Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಸ್ಯಾಡಿಸ್ಟ್ ಜನರನ್ನ ಗುರುತಿಸೋದು ಹೇಗೆ? ಈ ಸಮಸ್ಯೆಯ ಲಕ್ಷಣವೇನು ಗೊತ್ತಾ?
ನೀವು ಇತ್ತೀಚಿಗೆ ಅವನೊಬ್ಬ ಸ್ಯಾಡಿಸ್ಟ್ ಎಂಬ ಪದ ಕೇಳುತ್ತಲೇ ಇರುತ್ತೀರಿ. ಸ್ಯಾಡಿಸ್ಟ್ ಎಂಬ ಪದ ಕೇಳಿದಾಗ ಒಬ್ಬ ವ್ಯಕ್ತಿ ಯಾವ ರೀತಿ ಗುಣ ಹೊಂದಿರುತ್ತಾರೆ? ಯಾವ ರೀತಿಯ ಮನೋಬಲ ಹೊಂದಿದವರು ಎಂಬ ಒಂದು ಕಲ್ಪನೆ ನಿಮ್ಮ ತಲೆಯಲ್ಲೂ ಬರಬಹುದು. ಆದ್ರೆ ಯಾರು ಹುಟ್ಟುತ್ತಲೇ ಸ್ಯಾಡಿಸಂಗೆ ಒಳಗಾಗುವುದಿಲ್ಲ. ಸ್ಯಾಡಿಸಂ ಅನ್ನೋದು ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಒಂದು ಹಂತದಲ್ಲಿ ಇದು ಸಾಮಾನ್ಯ ಸಮಸ್ಯೆಯಾದರೂ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು.
ನಿಮ್ಮ ಸ್ಯಾಡಿಸ್ಟ್ ಎಂಬ ಪದಕ್ಕೆ ಪೂರ್ವಗ್ರಹವಾದ ಒಂದು ಗುಣವನ್ನು ನೆನಪು ಮಾಡಿಕೊಳ್ಳಬಹುದು. ಆ ಬೇರೆಯವರ ಕಷ್ಟ ನೋಡಿ ಒಳಗೊಳಗೆ ನಗುವವನು. ಬೇರೆ ಅವರ ಸಹಾಯಕತೆಗೆ ಮರುಕ ವ್ಯಕ್ತಪಡಿಸದೆ ಸಂತೋಷ ಪಡುವಂತಹ ಮನಸ್ಥಿತಿ ಅಥವಾ ಸಿನಿಮಾಗಳಲ್ಲಿ ತೋರಿಸುವಂತೆ ಆತ ಕೊಲೆಗಾರನು, ಧಾರಾವಾಹಿಗಳಲ್ಲಿ ತೋರಿಸುವಂತಹ ಅತ್ತೆ ಸೊಸೆ ನಡುವಿನ ಹೊಟ್ಟೆ ಉರಿಯಂತಹ ಪ್ರಸಂಗದಲ್ಲಿ ಭಾಗಿಯಾಗುವ ಮಂದಿ ಎಂಬ ಭಾವನೆ ನಿಮ್ಮದಿರಬಹುದು.

ಸ್ಯಾಡಿಸಂ ಎಂಬ ವಿಚಾರದಲ್ಲಿ ನೀವು ನಿತ್ಯವು ಹೊಸ ರೀತಿಯ ವ್ಯಕ್ತಿತ್ವ ಗುರುತಿಸಬಹುದು. ಹಾಗೆ ಸುಲಭವಾಗಿ ಯಾರು ಸ್ಯಾಡಿಸ್ಟ್ ಎಂದು ಗುರುತಿಸಲಾಗುವುದಿಲ್ಲ. ಹಾಗೆ ಇದೊಂದು ಮಾನಸಿಕ ಸಮಸ್ಯೆ ಆಗುವವರೆಗೂ ಗಂಭಿರವಾಗಿ ಪರಿಗಣಿಸುವುದಿಲ್ಲ.
ಸ್ಯಾಡಿಸಂ ಎಂದರೇನು?
ಬ್ರಿಟಾನಿಕಾ ಪ್ರಕಾರ ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಲೈಂಗಿಕ ಕ್ರೌರ್ಯಗಳ ಕುರಿತಾಗಿ ಫ್ರೆಂಚ್‌ನ ಮಾರ್ಕ್ವೀಸ್ ಸೇಡ್ ಅವರ ಹೆಸರಿನಿಂದ ಗುರುತಿಸಲಾಗಿದೆ. ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಪ್ರಕಾರ ಇತರರ ಮೇಲೆ ನೋವು, ಅವಮಾನ, ಹಾನಿ ಮಾಡುವುದರಿಂದ ತಾವು ಆನಂದ ಅನುಭವಿಸುವುದು ಎಂದು ವ್ಯಾಖ್ಯಾನಿಸಿದೆ.
ನಾವಿದನ್ನು ಒಪ್ಪಿಕೊಳ್ಳದೆ ಇದ್ದರೂ ಬಹುತೇಕ ಎಲ್ಲರಲ್ಲೂ ಕನಿಷ್ಠ ಸ್ವಲ್ಪ ಮಟ್ಟಿಗಾದರು ಈ ಸ್ಯಾಡಿಸಂ ಇದ್ದೇ ಇರುತ್ತೆ. ಇತ್ತೀಚಿಗೆ ಈ ಪ್ರಮಾಣ ಏರಿಕೆಯಾಗಿದೆ ಅಂದರೂ ತಪ್ಪಾಗಲಾರದು. ಸ್ಯಾಡಿಸಂ ಎನ್ನುವುದು ಸಾಮಾನ್ಯ ಜನಸಂಖ್ಯೆಯಲ್ಲಿ ಬದಲಾಗುವ ಆಲೋಚನೆಗಳು, ಭಾವನೆಗಳು ಮತ್ತು ನಡವಳಿಕೆಗಳ ವಿಶಿಷ್ಟ ಮಾದರಿಯಾಗಿದೆ. ಹಾಗೆ ಇದೊಂದು ಡಾರ್ಕ್ ಸೈಡೆಡ್ ವ್ಯಕ್ತಿತ್ವ ಎಂಬುದು ಮನೋಶಾಸ್ತ್ರಜ್ಞರ ಹೇಳಿಕೆಯಾಗಿದೆ. ಏಕೆಂದರೆ ಇದು ಗುಪ್ತವಾಗಿ ಮನದೊಳಗೆ ಇರಲಿದೆ. ಹಾಗೆ ಈ ಮನೋಭಾವದಿಂದಲೇ ನಿಮಗೆ ನೆಮ್ಮದಿ ಹಾಗೂ ಸಂತೋಷ ಸಿಗುತ್ತಿದ್ದರೆ ಇದು ಮನೋವ್ಯಾದಿಯಾಗಿಯೂ ಬದಲಾಗಬಹುದು.
ಸ್ಯಾಡಿಸ್ಟಿಕ್ ಪರ್ಸನಾಲಿಟಿ ಡಿಸಾರ್ಡರ್‌ನ ಲಕ್ಷಣವೇನು?
ನಿಮ್ಮ ನಡುವೆ ಇರುವ ಹಲವರಲ್ಲಿ ಈ ಸ್ಯಾಡಿಸ್ಟಿಕ್ ಡಿಸಾರ್ಡರ್ ಇರಬಹುದು. ಅವರು ಅಗತ್ಯ ಚಿಕಿತ್ಸೆಗೆ ಒಳಗಾಗಲೇ ಬೇಕು. ಇಂತಹ ಹಲವು ಜನರನ್ನು ನೀವು ಕೂಡ ಗುರುತಿಸಬಹುದು. ಹಾಗಾದ್ರೆ ಅವರಲ್ಲಿ ಯಾವ ರೀತಿಯ ಲಕ್ಷಣಗಳನ್ನು ನೋಡಬಹುದು ಎಂಬುದನ್ನು ಕ್ಲೀನಿಕಲ್ ಸೈಕಾಲಜಿಸ್ಟ್ ಅರುಣ್ ಕುಮಾರ್ ಅವರು ಹೇಳಿರುವ ಕೆಲವು ಅಂಶಗಳನ್ನು ಇಲ್ಲಿ ನೀಡಲಾಗಿದೆ.
ಸ್ಯಾಡಿಸ್ಟಿಕ್ ಲಕ್ಷಣಗಳು ಸಾಮಾನ್ಯವಾಗಿ ಹದಿಹರೆಯಲದಲ್ಲಿ ಗೋಚರವಾಗಬಹುದು. ಸ್ಯಾಡಿಸ್ಟಿಕ್ ಮನೋಭಾವದವರು ತಮ್ಮ ತಪ್ಪುಗಳನ್ನು ಅವರು ಅರಿವಿರುವುದಿಲ್ಲ. ಅದು ಅವರಿಗೆ ಖುಷಿ ಅಥವಾ ಸಂತೋಷ ನೀಡಲಿದೆ. ಇದರಿಂದ ಬಹಳ ಅವರ ಜೀವನದಲ್ಲಿ ದೊಡ್ಡ ಸಮಸ್ಯೆಗಳು ಕಾಣಿಸಿಕೊಳ್ಳದೆ ಇರುವುದರಿಂದ ಅವರಿಗಿದು ಅಸಾಮಾನ್ಯ ಮನಸ್ಥಿತಿ ಎನಿಸುವುದಿಲ್ಲ. ಹಾಗೆ ಇದನ್ನು ಆದಷ್ಟು ಗೌಪ್ಯವಾಗಿಡಲು ಮುಂದಾಗುವುದು ನೋಡಬಹುದು.
ಪ್ರಾಣಿಗಳು ಅಥವಾ ಇತರರಿಗೆ ಹಾನಿ ಮಾಡುವುದು
ಉದ್ದೇಶಪೂರ್ವಕವಾಗಿ ಮತ್ತೊಂದು ಜೀವಿಗೆ ನೋವು ಅಥವಾ ಯಾತನೆ ನೀಡುವುದು. ಇದರಿಂದ ವಿಕೃತ ಆನಂದ ಅನುಭವಿಸುವುದು.
ಅನುಚಿತ ಹಾಸ್ಯ
ಇತರರ ನೋವು ಅಥವಾ ಅವಮಾನವನ್ನು ನೋಡಿ ನಗುವುದು. ಇಲ್ಲವೆ ಅವರ ಸೋಲನ್ನು, ನೋವನ್ನು ಅಪಹಾಸ್ಯ ಮಾಡಿ ನಗುವುದು. ಅಥವಾ ಇದನ್ನು ಮನೋರಂಜನೆಯ ಮೂಲವಾಗಿ ನೋಡುವುದು.
ಹಾನಿ ಮಾಡಲು ಕಾರಣ ಹುಡುಕುವುದು
ಬೇರೆಯವರಿಗೆ ಹಾನಿ ಮಾಡಲು ಯಾವುದಾದರು ಕಾರಣ ಹುಡುಕುವುದು. ಅವರು ತಮ್ಮ ಸುತ್ತಲಿನ ವ್ಯಕ್ತಿ ಅಥವಾ ಪ್ರಾಣಿ ಖುಷಿಯಾಗಿರುವುದನ್ನು ಒಪ್ಪುವುದಿಲ್ಲ. ಅಥವಾ ಬೇರೆಯವರ ದೌರ್ಬಲ್ಯವನ್ನು ಅಪಹಾಸ್ಯಕ್ಕೆ ಬಳಸುವುದು. ಇದರಿಂದ ಆನಂದ ಪಡೆಯುವುದು.
ಹಿಂಸಾತ್ಮಕ ವಿಷಯವನ್ನು ನೋಡುವುದು ಅಥವಾ ಹಂಚಿಕೊಳ್ಳುವುದು
ಇತರರು ಹಾನಿಗೊಳಗಾಗುತ್ತಿರುವ ವೀಡಿಯೊಗಳಿಂದ ಆನಂದವನ್ನು ಪಡೆಯುವುದು ಮತ್ತು ಅಂತಹ ವಿಷಯವನ್ನು ಇತರರೊಂದಿಗೆ ಹಂಚಿಕೊಳ್ಳುವುದು.
ಜನರನ್ನು ನೋಯಿಸಲು ಇತರರನ್ನು ಪ್ರೋತ್ಸಾಹಿಸುವುದು: ಭಾವನಾತ್ಮಕ ಅಥವಾ ದೈಹಿಕ ಹಾನಿಯನ್ನುಂಟುಮಾಡುವಲ್ಲಿ ತೊಡಗಿಸಿಕೊಳ್ಳಲು ಇತರರನ್ನು ಪ್ರೇರೇಪಿಸುವುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications