Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಹಿಳೆಯರೇ, ಈ ಲಸಿಕೆ ಪಡೆದರೆ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಬಹುದು
ಸರ್ವಿಕಲ್ ಕ್ಯಾನ್ಸರ್ ಅಥವಾ ಗರ್ಭಕಂಠದ ಮಹಿಳೆಯರನ್ನು ಕಾಡುವ ಭಯಾನಕ ಕಾಯಿಲೆಗಳಲ್ಲಿ ಒಂದಾಗಿದೆ. ಈ ಕ್ಯಾನ್ಸರ್‌ಗೆ ಅನೇಕ ಮಹಿಳೆಯರು ಬಲಿಯಾಗಿದ್ದಾರೆ. ಭಾರತದ ಹೆಚ್ಚಿನ ಮಹಿಳೆಯರು ತಮ್ಮ ಆರೋಗ್ಯದ ಕಡೆ ಗಮನ ನೀಡುವುದಿಲ್ಲ, ನಿಯಮಿತ ಪರೀಕ್ಷೆ ಮಾಡಿಸುವುದಿಲ್ಲ, ಈ ಕಾರಣದಿಂದಾಗಿ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಯೂ ಹೆಚ್ಚುತ್ತಿದೆ.
ಗರ್ಭಕಂಠದ ಕ್ಯಾನ್ಸರ್ ಅಷ್ಟೇ ಪ್ರಾರಂಭದಲ್ಲಿ ಎಚ್ಚೆತ್ತುಕೊಂಡರೆ ಈ ಕಾಯಿಲೆಯಿಂದ ಬೇಗನೆ ಚೇತರಿಸಿಕೊಳ್ಳಬಹುದು ಹಾಗೂ ಇದನ್ನು ಬಾರದಂತೆ ತಡೆಗಟ್ಟಲು ಕೂಡ ವಿಧಾನವಿದೆ. ಹೌದು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಲಸಿಕೆ ಭಾರತದಲ್ಲಿ ಲಭ್ಯವಿದೆ. ಅದನ್ನು ತೆಗೆದುಕೊಳ್ಳುವುದರಿಮದ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ.
ಗರ್ಭಕಂಠದ ಕ್ಯಾನ್ಸರ್ ಹಾಗೂ ಅದನ್ನು ತಡೆಗಟ್ಟುವ ಲಸಿಕೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

ಗರ್ಭಕಂಠದ ಕ್ಯಾನ್ಸರ್ ಬರಲು ಕಾರಣವೇನು?
ಗರ್ಭಕಂಠದ ಕ್ಯಾನ್ಸರ್ ಪ್ಯಾಪಿಲೋಮವೈರಸ್(papillomavirus)ನಿಂದ ಉಂಟಾಗುವುದು. ಇದು ಲೈಂಗಿಕ ಸೋಂಕಿನಿಂದಾಗಿ ಉಂಟಾಗುವುದು. ಗುಪ್ತಾಂಗದ ನೈರ್ಮಲ್ಯದ ಕಡೆ ಹೆಚ್ಚು ಗಮನ ನೀಡದೇ ಇದ್ದರೆ ಈ ಕ್ಯಾನ್ಸರ್ ಅಪಾಯ ಹೆಚ್ಚು. ಯಾರು ಗುಪ್ತಾಂಗದ ಶುಚಿತ್ವ ಕಡೆಗೆ ಹೆಚ್ಚು ಗಮನ ನೀಡುತ್ತಾರೋ ಅವರಿಗೆ ಈ ಗರ್ಭಕಂಠದ ಅಪಾಯ ಕಡಿಮೆ. ಗರ್ಭಕಂಠದ ಕ್ಯಾನ್ಸರ್ ನಗರ ಪ್ರದೇಶದ ಮಹಿಳೆಯರಿಗಿಂತ ಹಳ್ಳಿಗಳಲ್ಲಿರುವ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವುದು ಹೇಗೆ?
ಗರ್ಭಕಂಠದ ಕ್ಯಾನ್ಸರ್ ಅನ್ನು HPV ಲಸಿಕೆ ಮೂಲಕ ತಡೆಗಟ್ಟಬಹುದು. ಈ ಲಸಿಕೆಯನ್ನು ಪಡೆಯುವುದರಿಂದ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದು. ಲೈಂಗಿಕಕ್ರಿಯೆ ಸಕ್ರೀಯವಾಗಿರುವವರಲ್ಲಿ ಈ ಸೋಂಕು ಹೆಚ್ಚಾಗಿ ಕಂಡು ಬರುವುದು. ಕೆಲವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಅವರಿಗೆ ಲೈಂಗಿಕ ಸೋಂಕು ಉಂಟಾಗುವುದಿಲ್ಲ. ಆದರೆ ಕೆಲವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಆಗ ಈ ರೀತಿ ಗರ್ಭಕಂಠದ ಕ್ಯಾನ್ಸರ್ ಉಂಟಾಗುವ ಅಪಾಯ ಇದೆ. ಆದರೆ HPV ಲಸಿಕೆ ಪಡೆದುಕೊಂಡರೆ ಶೇ. 95ರಷ್ಟು ಲೈಂಗಿಕ ಸೋಂಕು ತಡೆಗಟ್ಟಬಹುದು.

ಯಾರು HPV ಲಸಿಕೆ ಪಡೆಯಬಹುದು?
ಹದಿಹರೆಯ ಪ್ರಾಯದ ಹೆಣ್ಣು ಮಕ್ಕಳಿಗೆ ಈ ಲಸಿಕೆ ನೀಡಲಾಗುವುದು, ಅವರು ಲೈಂಗಿಕವಾಗಿ ಸಕ್ರಿಯವಾಗುವ ಮುನ್ನ ಅಂದರೆ 12 ಅಥವಾ 12ನೇ ವಯಸ್ಸಿನಲ್ಲಿ ಈ ಲಸಿಕೆ ಪಡೆಯುವುದರಿಂದ ಗರ್ಭಕಂಠದ ಅಪಾಯವನ್ನು ಶೇ. 70ರಷ್ಟು ತಪ್ಪಿಸಬಹುದು. ಆದರೆ ಈ ಲಸಿಕೆ ಪಡೆದ ಗರ್ಭಕಂಠದ ಕ್ಯಾನ್ಸರ್ ಅಪಾಯ ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಮಹಿಳೆಯರು ಲೈಂಗಿಕವಾಗಿ ಸಕ್ರೀಯವಾದಾಗ ಅಂದರೆ ಮದುವೆ ಬಳಿಕ ನಿಯಮಿತ ತಪಾಸಣೆ ಮಾಡಿಸುವುದು ಒಳ್ಳೆಯದು.
11-26 ವಯಸ್ಸಿನ ಹೆಣ್ಣು ಮಕ್ಕಳು ಈ ಲಸಿಕೆ ಪಡೆಯಬಹುದು. ಯುಎಸ್‌ನಲ್ಲಿ 45 ವರ್ಷದವರೆಗೂ ಈ ಲಸಿಕೆ ನೀಡಲಾಗುವುದು. ಮಹಿಳೆಯರು ಈ ಲಸಿಕೆ ಪಡೆಯುವುದರಿಂದ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದು.
ಯಾರು ಮದುವೆಗೆ ಮೊದಲು ಈ ಲಸಿಕೆ ಪಡೆಯುತ್ತಾರೋ ಅವರಲ್ಲಿ ಲೈಂಗಿಕ ಸೋಂಕು ವಿರುದ್ಧ ಹೋರಾಡುವ ಪ್ರತಿರೋಧಕ ಶಕ್ತಿ ಅಧಿಕವಿರುತ್ತದೆ ಎಂದು ತಜ್ಞರು ಹೇಳುತ್ತಾರೆ.



Click it and Unblock the Notifications
