Latest Updates
-
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ
ಈ ಔಷಧದಿಂದ ಕೋವಿಡ್ 19 ರೋಗಿಗಳಲ್ಲಿ ಚೇತರಿಕೆ
ಸಾಂಕ್ರಾಮಿಕ ಪಿಡುಗು ಕೊರಿನಾವೈರಸ್ ಅಟ್ಟಹಾಸ ಮುಂದುವರೆಯುತ್ತಲೇ ಇದೆ. ಇದುವರೆಗೆ 8,265,174 ಅಧಿಕ ಜನರಿಗೆ ಈ ಸೋಂಕು ಬಾಧಿಸಿದ್ದು, ನಾಲ್ಕು ಲಕ್ಷದ ನಲ್ವತ್ತಾರು ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ.

ಕೊರೊನಾವೈರಸ್ ನಾಶ ಪಡಿಸುವುದು ಹೇಗೆ ಎಂಬುವುದರ ಕುರಿತು ಅನೇಕ ಸಂಶೋಧನೆಗಳು ನಡೆಯುತ್ತಲೇ ಇವೆ, ಅನೇಕ ಲಸಿಕೆಗಳನ್ನು ಕಂಡು ಹಿಡಿಯಲಾಗುತ್ತಿದೆ. ಆದರೆ ಇದುವರೆಗೆ ಸೂಕ್ತವಾದ ಔಷಧ ಇನ್ನೂ ಕಂಡು ಹಿಡಿಯಲಾಗಲಿಲ್ಲ, ಕೋವಿಡ್ 19 ನಿಯಂತ್ರಿಸಲು ಬಳಸುತ್ತಿರುವ ಹಲವಾರು ಔಷಧಗಳ ಬಗ್ಗೆ ವರದಿಗಳು ಬರುತ್ತಲೇ ಇವೆ.
ಇತ್ತೀಚೆಗೆ ಕೋವಿಡ್ 19 ಬಾಧಿತ ರೋಗಿಗಳ ಜೀವ ಉಳಿಸಲು ವಿಶ್ವದಲ್ಲಿ ಹೆಚ್ಚಾಗಿ ಬಳಸುತ್ತಿರುವ ಔಷಧ ಎಂದರೆ dexamethasone (ಡೆಕ್ಸಾಮೆಥ್ಸೋನ್). ಕೋವಿಡ್ 19 ಸಾಂಕ್ರಾಮಿಕ ಪಿಡುಗು ವಿರುದ್ಧ ಹೋರಾಡುವಲ್ಲಿ ಇದು ಪರಿಣಾಮಕಾರಿ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ:

ಆರೋಗ್ಯ ಇಲಾಖೆಯಿಂದ ಅನುಮತಿ ಪಡೆದಿರುವ ಕಡಿಮೆ ಬೆಲೆಯ ಸ್ಟಿರಾಯ್ಡ್
ಜೂನ್ 16ರಂದು ನಡೆಸಿದ ಟ್ರಯಲ್ ಪರೀಕ್ಷೆಯಲ್ಲಿ ಕೋವಿಡ್ 19ನಿಂದ ಗಂಭೀರವಾದ ರೋಗಿಗಳಿಗೆ ಡೆಕ್ಸಾಮೆಥ್ಸೋನ್ ಸ್ಟಿರಾಯ್ಡ್ ನೀಡಲಾಗಿತ್ತು. ಅದಾದ ಬಳಿಕ ವೆಂಟಿಲೇಟರ್‌ನಲ್ಲಿದ್ದ ಆ ರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಇದನ್ನು ಬಳಸುವಂತೆ ಬ್ರಿಟಿಷ್ ಆರೋಗ್ಯ ಇಲಾಖೆ ಅನುಮತಿ ನೀಡಿದೆ.,
ಅತ್ಯಂತ ಕಡಿಮೆ ಬೆಲೆಯ ಔಷಧ ಇದಾಗಿದ್ದು ಇದು ಇನ್ನು ಟ್ರಯಲ್ ಹಂತದಲ್ಲಿ ಇರುವುದರಿಂದ ರಪ್ತುಗೆ ನಿರ್ಬಂಧ ಹಾಕಲಾಗಿದೆ.

ಡೆಕ್ಸಾಮೆಥ್ಸೋನ್ ಎಂದರೇನು?
ಡೆಕ್ಸಾಮೆಥ್ಸೋನ್ ಔಷಧವನ್ನು ದೇಹದಲ್ಲಿ ಉರಿಯೂತ ಕಡಿಮೆ ಮಾಡಲು ಬಳಸಲಾಗುತ್ತದೆ. ಈ ಔಷಧ ಮಾತ್ರೆ, ಸಿರಪ್ ರೂಪದಲ್ಲಿ ಇರುತ್ತದೆ. ಇದರಿಂದ ಕಣ್ಣಿಗೆ ಹಾಕುವ ಡ್ರಾಪ್, ಕಿವಿಗೆ ಹಾಕುವ ಡ್ರಾಪ್‌ಗಳನ್ನೂ ತಯಾರಿಸಲಾಗುವುದು. ಇದನ್ನು ಮುಖ್ಯವಾಗಿ ದೇಹದ ವಿವಿಧ ಭಾಗಗಳಲ್ಲಿರುವ ಉರಿಯೂತ ಕಡಿಮೆ ಮಾಡಲು ಬಳಸುತ್ತಾರೆ.
ಇನ್ನು ಮೂಳೆ ಹಾಗೂ ಮೆದುಳಿನಲ್ಲಿ ಗಡ್ಡೆಯಿದ್ದರೆ ಇದರಿಂದ ಉಂಟಾಗುವ ಯೂತ ಕಡಿಮೆ ಮಾಡುತ್ತದೆ, ಈ ಔಷಧದಲ್ಲಿ ಕಾರ್ಟಿಕೋಸ್ಟಿರಾಯ್ಡ್ (corticosteroid) ಹಾರ್ಮೋನ್ಸ್ ಇರುತ್ತದೆ, ಇದು ಊತ, ಅಲರ್ಜಿ ಸಂಬಂಧಿಸಿದ ಸಮಸ್ಯೆ ಕಡಿಮೆ ಮಾಡುತ್ತದೆ.

ಡೆಕ್ಸಾಮೆಥ್ಸೋನ್ ಪ್ರಯೋಜನಗಳು
ಈ ಕೆಳಗಿನ ಆರೋಗ್ಯ ಸಮಸ್ಯೆ ಹೋಗಲಾಡಿಸಲು ಇದನ್ನು ಉಪಯೋಗಿಸುತ್ತಾರೆ
- ಸಂಧಿವಾತ
- ರಕ್ತ/ಹಾರ್ಮೋನ್/ ರೋಗ ನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆ
- ಅಲರ್ಜಿ
- ತ್ವಚೆ ಸಮಸ್ಯೆ
- ಕಣ್ಣಿನ ಸೋಂಕು
- ಕರುಳಿನ ಸೋಂಕು/ಹೊಟ್ಟೆ ಸಮಸ್ಯೆ
- ಉಸಿರಾಟದ ತೊಂದರೆ
- ಲುಕೇಮಿಯಾ, ಮಲ್ಟಿಪಲ್ ಮೈ ಮೈಲೋಮಾ ಮುಂತಾದ ಕ್ಯಾನ್ಸರ್
- ಅಸ್ತಮಾ ಹಾಗೂ ಶ್ವಾಸಕೋಶದ ಕ್ಯಾನ್ಸರ್
- ಕೀಮೋಥೆರಪಿ ಮಾಡಿಸಿದಾಗ ಕಂಡು ಬರುವ ವಾಂತಿ, ತಲೆಸುತ್ತು ಸಮಸ್ಯೆ
- ಹೊಟ್ಟೆ ಕ್ಯಾನ್ಸರ್
- ಮೂತ್ರಜನಕಾಂಗದಲ್ಲಿ ಸಮಸ್ಯೆ
- ಗಾಯಗಳು ನಿಧಾನಕ್ಕೆ ಒಣಗುವುದು
- ಕಿರಿಕಿರಿ
- ಪಾದ, ಮೊಣಕಾಲುಗಳಲ್ಲಿ ಊತ ಉಂಟಾಗುವುದು
- ನಿದ್ದೆ ಮಾಡಲು ತೊಂದರೆ
- ಎದೆ ಉರಿ
- ಸ್ನಾಯು ದುರ್ಬಲವಾಗುವುದು
- ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು
- ವಾಂತಿ
- ಹೊಟ್ಟೆ ಸಮಸ್ಯೆ
- ಒತ್ತಡ
- ಪೊಟಾಷ್ಯಿಯಂ ಕಡಿಮೆಯಾಗುವುದು
- ಮಲದಲ್ಲಿ ರಕ್ತ ಅಥವಾ ಕಪ್ಪು ಬಣ್ಣದಲ್ಲಿ ಮಲ ವಿಸರ್ಜನೆ
- ಮೂತ್ರದಲ್ಲಿ ರಕ್ತ
- ಜ್ವರ, ಮೈಕೈ ನೋವು, ಮಂಡಿ ನೋವು
- ಮೂಡ್ ಸ್ವಿಂಗ್ , ನಿದ್ದೆ ಮಾಡಲು ತೊಂದರೆಯಾಗುವುದು
- ತುಂಬಾ ಅಲರ್ಜಿ ಸಮಸ್ಯೆ
- ತುಂಬಾ ಸುಸ್ತು, ತಲೆಸುತ್ತು
- ಮೈಯಲ್ಲಿ ಅಸ್ವಾಭಾವಿಕ ಊತ
- ಹೊಟ್ಟೆಯಲ್ಲಿ ಹುಣ್ಣು
- ಆಸ್ಟಿಯೊಪೊರೋಸಿಸ್
- ಮೂತ್ರಪಿಂಡದ ಗ್ರಂಥಿಗೆ ಸಂಬಂಧಿಸಿದ ಕಾಯಿಲೆಯಾದ Cushing's syndromeಗೆ ಔಷಧ ತೆಗೆದುಕೊಳ್ಳುತ್ತಿದ್ದರೆ
- erythromycin ಆ್ಯಂಟಿಬಾಡಿ ಔಷಧಿ ತೆಗೆದುಕೊಳ್ಳುತ್ತಿದ್ದರೆ
- ಆ್ಯಂಟಿಫಂಗಲ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರೆ
- ಹೃದಯ ಸಂಬಂಧಿ ಸಮಸ್ಯೆಗೆ ಔಷಧ ತೆಗೆದುಕೊಳ್ಳುತ್ತಿದ್ದರೆ
- ಅತ್ಯಧಿಕ ರಕ್ತದೊತ್ತಡ ಇರುವವರಿಗೂ ಈ ಔಷಧ ಒಳ್ಳೆಯದಲ್ಲ
- ಡೆಕ್ಸಾಮೆಥ್ಸೋನ್ ತುಂಬಾ ಸಮಯ ಬಳಕೆ ಮಾಡಿದರೆ ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
- ಇತ್ತೀಚೆಗೆ ಹೃದಯಾಘಾತವಾದ ವ್ಯಕ್ತಿಗಳಿಗೂ ಇದು ಒಳ್ಳೆಯದಲ್ಲ
- ಎದೆ ಹಾಲುಣಿಸುವ ತಾಯಂದಿರು ಇದನ್ನು ಸೇವಿಸುವಂತಿಲ್ಲ

ಡೆಕ್ಸಾಮೆಥ್ಸೋನ್ ಹೇಗೆ ಕೆಲಸ ಮಾಡುತ್ತದೆ?
ಡೆಕ್ಸಾಮೆಥ್ಸೋನ್ ಎಂಬ ಸ್ಟಿರಾಯ್ಡ್ ಉರಿಯೂತ ಬಾರದಂತೆ ತಡೆದು, ನರಗಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುತ್ತದೆ ಹಾಗೂ ರೋಗ ನಿರೋಧಕ ವ್ಯವಸ್ಥೆ ಅಸ್ವಾಭಾವಿಕವಾಗಿ ವರ್ತಿಸುವುದನ್ನು ತಪ್ಪಿಸುತ್ತದೆ.
ಮೂತ್ರ ಜನಕಾಂಗದ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಹಾರ್ಮೋನ್‌ನಲ್ಲಿ ತೊಂದರೆ ಉಂಟಾದಾಗ ಈ ಔಷಧ ನೀಡಲಾಗುವುದು. ಇದು ಸೋಂಕುಗಳ ವಿರುದ್ಧ ಹೋರಾಡುತ್ತದೆ, ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಸರಿಯಾಗಿರುವಂತೆ ಮಾಡುವುದು ಅಲ್ಲದೆ ಮಾನಸಿಕ ಒತ್ತಡ ಕೂಡ ಕಡಿಮೆ ಮಾಡುತ್ತದೆ.

ಡೆಕ್ಸಾಮೆಥ್ಸೋನ್ ಅಡ್ಡಪರಿಣಾಮಗಳೇನು?
ಇದು ಅಡ್ಡಪರಿಣಾಮ ಬೀರುವ ಸಾಧ್ಯತೆ ತುಂಬಾ ಕಡಿಮೆ, ಕೆಲವೇ ಕೆಲವು ಜನರಿಗೆ ಈ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದು
ಈ ಲಕ್ಷಣಗಳು ಕೆಲವು ದಿನಗಳಲ್ಲಿ ಇಲ್ಲವಾಗುವುದು.

ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರಿಗೆ ತಿಳಿಸಬೇಕು

ಇತರ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಡೆಕ್ಸಾಮೆಥ್ಸೋನ್ ತೆಗೆದುಕೊಳ್ಳಬಹುದೇ?
ಇತರ ಔಷಧ ಹಾಗೂ ಗಿಡಮೂಲಿಕೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದು ಅಡ್ಡಪರಿಣಾಮ ಬೀರಬಹುದು. ಈ ಕೆಳಗಿನ ಕಾಯಿಲೆಗೆ ಔಷಧ ತೆಗೆದುಕೊಳ್ಳುತ್ತಿದ್ದರೆ ಈ ಔಷಧ ರಿಯಾಕ್ಟ್ ಆಗುವ ಸಾಧ್ಯತೆ ಹೆಚ್ಚು

ಸೂಚನೆ:
ಡೆಕ್ಸಾಮೆಥ್ಸೋನ್ ಔಷಧವನ್ನು ಕೋವಿಡ್ 19 ರೋಗಿಗಳಿಗೆ ನೀಡುತ್ತಿದ್ದರೂ ಇದರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯುತ್ತಿದೆ, ಇದರ ಕುರಿತು ಇನ್ನಷ್ಟು ಅಧ್ಯಯನ ವರದಿಗಳು ಬರಲಿದ್ದು ಈ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು.



Click it and Unblock the Notifications











