Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ತುಂಬಾ ಭರವಸೆ ಮೂಡಿಸಿರುವ DRDO ಕೋವಿಡ್ ಔಷಧ: ಇದರ ಬಗ್ಗೆ ಅರಿಯಬೇಕಾದ ಸಂಗತಿಗಳಿವು
ಕೋವಿಡ್ 19 ನಿಯಂತ್ರಣಕ್ಕೆ ಯಾವ ಔಷಧ ಒಳ್ಳೆಯದು ಎಂಬುವುದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಈಗಾಗಲೇ ಭಾರತದಲ್ಲಿ ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೊವಾಕ್ಸಿನ್ ಹಾಗೂ ಕೊವಿಶೀಲ್ಡ್ ಎಂಬ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ.

ಇದರ ಜೊತೆಗೆ DRDO (Drugs Controller General of India) ಕೂಡ ಕೊರೊನಾಗೆ 2-DG( 2-deoxy-D-glucose) ಎಂಬ ಔಷಧವನ್ನು ಕಂಡು ಹಿಡಿದಿದೆ. ಮೇ. 15ಕ್ಕೆ ಈ ಔಷಧಿಯನ್ನು ಕೊರೊನಾ ಸೋಂಕಿತರಿಗೆ ನೀಡಲು ಅನುಮತಿ ಸಿಕ್ಕಿದೆ. ಇದೀಗ ಈ ಔಷಧಿ ತುಂಬಾನೇ ಸದ್ದು ಮಾಡುತ್ತಿದೆ.
ಈ ಔಷಧ ಯಾವ ರೂಪದಲ್ಲಿ ಇರುತ್ತದೆ, ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ, ಇದರ ಬೆಲೆಯೆಷ್ಟು ಎಂಬ ಎಲ್ಲಾ ಮಾಹಿತಿ ಈ ಲೇಖನದಲ್ಲಿದೆ:

2 ಡಿಯೋಕ್ಸಿ ಡಿ ಗ್ಲುಕೋಸ್ (2-DG) ಔಷಧ ಬಳಸುವುದು ಹೇಗೆ?
ಇದು ಪೌಡರ್ ರೂಪದ ಔಷಧವಾಗಿದ್ದು ಸ್ಯಾಚೆಟ್‌ನಲ್ಲಿ ದೊರೆಯುತ್ತದೆ. ಇದನ್ನು ನೀರಿನಲ್ಲಿ ಕಲೆಸಿ ಕುಡಿಯಬೇಕು. ಇದು ಸೋಂಕಾಣುಗಳು ಜೀವ ಕಣಗಳಿಗೆ ಹಾನಿ ಮಾಡುವುದನ್ನು ತಡೆಗಟ್ಟುತ್ತದೆ, ವೈರಸ್ ಬೆಳವಣಿಗೆ ತಡೆಗಟ್ಟಿ, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಈ ಔಷಧ ಬಳಸುವುದರಿಂದ ಸೋಂಕಿತರಲ್ಲಿ ಆಕ್ಸಿಜನ್ ಕೊರತೆ ಉಂಟಾಗುವುದನ್ನು ತಡೆಗಟ್ಟಬಹುದು ಎಂಬ ಸರ್ಕಾರದ ಭರವಸೆಯಾಗಿದೆ. ಇದು ಆಸ್ಪತ್ರೆಯಲ್ಲಿರುವ ಸೋಂಕಿತರು ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತೆ.

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
2-DGಯನ್ನು ಸೋಂಕಿತರಿಗೆ ನೀಡಿದಾಗ ಅವರು ಬೇಗನೆ ಚೇತರಿಸಿಕೊಂಡು ವರದಿ ನೆಗೆಟಿವ್ ಬರುತ್ತಿರುವುದು ಸಾಬೀತಾಗಿದೆ. ಈ ಔಷಧ ದೇಹದಲ್ಲಿ ಶಕ್ತಿ ಕಣಗಳನ್ನು ಉತ್ಪಾದಿಸಿ, ವೈರಸ್ ಬೆಳವಣಿಗೆಯನ್ನು ತಡೆಗಟ್ಟುತ್ತದೆ.

ಈ ಔಷಧ ಎಷ್ಟು ಪರಿಣಾಮಕಾರಿ
ಕೊರೊನಾ 2ನೇ ಅಲೆಯಲ್ಲಿ ಸಾಕಷ್ಟು ಸೋಂಕಿತರಲ್ಲಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ಈ ಔಷಧ ಆಕ್ಸಿಜನ್ ಕೊರತೆ ಉಂಟಾಗುವುದನ್ನು ತಡೆಗಟ್ಟಿ ಅಮೂಲ್ಯ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತೆ. ಅಲ್ಲದೆ ಆಸ್ಪತ್ರೆಯಲ್ಲಿರುವ ಸೋಂಕಿತರು ಬೇಗನೆ ಚೇತರಿಸಿಕೊಳ್ಳಲು ಕೂಡ ಸಹಾಯ ಮಾಡುತ್ತೆ.
ಆಕ್ಸಿಜನ್ ಸಿಲೆಂಡರ್‌ನಿಂದ ಉಸಿರಾಡುತ್ತಿರುವವರು ಸ್ವಾಭಾವಿಕವಾಗಿ ಉಸಿರಾಡುವಂತಾಗಲು ಈ ಔಷಧ ಸಹಕಾರಿ ಎಂಬುವುದು ಅಧ್ಯಯನದಿಂದ ಸಾಬೀತಾಗಿದೆ.

ಇದರ ಬೆಲೆ ಎಷ್ಟು
ನ್ಯೂಸ್ 18 ವರದಿ ಪ್ರಕಾರ ಇದರ ಬೆಲೆಯನ್ನು ಇನ್ನೂ ನಿಗದಿ ಪಡಿಸಿಲ್ಲ, ಅಂದಾಜು ರೂ 500-600 ಇರಬಹುದು ಎಂದು ಹೇಳಲಾಗುತ್ತಿದೆ. ಡಾ, ರೆಡ್ಡಿ ಲ್ಯಾಬ್ ಹಾಗೂ DRDO ಜೊತೆಯಾಗಿ ಈ ಔಷಧ ತಯಾರಿಸಿದ್ದು ದೇಶದಲ್ಲಿ ಎಲ್ಲಾ ಕಡೆ ಇದು ಸುಲಭವಾಗಿ ಸಿಗುವಂತಾಗುವುದು.



Click it and Unblock the Notifications
