Latest Updates
-
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ!
ಬ್ಲ್ಯಾಕ್, ವೈಟ್, ಯೆಲ್ಲೋ ಫಂಗಸ್ ಯಾವುದೇ ಆಗಿರಲಿ ಸಕ್ಕರೆಯಂಶ ನಿಯಂತ್ರಣದಲ್ಲಿದ್ದರೆ ಭಯವಿಲ್ಲ: ತಜ್ಞರು
ದೇಶದಲ್ಲಿ ಒಂದು ಕಡೆ ಕೊರೊನಾ 2ನೇ ಅಲೆಯ ಆರ್ಭಟ ಅದರ ಜೊತೆಗೆ ಬ್ಲ್ಯಾಕ್, ವೈಟ್, ಯೆಲ್ಲೋ ಎಂಬ ಫಂಗಸ್ ಕಾಟ ಇವೆಲ್ಲಾ ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಸವಲಾಗಿ ಪರಿಣಮಿಸಿದೆ.
ಕೆಲವು ರಾಜ್ಯಗಳಲ್ಲಿ ಬ್ಲ್ಯಾಕ್ ಫಂಗಸ್ ಅನ್ನು ಸಾಂಕ್ರಾಮಿಕ ಎಂದು ಘೋಷಿಸಲಾಗಿದೆ. ಭಾರತದಲ್ಲಿ 9000ಕ್ಕೂ ಅಧಿಕ ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು 270ಕ್ಕೂ ಅಧಿಕ ಜನ ಇದರಿಂದಾಗಿ ಸಾವನ್ನಪ್ಪಿದ್ದಾರೆ. ಬ್ಲ್ಯಾಕ್ ಫಂಗಸ್ ನಂತರ ಹಲವರಲ್ಲಿ ವೈಟ್ ಫಂಗಸ್ ಕಂಡು ಬರುತ್ತಿದೆ, ಇದೀಗ ಯೆಲ್ಲೋ ಫಂಗಸ್ ಬಗ್ಗೆಯೂ ತಜ್ಞರು ಎಚ್ಚರಿಸಿದ್ದಾರೆ.

ಈ ಎಲ್ಲಾ ಫಂಗಸ್ ನಿಯಂತ್ರಿಸಲು ಮಾರ್ಗ ಒಂದೇ
ಬ್ಲ್ಯಾಕ್, ವೈಟ್, ಯೆಲ್ಲೋ ಹೀಗೆ ಫಂಗಸ್ ಯಾವುದೇ ಆಗಿರಲಿ, ಇದನ್ನು ಗೆಲ್ಲಬೇಕಾದರೆ ಮಾರ್ಗ ಒಂದೇ , ಅದುವೇ ದೇಹದಲ್ಲಿರುವ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿ ಇಡುವುದಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಮಧುಮೇಹಿಗಳಿಗೇ ಹೆಚ್ಚು ಅಪಾಯಕಾರಿಯಾಗಿರುವ ಫಂಗಸ್
ಮಧುಮೇಹಿಗಳಲ್ಲಿ ರೋಗ ನಿರೋಧಕ ಶಕ್ತಿ ಸ್ವಲ್ಪ ಕಡಿಮೆ ಇರುತ್ತದೆ, ಇದರಿಂದಾಗಿ ಫಂಗಸ್ ಅಪಾಯ ಇವರಿಗೆ ಅಧಿಕ. ಮಧುಮೇಹಿಗಳಿಗೆ ಕೋವಿಡ್ 19 ತಾಗಿದರೆ ಕೊರೊನಾದಿಂದ ಚೇತರಿಸಲು ಸ್ಟಿರಾಯ್ಡ್ ನೀಡಲಾಗುವುದು, ಈ ಸ್ಟಿರಾಯ್ಡ್‌ಗಳು ದೇಹದಲ್ಲಿ ಸಕ್ಕರೆಯಂಶವನ್ಉ ಅಧಿಕ ಮಾಡಿದಾಗ ಸಕ್ಕರೆ ಕಾಯಿಲೆ ಇರುವವರಿಗೆ ಮತ್ತಷ್ಟು ತೊಂದರೆಯಾಗುತ್ತದೆ. ಆಗ ಅವರ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ತುಂಬಾನೇ ಕಡಿಮೆಯಾಗುವುದು.
ಬ್ಯಾಕ್, ವೈಟ್, ಯೆಲ್ಲೋ ಫಂಗಸ್ ಮ್ಯೂಕೋರ್ಮೈಕೋಸಿಸ್ ಎಂಬ ಫಂಗಿಯಿಂದ ಉಂಟಾಗುವುದು.ಇದು ನೀರು, ಮಣ್ಣು, ಗಾಳಿಯಲ್ಲಿರುತ್ತದೆ.
ಫಂಗಸ್ ಉಂಟಾದಾಗ ಏನಾಗುತ್ತದೆ?
ಫಂಗಸ್ ದಾಳಿಯಾದಾಗ ಕೋವಿಡ್ 19 ಲಕ್ಷಣಗಳಂತೆ ಕಂಡು ಬಂದರೂ RT-PCR ಟೆಸ್ಟ್ ರಿಸಲ್ಟ್ ನೆಗೆಟಿವ್ ಇರುತ್ತದೆ. ಆದರೆ ಸಿಟಿ ಸ್ಕ್ಯಾನ್ ಮಾಡಿದಾಗ ಶ್ವಾಸಕೋಶಕ್ಕೆ ಹಾನಿಯುಂಟಾಗಿರುತ್ತದೆ. ಇದು ಅಂಗಾಂಗಗಳಿಗೂ ಹಾನಿಯುಂಟು ಮಾಡುವುದು.

ಯಾರಲ್ಲಿ ಮ್ಯೂಕೋರ್ಮೈಕೋಸಿಸ್ ಫಂಗಸ್ ಅಪಾಯ ಅಧಿಕ
ಕೋವಿಡ್ 19 ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಅಥವಾ ಕೋವಿಡ್ 19ನಿಂದ ಗುಣಮುಖರಾದವರಲ್ಲಿ ಅದರಲ್ಲೂ ಮಧುಮೇಹಿಗಳಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತದೆ.

ಫಂಗಸ್ ಬಾರದಂತೆ ತಡೆಗಟ್ಟುವುದು ಹೇಗೆ?
ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣ ಮಾಡಬೇಕು, ಮಾಸ್ಕ್‌ನಲ್ಲಿ ಯಾವುದೇ ತೇವಾಂಶ ಇರಬಾರದು, ಕೋವಿಡ್ ಚಿಕಿತ್ಸೆಗೆ ಸ್ಟಿರಾಯ್ಡ್ ಅಷ್ಟು ಅಗ್ಯತವಿದ್ದಲ್ಲಿ ಮಾತ್ರ ನೀಡಬೇಕು, ಅದು ವೈದ್ಯರ ಮಾರ್ಗದರ್ಶನದಲ್ಲಿ ಮಾಡಬೇಕು, ಸ್ವಯಂ ಚಿಕಿತ್ಸೆ ಮಾಡಬಾರದು.

ಕೋವಿಡ್ 19 ಚಿಕಿತ್ಸೆ ಬಳಿಕ ಮನೆಗೆ ಮರಳಿದ ಮೇಲೆ ಏನು ಮಾಡಬೇಕು?
* ಕೋವಿಡ್ 19ನಿಂದ ಗುಣಮುಖರಾಗಿ ಮನೆಗೆ ಮರಳಿದವರಲ್ಲಿ ತುಂಬಾ ಸುಸ್ತು ಇರುತ್ತದೆ, ಆದರೂ ಸ್ವಲ್ಪ ನಡೆದಾಡುವುದು ಮಾಡಬೇಕು, ಚಿಕ್ಕ-ಪುಟ್ಟ ಭಾರ ಎತ್ತುವುದು ಮಾಡಬೇಕು. ಇದು ಸಕ್ಕರೆಯಂಶ ನಿಯಂತ್ರಣದಲ್ಲಿ ಇಡುವಲ್ಲಿ ಸಹಾಯ ಮಾಡುತ್ತೆ.
* ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಲು ಪ್ರಯತ್ನಿಸಬೇಕು. ಇದಕ್ಕಾಗಿ ಯಾವುದೇ ಮ್ಯಾಜಿಕ್ ಮಾತ್ರೆಯಿಲ್ಲ. ದಿನಾ ಪ್ರಯತ್ನ ಪಡುವ ಮೂಲಕ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಬೇಕು. ಆರೋಗ್ಯಕರ ಆಹಾರ ಸೇವಿಸಿ, ಚೆನ್ನಾಗಿ ನಿದ್ದೆ ಮಾಡಿ, ಸಾಕಷ್ಟು ನೀರು ಕುಡಿಯಿರಿ, ವಿಶ್ರಾಂತಿ ತೆಗೆದುಕೊಳ್ಳಿ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.
* ಇನ್ನು ಸಂಪೂರ್ಣ ಹುಷಾರಾಗುವವರೆಗೆ ಮಣ್ಣಿನಲ್ಲಿ ಬರಿಗಾಲಿನಲ್ಲಿ ಓಡಾಡುವುದು, ಗಾರ್ಡಿನಿಂಗ್ ಮಾಡುವುದು ಮಾಡಬೇಡಿ. ದೂಳು ಇರುವ ಕಡೆ ಓಡಾಡುವಾಗ ಮಾಸ್ಕ್ ಧರಿಸಿ.
* ಸೈನಸೈಟಿಸ್‌ನಂಥ ಸಮಸ್ಯೆ ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ.
ಕೊನೆಯದಾಗಿ
ಈ ರೀತಿ ಮುನ್ನೆಚ್ಚರಿಕೆ ತೆಗೆದುಕೊಂಡರೆ ಬ್ಲ್ಯಾಕ್, ವೈಟ್, ಯೆಲ್ಲೋ ಹೀಗೆ ಫಂಗಸ್ ಯಾವುದೇ ಆಗಿರಲಿ, ಇದರ ಅಪಾಯ ತಪ್ಪಿಸಬಹುದು.



Click it and Unblock the Notifications
