Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಲಿವರ್ ಶುದ್ಧವಾಗಿಸುತ್ತೆ ಈ ಅರಿಶಿನ-ಗ್ರೀನ್ ಟೀ
ಮನುಷ್ಯನ ದೇಹ ರೂಪುಗೊಳ್ಳಲು ಕೇವಲ ಮಾಂಸಖಂಡಗಳು, ಮೂಳೆಗಳು ಮತ್ತು ರಕ್ತದ ಪ್ರಮಾಣ ಮಾತ್ರ ಕಾರಣವಾಗುವುದಿಲ್ಲ. ಇವುಗಳ ಜೊತೆಗೆ ಪ್ರತಿದಿನ ದೇಹದ ಸಮತೋಲಿತ ಕಾರ್ಯನಿರ್ವಹಣೆಗೆ ಅಗತ್ಯವಾಗಿ ಬೇಕಾದ ಅಂಗಾಂಗಗಳ ಪಾತ್ರ ಕೂಡ ಬಹುಮುಖ್ಯವಾಗುತ್ತದೆ. ನಮ್ಮ ದೇಹದಲ್ಲಿ ಪ್ರತಿ ಅಂಗಾಂಗಗಳಿಗೂ ಪ್ರತಿದಿನವೂ ತಮ್ಮದೇ ಆದ ಜವಾಬ್ದಾರಿಗಳಿರುತ್ತವೆ. ನಮ್ಮ ದೇಹದಲ್ಲಿ ಕಂಡುಬರುವ ಎಲ್ಲಾ ಅಂಗಾಂಗಗಳಂತೆ ಲಿವರ್ ಕೂಡ ಒಂದು.
ಪ್ರಮುಖವಾಗಿ ಲಿವರ್ ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳನ್ನು ತೆಗೆದು ಹಾಕುವುದರಿಂದ ಹಿಡಿದು ನಾವು ಸೇವಿಸುವ ಆಹಾರದಲ್ಲಿ ಕಂಡುಬರುವ ಪ್ರೊಟೀನ್, ಕಾರ್ಬೊಹೈಡ್ರೇಟ್ ಮತ್ತು ಇನ್ನಿತರ ಪೌಷ್ಟಿಕಾಂಶಗಳನ್ನು ಯಾವ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಸೇರಿಸಬೇಕು ಎಂಬುದನ್ನು ಸ್ವತಃ ನಿರ್ಧಾರ ಮಾಡುತ್ತದೆ. ಇನ್ನು ಇದರ ಜೊತೆಗೆ ನಮ್ಮ ದೇಹದಿಂದ ವಿಷಕಾರಿ ರಾಸಾಯನಿಕ ಅಂಶಗಳನ್ನು ಹೊರ ಹಾಕಿ ತನ್ನ ಬೈಲ್ ಜಯ್ಸ್ ಸ್ರವಿಸುವಿಕೆಯಿಂದ ಅತ್ಯುತ್ತಮವಾದ ಜೀರ್ಣ ಪ್ರಕ್ರಿಯೆ ನಮ್ಮದಾಗುವಂತೆ ಮಾಡುತ್ತದೆ.
ಆದರೆ ಲಿವರ್ ಕಾರ್ಯ ನಿರ್ವಹಣೆಗೆ ಕೆಲವೊಂದು ಅಂಶಗಳು ಅಡ್ಡಿಯಾಗುತ್ತವೆ. ಇದರಿಂದ ಪ್ರತಿ ದಿನ ಅಚ್ಚುಕಟ್ಟಾಗಿ ಕೆಲಸ ಮಾಡಬೇಕಾದ ಯಕೃತ್ ಭಾಗಕ್ಕೆ ತೊಂದರೆ ಉಂಟಾಗುತ್ತದೆ. ಹಾಗಾಗಿ ಆರೋಗ್ಯಕರವಾದ ಲಿವರ್ ನಿಮ್ಮದಾಗುವಂತೆ ಮಾಡಿಕೊಳ್ಳಲು ಒಂದು ಅತ್ಯದ್ಭುತವಾದ ಗಿಡಮೂಲಿಕೆ ಚಹಾದ ಅವಶ್ಯಕತೆ ಇದೆ.
ನಮ್ಮ ದೇಹದಲ್ಲಿ ಲಿವರ್ ಭಾಗ ಬೇರೆ ಅಂಗಾಂಗಗಳಂತಲ್ಲ. ಸ್ವಚ್ಛತೆಯ ವಿಷಯ ಬಂದಾಗ ಲಿವರ್ ತಾನಾಗಿಯೇ ತನ್ನ ಕೆಲಸ ಮಾಡಿಕೊಳ್ಳುತ್ತದೆ. ಇದರ ಜೊತೆಗೆ ನಾವು ಸೇವಿಸುವ ನಾರಿನ ಅಂಶ ಮತ್ತು ಆಂಟಿ - ಆಕ್ಸಿಡೆಂಟ್ ಅಂಶ ಹೆಚ್ಚಾಗಿರುವ ಆಹಾರಗಳು ಲಿವರ್ ಭಾಗದಿಂದ ವಿಷಕಾರಿ ತ್ಯಾಜ್ಯವನ್ನು ಹೊರ ಹಾಕುವಲ್ಲಿ ಪ್ರಮುಖ ಪಾತ್ರ ಬೀರುತ್ತವೆ. ನಮ್ಮ ನಿತ್ಯ ನಿಯಮಿತ ಆಹಾರ ಪದ್ಧತಿಯಲ್ಲಿ ಅತ್ಯುತ್ತಮವಾದ ಆಹಾರಗಳನ್ನು ಸೇರಿಸಿ ಸೇವನೆ ಮಾಡಬೇಕಾದದು ನಮ್ಮ ದೊಡ್ಡ ಜವಾಬ್ದಾರಿಯಾಗಿರುತ್ತದೆ.
ಲಿವರ್ ಭಾಗವನ್ನು ಸ್ವಚ್ಛಗೊಳಿಸಲು ಮನೆಯಲ್ಲಿ ಸ್ವತಃ ನಾವೇ ಗಿಡಮೂಲಿಕೆಗಳ ಬಳಕೆ ಮಾಡಿಕೊಂಡು ಚಹ ತಯಾರು ಮಾಡಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬಹುದು. ನೀವು ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಪ್ರತಿ ದಿನ ಕುಡಿಯುವ ಗ್ರೀನ್ ಟೀ ಗೆ ಸ್ವಲ್ಪ ಅರಿಶಿನ ಪುಡಿ ಮಿಶ್ರಣ ಮಾಡಿ ಸೇವನೆ ಮಾಡಿದರೆ ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದಾಗಲಿದೆ.
ಈಗ ಗ್ರೀನ್ ಟೀ ಮತ್ತು ಅರಿಶಿನದ ಆರೋಗ್ಯ ಪ್ರಯೋಜನಗಳನ್ನು ಒಂದೊಂದಾಗಿ ತಿಳಿದುಕೊಳ್ಳೋಣ : -

ಗ್ರೀನ್ ಟೀ vs ಲಿವರ್: ಗ್ರೀನ್ ಟೀ ಆರೋಗ್ಯ ಪ್ರಯೋಜನಗಳು
ನಿಮಗೆಲ್ಲಾ ಗೊತ್ತಿರುವ ಹಾಗೆ ಗ್ರೀನ್ ಟೀ ನಲ್ಲಿ ಅಪಾರ ಪ್ರಮಾಣದ ಆಂಟಿ - ಆಕ್ಸಿಡೆಂಟ್ ಅಂಶಗಳು ಸಿಗುವ ಕಾರಣ ನಿಮ್ಮ ದೇಹದ ವಿಷಕಾರಿ ಅಂಶಗಳನ್ನು ತೆಗೆದು ಹಾಕುವಲ್ಲಿ ಇದು ಪ್ರಮುಖ ಪಾತ್ರ ಬೀರುತ್ತದೆ. ಒಂದು ಅಧ್ಯಯನ ಹೇಳುವ ಹಾಗೆ ವ್ಯಾಯಾಮ ಮಾಡುವ ಜೊತೆಗೆ ಗ್ರೀನ್ ಟೀ ಕುಡಿಯುವುದರಿಂದ ಬೊಜ್ಜಿಗೆ ಸಂಬಂಧ ಪಟ್ಟಂತೆ ಯಕೃತ್ ಭಾಗದಲ್ಲಿ ಕಂಡು ಬರುವ ಕಾಯಿಲೆ ಶೇಕಡ 75 % ಕಡಿಮೆಯಾಗುತ್ತದೆ. ಲಿವರ್ ನ ಆರೋಗ್ಯದ ಜೊತೆಗೆ ಗ್ರೀನ್ ಟೀ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿ, ಮೆಟಬಾಲಿಸಂ ಪ್ರಕ್ರಿಯೆಯನ್ನು ಹೆಚ್ಚಿಸಿ, ನಿಮ್ಮ ರೋಗ - ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಅರಿಶಿನ : -
ಅರಿಶಿನದಲ್ಲಿ ' ಕುರ್ಕ್ಯುಮಿನ್ ' ಎಂಬ ಅಂಶವಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇದು ಅರಿಶಿನಕ್ಕೆ ಒಂದು ಬಗೆಯ ಔಷಧೀಯ ಗುಣ - ಲಕ್ಷಣಗಳನ್ನು ಒದಗಿಸುತ್ತದೆ. ನಾವು ಅಡುಗೆಯಲ್ಲಿ ದಿನ ಬಳಕೆ ಮಸಾಲೆ ಪದಾರ್ಥಗಳನ್ನು ಉಪಯೋಗಿಸುವಾಗ ಕಂಡು ಬರುವ ಅರಿಶಿನ ನಿಮ್ಮ ದೇಹದಲ್ಲಿ ಎಂಜೈಮ್ ಗಳನ್ನು ಹೆಚ್ಚು ಉತ್ಪತ್ತಿ ಮಾಡುವ ಮೂಲಕ ದೇಹದ ವಿಷಕಾರಿ ತ್ಯಾಜ್ಯಗಳನ್ನು ಕತ್ತರಿಸಿ ಹಾಕಿ ನಿಮ್ಮ ದೇಹದಿಂದ ಹೊರ ಹಾಕುತ್ತದೆ. ಜೊತೆಗೆ ಅರಿಶಿನ ನಿಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡಿ ಅತ್ಯುತ್ತಮವಾದ ಯಕೃತ್ ಆರೋಗ್ಯವನ್ನು ನಿಮಗೆ ನೀಡುತ್ತದೆ ಎಂದು ಹೇಳಬಹುದು.

ಅರಿಶಿನ ಮಿಶ್ರಿತ ಗ್ರೀನ್ ಟೀ ತಯಾರು ಮಾಡುವ ವಿಧಾನವನ್ನು ಈಗ ನೋಡೋಣ.
ತಯಾರು ಮಾಡಲು ಬೇಕಾಗಿರುವ ಸಾಮಾಗ್ರಿಗಳು : -
1 ಒಂದು ಟೀ ಚಮಚ ಗ್ರೀನ್ ಟೀ
2 ಒಂದು ಚಿಟಿಕೆ ಅರಿಶಿನ ಪುಡಿ
3 ಒಂದು ಕಪ್ ನೀರು

ತಯಾರು ಮಾಡುವ ವಿಧಾನ : -
ಹಂತ - 1 : - ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಸ್ಟೌವ್ ಮೇಲೆ ಕುದಿಯಲು ಇಡಿ.
ಹಂತ - 2 : - ನೀರು ಚೆನ್ನಾಗಿ ಕುದಿ ಬಂದ ಮೇಲೆ ಸ್ಟವ್ ಆರಿಸಿ. ಈಗ ಇದಕ್ಕೆ ಗ್ರೀನ್ ಟೀ ಎಲೆಗಳನ್ನು ಮತ್ತು ಹಳದಿ ಪುಡಿಯನ್ನು ಹಾಕಿ ಮುಚ್ಚಳ ಮುಚ್ಚಿ ಸುಮಾರು 3 - 4 ನಿಮಿಷಗಳು ಒಂದಕ್ಕೊಂದು ಚೆನ್ನಾಗಿ ಬೆರೆಯುವಂತೆ ಮಾಡಿ.
ಹಂತ - 3 : - ತಯಾರಾದ ಚಹಾದ ಮಿಶ್ರಣವನ್ನು ಒಂದು ಕಪ್ ಗೆ ಸೋಸಿಕೊಂಡು ಸೇವನೆ ಮಾಡಿ.
ಬೆಳಗಿನ ಸಮಯದಲ್ಲಿ ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವನೆ ಮಾಡುವುದರಿಂದ ಸದೃಡವಾದ ಆರೋಗ್ಯ ನಿಮ್ಮದಾಗಲಿದೆ. ಆದರೆ ಒಂದು ಅಂಶ ನೆನಪಿರಲಿ. ಏನೆಂದರೆ ಯಾವುದೇ ಕಾರಣಕ್ಕೂ ಈ ಪಾನೀಯವನ್ನು ಅತಿಯಾಗಿ ಸೇವನೆ ಮಾಡಲು ಹೋಗಬೇಡಿ.



Click it and Unblock the Notifications