Latest Updates
-
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್!
ಇನ್ನು ಮುಂದೆ ಕೊರೊನಾ ಟೆಸ್ಟ್ ಮನೆಯಲ್ಲಿಯೇ ಮಾಡಬಹುದು
ಕೆಮ್ಮು, ಶೀತ, ಜ್ವರ ಮುಂತಾದ ಲಕ್ಷಣಗಳು ಕಂಡು ಬಂದಾಗ ಬಂದಿರುವುದು ಸಾಮಾನ್ಯ ಜ್ವರವೇ ಅಥವಾ ಕೋವಿಡ್ 19 ಇರಬಹುದೇ ಎಂಬ ಸಂಶಯ ಎಲ್ಲರಲ್ಲಿ ಇರುತ್ತದೆ, ಆದರೆ ಅದು ತಿಳಿಯಬೇಕಾದರೆ ಕೋವಿಡ್ ಟೆಸ್ಟ್ ಮಾಡಿದರೆ ಮಾತ್ರ ತಿಳಿಯುವುದು.

ಕೋವಿಡ್ ಟೆಸ್ಟ್ಗೆ ಹೋದರೆ ಇಷ್ಟು ಉದ್ದ ಕ್ಯೂ, ಇನ್ನು ಅದರ ಫಲಿತಾಂಶ ಬರಲು ಒಂದು ಅಥವಾ ಎರಡು ದಿನ ಕಾಯುವುದು ಇವೆಲ್ಲಾ ಕಿರಿಕಿರಿ ಮಾತ್ರವಲ್ಲ ಸೋಂಕು ಹೆಚ್ಚು ಹರಡುವುದಕ್ಕೂ, ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗ ಉಲ್ಭಣವಾಗುವುದಕ್ಕೂ ಒಂದು ಪ್ರಮುಖ ಕಾರಣ ಎಂಬುವುದನ್ನು ಅಲ್ಲಗಳೆಯುವಂತಿಲ್ಲ.
ಕೋವಿಡ್ ಪರೀಕ್ಷೆಗೆ ಒಳಪಟ್ಟವರು ಫಲಿತಾಂಶ ಬರಲು ತಡವಾದರೆ ನಮಗೆ ನೆಗೆಟಿವ್ ಬಂದಿರಬಹುದು ಅದಕ್ಕೆ ಫಲಿತಾಂಶ ಬಂದಿಲ್ಲ ಎಂದು ಹೊರಗಡೆ ಸುತ್ತಾಡಿ ಸೋಂಕು ಹರಡುತ್ತಾರೆ, ಇನ್ನು ಸೋಂಕಿತರಿಗೆ ಫಲಿತಾಂಶ ಬರುವವರಿಗೆ ಅದಕ್ಕೆ ಸಂಬಂಧಿಸಿದ ಚಿಕಿತ್ಸೆ ಸಿಗಲ್ಲ, ಈ ಕಾರಣ ರೋಗ ಲಕ್ಷಣಗಳು ಅಧಿಕವಾಗಬಹುದು.
ಈಗ ಅದಕ್ಕೆಲ್ಲಾ ಒಂದು ಪರ್ಯಾಯ ವ್ಯವಸ್ಥೆ ರೆಡಿಯಾಗಿದೆ. ಇನ್ನು ಕೋವಿಡ್ 19 ಪರೀಕ್ಷೆ ಮನೆಯಲ್ಲಿಯೇ ಮಾಡಿ ಕೋವಿಡ್ 19 ಸೋಂಕು ತಗುಲಿದೆಯೇ, ಇಲ್ಲವೇ ಎಂದು ತಿಳಿಯಬಹುದು. ಇದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್
ಭಾರತದಲ್ಲಿ ಮನೆಯಲ್ಲಿಯೇ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ಗೆ ಅನುಮತಿ ಸಿಕ್ಕಿದೆ. ಐಸಿಎಂಆರ್ (The Indian Council of Medical Research) ಇದನ್ನು ಯಾರು ಬಖಸಬಹುದು, ಹೇಗೆ ಬಳಸಬೇಕು ಎಂಬುವುದರ ಬಗ್ಗೆ ಮಾರ್ಗಸೂಚಿಯನ್ನೂ ಕೂಡ ನೀಡಿದೆ.

ಯಾರು ಬಳಸಬೇಕು?
ಕೋವಿಡ್ 19 ರೋಗ ಲಕ್ಷಣಗಳಿದ್ದರೆ ಅಥವಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇರುವವರು ಈ ಪರೀಕ್ಷೆ ಮಾಡಬಹುದು. ಇನ್ನು ಲ್ಯಾಬ್ನಲ್ಲಿ ಪರೀಕ್ಷೆ ಮಾಡಿ ಪಾಸಿಟಿವ್ ಬಂದವರು ಇದನ್ನು ಮತ್ತೆ ಮಾಡಬೇಕಾಗಿಲ್ಲ, ಒಂದು ವೇಳೆ RTPCRನಲ್ಲಿ ನೆಗೆಟಿವ್ ವರದಿ ಬಂದು ರೋಗ ಲಕ್ಷಣ ಇರುವವರು ಇದನ್ನು ಬಳಸಿ ಸೋಂಕು ಇದೆಯೇ, ಇಲ್ಲವೇ ಎಂದು ತಿಳಿಯಬಹುದು.

ಪರೀಕ್ಷೆ ಮಾಡುವುದು ಹೇಗೆ?
ನಾಸಲ್ ಸ್ವ್ಯಾಬ್ ಬಳಸಿ ಸ್ವ್ಯಾಬ್ ತೆಗೆಯಬೇಕು. 18 ವರ್ಷ ಮೇಲ್ಪಟ್ಟವರು ಸ್ವತಃ ಸ್ವ್ಯಾಬ್ ತೆಗೆದು ಪರೀಕ್ಷೆ ಮಾಡಬಹುದು. 2 ವರ್ಷ ಮೇಲ್ಪಟ್ಟ ಮಕ್ಕಳ ಹಾಗೂ ವಯಸ್ಸಾದವರ ಸ್ವ್ಯಾಬ್ ಅನ್ನು ಬೇರೆಯವರು ತೆಗೆದು ಪರೀಕ್ಷಿಸಬೇಕು.

ತಿಳಿಯುವುದು ಹೇಗೆ?
ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕಿಟ್ನಲ್ಲಿ ನಾಸಲ್ ಸ್ವ್ಯಾಬ್ ಮತ್ತು ಮೊದಲೇ ತುಂಬಿರುವ ಎಕ್ಸಟ್ರಾಕ್ಸನ್ ಟ್ಯೂಬ್ ಮತ್ತು ಒಂದು ಟೆಸ್ಟ್ ಕಾರ್ಡ್ ಇರುತ್ತದೆ.
ಇದನ್ನು ಪರೀಕ್ಷೆ ಮಾಡುವವರು ಮೊಬೈಲ್ನಲ್ಲಿ, ಮೈಲ್ಯಾಬ್ ಆ್ಯಪ್ ಡೌನ್ಲೋಡ್ ಮಾಡಬೇಕು, ಅಲ್ಲಿ ಅಗ್ಯತ ಮಾಹಿತಿಗಳನ್ನು ತುಂಬ ಬೇಕು.
ನಾಸಲ್ ಸ್ವ್ಯಾಬ್ನ ತುದಿ ಮುಟ್ಟದೆ ಅದನ್ನು ಮೂಗಿನ ಒಳಗಡೆ ಹಾಕಿ 5 ಬಾರಿ ಮೆಲ್ಲನೆ ತಿರುಗಿಸಿ. ಮೂಗಿನ ಎರಡೂ ಬದಿಯಲ್ಲಿ ಹೀಗೆ ಮಾಡಿ. ನಂತರ ಆ ಸ್ವ್ಯಾಬ್ ಅನ್ನು ಮೆಲ್ಲನೆ ತೆಗೆದು ಟ್ಯೂಬ್ನಲ್ಲಿ ಮುಳುಗಿಸಿ.
ಟ್ಯೂಬ್ನ ಒಳಗಡೆ ನಾಸಲ್ ಟ್ಯೂಬ್ ಮುಳುಗಿದೆಯೇ ಎಂಬುವುದನ್ನು ಖಚಿತ ಒಡಿಸಿ.
ಬ್ರೇಕ್ ಪಾಯಿಂಟ್ ನೋಡಿ ಸ್ವ್ಯಾಬ್ ಮುರಿಯಬೇಕು. ಟ್ಯೂಬ್ ಮುಚ್ಚಿ ಎರಡು ಹನಿ ಟೆಸ್ಟ್ ಕಿಟ್ಗೆ ಹಾಕಿ.
ನಂತರ 15 ನಿಮಿಷ ಕಾಯಬೇಕು. ಯಾವುದೇ ಫಲಿತಾಂಶ 20 ನಿಮಿಷದ ನಂತರ ಬಂದರೆ ಅದು ಪರಿಗಣಿಸಲು ಸಾಧ್ಯವಾಗುವುದಿಲ್ಲ.
15 ನಿಮಿಷ ಆಗುತ್ತಿದ್ದಂತೆ ಆ್ಯಪ್ನಲ್ಲಿ ರಿಂಗ್ ಕೇಳಿಸುವುದು, ಅದರಲ್ಲಿ ಫಲಿತಾಂಶ ಸಿಗುವುದು.



Click it and Unblock the Notifications
