Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಕೋವಿಡ್ 19 ಆ್ಯಂಟಿಬಾಡಿ ಪರೀಕ್ಷೆ : ಏನಿದು, ಇದರ ಸತ್ಯಾಂಶಗಳೇನು?
ಕೊರೊನಾ ಲಸಿಕೆ ನನ್ನ ಮೇಲೆ ಪರಿಣಾಮ ಬೀರಿದೆಯೇ? ಇದು ತೆಗೆದುಕೊಂಡ ಬಳಿಕ ನನ್ನಲ್ಲಿ ಆ್ಯಂಟಿ ಬಾಡಿ ಅಧಿಕವಾಗಿದೆಯೇ ಎಂಬ ಪ್ರಶ್ನೆ ಲಸಿಕೆ ತೆಗೆದುಕೊಂಡ ಪ್ರತಿಯೊಬ್ಬರಲ್ಲೂ ಇದೆ. ಈ ರೀತಿಯ ಪ್ರಶ್ನೆಯಿಂದಾಗಿ ಕೆಲವರು ಆ್ಯಂಟಿಬಾಡಿ ಪರೀಕ್ಷೆ ಮಾಡಿಸುತ್ತಿದ್ದಾರೆ.
ಕೊರೊನಾ 2ನೇ ಅಲೆ ದೇಶದಲ್ಲಿ ಕಡಿಮೆಯಾದ ಕಾರಣ ಮತ್ತೆ ಆಫೀಸ್, ಉದ್ಯಮಗಳು, ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿವೆ. ಕೆಲವು ಆಫೀಸ್‌ಗಳಲ್ಲಿ ಉದ್ಯೋಗಿಗಳಿಗೆ ಆಫೀಸ್‌ಗೆ ಬರಲು ಹೇಳುತ್ತಿದ್ದಾರೆ, ಆಫೀಸ್‌ಗೆ ಬರುವ ಕೋವಿಡ್ ಲಸಿಕೆ ಪಡೆದಿರಬೇಕು ಹಾಗೂ ಆ್ಯಂಟಿಬಾಡಿ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚಿಸುತ್ತಿದ್ದಾರೆ. ಆ್ಯಂಟಿ ಬಾಡಿ ಪರೀಕ್ಷೆ ಮಾಡಿಸಿದಾಗ ಅವರೂ ಇನ್ನೂ ಕ್ವಾರಂಟೈನ್‌ನಲ್ಲಿ ಇದ್ದು ಬರಬೇಕೆ? ಇಲ್ಲಾ ಕೆಲಸಕ್ಕೆ ಬರಬಹುದಾ ಎಂಬುವುದನ್ನು ನಿರ್ಧರಿಸಲಾಗುವುದು.
ಆ್ಯಂಟಿಬಾಡಿ ಪರೀಕ್ಷೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುವುದರ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಾ ಇವೆ. ಈ ಪರೀಕ್ಷೆ ಮಾಡುವುದರಿಂದ ಕೊರೊನಾವೈರಸ್ ತಡೆಗಟ್ಟುವ ಸಾಮರ್ಥ್ಯ ವ್ಯಕ್ತಿಯಲ್ಲಿ ಇದೆ ಎಂದು ತಿಳಿಯುವುದೇ? ಈ ಪರೀಕ್ಷೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:

ಆ್ಯಂಟಿಬಾಡೀಸ್ ಎಂದರೇನು?
ಆ್ಯಂಟಿಬಾಡೀಸ್ ಎನ್ನುವುದು ಒಂದು ಪ್ರೊಟೀನ್ ಆಗಿದ್ದು ಇದನ್ನು ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯೂ ಉತ್ಪಾದಿಸುತ್ತದೆ. ಆದರೆ ಇವುಗಳು ಒಂದು ನಿರ್ದಿಷ್ಟ ಕಾಯಿಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ ಕೊರೊನಾ ತಡೆಗಟ್ಟುವ ಆ್ಯಂಟಿಬಾಡಿಗಳಾದರೆ ಅವು ಕೊರೊನಾವೈರಸ್ ವಿರುದ್ಧ ಮಾತ್ರ ಹೋರಾಡುತ್ತದೆ, ಇದರ ಸೋಂಕು ತಡೆಗಟ್ಟಲ್ಲ. ಅದೇ ರೀತಿ ಬೇರೆ ಕಾಯಿಲೆ ತಡೆಗಟ್ಟುವ ಆ್ಯಂಟಿ ಬಾಡೀಸ್ ಕೊರೊನಾವೈರಸ್ ತಡೆಗಟ್ಟಲ್ಲ.
ಆ್ಯಂಟಿಬಾಡಿ ಪರೀಕ್ಷೆಯಲ್ಲಿ ಯಾವ ವೈರಸ್ ವಿರುದ್ಧ ಹೋರಾಡುತ್ತದೆ ಎಂದು ನೋಡುತ್ತಿಲ್ಲ, ಬದಲಿಗೆ ಯಾವುದೇ ಕಾಯಿಲೆ ವಿರುದ್ಧ ಹೋರಾಡುವ ಶಕ್ತಿ ನಿಮ್ಮ ದೇಹದಲ್ಲಿ ಇದೆಯೇ ಎಂಬುವುದು ನೋಡಲಾಗುತ್ತಿದೆ.

ಆ್ಯಂಟಿಬಾಡೀಸ್ ಹೇಗೆ ಕಾರ್ಯನಿರ್ವಹಿಸುತ್ತಿದೆ?
ನಮ್ಮ ದೇಹದಲ್ಲಿ ಪ್ರಮುಖವಾಗಿ 5 ಬಗೆಯ ಆ್ಯಂಟಿಬಾಡೀಸ್ ಉತ್ಪತ್ತಿಯಾಗುತ್ತದೆ. ಈ
ಆ್ಯಂಟಿಬಾಡಿಗಳು ಸೋಂಕು ತಗುಲಿ ಚೇತರಿಸಿದ ಬಳಿಕ ಉಂಟಾಗುತ್ತದೆ. ಪರೀಕ್ಷೆಯಲ್ಲಿ ಹಿಮೋಗ್ಲೋಬಿನ್ A (IgA), M (IgM) ಮತ್ತು (IgG) 3 ಬಗೆಯಷ್ಟೇ ನೋಡಲಾಗುವುದು.
ಯಾವುದಾದರೂ ವಿದೇಶಿ ಅಥವಾ ಅಪರಿಚಿತ ವೈರಸ್ ತಾಳಿಯಾದಾಗ ಅದನ್ನು ತಡೆಗಟ್ಟಲು ಬಿ ಲಿಂಪೋಸೈಟ್ಸ್ ಉತ್ಪತ್ತಿಯಾಗುತ್ತದೆ ನಂತರ IgG ಅಥವಾ IgA ಆ್ಯಂಟಿಬಾಡಿಗಳು ಉತ್ಪತ್ತಿಯಾಗುವುದು. IgG ರಕ್ತದಲ್ಲಿ ಸಾಮಾನ್ಯವಾಗಿ ಕಂಡು ಬರುವ ಆ್ಯಂಟಿಬಾಡಿಗಳಾಗಿದ್ದು ಇದು ಬ್ಯಾಕ್ಟಿರಿಯಾ ಹಾಗೂ ವೈರಸ್‌ಗಳ ವಿರುದ್ಧ ಹೋರಾಡುತ್ತದೆ. IgA ಆ್ಯಂಟಿಬಾಡಿಗಳು ಎಂಜಲಿನಲ್ಲಿ ಕಂಡು ಬರುವುದು.

ಆ್ಯಂಟಿಬಾಡಿ ಸಾಮರ್ಥ್ಯ ಎಷ್ಟು ಸಮಯ ಇರುವುದು?
ಸಿಡಿಸಿ ( Centers for Disease Control and Prevention) ಪ್ರಕಾರ IgM ಮತ್ತು IgG ಆ್ಯಂಟಿಬಾಡಿಗಳು ಲಸಿಕೆ ಪಡೆದ 2-3 ವಾರಗಳ ಬಳಿಕ ಉತ್ಪತ್ತಿಯಾಗುವುದು, ಆದರೆ ಇವುಗಳು ದೇಹದಲ್ಲಿ ಎಷ್ಟು ಸಮಯ ಇರುತ್ತದೆ ಎಂಬುವುದೂ ಇನ್ನೂ ತಿಳಿದು ಬಂದಿಲ್ಲ.

ಆ್ಯಂಟಿಬಾಡಿ ಪರೀಕ್ಷೆಯಲ್ಲಿ ನೆಗೆಟಿವ್ ಬಂದ್ರೆ?
ಒಂದು ವೇಳೆ ಆ್ಯಂಟಿಬಾಡಿ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದ್ರೆ ಇನ್ನೂ ಕೊರೊನಾವೈರಸ್ ಬಂದಿಲ್ಲಾ ಅಂದ್ರೆ ಅಥವಾ ಕೊರೊನಾದಿಂದ ಚೇತರಿಸಿದ ಬಳಿಕ ಅಥವಾ ಲಸಿಕೆ ಪಡೆದ ಬಳಿಕ ಬೇಗನೆ ಪರೀಕ್ಷೆ ಮಾಡಿಸಿದ್ದರೆ ವರದಿ ನೆಗೆಟಿವ್ ಬರುವುದು.

ಯಾವಾಗ ಆ್ಯಂಟಿಬಾಡಿ ಪರೀಕ್ಷೆ ಮಾಡಿಸಬೇಕು
ಕೊರೊನಾ ಲಸಿಕೆ ಪಡೆದವರು 2-3 ವಾರಗಳ ಬಳಿಕ ಪರೀಕ್ಷೆ ಮಾಡಬೇಕು, ಇಲ್ಲದಿದ್ದರೆ ವರದಿ ನೆಗೆಟಿವ್ ಬರುವ ಸಾಧ್ಯತೆ ಇದೆ.
ಆ್ಯಂಟಿಬಾಡಿ ಪರೀಕ್ಷೆ ವರದಿ ಪಾಸಿಟಿವ್ ಬಂದ್ರೆ?
ಆ್ಯಂಟಿಬಾಡಿ ಪರೀಕ್ಷೆ ಮಾಡಿಸಿದಾಗ ಅದು ಪಾಸಿಟಿವ್ ಬಂದ್ರೆ ರೋಗದ ವಿರುದ್ಧ ಹೋರಾಡುವ ಸಾಮರ್ಥ್ಯ ಬಂದಿದೆ ಎಂದು ಹೇಳಬಹುದು. ನಿಮ್ಮ ದೇಹವು ಆ ವೈರಸ್ ಅನ್ನು ಗುರುತಿಸಿ ಹೋರಾಡುವಲ್ಲಿ ಸಮರ್ಥವಾಗುವುದು.

ಆ್ಯಂಟಿಬಾಡಿ ಹಾಗೇ ಇರುವುದೇ?
ಇಲ್ಲ, ಕೆಲವು ತಿಂಗಳು ಕಳೆಯುತ್ತಿದ್ದಂತೆ ದೇಹದಲ್ಲಿ ಆ ಆ್ಯಂಟಿಬಾಡಿಗಳ ಸಾಮರ್ಥ್ಯ ಕಡಿಮೆಯಾಗುವುದು, ಆದರೆ ಎಷ್ಟು ಸಮಯ ಇರುತ್ತದೆ ಎಂದು ನಿಖರವಾಗಿ ಹೇಳಲು ಇನ್ನೂ ಸಾಧ್ಯವಾಗುತ್ತಿಲ್ಲ. ಕೆಲವರಲ್ಲಿ 3 ತಿಂಗಳು, ಇನ್ನೂ ಕೆಲವರಲ್ಲಿ 6 ತಿಂಗಳು ಕಂಡು ಬಂದಿದೆ, ಇನ್ನೂ ಹೆಚ್ಚಿನ ಸಮಯ ಕೂಡ ಕಾಣಿಸಿಕೊಳ್ಳಬಹುದು. ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ. ಸಂಶೋಧಕರ ಪ್ರಕಾರ ಆ್ಯಂಟಿಬಾಡಿ ಪರೀಕ್ಷೆ ಮಾಡಿಸುವುದರಿಂದ ಭವಿಷ್ಯದಲ್ಲಿ ಕೊರೊನಾ ಬಾರದಂತೆ ಮುನ್ನೆಚ್ಚರಿಕೆವಹಿಸಬಹುದು ಎಂದಿದ್ದಾರೆ.

ವಿರುದ್ಧ ವಾದವೂ ಇದೆ
ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಈ ರೀತಿಯ ಪರೀಕ್ಷೆ ಸರಿಯಲ್ಲ, ಒಂದು ವೇಳೆ ಪರೀಕ್ಷೆ ವರದಿ ತಪ್ಪಾದರೆ ಅಂದ್ರೆ ನೆಗೆಟಿವ್ ಬಂದ್ರೆ ಜನರು ಜ್ವರ ತಡೆಟ್ಟುವ ಮಾತ್ರೆಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ, ಇದು ಅಪಾಯಕಾರಿ ಎಂದು ಹೇಳಿದೆ.



Click it and Unblock the Notifications
