Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಭಾರತದ ವಿಜ್ಞಾನಿಗಳು ತಯಾರಿಸಿದ ಈ ಹೊಸ ಲಸಿಕೆ ಬಂದ್ರೆ ಕೊರೊನಾ ಆತಂಕವೇ ಇರಲ್ಲ
ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಎಂಬ ಎರಡು ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದೆ. ಈ ಲಸಿಕೆಗಳು ಕೋವಿಡ್ ಡೆಲ್ಟಾ ತಡೆಗಟ್ಟುವಲ್ಲಿ ಸಮರ್ಥವಾಗಿದೆ ಎಂಬುವುದು ಈಗಾಗಲೇ ಸಾಬೀತಾಗಿದೆ. ಡೆಲ್ಟಾ ಬಳಿಕ ಒಮಿಕ್ರಾನ್ ಬಂತು, ಆದರೆ ಈ ಕೊರೊನಾ ಒಮಿಕ್ರಾನ್ ರೂಪಾಂತರ ಹರಡುವುದನ್ನು ತಡೆಗಟ್ಟಲು ಈ ಲಸಿಕೆಗಳಿಗೆ ಸಾಧ್ಯವಾಗಿಲ್ಲ, ಆದರೆ ಈ ಲಸಿಕೆಗಳು ಕೊರೊನಾದಿಂದ ಉಂಟಾಗುವ ಸಾವಿನ ಸಂಖ್ಯೆ ತಗ್ಗಿಸಲು ಸಹಕಾರಿಯಾಯಿತು.
ಕೊರೊನಾ ರೂಪಾಂತರ ಒಮಿಕ್ರಾನ್‌ನಿಂದಾಗಿ ಭಾರತದಲ್ಲಿ ಕೊರೊನಾ 3ನೇ ಅಲೆ ಉಂಟಾಗಿತ್ತು, ಆದರೆ ಇದೀಗ ದೇಶದಲ್ಲಿ ಒಮಿಕ್ರಾನ್ ನಿಧಾನವಾಗಿ ತಗ್ಗುತ್ತಾ ಬಂದಿದೆ. ಕೊರೊನಾದ ಹೊಸ- ಹೊಸ ರೂಪಾಂತರ ಉಂಟಾಗುತ್ತಲೇ ಇದೆ, ಈ ಕೊರೊನಾದ ಎಲ್ಲಾ ರೂಪಾಂತರ ಸಂಪೂರ್ಣವಾಗಿ ತಡೆಗಟ್ಟುವ ಲಸಿಕೆ ಬಗ್ಗೆ ಅನೇಕ ಸಂಶೋಧನೆಗಳು ನಡೆಯುತ್ತಿವೆ.
ಭಾರತದಲ್ಲಿಯೂ ಈ ಕುರಿತು ಸಂಶೋನೆ ನಡೆಸಿ ಇದೀಗ ಎಲ್ಲಾ ಕೋವಿಡ್ 19 ರೂಪಾಂತರ ತಡೆಗಟ್ಟುವ ಸಾಮರ್ಥ್ಯದ ವ್ಯಾಕ್ಸಿನ್ ಕಂಡು ಹಿಡಿಯಲಾಗಿದೆ ಎಂದು ಭಾರತೀಯ ವಿಜ್ಞಾನಿಗಳು ಹೇಳಿದ್ದಾರೆ, ಇದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ:

ಕೊರೊನಾ ಎಲ್ಲಾ ರೂಪಾಂತರಗಳಿಗೆ ಒಂದೇ ಕೊರೊನಾ ಲಸಿಕೆ
ಭಾರತೀಯ ವಿಜ್ಞಾನಿಗಳು ಕೊರೊನಾ ಎಲ್ಲಾ ಬಗೆಯ ರೂಪಾಂತರ ತಡೆಗಟ್ಟುವ ಲಸಿಕೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕೊರೊನಾ ಪತ್ತೆಯಾಗಿ ಎರಡು ವರ್ಷಗಳಾಗಿವೆ. ಈ ಎರಡು ವರ್ಷದಲ್ಲಿ ಹಲವಾರು ರೂಪಾಂತರ ಉಂಟಾಗಿದೆ. ಕೊರೊನಾವನ್ನು ತಡೆಗಟ್ಟಲು ಹೊಸದಾಗಿ ಲಸಿಕೆಯನ್ನು ಕಂಡು ಹಿಡಿದು ನೀಡಲಾಯಿತು. ಲಸಿಕೆ ಪರಿಣಾಕಾರಿಯಾಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಹೊಸ ಬಗೆಯ ರೂಪಾಂತರ ಕಂಡು ಬಂತು, ಆ ಹೊಸ ರೂಪಾಂತರ ಒಮಿಕ್ರಾನ್ ತಡೆಗಟ್ಟುವಲ್ಲಿ ಈಗಿರುವ ಲಸಿಕೆಗಳು ಅಷ್ಟು ಪರಿಣಾಮಕಾರಿಯಾಗಿಲ್ಲ. ಆದರೆ ಬಾರತೀಯ ವಿಜ್ಞಾನಿಗಳು ತಯಾರಿಸಿರುವ ಲಸಿಕೆ ಯಾವುದೇ ಬಗೆಯ ಕೊರೊನಾ ರೂಪಾಂತರ ತಡೆಗಟ್ಟುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಈ ಲಸಿಕೆಯನ್ನು ಅಸನ್ಸೋಲ್‌ನ ಕಾಜಿ ನಜ್ರುಲ್ ವಿಶ್ವವಿದ್ಯಾಲಯ ಮತ್ತು ಭುವನೇಶ್ವರದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಜ್ ಸಂಶೋಧನೆ ನಡೆಸಿ ತಯಾರಿಸಿದ ಲಸಿಕೆಯಾಗಿದೆ.
ಈ ಸಂಶೋಧನೆಯನ್ನು ಜರ್ನಲ್ ಆಫ್ ಮೋಲೇಕ್ಯೂಲರ್ ಲಿಕ್ವಿಡ್ಸ್ ಒಪ್ಪಿದೆ.

ಈ ಲಸಿಕೆ ಎಷ್ಟು ಸಮರ್ಥವಾಗಿದೆ?
ಸಂಶೋಧಕರ ಪ್ರಕಾರ ಈ ಲಸಿಕೆ hCoV-229E, hCoV-HKU1, hCoV-OC43, SARS-CoV, MERS-CoV ಹಾಗೂ SARS-CoV-2 ವೈರಸ್ ತಡೆಗಟ್ಟುವ ಸಾಮರ್ಥ್ಯ ಹೊಂದಿದೆ.
ಪ್ರಪಂಚದಲ್ಲಿ ಬೇರೆ ಎಲ್ಲಿಯೂ ಎಲ್ಲಾ ಬಗೆಯ ಕೊರೊನಾ ರೂಪಾಂತರಗಳನ್ನು ತಡೆಗಟ್ಟುವ ಸಾಮರ್ಥ್ಯದ ಲಸಿಕೆ ಕಂಡು ಹಿಡಿದಿಲ್ಲ, ಭಾರತವೂ ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ.

ಈ ಲಸಿಕೆ ಇತರ ಲಸಿಕೆಗಿಂತ ಹೇಗೆ ಭಿನ್ನವಾಗಿದೆ?
ಇದರಲ್ಲಿ TLR4 ಪ್ರೋಟೀನ್ ಇದ್ದು ಈ ಪ್ರೊಟೀನ್ SARS-COV-2 ವೈರಸ್ ದೇಹದೊಳಗೆ ಪ್ರವೇಶಿಸಿದ ತಕ್ಷಣ ಪತ್ತೆ ಹಚ್ಚಿ ಆ ವೈರಸ್ ವಿರುದ್ಧ ಹೋರಾಡುವುದು.
ನಾವು ರೋಗಿಗೆ ಈ ಲಸಿಕೆ ನೀಡಿದ್ದೆವು, ಈ ಲಸಿಕೆ ವೈರಸ್ ವಿರುದ್ಧ ಅತಿ ಶಕ್ತವಾಗಿ ಹೋರಾಡಿ ರಕ್ಷಣೆ ನೀಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕೊನೆಯದಾಗಿ: ಈಗ ಭಾರತದಲ್ಲಿ 2 ಡೋಸ್ ಲಸಿಕೆ ಜೊತೆಗೆ ಬೂಸ್ಟರ್ ನೀಡಲಾಗುತ್ತಿದೆ. ಹೊಸದಾಗಿ ವಿಜ್ಞಾನಿಗಳು ಕಂಡು ಹಿಡಿದರುವ ಲಸಿಕೆ ಪರೀಕ್ಷೆ ಹಂತದಲ್ಲಿದೆ. ಈ ಲಸಿಕೆ ಬಂದ್ರೆ ಯಾವುದೇ ಕೊರೊನಾ ರೂಪಾಂತರ ಬಂದರೂ ಶಕ್ತವಾಗಿ ಎದುರಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.



Click it and Unblock the Notifications
