Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದೇ? ಪ್ರತಿಯೊಬ್ಬ ಮಹಿಳೆಯೂ ತಿಳಿದಿರಲೇಬೇಕಾದ ಮಾಹಿತಿಯಿದು
ಡಾ. ಸಮೀನಾ, ಕನ್ಸಲ್ಟೆಂಟ್ ಪ್ರಸೂತಿ ಶಾಸ್ತ್ರ ಮತ್ತು ಸ್ತ್ರೀರೋಗ ತಜ್ಞರು, ಕೆಎಂಸಿ ಆಸ್ಪತ್ರೆ, ಡಾ. ಬಿ ಆರ್ ಅಂಬೇಡ್ಕರ್ ವೃತ್ತ, ಮಂಗಳೂರು
ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ, ಈ ಗರ್ಭಕಂಠದ ಕ್ಯಾನ್ಸರ್ ಕುರಿತು ಜನರಿಗೆ ಮಾಹಿತಿ ಕೊರತೆ ಇರುವುದರಿಂದ ಈ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ. ಆದರೆ ಇದರ ಬಗ್ಗೆ ಜಾಗೃತಿ ಮೂಡಿಸುವುದರಿಂದ ಈ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ.

ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣಗಳು
ರಕ್ತಸ್ರಾವ
ಋತುಚಕ್ರದ ನಡುವೆ ರಕ್ತಸ್ರಾವ, ಮೆನೋಪಾಸ್ ನಂತರ ಕಂಡು ಬರುವ ರಕ್ತಸ್ರಾವ, ಈ ರಕ್ತಸ್ರಾವ ತುಂಬಾನೇ ಇರಬಹುದು ಅಥವಾ ಕಡಿಮೆ ರಕ್ತಸ್ರಾವವಿರಬಹುದು, ಆದರೆ ಈ ರೀತಿ ಅನಿಯಮಿತ ರಕ್ತಸ್ರಾವ ಕಂಡು ಬಂದರೆ ವೈದ್ಯರನ್ನು ಕಂಡು ಪರಿಶೀಲಿಸಿ
ಬಿಳುಪು ಹೋಗುವುದು
ಮಹಿಳೆಯರಿಗೆ ಬಿಳುಪು ಹೋಗುವುಉದ ಸಹಜ, ಆದರೆ ದುರ್ವಾಸನೆಯಿಂದ ಕೂಡಿದ ಬಿಳುಪು ಹೋಗುತ್ತಿದ್ದರೆ ಜಾಗ್ರತೆವಹಿಸಿ
ನೋವು
ಪೆಲ್ವಿಕ್ ಭಾಗದಲ್ಲಿ ನೋವು, ಸೊಂಟ ನೋವು, ಕಾಲುಗಳಲ್ಲಿ ನೋವು, ಲೈಂಗಿಕ ಕ್ರಿಯೆ ವೇಳೆ ವಿಪರೀತ ನೋವು ಕಂಡು ಬರುವುದು.
ಇತರ ಲಕ್ಷಣಗಳು
ತೂಕ ಇಳಿಕೆ, ಸುಸ್ತು, ಮೂಡ್‌ಸ್ವಿಂಗ್ ಈ ಬಗೆಯ ಲಕ್ಷಣಗಳು ಕಂಡು ಬರುವುದು.
ಈ ಬಗೆಯ ಲಕ್ಷಣಗಳು ಕಂಡು ಬಂದಾಗ ನಿರ್ಲಕ್ಷ್ಯ ಮಾಡಬೇಡಿ, ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಸೂಚನೆ ಪಡೆಯಿರಿ.
ಯಾರಲ್ಲಿ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚು?
ಬಹು ಲೈಂಗಿಕ ಪಾಲುದಾರರು
ಅಸುರಕ್ಷಿತ ಲೈಂಗಿಕ ಸಂಭೋಗ
ತುಂಬಾ ಮಕ್ಕಳ ಜನನ
ಲೈಂಗಿಕ ಸೋಂಕುಗಳು
ಗರ್ಭ ನಿರೋಧಕ ಮಾತ್ರೆಗಳನ್ನು ತುಂಬಾ ಸಮಯದಿಂದ ತೆಗೆದುಕೊಳ್ಳುತ್ತಿದ್ದರೆ
ಧೂಮಪಾನ
ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು
ಗರ್ಭಕಂಠದ ಕ್ಯಾನ್ಸರ್‌ನ ಇತಿಹಾಸ ಕುಟುಂಬದಲ್ಲಿದ್ದರೆ
ಇವರುಗಳಿಗೆ ಗರ್ಭಕಂಠದ ಕ್ಯಾನ್ಸರ್ ಬರದಂತೆ ತುಂಬಾನೇ ಜಾಗ್ರತೆವಹಿಸಬೇಕು. ಜಾಗ್ರತೆ ಮಾಡಿದರೆ ಈ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ.
ಈ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವುದು ಹೇಗೆ
ಸುರಕ್ಷಿತ ಲೈಂಗಿಕಕ್ರಿಯೆ
ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಡಿ, ಕಾಂಡೋಮ್ ಬಳಸುವುದರಿಂದ ಹೆಚ್‌ಪಿವಿ ಅಪಾಯ ಹಾಗೂ ಸೋಂಕು ಹರಡುವುದನ್ನು ತಡೆಗಟ್ಟಬಹುದು.
ಧೂಮಪಾನ ಮಾಡುವುದರಿಂದ ಕ್ಯಾನ್ಸರ್ ಕಣಗಳ ಉತ್ಪತ್ತಿ ಹೆಚ್ಚಿಸುತ್ತಿದೆ, ಕ್ಯಾನ್ಸರ್ ಬೇಗನೆ ಹರಡಲು ಧೂಮಪಾನ ಕಾರಣವಾಗಿದೆ.
ಅತಿಯಾದ ಮೈ ತೂಕ: ಅತಿಯಾದ ಮೈ ತೂಕ ಹೊಂದಿದ್ದರೆ ಗರ್ಭಕೋಶದ ಕ್ಯಾನ್ಸರ್ ಅಪಾಯವಿದೆ. ಹಾಗಾಗಿ ಸಮತೂಕ ಪಡೆಯಲು ಪ್ರಯತ್ನಿಸಿ, ವ್ಯಾಯಾಮ, ಆರೋಗ್ಯಕರ ಆಹಾರಕ್ರಮ ಇವೆಲ್ಲಾ ಮೈ ತೂಕ ನಿಯಂತ್ರಿಸಲು ಸಹಕಾರಿ. ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ.
ಮಾನಸಿಕ ಒತ್ತಡ ಕಡಿಮೆ ಮಾಡುವತ್ತ ಗಮನಹರಿಸಿ: ದಿನಾ ಯೋಗಾಭ್ಯಾಸ, ಧ್ಯಾನ, ವಿಶ್ರಾಂತಿ ಕಡೆ ಕಡಿಮೆ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.
30 ವರ್ಷ ಕಳೆದಿದ್ದರೆ ನೀವು ಗರ್ಭಕೋಶದ ಆರೋಗ್ಯದ ಬಗ್ಗೆ ಪ್ರತೀವರ್ಷ ಪರೀಕ್ಷೆ ಮಾಡಿಸಿ
ಹೆಚ್‌ಪಿವಿ ಹಾಗೂ ಪ್ಯಾಪ್ ಪರೀಕ್ಷೆ ಮಾಡುವುದರಿಂದ ಈ ಬಗೆಯ ಕ್ಯಾನ್ಸರ್ ಅಪಾಯ ತಡೆಗಟ್ಟಬಹುದು. ಒಬ್ಬರಿಗಿಂತ ಹೆಚ್ಚು ಜನರ ಜೊತೆ ಲೈಂಗಿಕ ಸಂಪರ್ಕದಲ್ಲಿದ್ದರೆ ಸುರಕ್ಷತೆಯ ಲೈಂಗಿಕ ಕ್ರಿಯೆಯ ಕಡೆಗೆ ತುಂಬಾನೇ ಗಮನಹರಿಸಬೇಕು.
11-15 ವರ್ಷದ ಹೆಣ್ಮಕ್ಕಳಿಗೆ ಹೆಚ್‌ಪಿವಿ ಲಸಿಕೆ ಪಡೆಯಬೇಕು
ಮನೆಯಲ್ಲಿ 11-15 ವರ್ಷದೊಳಗಿನ ಹೆಣ್ಮಕ್ಕಳಿದ್ದರೆ ಹೆಚ್‌ಪಿವಿ ಲಸಿಕೆ ನೀಡುವುದರಿಂದ ಈ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದು. ಈ ಲಸಿಕೆಯನನ್ನು ಎರಡು ಡೋಸ್ ನೀಡಲಾಗುವುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
