Latest Updates
-
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ!
ಏನಿದು ಯೆಲ್ಲೋ ಫಂಗಸ್?: ಸೋಂಕಿನ ಲಕ್ಷಣ, ಕಾರಣ, ಚಿಕಿತ್ಸೆ ಇಲ್ಲಿದೆ ಸಂಪೂರ್ಣ ಮಾಹಿತಿ
ದೇಶದಲ್ಲಿ ಕೋವಿಡ್ ರೋಗಿಗಳು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಲೇ ಇದ್ದಾರೆ, ಇದರ ಬೆನ್ನಲ್ಲೇ ಕೊರೊನಾ ವೈರಸ್‌ನ ಹೊಸ ಹೊಸ ರೂಪಾಂತರಿ ತಳಿಗಳು ಸಹ ಪತ್ತೆಯಾಗುತ್ತಲೇ ಇದೆ. ದಿನಕ್ಕೊಂದು ಬಣ್ಣದ ಶಿಲೀಂಧ್ರಗಳು ಜನರನ್ನು ಬೆಚ್ಚಿಬೀಳಿಸುತ್ತಿದೆ.

ಕೊರೊನಾ ವೈರಸ್‌ನ ರೂಪಾಂತರಿ ತಳಿಗಳಾದ ಕಪ್ಪು ಶಿಲೀಂಧ್ರ, ಬಿಳಿ ಶಿಲೀಂಧ್ರದ ನಂತರ ಇದೀಗ ಮತ್ತೊಂದು ಹಳದಿ ಶಿಲೀಂಧ್ರ (ಯೆಲ್ಲೋ ಫಂಗಸ್) ಪತ್ತೆಯಾಗಿದೆ. ಆಂತರಿಕವಾಗಿ ಬೆಳೆಯುವ ಹಳದಿ ಶಿಲೀಂಧ್ರವು ಇತರ ಎರಡು ಪ್ರಕಾರಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತದೆ ಮತ್ತು ಈ ರೋಗಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದರೆ ಆರಂಭಿಕವಾಗಿಯೇ ಚಿಕಿತ್ಸೆ ಪಡೆಯುವುದು ಸುರಕ್ಷಿತ ಎನ್ನುತ್ತಾರೆ ವೈದ್ಯರು.
ದೇಶದಲ್ಲೇ ಮೊದಲ ಯೆಲ್ಲೋ ಫಂಗಸ್ ಸೋಂಕಿನ ಪ್ರಕರಣ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಪತ್ತೆಯಾಗಿದೆ. ಏನಿದು ಯೆಲ್ಲೋ ಫಂಗಸ್, ಇದರ ಲಕ್ಷಣಗಳೇನು, ಇದರಿಂದಾಗುವ ಅಪಾಯ ಸಾಧ್ಯತೆಗಳೇನು, ಇದಕ್ಕಿರುವ ಚಿಕಿತ್ಸೆ ಏನು? ಮುಂದೆ ತಿಳಿಯೋಣ:

ಯೆಲ್ಲೋ ಫಂಗಸ್‌ನ ರೋಗ ಲಕ್ಷಣಗಳು
ಯೆಲ್ಲೋ ಫಂಗಸ್ ಸೋಂಕಿತರು ಆಲಸ್ಯ, ಹಸಿವಿಲ್ಲದಿರುವಿಕೆ ಅಥವಾ ಕಡಿಮೆ ಹಸಿವು, ತೂಕ ಇಳಿಕೆ ಸಾಮಾನ್ಯ ರೋಗಲಕ್ಷಣಗಳನ್ನು ಎದುರಿಸಬೇಕಾಗುತ್ತದೆ. ಆದರೆ ಇದರ ತೀವ್ರತೆ ಹೆಚ್ಚಾದರೆ ಕಣ್ಣುಗಳು ಒಳಗೆ ಹೋಗಬಹುದು ಅಥವಾ ಕೀವು ರಚನೆ ಮತ್ತು ಸೋರಿಕೆಯಾಗಬಹುದು ಎನ್ನಲಾಗಿದೆ. ಇಲ್ಲಿ ಸವಾಲು ಎಂದರೆ, ಶಿಲೀಂಧ್ರವು ಈ ಗಾಯಗಳನ್ನು ಗುಣಪಡಿಸಲು ಅಡ್ಡಿಯಾಗುತ್ತದೆ, ಅಂಗಾಂಗ ವೈಫಲ್ಯ ಉಂಟಾಗಬಹುದು, ಅಪೌಷ್ಟಿಕತೆಗೆ ಕಾರಣವಾಗಬಹುದು ಮತ್ತು ಅಂತಿಮವಾಗಿ ವಿಪರೀತ ಸಂದರ್ಭಗಳಲ್ಲಿ ನೆಕ್ರೋಸಿಸ್‌ಗೆ ಸಹ ಕಾರಣವಾಗಬಹುದು.

ಹಳದಿ ಶಿಲೀಂಧ್ರಕ್ಕೆ ಕಾರಣಗಳು
ಹಳದಿ ಶಿಲೀಂಧ್ರ ಹರಡಲು ಕಾರಣಗಳು ಹಳೆಯ ಹಾಳಾದ ತೇವಾಂಶಭರಿತ ಆಹಾರ ಸೇವನೆ, ಅಶುಚಿತ್ವ ಎಂದು ಹೇಳಲಾಗುತ್ತದೆ. ಹಳೆಯ ಆಹಾರಗಳ ಸೇವನೆ ತಪ್ಪಿಸುವುದು, ನೈರ್ಮಲ್ಯ ಕಾಪಾಡುವ ಮೂಲಕ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಹೆಚ್ಚು ಹರಡದಂತೆ ತಡೆಯಬಹುದು. ಮನೆ ಅಥವಾ ಕಚೇರಿಗಳಲ್ಲಿ ಮುಚ್ಚಿದ ಜಾಗಗಳಲ್ಲಿ, ಹೆಚ್ಚು ಸೂರ್ಯನ ಬಿಸಿಲು ಬೀಳದ ಸ್ಥಳಗಳಲ್ಲಿ ತೇವಾಂಶವು ಹೆಚ್ಚು ಇರಬಾರದು, ಮನೆಯನ್ನು ಅಚ್ಚುಕಟ್ಟಾಗಿ ಇಡುವ ಮೂಲಕ ಶಿಲೀಂಧ್ರ ಸೋಂಕಿನಿಂದ ದೂರ ಇರಬಹುದು. ಹೆಚ್ಚಿನ ತೇವಾಂಶದ ವಾತಾವರಣವು ಶಿಲೀಂಧ್ರದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಯೆಲ್ಲೊ ಫಂಗಸ್ ರೋಗಕ್ಕೆ ಚಿಕಿತ್ಸೆ
ಆರಂಭಿಕ ಹಂತದಲ್ಲೇ ಯೆಲ್ಲೊ ಫಂಗಸ್ ಇರುವ ಬಗ್ಗೆ ಪತ್ತೆಯಾದರೆ ರೋಗವನ್ನು ಗುಣಪಡಿಸಬಹುದು. ಯೆಲ್ಲೋ ಫಂಗಸ್ ಚಿಕಿತ್ಸೆಯಲ್ಲಿ ಶಿಲೀಂಧ್ರ ವಿರೋಧಿ ಔಷಧ "ಆಂಫೊಟೆರಿಸಿನ್ ಬಿ ಇಂಜೆಕ್ಷನ್" ಅನ್ನು ಬಳಸಲಾಗುತ್ತದೆ.

ಭಾರತದಲ್ಲಿ ಹಳದಿ ಶಿಲೀಂಧ್ರ ಪ್ರರಣಗಳು
ಭಾರತದಲ್ಲಿ ಹಳದಿ ಶಿಲೀಂಧ್ರದ ಮೊದಲ ಪ್ರಕರಣ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಪತ್ತೆಯಾಗಿದ್ದು, ಈವರೆಗೂ ಮತ್ತೆ ಬೇರೆ ಯಾವುದೇ ರಾಜ್ಯಗಳು ಈ ಸೋಂಕಿನ ಬಗ್ಗೆ ವರದಿ ಮಾಡಿಲ್ಲ.

ಮಧುಮೇಹಿಗಳೇ ಎಚ್ಚರ!
ಬ್ಲ್ಯಾಕ್ ಫಂಗಸ್ ಪ್ರಕರಣಗಳ ಹೆಚ್ಚಳದಿಂದ COVID-19 ಸೋಂಕಿತರ ಪ್ರಕರಣಗಳು ಸಹ ಹೆಚ್ಚುತಲೇ ಇದೆ. ಭಾರತದಾದ್ಯಂತ ಪ್ರಸ್ತುತ 8,848 ಕಪ್ಪು ಶಿಲೀಂಧ್ರಗಳ ಪ್ರಕರಣಗಳಿವೆ. ಮತ್ತೊಂದೆಡೆ ಬಿಳಿ ಶಿಲೀಂಧ್ರವು ಕಪ್ಪು ಶಿಲೀಂಧ್ರಕ್ಕಿಂತ ಕಡಿಮೆ ಅಪಾಯಕಾರಿ ಎಂದು ಹೇಳಲಾಗುತ್ತದೆ. ಈ ಶಿಲೀಂಧ್ರ ಸೋಂಕು ಹೆಚ್ಚಾಗಿ ಮಧುಮೇಹ ಇರುವವರಲ್ಲಿ ಅಥವಾ COVID-19 ಚಿಕಿತ್ಸೆ ವೇಳೆ ಅತಿಯಾಗಿ ಸ್ಟೀರಾಯ್ಡ್‌ಗಳನ್ನು ಬಳಸಿದವರಲ್ಲಿ ಹೆಚ್ಚಾಗಿ ಕಂಡುಬಂದಿದೆ.



Click it and Unblock the Notifications











