Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಕೋವಿಡ್ 19: ವೈರಾಣು ತಡೆಯುವಲ್ಲಿ ಬಟ್ಟೆ ಹಾಗೂ ಸರ್ಜಿಕಲ್ ಮಾಸ್ಕ್ ವಿಫಲ
ದಿನದಿಂದ ದಿನಕ್ಕೆ ಕೊರೊನಾವೈರಸ್ ಎಂಬ ಮಹಾಮಾರಿ ತನ್ನ ಆರ್ಭಟ ಮುಮದುವರಿಸುತ್ತಲೇ ಸಾಗುತ್ತಿದೆ. ವಿಶ್ವದಲ್ಲಿ ಇದುವರೆಗೆ 2, 484, 301 ಜನರಿಗೆ ಸೋಂಕು ತಗುಲಿದ್ದು, 179, 501 ಜನರನ್ನು ಬಲಿ ತೆಗೆದುಕೊಂಡಿದೆ. ಭಾರತದಲ್ಲಿ ಕೋವಿಡ್ 19 ರೋಗಿಗಳ ಸಂಖ್ಯೆ 18 ಸಾವಿರ ಗಡಿ ದಾಟಿದರೆ ಕರ್ನಾಟಕದಲ್ಲಿ 418 ಕೇಸ್‌ಗಳು ಪತ್ತೆಯಾಗಿವೆ.

ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವುದು ವಿಶ್ವಕ್ಕೇ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇದನ್ನು ತಡೆಯಲು ನುರಿತ ವೈದ್ಯಕೀಯ ತಂಡಗಳು ಶತ ಪ್ರಯತ್ನ ಮಾಡುತ್ತಿವೆ. ಇದಕ್ಕಾಗಿ ಔಷಧ ಕಂಡು ಹಿಡಯುತ್ತಿದ್ದಾರೆ. ಸದ್ಯಕ್ಕೆ ರೋಗ ಬರಬಾರದೆಂದರೆ ಜನರಿಗೆ ಇರುವ ಆಯ್ಕೆ ಎಂದರೆ ಮನೆಯಲ್ಲಿಯೇ ಇರುವುದು. ಹೊರಗಡೆ ಹೋಗುವಾಗ ಮಾಸ್ಕ್ ಧರಿಸುವುದು.
ಕೆಲವರು ಸರ್ಜಿಕಲ್ ಮಾಸ್ಕ್ ಧರಿಸಿದರೆ, ಇನ್ನು ಕೆಲವರು ಬಟ್ಟೆಯ ಮಾಸ್ಕ್ ಧರಿಸುತ್ತಿದ್ದಾರೆ, ಮತ್ತೆ ಕೆಲವರು N95 ಮಾಸ್ಕ್ ಬಳಸುತ್ತಿದ್ದಾರೆ. ಮಾಸ್ಕ್ ಧರಿಸುವುದರಿಂದ ರೋಗಾಣುಗಳು ವ್ಯಕ್ತಿಯ ದೇಹವನ್ನು ಸೇರುವುದನ್ನು ತಡೆಗಟ್ಟಬಹುದು. ಇನ್ನು ಕಾಯಿಲೆ ಇರುವ ವ್ಯಕ್ತಿಯಿಂದ ಇತರ ವ್ಯಕ್ತಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು.
ರೋಗಾಣು ಹರಡುವುದನ್ನು ತಡೆಗಟ್ಟಲು ಜನರು ಮಾಸ್ಕ್ ಧರಿಸಿ ಓಡಾಡುವಂತೆ ವಿಶ್ವ ಆರೋಗ್ಯ ಸಂಸ್ಥ ಹಾಗೂ CDC ಸೂಚಿಸಿತ್ತು. ಮಾಸ್ಕ್ ಧರಿಸಿ ಸೋಂಕು ತಡೆಗಟ್ಟುವುದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬ ಬಗ್ಗೆ ಅನೇಕ ಅಧ್ಯಯನಗಳನ್ನು ನಡೆಸಿ ವರದಿಗಳನ್ನು ನೀಡಿವೆ, ಅದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ:

ಕೊರೊನಾವೈರಸ್: ಬಟ್ಟೆ ಹಾಗೂ ಸರ್ಜಿಕಲ್ ಮಾಸ್ಕ್ ಪರಿಣಾಮಕಾರಿಯೇ?
ಕೋವಿಡ್ 19 ಪಿಡುಗು ಪ್ರಾರಂಭವಾದಾಗಿನಿಂದ ಕೊರೊನಾವೈರಸ್ ತಡೆಗಟ್ಟುವುದರಲ್ಲಿ ಬಟ್ಟೆ ಹಾಗೂ ಸರ್ಜಿಕಲ್ ಮಾಸ್ಕ್ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುವುದರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. CDC ಕೊರೊನಾವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಜನರಿಗೆ ಬಟ್ಟೆಯಿಂದ ಮಾಡಿದ ಮಾಸ್ಕ್ ಧರಿಸುವಂತೆ ಸಲಹೆ ನೀಡಿತ್ತು.

ಮಾಸ್ಕ್ ಪರಿಣಾಮದ ಬಗ್ಗೆ ಅಧ್ಯಯನಗಳು ಏನು ಹೇಳುತ್ತವೆ?
ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೂ ಸರ್ಜಿಕಲ್ ಮಾಸ್ಕ್ ಕೆಮ್ಮು, ಸೀನು ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಂದ ರೋಗಾಣುಗಳು ಹರಡುವುದನ್ನು ತಡೆಗಟ್ಟುವುದರಲ್ಲಿ ಸರ್ಜಿಕಲ್ ಮಾಸ್ಕ್ ಸಾಧಾರಣದ ಮಟ್ಟಿಗೆಯಷ್ಟೇ ಪರಿಣಾಮಕಾರಿಯಾಗಿದೆ ಎಂದು ಹೇಳಿದೆ. ಆದರೆ ಕೊರೊನಾವೈರಸ್ ತಡೆಗಟ್ಟುವಲ್ಲಿ ಇದು ಪರಿಣಾಮಕಾರಿಯಾಗಿಲ್ಲ.

ಇತ್ತೀಚೆಗೆ ನಡೆಸಿದ ಅಧ್ಯಯನ ವರದಿ
ಯೂನಿವರ್ಸಿಟಿ ಆಫ್ ಉಲ್ಸಾನ್ ಕಾಲೇಜ್ ಆಫ್ ಮೆಡಿಸಿನ್, ಚುಂಗ್ ಆಂಗ್ ಯೂನಿವರ್ಸಿಟಿ ಹಾಸ್ಪಿಟಲ್, ದಕ್ಷಿಣ ಕೊರೊಯಾ ಸಿಜೋಂಗ್ ಯೂನಿವರ್ಸಿಟಿ ಸರ್ಜಿಕಲ್ ಮಾಸ್ಕ್ ಹಾಗೂ ಬಟ್ಟೆಯ ಮಾಸ್ಕ್ ಕೊರೊನಾವೈರಸ್ ಹರಡುವುದನ್ನು ತಡೆಯುವಲ್ಲಿ ಎಷ್ಟು ಪರಿಣಾಮಕಾರಿ ಎಂಬುವುದರ ಬಗ್ಗೆ ಅಧ್ಯಯನ ನಡೆಸಿತ್ತು.
ಈ ಅಧ್ಯಯನದಲ್ಲಿ ಕೋವಿಡ್ 19 ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಸರ್ಜಿಕಲ್ ಮಾಸ್ಕ್, ಬಟ್ಟೆಯ ಮಾಸ್ಕ್ ಹಾಗೂ N95 ಮಾಸ್ಕ್ ಬಳಸಲಾಗಿತ್ತು.
ಕೋವಿಡ್ 19 ರೋಗಿಗಳಿಗೆ ಆ ಮಾಸ್ಕ್‌ಗಳನ್ನು ಧರಿಸಿ ಪೆಟ್ರಿ ಡಿಷಷ್ ಮೇಲೆ ಊಫ್ ಅಂತ ಊದಲು ಹೇಳಿದರು. ಆಗ ಬಟ್ಟೆ ಹಾಗೂ ಸರ್ಜಿಕಲ್ ಮಾಸ್ಕ್ ಮುಖಾಂತರ ಸೂಕ್ಷ್ಮವಾದ ವೈರಾಣು ಹೊರಬಂದು ಪೆಟ್ರಿ ಡಿಷಷ್ ಮೇಲೆ ಕೂತಿತ್ತು. N95 ಮಾಸ್ಕ್ ಸುರಕ್ಷವೆಂದು ತಿಳಿಯಿತು.

ಫಲಿತಾಂಶ
ಇದರ ಮುಖಾಂತರ ಸ್ಪಷ್ಟವಾಗಿ ತಿಳಿಯುವುದೇನೆಂದರೆ ಕೋವಿಡ್ 19 ರೋಗಿಗಳು ಹಾಗೂ ಅವರನ್ನು ಆರೈಕೆ ಮಾಡುವವರು ಸರ್ಜಿಕಲ್ ಮಾಸ್ಕ್ ಹಾಗೂ ಬಟ್ಟೆಯ ಮಾಸ್ಕ್ ಧರಿಸಿದರೆ ರೋಗಾಣು ಹರಡುವುದನ್ನು ತಡೆಗಟ್ಟಲು ಸಾಧ್ಯವಿಲ್ಲ. ಬದಲಿಗೆ ರೋಗಿ ಹಾಗೂ ರೋಗಿಯನ್ನು ಆರೈಕೆ ಮಾಡುವವರು N95 ಮಾಸ್ಕ್ ಅಥವಾ ಇತರ ಪ್ರೊಟೆಕ್ಟಿವ್ ಮಾಸ್ಕ್ ಧರಿಸಬೇಕು.
ಸಲಹೆ: ನೀವು ಆರೋಗ್ಯವಂತರಾಗಿದ್ದರೆ, ಮನೆಯಲ್ಲಿ ಯಾರಿಗೂ ರೋಗದ ಲಕ್ಷಣಗಳು ಇಲ್ಲವೆಂದರೆ ಅಂಥವರು ಮನೆಯೊಳಗೆ ಮಾಸ್ಕ್ ಧರಿಸುವ ಅಗ್ಯತವಿಲ್ಲ. ಇನ್ನು ಹೊರಗಡೆ ಹೋಗುವಾಗ ಬಟ್ಟೆಯ ಅಥವಾ ಸರ್ಜಿಕಲ್ ಮಾಸ್ಕ್ ಧರಿಸಬೇಕು. ಅದೇ ರೋಗಿ ಹಾಗೂ ಅವರನ್ನು ಆರೈಕೆ ಮಾಡಿವವರು N95 ಹಾಗೂ ಇತರ ಪ್ರೊಟೆಕ್ಟಿವ್ ಮಾಸ್ಕ್ ಧರಿಸಿದರೆ ರೋಗಾಣು ಹರಡದಂತೆ ತಡೆಯಬಹುದು.



Click it and Unblock the Notifications