Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕೋವಿಡ್ 19 ತಡೆಗಟ್ಟುವ ಪಂಚ ಸೂತ್ರಗಳಿವು
ಮತ್ತೆ ಕೊರೊನಾ ಆತಂಕ ಎದುರಾಗಿದೆ, ಈ ಸಮಯದಲ್ಲಿ ಮೈ ಮರೆಯುವಂತಿಲ್ಲ, ಏಕೆಂದರೆ 2ನೇ ಅಲೆಯಲ್ಲಿ ಎಷ್ಟೊಂದು ಕಷ್ಟ-ನೋವುಗಳು ಉಂಟಾಗಿತ್ತು ಎಂಬುವುದು ಇನ್ನೂ ನಮ್ಮ ಕಣ್ಮುಂದೆ ಇದೆ. ವಿಶ್ವದೆಲ್ಲಡೆ ಒಮಿಕ್ರಾನ್ ಕಂಡು ಬರುತ್ತಿದೆ.
ಭಾರತದಲ್ಲಿಯೂ ಒಮಿಕ್ರಾನ್‌ನ 3 ಕೇಸ್‌ಗಳು ಕಂಡು ಬಂದಿದೆ. ಆದರೆ ಇತ್ತೀಚೆಗೆ ಡೆಲ್ಟಾ ಕೇಸ್ ಕೂಡ ಹೆಚ್ಚಾಗುತ್ತಿದೆ. ಈ ಮೊದಲು ಎಷ್ಟೊಂದು ಮುನ್ನೆಚ್ಚರಿಕೆ ವಹಿಸಿದರೂ ಅದೇ ಮುನ್ನೆಚ್ಚರಿಕೆವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ. ಕೋವಿಡ್ 19 ತಡೆಗಟ್ಟಲು ಸರ್ಕಾರ ತೀರ್ಮಾನಿಸಿದರಷ್ಟೇ ಸಾಲದು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಕೋವಿಡ್ 19 ತಡೆಗಟ್ಟಲು ಈ ಪಂಚಸೂತ್ರ ಪಾಲಿಸಿ ಎಂದು ಹೇಳಿದೆ ಯಾವುದು ಆ ಪಂಚ ಸೂತ್ರ ನೋಡೋಣ ಬನ್ನಿ:

* ಸರ್ಕಾರ ಮಾರ್ಗಸೂಚಿಯಲ್ಲಿ ಸೂಚಿಸಿರುವ ಪಂಚ ಸೂತ್ರಗಳೇನು?

1. ಸಮಯಕ್ಕೆ ಸರಿಯಾಗಿ ಎರಡು ಡೋಸ್ ಲಸಿಕೆ ಪಡೆಯಿರಿ:
ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಎಂಬ ಎರಡು ಲಸಿಕೆಗಳು ಲಭ್ಯವಿದೆ. ಈ ಎರಡು ಲಸಿಕೆಗಳು ಕೋವಿಡ್ 19 ತಡೆಗಟ್ಟುವಲ್ಲಿ ಸಮರ್ಥವಾಗಿದೆ ಎಂದು ಈಗಾಗಲೇ ಸಾಬೀತಾಗಿದೆ.
ಕೋವಿಡ್ 19 ಕೊರೊನಾ ಲಸಿಕೆ ತೆಗೆಯದವರಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ, ಲಸಿಕೆ ಪಡೆದವರಿಗೆ ಕೋವಿಡ್ 19 ತಗುಲಿದರೂ ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ದಕ್ಷಿಣ ಆಫ್ರಿಕದಲ್ಲಿ ನಡೆಸಿದ ಅಧ್ಯಯನ ವರದಿ ಅಲ್ಲಿ ಒಮಿಕ್ರಾನ್‌ನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರಲ್ಲಿ ಲಸಿಕೆ ಪಡೆಯದವರೇ ಹೆಚ್ಚು ಎಂದು ಹೇಳಿದೆ.

2. ಮಾಸ್ಕ್ ಅನ್ನು ಮೂಗು ಮತ್ತು ಬಾಯಿ ಮುಚ್ಚುವಂತೆ ಧರಿಸಿ
ಕೆಲವರು ಮಾಸ್ಕ್ ಧರಿಸುವುದು ನೋಡುವಾಗ ಈ ರೀತಿ ಮಾಸ್ಕ್ ಧರಿಸಿ ಪ್ರಯೋಜವೇನು ಎಂದು ಅನಿಸುವುದು, ಏಕೆಂದರೆ ಮಾಸ್ಕ್ ಕುತ್ತಿಗೆಯಲ್ಲಿ ಧರಿಸಿರುತ್ತಾರೆ ಅಥವಾ ಸಡಿಲವಾಗಿ ಮಾಸ್ಕ್ ಧರಿಸಿರುತ್ತಾರೆ. ಈ ರೀತಿ ಮಾಸ್ಕ್ ಧರಿಸಿಯೂ ಪ್ರಯೋಜನವಿಲ್ಲ. ಮಾಸ್ಕ್ ಅನ್ನು ಬಾಯಿ ಹಾಗೂ ಮೂಗು ಮುಚ್ಚುವಂತೆ ಧರಿಸಿ. ಅದರಲ್ಲೂ ಈಗ ಕೊರೊನಾ ಹೆಚ್ಚುತ್ತಿರುವುದರಿಂದ ಡಬಲ್ ಮಾಸ್ಕ್ ಧರಿಸುವುದು ಇನ್ನೂ ಒಳ್ಳೆಯದು. ಆಗಾಗ ಮಾಸ್ಕ್ ಮುಟ್ಟುತ್ತಾ ಇರಬೇಡಿ. ಬಟ್ಟೆಯ ಮಾಸ್ಕ್ ಧರಿಸುವುದದಾದರೆ ಸ್ವಚ್ಛವಾಗಿರುವ, ಒಣಗಿರುವ ಮಾಸ್ಕ್ ಧರಿಸಿ. ಮಾಸ್ಕ್ ಅನ್ನು ಪ್ರತಿದಿನ ತೊಳೆಯಿರಿ.

3. ಕೈಗಳನ್ನು ಆಗಾಗ ತೊಳೆಯಿರಿ, ಸ್ಯಾನಿಟೈಸರ್ ಬಳಸಿ
ಸೋಪು ಹಾಕಿ ಕೈಗಳನ್ನು ಆಗಾಗ ತೊಳೆಯಿರಿ, ಹೊರಗಡೆ ಹೋಗುವಾಗ ಸ್ಯಾನಿಟೈಸರ್ ಬಳಸಿ.

4. ಅಗ್ಯತವಿದ್ದಾಗ ಮಾತ್ರ ಮನೆಯಿಂದ ಹೊರಗಡೆ ಬನ್ನಿ
ಸುಮ್ಮನೆ ಹೊರಗಡೆ ತಿರುಗಾಡಬೇಡಿ, ಅಗ್ಯತವಿದ್ದಾಗ ಮಾತ್ರ ಮನೆಯಿಂದ ಹೊರಗಡೆ ಕಾಲಿಡಿ, ಮನೆಯಿಂದ ಹೊರಗಡೆ ಹೋಗುವಾಗ ಅಗ್ಯತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಮನೆಯಿಂದ ಹೊರಬನ್ನಿ.

5. ಗುಂಪು ಇರುವ ಕಡೆ ಓಡಾಡಬೇಡಿ
ಜನರು ಗುಂಪು ಇರುವ ಕಡೆ ಹೋಗಬೇಡಿ, ಒಂದು ವೇಳೆ ಅಮಥ ಸ್ಥಳಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಇದ್ದರೆ ತುಂಬಾ ಮುನ್ನೆಚ್ಚರಿಕೆವಹಿಸಿ, ಆದಷ್ಟೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ.



Click it and Unblock the Notifications
