ ಮಾಸ್ಕ್ ಧರಿಸಬೇಕು. ಕೊರೊನಾ ಪ್ರಾರಂಭದಲ್ಲಿ ಕಾಣಿಸಿದಾಗ ಸರ್ಜಿಕಲ್, N95 ಮಾಸ್ಕ್ ಧರಿಸುತ್ತಿದ್ದೇವೆ, ಆದರೆ ನಂತರ ಬಟ್ಟೆಯ ಮಾಸ್ಕ್ ಧರಿಸಲಾರಂಭಿಸಿದ್ದೇವೆ.
ಉಳಿದ ಮಾಸ್ಕ್‌ಗಳಿಗೆ ಹೋಲಿಸಿದರೆ ಬಟ್ಟೆಯ ಮಾಸ್ಕ್ ಧರಿಸಿದಾಗ ಸ್ವಲ್ಪ ಕಮಫರ್ಟ್ ಕೂಡ, ಅಲ್ಲದೆ ಇದನ್ನು ತೊಳೆದು ಬಳಸಬಹುದಾಗಿರುವುದರಿಂದ ಖರ್ಚು ಕೂಡ ಕಡಿಮೆ. ಆದರೆ ಒಮಿಕ್ರಾನ್ ವೇಗವಾಗಿ ಹರಡುತ್ತಿರುವಾಗ ಬಟ್ಟೆಯ ಮಾಸ್ಕ್ ಅಷ್ಟು ಸುರಕ್ಷಿತವಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.
ಏಕೆ ಬಟ್ಟೆ ಮಾಸ್ಕ್ ಈ ಸಮಯದಲ್ಲಿ ಸುರಕ್ಷತೆಯಲ್ಲ ಎಂದು ನೋಡೋಣ ಬನ್ನಿ:

ಬಟ್ಟೆ ಮಾಸ್ಕ್ ಏಕೆ ಸುರಕ್ಷಿತವಲ್ಲ?
ನಾವು ಹೆಚ್ಚಾಗಿ ಬಟ್ಟೆ ಮಾಸ್ಕ್ ಧರಿಸುತ್ತೇವೆ, ಕೆಲವೇ ಕೆಲವರಷ್ಟೇ ಬಟ್ಟೆ ಮಾಸ್ಕ್ ಜೊತೆಗೆ ಸರ್ಜಿಕಲ್ ಮಾಸ್ಕ್ ಧರಿಸುತ್ತೇವೆ. ಆದರೆ ಬಟ್ಟೆ ಮಾಸ್ಕ್ ದೊಡ್ಡ ವೈರಸ್ ಕಣಗಳನ್ನು ಮಾತ್ರ ತಡೆಗಟ್ಟುತ್ತೆ, ಅದೇ ಅತೀ ಸೂಕ್ಷ್ಮ ವೈರಸ್ ಕಣಗಳನ್ನು ತಡೆಗಟ್ಟುವುದಿಲ್ಲ. ಆದ್ದರಿಂದ ಆರೋಗ್ಯ ತಜ್ಞರು ಬಟ್ಟೆ ಮಾಸ್ಕ್ ಬಳಸದಂತೆ ಸಲಹೆ ನೀಡುತ್ತಿದ್ದಾರೆ.

ಬಟ್ಟೆ ಮಾಸ್ಕ್
ಬಟ್ಟೆ ಮಾಸ್ಕ್‌ಗಳನ್ನು ಮರು ಬಳಕೆ ಮಾಡಬಹುದಾಗಿದೆ. ಬಳಸಿ ಬಿಸಾಡುವ ಮಾಸ್ಕ್‌ಗಿಂತ ಬಟ್ಟೆಯ ಮಾಸ್ಕ್ ಬಳಸುವುದರಿಂದ ಹಣದ ಉಳಿತಾಯ ಆಗುತ್ತೆ. ಈ ಮಾಸ್ಕ್ ದೊಡ್ಡ ಕಣಗಳ ವೈರಸ್ ತಡೆಗಟ್ಟುತ್ತೆ, ಆದರೆ ಅತೀಯಾದ ಸೂಕ್ಷ್ಮವಾದ ವೈರಸ್ ಕಣಗಳು ಒಳ ಹೀಗುವ ಸಾಧ್ಯತೆ ಇದೆ.

ಸರ್ಜಿಕಲ್ ಮಾಸ್ಕ್
ಸರ್ಜಿಕಲ್ ಮಾಸ್ಕ್ ಅನ್ನು ಒಂದು ಬಾರಿಯಷ್ಟೇ ಬಳಸಿ. ತುಂಬಾ ಸಡಿಲವಾದ ಸರ್ಜಿಕಲ್ ಮಾಸ್ಕ್ ಧರಿಸಬೇಡಿ. ಅಲ್ಲದೆ ಮೂಗು ಕೆಳಗಡೆ ಅಥವಾ ಗಲ್ಲಕ್ಕೆ ಹಾಕಬೇಡಿ, ಮಾಸ್ಕ್ ಅನ್ನು ಬಿಗಿಯಾಗಿ ಧರಿಸಿ. ಈ ಒಮಿಕ್ರಾನ್ ಸಮಯದಲ್ಲಿ ಒಂದು ಸರ್ಜಿಕಲ್ ಮಾಸ್ಕ್ ಧರಿಸುವುದು ಕೂಡ ಸುರಕ್ಷಿತವಲ್ಲ.

ಡಬಲ್ ಲೇಯರ್ ಮಾಸ್ಕ್
ಈ ಸಮಯದಲ್ಲಿ ನೀವು ಒಂದು ಬಟ್ಟೆಯ ಮಾಸ್ಕ್, ಸರ್ಜಿಕಲ್ ಮಾಸ್ಕ್ ಧರಿಸಿ ಅಥವಾ ಎರಡು ಸರ್ಜಿಕಲ್ ಮಾಸ್ಕ್ ಧರಿಸಿ. ಹೀಗೆ ಧರಿಸುವುದರಿಂದ ಸೇ.75ರಷ್ಟು ಸುರಕ್ಷತೆ ದೊರೆಯುವುದು.

N95 ಮಾಸ್ಕ್
N95 ಮಾಸ್ಕ್ ಧರಿಸುವುದರಿಂದ ಶೇ. 99ರಷ್ಟು ಸುರಕ್ಷತೆ ದೊರೆಯುವುದು. ಆದರೆ N95 ಮಾಸ್ಕ್ ತುಂಬಾ ಹೊತ್ತು ಧರಿಸಿರಲು ಸಾಧ್ಯವಿಲ್ಲ, ನೀವು ರೋಗಿಯನ್ನು ಆರೈಕೆ ಮಾಡುವಾಗ ಅಥವಾ ಜನರ ಗುಂಪಿರುವ ಕಡೆ ಹೋಗುವಾಗ ಇಂಥ ಮಾಸ್ಕ್ ಧರಿಸುವುದು ಒಳ್ಳೆಯದು.

ವಿಶ್ವ ಸಂಸ್ಥೆ ಪ್ರಕಾರ ಮಾಸ್ಕ್ ಹೇಗೆ ಧರಿಸಬೇಕು?
* ಮಾಸ್ಕ್ ಧರಿಸುವ ಮುನ್ನ ಕೈಗಳನ್ನು ತೊಳೆಯಿರಿ.
* ನಿಮ್ಮ ಮೂಗು, ಬಾಯಿ, ಗಲ್ಲವನ್ನು ಮುಚ್ಚುವಂತೆ ಮಾಸ್ಕ್ ಧರಿಸಿ.
* ಮಾಸ್ಕ್ ಬಿಚ್ಚಿದ ಬಳಿಕ ಅದನ್ನು ತೆಗೆದು ಕಸದ ಬುಟ್ಟಿಗೆ ಹಾಕಿ ನಂತರ ಕೈಗಳನ್ನು ಸೋಪು ಹಚ್ಚಿ ತೊಳೆಯಿರಿ.
* ಒಮ್ಮೆ ಬಳಸಿದ ಸರ್ಜಿಕಲ್ ಮಾಸ್ಕ್ ಮತ್ತೆ ಬಳಸಬೇಡಿ.



Click it and Unblock the Notifications
