Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬೆಳಗ್ಗೆ ಬೇಗ ಏಳುವುದರಿಂದ ಸಿಗುವ ಲಾಭವೇನು..? ಇಲ್ಲಿದೆ ಐದು ಪ್ರಯೋಜನಗಳು
ಮನುಷ್ಯನ ಜೀವನ ಶೈಲಿ ಬದಲಾಗುತ್ತಿದೆ. ಅನೇಕರು ರಾತ್ರಿ ಅತೀ ಲೇಟ್ ಮಲಗುತ್ತಿದ್ದಾರೆ. ಲೇಟ್ ಮಲಗುವುದು ಅನೇಕರಿಗೆ ಹವ್ಯಾಸ ಆಗಿ ಬಿಟ್ಟಿದೆ. ಅಲ್ಲದೇ ಅದು ಅವರಿಗೆ ಖುಷಿ ನೀಡುತ್ತಿದೆ. ಇದರಿಂದಾಗಿ ಬೆಳಗ್ಗೆ ತಡವಾಗಿ ಏಳುವ ಹವ್ಯಾಸವು ಹೆಚ್ಚುತ್ತಿದೆ. ಫೋನ್ ಗಳ ಬಳಕೆ, ಟಿವಿಗಳ ಬಳಕೆಯಿಂದ ಭಾರೀ ತಡವಾಗಿ ಏಳುವ ಅಭ್ಯಾಸದಿಂದ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅನೇಕರು ರೋಗಕ್ಕೆ ತುತ್ತಾಗುತ್ತಿದ್ದಾರೆ. ನಿಮಗೊಂದು ಗೊತ್ತಾ ಬೆಳಗ್ಗೆ ಬೇಗ ಏಳುವುದರಿಂದ ಎಷ್ಟು ಒಳ್ಳೆಯದು ಎನ್ನುವುದು.
ಹೌದು, ನೀವು ಒಂದು ಬಾರಿ ಬೆಳಗ್ಗೆ ಬೇಗ ಎದ್ದು ನೋಡಿ ನಿಮ್ಮ ಆ ದಿನವೇ ನಿಮಗೆ ಆನಂದ ತರುತ್ತದೆ. ನಿಮ್ಮ ದಿನವೇ ಅಂದು ಫೆಂಟಾಸ್ಟಿಕ್ ದಿನವಾಗಿರುತ್ತದೆ. ಹೌದು, ಬೆಳಗ್ಗೆ ಬೇಗ ಏಳುವುದರಿಂದ ಪೂರ್ತಿ ದಿನ ನಿಮಗೆ ಸಿಗುತ್ತದೆ, ಜೊತೆಗೆ ಬೆಳಗ್ಗೆ ಏಳುವಾಗ ಸಿಗುವ ತಾಜಾ ಗಾಳಿ, ಹಕ್ಕಿಗಳ ಕಲರವ, ನಿಶ್ಯಬ್ಧತೆ ನಿಜಕ್ಕೂ ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಅಲ್ಲದೇ ಆರೋಗ್ಯ ದೃಷ್ಟಿಯಿಂದಲೂ ಇದು ಒಳ್ಳೆಯದು. ಬೆಳಗ್ಗೆ ಬೇಗ ಏಳುವುದರಿಂದ ನಿಮ್ಮ ಪ್ರೊಡಕ್ಟಿವಿಟಿ ಹೆಚ್ಚುತ್ತದೆ. ನಾಯಕತ್ವದ ಗುಣ ಬೆಳೆಸುತ್ತದೆ. ಹೀಗಾಗಿ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳಲು ನೋಡಿ ಇದರಿಂದ ನಿಮ್ಮ ಜೀವನ ಏನಾಗುತ್ತದೆ ಎಂದು ನೋಡಿ. ಹಾಗಾದರೆ ಬೆಳಗ್ಗೆ ಬೇಗ ಏಳುವುದರಿಂದ ಉಂಟಾಗುವ ಪ್ರಯೋಜನಗಳು ಏನು ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಪ್ರಾಡಕ್ಟಿವಿಟಿ ಹೆಚ್ಚಿಸುತ್ತದೆ!
ಬೆಳಗ್ಗೆ ಬೇಗ ಏಳುವುದರಿಂದ ಅನೇಕ ಪ್ರಯೋಜನಗಳು ಇದೆ. ಬೆಳಗ್ಗೆ ಬೇಗ ಏಳುವುದರಿಂದ ನೀವು ಆ ದಿನ ಸಂಪೂರ್ಣವಾಗಿ ಸಕ್ರಿಯರಾಗಿರುತ್ತೀರಿ. ಯಾವುದೇ ಕೆಲಸ ಮಾಡುವುದಾದರು ಸಕ್ರಿಯವಾಗಿ ಮಾಡುತ್ತೀರಿ. ಅಲ್ಲದೇ ಬೆಳಗ್ಗೆ ಬೇಗ ಏಳುವುದರಿಂದ ಸೂರ್ಯನ ಆಶೀರ್ವಾದವು ನಿಮಗೆ ಸಿಗುತ್ತದೆ. ಬೆಳಗಿನ ಸೂರ್ಯನ ಕಿರಣಗಳು ಮೈಯನ್ನು ಸೋಕಿದಾಗ ಅದರ ಒಂದು ಆರೋಗ್ಯಕರ ಲಕ್ಷಣಗಳು ಅತೀ ಉತ್ತಮ. ಅಲ್ಲದೇ ಈ ಸೂರ್ಯನ ಕಿರಣಗಳಿಂದ ನಿಮ್ಮ ದೇಹಕ್ಕೆ ಹೊಸ ಚೈತನ್ಯ, ಹೊಸ ಶಕ್ತಿ ಕೂಡ ದೊರಕುತ್ತದೆ. ಅಲ್ಲದೇ ಬೆಳಗ್ಗಿನ ಒಂದು ಕಂಪನ ಅಥವಾ ಬೆಳಗ್ಗಿನ ವಾತಾವರಣ ನಿಜಕ್ಕೂ ಖುಷಿಯನ್ನು ಕೊಡುತ್ತದೆ. ಪರಮಾನಂದವನ್ನು ನೀಡುತ್ತದೆ. ಅಲ್ಲದೇ ಬೆಳಗ್ಗೆ ಬೇಗ ಏಳುವುದರಿಂದ ಮನುಷ್ಯನ ಉತ್ಪಾದಕ ಶಕ್ತಿ ಹೆಚ್ಚುತ್ತದೆ. ಇದರಿಂದ ಮನುಷ್ಯ ಅತ್ಯುತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಆತನ ಸಂಸ್ಥೆಯನ್ನು ಲಾಭದ ಕಡೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ. ಏನೇ ಆದರೂ ಬೆಳಗ್ಗೆ ಎದ್ದರೆ ಅನೇಕ ಲಾಭವಿದೆ.

ಏಕಾಗ್ರತೆಯ ಮುಂಜಾನೆ
ಬೆಳಗ್ಗಿನ ತಣ್ಣನೆಯ ಜಾತಾ ಗಾಳಿ ನಿಮ್ಮ ಜೀವನದಲ್ಲಿ ವಿಸ್ಮಯವನ್ನೇ ಸೃಷ್ಟಿಸುತ್ತೆ. ಈ ಗಾಳಿಗೆ ಎಷ್ಟು ಶಕ್ತಿ ಇರುತ್ತದೆ ಎಂದರೆ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಬೆಳಗ್ಗಿನ ಜಾವದಲ್ಲಿ ಬೆಳಗ್ಗಿನ ಅತ್ಯುತ್ತಮ ಗಾಳಿಗೆ ಯೋಗ, ವ್ಯಾಯಾಮವನ್ನು ಜನರು ಮಾಡುವುದು. ಇನ್ನು ಬೆಳಗ್ಗಿನ ಗಾಳಿ, ವಾತಾವರಣ ಅಸ್ತವ್ಯಸ್ತವಾದ ಮನಸ್ಸನ್ನು ಬದಲಿಸಿ ಉತ್ತಮ ಹಾಗೂ ಸಾಧಿಸುವ ಚಲವನ್ನು ಸೃಷ್ಟಿಸುತ್ತದೆ. ವಾತಾವರಣ ತಾಜವಾಗಿರುವುದಲ್ಲದೇ ಮನಸ್ಸನ್ನು ಇದೆ ತಾಜಾವಾಗಿರಿಸುತ್ತದೆ. ಹೀಗಾಗಿ ನಿಮಗೆ ನಿಮ್ಮ ಕೆಲಸದ ಮೇಲೆ ಸಂಪೂರ್ಣ ಏಕಾಗ್ರತೆ ಹೊಂದಬಹುದು. ಅಲ್ಲದೇ ಬೆಳಗ್ಗಿನ ಹೊಸ ಗಾಳಿ, ಹೊಸ ಸೂರ್ಯನ ಕಿರಣ ನಿಮ್ಮ ನೋವು ಒತ್ತಡವನ್ನು ನಿವಾರಿಸುತ್ತದೆ. ಈ ಮೂಲಕ ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿಕೊಳ್ಳಬಹುದು, ಅಲ್ಲದೇ ಲಾಭದ ಕಡೆಗೆ ನಿಮ್ಮನ್ನು ಕೊಂಡೊಯ್ಯಬಹುದು.

ಇದೇ ಅಭ್ಯಾಸಕ್ಕೆ ಹೊಂದಿಕೊಳ್ಳುತ್ತೀರಿ
ನೀವು ದಿನ ನಿತ್ಯ ಬೆಳಗ್ಗೆ ಏಳುತ್ತೀರಿ ಎಂದಾದರೆ ನೀವು ದಿನ ನಿತ್ಯ ಒಂದು ಕೆಲಸವನ್ನು ಮಾಡಲು ಬಯಸುತ್ತೀರಿ. ಅದು ನಿಮಗೆ ನಂತರ ಹವ್ಯಾಸವಾಗುತ್ತದೆ. ಬಳಿಕ ಇದೊಂದು ಮಾದರಿಯಾಗಿ ಬದಲಾಗುತ್ತದೆ. ಉದಾಹರಣೆಗೆ ನೀವು ಬೆಳಗ್ಗೆ ಏಳುತ್ತೀರಿ ಎಂದುಕೊಳ್ಳಿ, ಎದ್ದು ನೀವು ಯೋಗ ಮಾಡುತ್ತೀರಿ ಅಥವಾ ವಾಕ್ ಹೋಗುತ್ತೀರಿ ಎಂದು ಕೊಳ್ಳಿ. ಈ ರೀತಿಯ ಹವ್ಯಾಸದಿಂದ ನೀವು ಈ ಮಾದರಿ ಹೊಂದಿಕೊಳ್ಳುತ್ತೀರಿ. ಈ ಮಾದರಿಯೇ ನಿಮ್ಮನ್ನು ದಿನ ನಿತ್ಯ ಏಳುವಂತೆ ಪ್ರೇರೆಪಿಸುತ್ತದೆ. ಮನಸ್ಸು ದೇಹ ಕೂಡ ಈ ಮಾದರಿ ಮಾಡುವಂತೆ ಪ್ರೇರೇಪಿಸುತ್ತದೆ. ಈ ಮೂಲಕ ನೀವು ಅತ್ಯುತ್ತಮ ಜೀವನ ಶೈಲಿಯನ್ನು ಹೊಂದಿಕೊಳ್ಳಬಹುದು. ಇನ್ನು ಈ ರೀತಿಯ ಮಾದರಿಯು ನಿಮ್ಮ ಹೆಚ್ಚಿನ ಉತ್ಪಾದಕೆ ವ್ಯಕ್ತಿಯನ್ನಾಗಿಸುತ್ತದೆ. ಇದು ನಿಮ್ಮ ಕೆಲಸದಲ್ಲಿ ಕಾಣುತ್ತದೆ. ಈ ಮೂಲಕ ಜೀವನದಲ್ಲಿ ಯಶಸ್ಸನ್ನು ಕಾಣಬಹುದು.

ನಿಮಗೆ ಹೊಸ ಲುಕ್ ನೀಡುತ್ತದೆ!
ನೀವು ಗಮನಿಸಿರಬಹುದು ತಡವಾಗಿ ಮಲಗಿ ತಡವಾಗಿ ಎದ್ದರೆ ನಿಮ್ಮ ಯಾವುದೇ ಕೆಲಸವಾಗುವುದಿಲ್ಲ. ಮುಖ ಕೂಡ ಒಂದು ರೀತಿ ಮೂಡಿಯಾಗಿರುತ್ತದೆ. ನಿರುತ್ಸಹ ಇರುತ್ತದೆ. ಹೀಗಾಗಿ ನೀವು ಬೇಗ ಏಳುವುದು ಒಳ್ಳೆಯದು. ಬೇಗ ಮಲಗು ಬೇಗ ಎದ್ದರೆ ಸರಿಯಾದ ನಿದ್ದೆ ಸರಿಯಾದ ಸಮಯಕ್ಕೆ ಆಗಿರುತ್ತದೆ. ಹೀಗಾಗಿ ನಿಮ್ಮ ಮುಖ ಅರಳುತ್ತದೆ. ಉತ್ತಮ ನಿದ್ದೆಯಿಂದ ಅಂಡರ್ ಐ ಕೂಡ ಹೋಗುತ್ತದೆ. ಮುಖವೂ ಪಳ ಪಳ ಎಂದು ಹೊಳೆಯುತ್ತಿರುತ್ತದೆ. ಆರೋಗ್ಯಕರ ಲುಕ್ ನಿಮ್ಮದಾಗುತ್ತದೆ. ಹೀಗಾಗಿ ಬೆಳಗ್ಗೆ ಬೇಗ ಎದ್ದು ಜೀವನ ಆರಂಭಿಸಿ ಜೀವನವು ಅತ್ಯುತ್ತಮವಾಗಿರುತ್ತದೆ. ರಾತ್ರಿ ಹೊತ್ತು ಲೇಟ್ ಮಲಗಿ ಜೀವನವೇ ಲೇಟ್ ಆಗಿ ಬಿಡುತ್ತದೆ. ಯಾವುದಕ್ಕೂ ಆಸಕ್ತಿ ಇಲ್ಲದಂತೆಯೂ ಮಾಡುತ್ತದೆ.



Click it and Unblock the Notifications
