Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸಿದ್ಧವಾಯ್ತು ಮತ್ತೊಂದು ಕೊರೊನಾ ಲಸಿಕೆ: ಜೈಕೋವಿ-ಡಿ, ಇದರ ವಿಶೇಷತೆ ಏನು?
ಒಂದು ಕಡೆ ಕೊರೊನಾ 2 ಅಲೆಯ ಆರ್ಭಟ, ಮತ್ತೊಂದೆಡೆ ಕೊರೊನಾ ಲಸಿಕೆಯ ಕೊರತೆ ಜನರನ್ನು ಆತಂಕಕ್ಕೆ ದೂಡಿದೆ. ತಜ್ಞರೇ ಹೇಳಿರುವಂತೆ ಕೊರೊನಾ ಗೆಲ್ಲಲು ಎಲ್ಲರು ಕೊರೊನಾ ಲಸಿಕೆ ಪಡೆದುಕೊಳ್ಳುವಂತಾಗಬಹುದು. ಸರ್ಕಾರವು 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಪಡೆಯುವಂತೆ ಸೂಚಿಸಿದೆ.

ಆದರೆ ಲಸಿಕೆಗಾಗಿ ಬಂದವರಿಗೆ ಕೊರೊನಾ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ, ಇದು ಸರ್ಕಾರದ ಮೇಲೆ ಒತ್ತಡ ಬೀರಿದರೆ ಜನರಲ್ಲಿ ಎಲ್ಲರಿಗೆ ಸಿಗುವಂತೆ ಕೊರೊನಾ ಲಸಿಕೆ ಯಾವಾಗ ಲಭ್ಯವಾಗುವುದು ಎಂಬ ಪ್ರಶ್ನೆ ಮೂಡಿತ್ತು. ಈಗ ಅದಕ್ಕೆ ಉತ್ತರವಾಗಿ ಅಹ್ಮದಾಬಾದ್‌ನ ಜೈಡಸ್ ಕ್ಯಾಡಿಲಾ ಕಂಪನಿ ಭರವಸೆಯನ್ನು ಮೂಡಿಸಿದೆ.
ಜೂನ್ ತಿಂಗಳಿನಲ್ಲಿ ZyCoV-D ಕೋವಿಡ್ 19 ಲಸಿಕೆ ತಯಾರಿಸಿ ನೀಡುವುದಾಗಿ ಕಂಪನಿ ಹೇಳಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

ಭಾರತದಲ್ಲಿ ಕೊರೊನಾ ಲಸಿಕೆ ಉತ್ಯಾದನೆಯಲ್ಲಿ 2ನೇ ದೊಡ್ಡ ಕಂಪನಿ
ನೋವೆಲ್ ಕೊರೊನಾ ವೈರಸ್ ವಿರುದ್ಧ ಲಸಿಕೆ ಉತ್ಪಾದನೆಯಲ್ಲಿ ಕೊವಾಕ್ಸಿನ್ ಉತ್ಪಾದನೆಯ ಭಾರತ್ ಬಯೋಟೆಕ್ ಮೊದಲ ಸ್ಥಾನದಲ್ಲಿದ್ದರೆ ಜೈಕೋವಿ-ಡಿ ಲಸಿಕೆ ಉತ್ಪಾದನೆ ಜೈಡಸ್ ಕ್ಯಾಡಿಲಾ 2ನೇ ಸ್ಥಾನದಲ್ಲಿದೆ.

ಜೈಕೋವಿ-ಡಿ 3 ಡೋಸ್‌ನ ಲಸಿಕೆಯಾಗಿದೆ
ಕೊವಾಕ್ಸಿನ್ , ಕೋವಿಶೀಲ್ಡ್ ಎರಡು ಡೋಸ್‌ನ ಲಸಿಕೆಯಾದರೆ ಜೈಕೋವಿ-ಡಿ ಮೂರು ಡೋಸ್‌ನ ಲಸಿಕೆಯಾಗಿದೆ. ಈ ಲಸಿಕೆಯ ಟ್ರಯಲ್‌ನಲ್ಲಿ 12-17ವರ್ಷ ಒಳಗಿನ ಮಕ್ಕಳನ್ನು ಸಹ ಒಳಪಡಿಸಿದೆ.

ವರ್ಷದಲ್ಲಿ 24 ಕೋಟಿ ಲಸಿಕೆ ಉತ್ಪಾದಿಸಲಿರುವ ಜೈಕೋವಿ-ಡಿ
ಈ ಲಸಿಕೆ ನೀಡಲು ಅನುಮತಿ ದೊರೆತ ಕೂಡಲೇ ಜೂನ್‌ನಲ್ಲಿ ಲಭ್ಯವಾಗಲಿದ್ದು ಈ ವರ್ಷ 240 ಮಿಲಿಯನ್ ಅಂದ್ರೆ 24 ಕೋಟಿ ಲಸಿಕೆ ಉತ್ಪಾದನೆಯ ಗುರಿಯನ್ನು ಹೊಂದಿದೆ.
ಈ ಲಸಿಕೆಯನ್ನು ಇದುವರೆಗೆ ಸ್ವಯಂಪ್ರೇರೀತರಾಗಿ ಬಂದಿರುವ 28,000 ಜನರ ಮೇಲೆ ಪ್ರಯೋಗಿಸಲಾಗಿದೆ. ಆದ್ದರಿಂದ ಈ ಲಸಿಕೆಯ ಟ್ರಯಲ್ ನಲ್ಲಿ ಒಳಪಟ್ಟವರ ಸಂಖ್ಯೆ ಇತರ ವ್ಯಾಕ್ಸಿನ್ ಟ್ರಯಲ್ ಸಂಖ್ಯೆಗಿಂತ ಅಧಿಕವಿದೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ZyCoV-D ಒಂದು DNA ವ್ಯಾಕ್ಸಿನ್ ಆಗಿದ್ದು, ಇದು ಕೊರೊನಾವೈರಸ್ ದೇಹ ಒಳ ಪ್ರವೇಶಿಸಲು ಕಾರಣವಾಗುವ ವೈರಲ್ ಮೆಂಬರೇನ್ ಪ್ರೋಟೀನ್ ವಿರುದ್ಧ ಹೋರಾಡುತ್ತದೆ.
ಇದು ಪ್ಲಾಸ್ಮಿಡ್ ಡಿಎನ್‌ಎ ಆಧಾರಿತ ಲಸಿಕೆಯಾಗಿದ್ದು ಇದರಲ್ಲಿ ಸರ್ಕ್ಯೂಲರ್ ಮತ್ತು ಎಕ್ಸ್ಟ್ರಾಕ್ರೋಮೋಸೋಮಲ್ ಬ್ಯಾಕ್ಟಿರಿಯಾ ಡಿಎನ್‌ಎ ಬಳಸಿ ತಯಾರಿಸಲಾಗಿದೆ.



Click it and Unblock the Notifications
