Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಎಚ್ಚರ: ಕೊರೊನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಗಳಿವು
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಿಸುತ್ತಿದೆ. ಇದರ ನಡುವೆ ಮತ್ತೊಂದು ಆಘಾತಕಾರಿ ವಿಷಯ ಎಂದರೆ ಈ ಬಗ್ಗೆ ಸಾಕಷ್ಟು ತಪ್ಪು ಸಂದೇಶಗಳು ಸಹ ರವಾನೆಯಾಗುತ್ತಿದೆ.

ಕೊರೊನಾ ನಿಯಂತ್ರಣ ಹಾಗೂ ಚಿಕಿತ್ಸೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಜ್ಞವೈದ್ಯರು ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದರೆ, ಮತ್ತೊಂದೆಡೆ ಕೆಲವರು ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ಕೊರೊನಾ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ.
ಸಾಮಾನ್ಯ ಜನರು ಇದರ ಅರಿವಿಲ್ಲದೆ ಎಲ್ಲವನ್ನು ಪ್ರಯೋಗಿಸುತ್ತಿರುವುದು ಆಘಾತಕಾರಿ. ಈ ಹಿನ್ನೆಲೆ ನಾವಿಂದು ಈ ಲೇಖನದಲ್ಲಿ ಕೊರೊನಾ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ:

1. ಆಲ್ಕೋಹಾಲ್ ಮತ್ತು ಕ್ಲೋರಿನ್ ಸೇವನೆಯಿಂದ ದೇಹದಲ್ಲಿ ಕೊರೊನಾ ಸಾಯುತ್ತದೆ
ಆಲ್ಕೋಹಾಲ್ ಮತ್ತು ಕ್ಲೋರಿನ್ ಬಳಸುವುದು ಚರ್ಮಕ್ಕೆ ಹಾನಿಕರ, ಅಲ್ಲದೆ ಇದು ಕಣ್ಣು ಹಾಗೂ ಬಾಯಿಯ ಮೂಲಕ ದೇಹ ಪ್ರವೇಶಿಸಿದರೆ ಅಪಾಯ ಸಾಧ್ಯತೆ ಹೆಚ್ಚಿದೆ. ಇದು ವಸ್ತುಗಳನ್ನು ಸ್ವಚ್ಛಗೊಳಿಸಲು, ನೆಲ ಒರೆಸಲು ಮಾತ್ರ ಬಳಸುತ್ತಾರೆ. ಯಾವುದೇ ಕಾರಣಕ್ಕೂ ಇದು ದೇಹದಲ್ಲಿರುವ ವೈರಸ್ ಅನ್ನು ಕೊಲ್ಲುವುದಿಲ್ಲ ನೆನಪಿಡಿ.

2. ಕೋವಿಡ್ 19 ಸಾಮಾನ್ಯ ಜ್ವರ
ಸಾರ್ಸ್-ಕೋವಿಡ್-2 ಎಂಬ ವೈರಸ್ ಸೋಂಕು ಕೋವಿಡ್-19 ಗೆ ಕಾರಣ. ಇದು ಸಾಮಾನ್ಯ ಜ್ವರ ಬಂದಾಗ ಇರುವಂಥ ರೋಗಲಕ್ಷಣಗಳನ್ನೇ ಹೊಂದಿದೆ. ಮೈ-ಕೈ ನೋವು, ಜ್ವರ, ಶೀತ ಮತ್ತು ಕೆಮ್ಮು ಇದರ ಪ್ರಮುಖ ಲಕ್ಷಣಗಳಾಗಿದ್ದು, ಇದನ್ನು ಜನರು ಸಾಮಾನ್ಯ ಜ್ವರ ಎಂಬ ತಪ್ಪು ಕಲ್ಪನೆಯಿಂದ ಮನೆಯಲ್ಲೇ ಔಷಧಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆರಂಭಿಕ ಹಂತದಲ್ಲಿ ಈ ಕಾಯಿಲೆ ಮಾರಕವಲ್ಲದಿದ್ದರೂ, ತಡವಾಗಿ ವೈದ್ಯರ ಬಳಿಹೋದರೆ ಖಂಡಿತ ಪ್ರಾಣಕ್ಕೆ ಕಂಟಕ. ಆದ್ದರಿಂದ ಆರಂಭಿಕ ಹಂತದಲ್ಲೇ ವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ತಡವಾದರೆ ಇದು ನ್ಯುಮೋನಿಯಾಕ್ಕೂ ಕಾರಣವಾಗಬಹುದು.

3. COVID-19 ಬರುವ ಎಲ್ಲರೂ ಸಾಯುತ್ತಾರೆ
ಇದು ಖಡಾ ಖಂಡಿತವಾಗಿಯೂ ಸುಳ್ಳು. ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಕೋವಿಡ್ ಕೊಂಚ ಮಟ್ಟಿಗೆ ಮಾರಕವೇ ಹೊರತು, ಆರೋಗ್ಯವಂತರಿಗೆ ಖಂಡಿತ ಇದು ಮಾರಕವಲ್ಲ.
ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೋವಿಡ್‌ಗೆ ತುತ್ತಾದ ಶೇಕಡಾ 80% ರಷ್ಟು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯವಿಲ್ಲ. ಕಾರಣ ಇವರಿಗೆ ಸೌಮ್ಯ ಲಕ್ಷಣಗಳಾದ ಜ್ವರ, ಕೆಮ್ಮು, ಗಂಟಲು ನೋವು, ಸುಸ್ತು ಇರಬಹುದು. ಇನ್ನು ಕೆಲವರಿಗೆ ಸೋಂಕಿನ ಯಾವುದೇ ರೋಗಲಕ್ಷಣಗಳು ಕಾಣಿಸುವುದೇ ಇಲ್ಲ.

4. ಮಾಸ್ಕ್‌ಗಳು ಕೊರೊನಾವೈರಸ್‌ನಿಂದ ರಕ್ಷಿಸುತ್ತವೆ
ಮಾಸ್ಕ್‌ಗಳನ್ನು ಬಳಸುವ ಮೂಲಕ ತಮ್ಮನ್ನು ಸೋಂಕುಗಳಿಂದ ರಕ್ಷಿಸಿಕೊಳ್ಳಬಹುದು ನಿಜ. ಆದರೆ ಸರಿಯಾಗಿ ತ್ಯಾಜ್ಯಾ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿ ಬಿಸಾಡುವ ಮಾಸ್ಕ್‌ಗಳಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ.
ಅಲ್ಲದೆ ಒಂದೇ ಬಾರಿ ಬಳಸಿ ಬಿಸಾಡಬಹುದಾದ ಮಾಸ್ಕ್‌ಗಳು ಮತ್ತು ಬಟ್ಟೆಯ ಮಾಸ್ಕ್‌ಗಳು ನೇರವಾಗಿ ವೈರಸ್ ಹರಡುವಿಕೆಯನ್ನು ತಡೆಯುತ್ತದೆ ನಿಜ, ಆದರೆ ಗಾಳಿಯಲ್ಲಿರುವ ಡ್ರಾಪ್‌ಲೆಟ್ಸ್ ಕಣಗಳಿಂದ ಇದು ರಕ್ಷಿಸಲು ಸಾಧ್ಯವಿಲ್ಲ.
ಸಿಡಿಸಿ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ 6 ಅಡಿ ಅಂತರವನ್ನು ಕಾಪಾಡಲು ಸಾಧ್ಯವಿಲ್ಲ ಆದ್ದರಿಂದ ಬಟ್ಟೆಯ ಮಾಸ್ಕ್, ಶಸ್ತ್ರಚಿಕಿತ್ಸಕ ಮಾಸ್ಕ್ ಮತ್ತು ಎನ್ 95 ಹೆಚ್ಚಿನ ರಕ್ಷಣೆ ನೀಡುತ್ತವೆ, ವೈರಸ್ ಹರಡುವುದನ್ನು ನಿಧಾನಗೊಳಿಸುತ್ತದೆ. ಇದೆಲ್ಲದರ ನಡುವೆ ಮಾಸ್ಕ್ ಧರಿಸಿದ್ದರೂ, ನೀವು ಹೊರಗೆ ಹೋದಾಗ ಕೈಗಳಿಂದ ಮುಖ, ಬಾಯಿ, ಕಣ್ಣು, ಮೂಗನ್ನು ಮುಟ್ಟುವುದು ಅಸುರಕ್ಷಿತ.

5. ಹ್ಯಾಂಡ್‌ಡ್ರೈಯರ್‌ಗಳು ಕೊರೊನವೈರಸ್ ಅನ್ನು ಕೊಲ್ಲುತ್ತವೆ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹ್ಯಾಂಡ್ ಡ್ರೈಯರ್‌ಗಳು ಕೊರೋನ ವೈರಸ್ ಅನ್ನು ಕೊಲ್ಲುವುದಿಲ್ಲ. ವೈರಸ್‌ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ಕನಿಷ್ಠ 20 ಸೆಕೆಂಡುಗಳ ಕಾಲ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು. ಇದು ಸಾಧ್ಯವಾಗದಿದ್ದಾಗ, ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್ ಬಳಸುವುದು ಸೂಕ್ತ.

6. ಬ್ಲೀಚ್‌ನಿಂದ ಗಾರ್ಗಲಿಂಗ್ ಮಾಡಿದರೆ ವೈರಸ್ ಸಾಯುತ್ತದೆ
ಬ್ಲೀಚ್ ಮನುಷ್ಯನ ಆರೋಗ್ಯಕ್ಕೆ ಅಪಾಯವನ್ನು ತಂದೊಡ್ಡುತ್ತದೆ. ವೈರಸ್‌ನಿಂದ ತಪ್ಪಿಸಿಕೊಳ್ಳಲು ಮತ್ತೊಂದು ಅನಾರೋಗ್ಯಕ್ಕೆ ತುತ್ತಾಗಬೇಡಿ.
ಇನ್ನೂ ಮುಖ್ಯವಾಗಿ ಬ್ಲೀಚಿಂಗ್ ನಿಂದ ಗಾರ್ಗಲಿಂಗ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ, ಇದು ವೈರಸ್ ಅನ್ನು ಸಹ ಕೊಲ್ಲುವುದಿಲ್ಲ.

7. ಬೆಳ್ಳುಳ್ಳಿ ಸೇವನೆ ವೈರಸ್ ಅನ್ನು ನಾಶಮಾಡುತ್ತದೆ
ರಾಷ್ಟ್ರೀಯ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಬೆಳ್ಳುಳ್ಳಿ ಸೇವನೆಯಿಂದ ಬ್ಯಾಕ್ಟೀರಿಯಾ ಬೆಳವಣಿಗೆ ನಿಧಾನವಾಗುತ್ತದೆ. ಆದರೆ ನೆನಪಿರಲಿ ಬೆಳ್ಳುಳ್ಳಿ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆಯೇ ಹೊರತು ವೈರಸ್ ಸಂತತಿಯನ್ನಲ್ಲ. ಕೊರೋನಾ ವೈರಸ್ ಬ್ಯಾಕ್ಟಿರಿಯಾ ಅಲ್ಲ. ಆದ್ದರಿಂದ ಬೆಳ್ಳುಳ್ಳಿ ಕೊರೋನಾ ಕೊಲ್ಲುತ್ತದೆ ಎಂಬ ಯಾವುದೇ ಆಧಾರ ಇಲ್ಲ.

8. ಥರ್ಮಲ್ ಸ್ಕ್ಯಾನರ್ ವೈರಸ್ ದೇಹದಲ್ಲಿ ಇರುವುದನ್ನು ಖಚಿತಪಡಿಸುತ್ತದೆ
ಸುಳ್ಳು. ಥರ್ಮಲ್ ಸ್ಕ್ಯಾನರ್ ನಮ್ಮ ದೇಹದ ಉಷ್ಣಾಂಶ ನಿಗದಿಗಿಂತ ಹೆಚ್ಚಿದ್ದರೆ ಮಾತ್ರ ಸೂಚಿತ್ತದೆಯೇ ಹೊರತು, ಇದು ವೈರಸ್ ಇರುವ ಬಗ್ಗೆ ಯಾವುದೇ ಧೃಢೀಕರಣ ನೀಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

9. ಸೊಳ್ಳೆಗಳಿಂದ ಕೊರೊನಾ ವೈರಸ್ ಹರಡುತ್ತದೆ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸೊಳ್ಳೆಗಳಿಂದ ವೈರಸ್ ಹರಡುವುದಿಲ್ಲ, ಈ ಬಗ್ಗೆ ಇದುವರೆಗೂ ಎಲ್ಲಿಯೂ ಇದಕ್ಕೆ ಉದಾಹರಣೆಗಳಿಲ್ಲ. ಕೊರೊನಾ ವೈರಸ್ ಇರುವ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಅವರ ಡ್ರಾಪ್‌ಲೆಟ್ಸ್‌ಗಳು ಯಾವುದೇ ಮೂಲದಿಂದ ನಮ್ಮ ದೇಹಕ್ಕೆ ಪ್ರವೇಶಿದಾಗ ಮಾತ್ರ ವೈರಸ್ ಹರಡುತ್ತದೆ.

10. ನ್ಯುಮೋನಿಯಾ ಲಸಿಕೆ ಕೊರೊನಾವೈರಸ್‌ನ್ನು ತಡೆಯುತ್ತದೆ
ಇಲ್ಲ, ನ್ಯುಮೋನಿಯಾಕ್ಕೆ ಬಳಸುವ ಲಸಿಕೆ ಕೊರೊನಾ ವೈರಸ್ ಸೋಂಕಿನ ವಿರುದ್ಧ ಯಾವುದೇ ರಕ್ಷಣೆ ನೀಡುವುದಿಲ್ಲ. ಕೋವಿಡ್-19 ಹೊಸ ವೈರಸ್ ಮತ್ತು ಸಂಶೋಧಕರು ಇದಕ್ಕೆ ಪ್ರತ್ಯೇಕ ವ್ಯಾಕ್ಸಿನೇಷನ್ ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಕೊಳ್ಳಬಹುದೇ ಹೊರತು ವೈರಸ್ ನಮಗೆ ಬರದಂತೆ ತಡೆಯಲು ಸಾಧ್ಯವಿಲ್ಲ. ಈ ವ್ಯಾಕ್ಸಿನ್ ವೈರಸ್ ನಮ್ಮ ದೇಹ ಪ್ರವೇಶಿಸಿದರೆ ಹೆಚ್ಚು ಹರಡದಂತೆ ತಡೆಯುತ್ತದೆ ಅಷ್ಟೇ.

11. ಹಸುವಿನ ಸಗಣಿ ಅಥವಾ ಮೂತ್ರ ಕೊರೊನಾ ತಡೆಯುತ್ತದೆ
ಹಸುವಿನ ಸಗಣಿಯನ್ನು ದೇಹಕ್ಕೆ ಹಚ್ಚುವುದರಿಂದ ಅಥವಾ ಹಸುವಿನ ಮೂತ್ರವನ್ನು ಸೇವಿಸುವುದರಿಂದ ಕೊರೊನಾವೈರಸ್‌ನಿಂದ ದೂರ ಇರಬಹುದು ಅಥವಾ ಸೋಂಕನ್ನು ಗುಣಪಡಿಸಬಹುದು ಎಂಬುದು ಶುದ್ಧ ಸುಳ್ಳು. ಹಸುವಿನ ಸಗಣಿ ಅಥವಾ ಮೂತ್ರವು ಕೋವಿಡ್ ಅನ್ನು ಗುಣಪಡಿಸುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

12. 5 ಜಿ ಮೊಬೈಲ್ ನೆಟ್‌ವರ್ಕ್‌ಗಳು ಕೋವಿಡ್ ಅನ್ನು ಹರಡುವುದಿಲ್ಲ ಕೊರೊನಾ
ರೇಡಿಯೋ ತರಂಗಗಳು/ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ವೈರಸ್‌ಗಳು ಸಂಚರಿಸಲು ಸಾಧ್ಯವಿಲ್ಲ. 5 ಜಿ ಮೊಬೈಲ್ ನೆಟ್‌ವರ್ಕ್‌ಗಳನ್ನು ಹೊಂದಿರದ ಅನೇಕ ದೇಶಗಳಲ್ಲಿ ಸಹ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನುವಾಗ ಅಥವಾ ಮಾತನಾಡುವಾಗ ಅವರ ಉಸಿರಾಟದ ಹನಿಗಳ ಮೂಲಕ ಕೋವಿಡ್ ಹರಡುತ್ತದೆ.



Click it and Unblock the Notifications