Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕೊರೊನಾ ತಡೆಗೆ ಗ್ಲೌಸ್ ಬಳಸಿ ತರಕಾರಿ ತೊಳೆಯುತ್ತಿದ್ದೀರಾ? ಡೇಂಜರ್
ಕೊರೊನಾದ ಆರ್ಭಟ ಸದ್ಯಕ್ಕಂತೂ ಮುಗಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಜನರಿಗೆ ಮನೆಯಲ್ಲಿ ಇರಲೂ ಆಗ್ತಾ ಇಲ್ಲ, ಹೊರಗಡೆ ಓಡಾಡಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿಯೇ ಇದ್ದರೆ ಹೊಟ್ಟೆ ತುಂಬಿಸುವುದು ಹೇಗೆ, ಅಗ್ಯತ ವಸ್ತುಗಳನ್ನು ತರುವವರು ಯಾರು ಎಂಬ ಪ್ರಶ್ನೆ... ಹೊರಗಡೆ ಹೋದರೆ ಎಲ್ಲಿ ಕೊರೊನಾ ಅಂಟಿ ಬಿಡುತ್ತದೋ ಎಂಬ ಭಯದಿಂದಲೇ ಹೋಗಿ ಬರಬೇಕಾಗುತ್ತದೆ.

ಒಟ್ಟಿನಲ್ಲಿ ಕೊರೊನಾ ಭಯದಿಂದಾಗಿ ಜನರ ನೆಮ್ಮದಿಯೇ ಇಲ್ಲವಾಗಿದೆ. ಮನೆಗೆ ಏನೇ ವಸ್ತುಗಳನ್ನು ತರುವುದಾದರೂ ತೊಳೆದು ತರುವುದು, ಚಪ್ಪಲಿಯನ್ನು ಮನೆಯ ಹೊರಗಡೆಯೇ ಬಿಡುವುದು, ಮನೆಯ ನೆಲವನ್ನು ಕ್ರಿಮಿನಾಶಕ ಬಳಸಿ ಶುದ್ಧಗೊಳಿಸುವುದು ಹೀಗೆ ಕೊರೊನಾವೈರಸ್ ತಡೆಗಟ್ಟಲು ಪ್ರತಿಯೊಬ್ಬರು ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.
ಇನ್ನು ಹೊರಗಡೆಯಿಂದ ತರಕಾರಿಯನ್ನು ತರುವಾಗ ಎಲ್ಲಿ ಅದರಲ್ಲಿ ಕೊರೊನಾವೈರಸ್ ಅಂಟಿಕೊಂಡಿರುತ್ತದೋ ಎಂಬ ಆತಂಕ ಎಲ್ಲರಲ್ಲಿ ಇದ್ದೇ ಇದೆ. ಕೆಲವರು ತರಕಾರಿಯನ್ನು ಸೋಪ್ ನೀರಿನಲ್ಲಿ ತೊಳೆಯುವುದು ಮಾಡುತ್ತಾರೆ. ಇನ್ನು ಕೆಲವರು ಗ್ಲೌಸ್ ಹಾಕಿ ತೊಳೆಯುತ್ತಾರೆ. ಆದರೆ ಅದು ಸರಿಯಲ್ಲ. ದಿನಸಿ ವಸ್ತುಗಳನ್ನು ಕೊಳ್ಳುವಾಗ ಹಾಗೂ ಕೊಂಡು ತಂದ ಮೇಲೆ ಏನು ಮಾಡಬೇಕೆಂದು ವೈರಾಲಜಿಸ್ಟ್ ಎರಿನ್ ಡೈಕ್ಯಾಪ್ರಿಯೋ ಸಲಹೆ ನೀಡಿದ್ದಾರೆ.
ಈ ಲೇಖನವು ದಿನಸಿ ಶಾಪಿಂಗ್ ಬಗ್ಗೆ ನಿಮಗಿರುವ ಗೊಂದಲವನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ ನೋಡಿ:

ತರಕಾರಿಗಳನ್ನು ಹೀಗೆ ತೊಳೆಯಲೇಬೇಡಿ
ಕೊರೊನಾವೈರಸ್ ಭಯಕ್ಕೆ ಜನರು ಏನು ಮಾಡುತ್ತಿದ್ದಾರೆ ಎಂಬುವುದು ಅವರಿಗೇ ಅರ್ಥವಾಗುತ್ತಿಲ್ಲ. ಕೆಲವರು ಹೊರಗಿನಿಂದ ತಂದ ತರಕಾರಿಗಳಿಗೆ ಕ್ರಿಮಿ ನಾಶಕಗಳನ್ನು ಸಿಂಪಡಿಸುವುದು, ಸೋಪ್ ನೀರಿನಲ್ಲಿ ತೊಳೆಯುವುದು ಮಾಡುತ್ತಿದ್ದಾರೆ. ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಇನ್ನು ಕೆಲವರು ಗ್ಲೌಸ್ ಬಳಸಿ ತೊಳೆಯುತ್ತಾರೆ, ಆದರೆ ಅದು ಕೂಡ ಸರಿಯಾದ ವಿಧಾನವಲ್ಲ.
ಏನು ಮಾಡಬೇಕು?
ಹೊರಗಿನಿಂದ ಕೊಂಡು ತಂದ ತರಕಾರಿಗಳನ್ನು ನಲ್ಲಿ ನೀರಿನಲ್ಲಿ ತೊಳೆಯಿರಿ, ನಂತರ ಬಟ್ಟೆಯಲ್ಲಿ ಒರೆಸಿ ತೆಗೆದಿಡಿ. ತರಕಾರಿ ತೊಳೆದ ಬಳಿಕ ನಿಮ್ಮ ಕೈಗಳನ್ನು ತೊಳೆಯಿರಿ.

ಗ್ಲೌಸ್ ಬಳಸಿ ತರಕಾರಿ ತೊಳೆಯಬಹುದೇ?
ಕೆಲವರು ತರಕಾರಿ ಕೊಳ್ಳಲು ಹೋಗುವಾಗ ಗ್ಲೌಸ್ ಬಳಸುವುದನ್ನು ನೋಡುತ್ತೇವೆ. ಗ್ಲೌಸ್ ಬಳಸುವುದರಿಂದ ಕೊರೊನಾವೈರಸ್ ಬರದಂತೆ ತಡೆಯಬಹುದು ಎಂದು ಯೋಚಿಸುತ್ತಾರೆ, ಆದರೆ ಗ್ಲೌಸ್ ಕೊರೊನಾವೈರಸ್ ಹರುಡುವುದಕ್ಕೆ ಕಾರಣವಾಗುತ್ತದೆ ಎಂಬುವುದು ಗೊತ್ತೇ?
ಗ್ಲೌಸ್ ಧರಿಸಿದ ಕೈಗಳನ್ನು ಏನಾದರೂ ವಸ್ತು ಮುಟ್ಟುತ್ತೀರಿ, ಆ ವಸ್ತುವನ್ನು ಸೋಂಕಿತ ಮುಟ್ಟಿದ್ದರೆ ಆ ಸೋಂಕು ಗ್ಲೌಸ್‌ಗೆ ಅಂಟಿಕೊಳ್ಳುತ್ತದೆ, ನಂತರ ಮುಟ್ಟುವ ಇತರ ವಸ್ತುಗಳಿಗೂ ಹರಡುತ್ತದೆ. ಆದ್ದರಿಂದ ಗ್ಲೌಸ್ ಬಳಸುವ ಬದಲು ಕೈಗಳಿಗೆ ಸ್ಯಾನಿಟೈಸರ್ ಹಚ್ಚಿ, ದಿನಸಿ ಸಾಮಾನು ಕೊಳ್ಳುವ ಮುನ್ನ ಹಾಗೂ ನಂತರ ಸ್ಯಾನಿಟೈಸರ್ ಬಳಸಿ.

ಕ್ಯಾಶ್ ಹಾಗೂ ಕಾರ್ಡ್ ಬಳಸುವಾಗ ಎಚ್ಚರವಹಿಸಿ
ಈ ಸಮಯದಲ್ಲಿ ಪೇಟಿಎಂ, ಗೂಗಲ್ ಪೇ ಈ ರೀತಿ ಡಿಜಿಟಲ್ ವ್ಯವಹಾರ ಒಳ್ಳೆಯದು. ಕಾರ್ಡ್ ಬಳಸುವುದು, ಕ್ಯಾಶ್ ಬಳಸುವುದು ಅಷ್ಟು ಸುರಕ್ಷಿತವಲ್ಲ. ಒಂದು ವೇಳೆ ಬಳಸುವುದಾದರೆ ಅವರಿಂದ ಹಣ ಅಥವಾ ಕಾರ್ಡ್ ಪಡೆಯುವ ಮುನ್ನ ಹಾಗೂ ನಂತರ ಕೈಗಳಿಗೆ ಸ್ಯಾನಿಟೈಸರ್ ಹಚ್ಚಿ.

ಮಾಸ್ಕ್ ಕಡ್ಡಾಯ ಬಳಸಿ
ನೀವು ಮಾಸ್ಕ್ ಬಳಸುವುದು ರೂಢಿಸಿಕೊಳ್ಳಲೇಬೇಕು. ಏಕೆಂದರೆ ಇನ್ನು ಕೆಲವು ತಿಂಗಳವರೆಗೆ ಆದರೂ ಮಾಸ್ಕ್ ಇಲ್ಲದೆ ಓಡಾಡುವುದು ಸುರಕ್ಷಿತವಲ್ಲ. ಮಾಸ್ಕ್ ಧರಿಸುವುದರಿಂದ ನೀವು ಸರಕ್ಷಿತ, ಇತರರು ಸುರಕ್ಷಿತ. ಒಮ್ಮೆ ಮಾಸ್ಕ್ ಧರಿಸಿದ ಮೇಲೆ ಆಗಾಗ ಅದನ್ನು ಕೈಗಳಿಂದ ಮುಟ್ಟಬೇಡಿ. ಇನ್ನು ವಾಶ್ ಮಾಡಿ ಬಳಸುವ ಮಾಸ್ಕ್ ಆದರೆ ಒಮ್ಮೆ ಬಳಸಿದ ಬಳಿಕ ಸೋಪ್ ನೀರಿನಲ್ಲಿ ತೊಳೆಯಿರಿ. ಇನ್ನು ಸರ್ಜಿಕಲ್ ಮಾಸ್ಕ್ 8 ಗಂಟೆಗಿಂತ ಹೆಚ್ಚು ಬಳಸಬೇಡಿ.
ಹೊರಗಡೆ ಹೋಗುವಾಗ ಮುನ್ನೆಚ್ಚರಿಕೆ ವಹಿಸಿ, ಅನಗ್ಯತವಾಗಿ ಓಡಾಡಬೇಡಿ, ಮಕ್ಕಳು, ವಯಸ್ಸಾದವರೂ ಮನೆಯಲ್ಲಿಯೇ ಇರುವುದು ಸೇಫ್.



Click it and Unblock the Notifications











