Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸಹಿಸಲು ಅಸಾಧ್ಯವಾದ ಮುಟ್ಟಿನ ನೋವು ಥಟ್ಟನೆ ನಿಲ್ಲಿಸುವ ಮನೆಮದ್ದು
ಮುಟ್ಟು ಎಂಬುವುದು ಹದಿ ಹರೆಯದ ಪ್ರಾಯದಿಂದ ಮೆನೋಪಾಸ್‌ವರೆಗೆ ಪ್ರತೀ ತಿಂಗಳು ನೈಸರ್ಗಿಕ ಪ್ರಕ್ರಿಯೆ. ಈ ಸಮಯದಲ್ಲಿ ಕೆಲವರಿಗೆ ಕಿರಿಕಿರಿ ಅನಿಸಿದರೆ ಇನ್ನು ಕೆಲವರಿಗೆ ತುಂಬಾ ಹೊಟ್ಟೆ ನೋವು ಉಂಟಾಗುವುದು. ಈ ನೋವು ಶಮನವಾಗಲು ಮಾತ್ರೆ ತೆಗೆದುಕೊಳ್ಳುತ್ತಾರೆ, ಆದರೆ ಮಾತ್ರೆ ತೆಗೆದುಕೊಳ್ಳುವುದು ಆರೊಗ್ಯಕರವಲ್ಲ, ಅದರ ಬದಲಿಗೆ ನೈಸರ್ಗಿಕ ಮನೆಮದ್ದುಗಳನ್ನು ಮಾಡಬೇಕು.
ಮುಟಟಿನ ಹೊಟ್ಟೆನೋವು ಕಡಿಮೆ ಮಾಡಲು ಅನೇಕ ಮನೆಮದ್ದುಗಳಿವೆ, ಇಲ್ಲಿ ನಾವು ಅಂಥದ್ದೇ ಮನೆಮದ್ದು ಹೇಳಿದ್ದೇವೆ. ಈ ಮನೆಮದ್ದು ಕುಡಿದರೆ ನಿಮ್ಮ ಮುಟ್ಟಿನ ನೋವು ಕೆಲವೇ ಹೊತ್ತಿನಲ್ಲಿ ಮಾಯವಾಗುವುದು. ಆ ಮನೆಮದ್ದು ಯಾವುದು, ಅದನ್ನು ತಯಾರಿಸುವುದು ಹೇಗೆ ಎಂದು ನೋಡೋಣ:
ಮುಟ್ಟಿನ ನೋವು ಕಡಿಮೆ ಮಾಡುವಲ್ಲಿ ಅಜ್ವೈನ್ ತುಂಬಾ ಪರಿಣಾಮಕಾರಿ. ಅಜ್ವೈನ್ ಟೀ ಮಾಡಿ ಕುಡಿಯಬೇಕು, ಅದನ್ನು ತಯಾರಿಸುವುದು ಹೇಗೆ? ಈ ಅಜ್ವೈನ್ ಟೀ ಕುಡಿಯುವುದರಿಂದ ದೊರೆಯುವ ಪ್ರಯೋಜನಗಳೇನು? ಎಂದು ನೋಡೋಣ ಬನ್ನಿ:

ಅಜ್ವೈನ್ ಟೀಗೆ ಬೇಕಾಗುವ ಸಾಮಗ್ರಿ ಹಾಗೂ ಅದರ ಗುಣಗಳು
1.ಅಜ್ವೈನ್
2.ಟೀ ಎಲೆ
3. ಬೆಲ್ಲ
4. ತುಪ್ಪ

ಅಜ್ವೈನ್:
ಅಜ್ವೈನ್‌ನಲ್ಲಿ ನಾರಿನಂಶ ಅಧಿಕವಿದ್ದು, ವಿಟಮಿನ್ಸ್, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್‌ಗಳು ಇದ್ದು ಇದು ನೋವನ್ನು ಕಡಿಮೆ ಮಾಡುವುದು.

ಟೀ ಎಲೆ:
ಪಾಲಿಫೀನೋಲ್ಸ್ , ಟೀ ಎಲೆಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳಾದ ಕ್ಯಾಟೆಚಿನ್‌ಗಳು, ಪಾಲಿಫೀನೋಲ್ಸ್ ಇದ್ದು ಇದು ಚಯಪಚಯ ಕ್ರಿಯೆಗೆ ಸಹಕಾರಿ, ಇದರಿಂದ ಮುಟ್ಟಿನ ಸಮಯದಲ್ಲಿ ಕಾಡುವ ಮುಟ್ಟು ಕಡಿಮೆಯಾಗುವುದು.

ಬೆಲ್ಲ:
ಬೆಲ್ಲ ತಿನ್ನುವುದರಿಂದ ಹೀಮೋಗ್ಲೋಬಿನ್ ಹೆಚ್ಚುವುದು, ರಕ್ತ ಹೀನತೆ, ಸ್ನಾಯು ಸೆಳೆತ, ತಲೆಸುತ್ತು, ಅನಿಯಮಿತ ಮುಟ್ಟು ಇವುಗಳನ್ನು ತಡೆಗಟ್ಟುವಲ್ಲಿ ಬೆಲ್ಲ ಪ್ರಯೋಜನಕಾರಿ.

ತುಪ್ಪ:
ತುಪ್ಪದಲ್ಲಿ ವಿಟಮಿನ್ ಎ, ಇ, ಡಿ ಇದ್ದು ಇದು ದೇಹವು ಖನಿಜಾಂಶಗಳು, ಕೊಬ್ಬಿನ ಆಮ್ಲಗಳು ಇವುಗಳನ್ನು ಹೀರಿಕೊಳ್ಳುವಂತೆ ಮಾಡುತ್ತದೆ ಹಾಗೂ ಮುಟ್ಟಿನ ಸಮಯದಲ್ಲಿ ಕಾಡುವ ಸ್ನಾಯು ಸೆಳೆತ ಕಡಿಮೆ ಮಾಡುವುದು.

ಅಜ್ವೈನ್ ಟೀ ಮಾಡುವುದು ಹೇಗೆ?
* ಒಂದು ಕಪ್ ನೀರಿಗೆ ಬೆಲ್ಲ ಹಾಕಿ ಕುದಿಸಿ
* ಅದಕ್ಕೆ 1/2 ಚಮಚ ಅಜ್ವೈನ್ ಹಾಕಿ ಕುದಿಸಿ
* ನಂತರ ಸ್ವಲ್ಪ ಟೀ ಎಲೆ ಹಾಕಿ ಕುದಿಸಿ.
* ನಂತರ ಟೀಯನ್ನು ಸೋಸಿ ಅದಕ್ಕೆ ಅರ್ಧ ಚಮಚ ತುಪ್ಪ ಹಾಕಿ ಕುಡಿಯಿರಿ.
ಈ ಟೀ ಕುಡಿದ ಅರ್ಧ ಗಂಟೆಗೆಲ್ಲಾ ನಿಮ್ಮ ಹೊಟ್ಟೆ ನೋವು, ಸ್ನಾಯು ಸೆಳೆತ, ಸುಸ್ತು ದೂರ ಓಡಿರುತ್ತದೆ.



Click it and Unblock the Notifications
