Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ನೇಹಿತೆಯರೇ, ಮುಟ್ಟಾದಾಗ ಸಾರ್ವಜನಿಕ ಟಾಯ್ಲೆಟ್‌ನಲ್ಲಿ ಈ ತಪ್ಪು ಮಾಡಲೇಬೇಡಿ
ಹೊರಗಡೆ ಸಾರ್ವಜನಿಕ ಟಾಯ್ಲೆಟ್‌ಗೆ ಹೋದಾಗ ಅಲ್ಲಿಯ ಪರಿಸ್ಥಿತಿ ನೋಡಿದರೆ ನಮಗೆಲ್ಲಿ ಮೂತ್ರ ಸೋಂಕು ಬರಬಹುದೋ ಎಂದನಿಸುವಷ್ಟು ಅಸಹ್ಯವಾಗಿರುತ್ತದೆ, ಕಾರಣ ಅದನ್ನು ಬಳಸುವವರು ಮಾಡುವ ತಪ್ಪುಗಳು. ಮುಟ್ಟಾಗಿದ್ದರೆ ಪ್ಯಾಡ್‌ಗಳನ್ನು ಹಾಗೆಯೇ ಅಲ್ಲಿ ಹಾಕಿ ಹೋಗಿರುತ್ತಾರೆ.

ಅವುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿ ಇರುತ್ತದೆ, ಆದರೂ ಬಳಸುವುದಿಲ್ಲ. ಕೆಲವು ಕಡೆ ಸ್ಯಾನಿಟರಿ ನ್ಯಾಪಿಕಿನ್ ಡಿಸ್ಪೋಸಲ್ ಮೆಷಿನ್ ಕೂಡ ಇರುತ್ತದೆ, ಆದರೂ ಬಳಸುವುದಿಲ್ಲ. ಇದರಿಂದ ಇತರರಿಗೆ ತುಂಬಾನೇ ಹಿಂಸೆಯಾಗುತ್ತದೆ. ಸಾರ್ವಜನಿಕ ಟಾಯ್ಲೆಟ್‌ನಲ್ಲಿ ಬಳಸಿದ ಪ್ಯಾಡ್ ಬಿಸಾಡಲು ಈ ಟಿಪ್ಸ್ ಅನುಸರಿಸಿ.
1. ಸ್ಯಾನಿಟರಿ ನ್ಯಾಪಿಕಿನ್ ಡಿಸ್ಪೋಸಲ್ ಮೆಷಿನ್ ಬಳಸಿ
ತುಂಬಾ ಕಡೆ ಇದನ್ನು ಇಟ್ಟಿರುತ್ತದೆ. ಇದನ್ನು ಬಳಸುವುದರಿಂದ ಬಳಸಿದ ನ್ಯಾಪಿಕಿನ್‌ಗಳನ್ನು ಮಣ್ಣಿನಲ್ಲಿ ಸೇರಿ ಇದರಿಂದ ಭೂ ಮಾಲಿನ್ಯ ಉಂಟಾಗುವುದನ್ನು ತಡೆಗಟ್ಟಬಹುದು. ಇದನ್ನು ನೇರವಾಗಿ ನೀವೇ ಮೆಷಿನ್‌ಗೆ ಹಾಕಬಹುದು ಅಥವಾ ಪ್ರತ್ಯೇಕವಾಗಿ ಕಸದ ಡಬ್ಬಿ ಇಟ್ಟಿದ್ದರೆ ಅದರಲ್ಲೇ ಹಾಕಿ.
2. ಇತರ ಡ್ರೈ ಅಥವಾ ವೆಟ್ ವೇಸ್ಟ್ ಜೊತೆ ಹಾಕಬೇಡಿ
ಹಸಿ ಕಸ, ಒಣ ಕಸ ಅಂತ ಡಬ್ಬ ಇಟ್ಟಿರುತ್ತಾರೆ, ಬಹುತೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಈ ರೀತಿ ಇಟ್ಟಿರುತ್ತಾರೆ, ಅದರ ಜೊತೆಗೆ ಪ್ಯಾಡ್, ಡಯಾಪರ್ ಇವುಗಳನ್ನು ಹಾಕಲು ಒಂದು ಮುಚ್ಚಳವಿರುವ ಕಸದ ಬುಟ್ಟಿ ಇರುತ್ತದೆ. ಅದರಲ್ಲಿಯೇ ಹಾಕಿ, ಇತರ ಕಸಗಳ ಜೊತೆ ಹಾಕಬೇಡಿ.
3. ಮಡಚಿ, ಟಿಶ್ಯೂ ಅಥವಾ ನ್ಯೂಸ್ ಪೇಪರ್‌ನಿಂದ ಸುತ್ತಿ ಹಾಕಿ
ಪ್ಯಾಟ್ ಅನ್ನು ಸುತ್ತದೆ ಅಥವಾ ಹಾಗೇ ಸುತ್ತಿ ಹಾಕಬೇಡಿ, ಅದನ್ನು ಟಿಶ್ಯೂ ಅಥವಾ ನ್ಯೂಸ್ ಪೇಪರ್‌ನಿಂದ ಸುತ್ತಿ ನಂತರ ಕಸದ ಬುಟ್ಟಿಗೆ ಹಾಕಿ, ಹಾಗೇ ಹಾಕಿದರೆ ದುರ್ವಾಸನೆ ಬೀರುವುದು, ಅಲ್ಲದೆ ತುಂಬಾ ಗಲೀಜು ಅನಿಸುವುದು. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಈ ಕುರಿತು ಜಾಗ್ರತೆವಹಿಸಬೇಕು. ನಮ್ಮ ಮನೆಗಳಲ್ಲಿ ನಾವು ಹೇಗೆ ಆ ರೀತಿ ಹಾಕುವುದಿಲ್ಲ, ಸಾರ್ವಜನಿಕ ಸ್ಥಳಗಳಲ್ಲೂ ಅಷ್ಟೇ ಕಾಳಜಿಯಿಂದ ವರ್ತಿಸಿದರೆ ಕಸ ವಿಲೇವಾರಿಗೆ ಸುಲಭವಾಗುವುದು. ಸುಮ್ಮನೆ ಸಾರ್ವಜನಿಕ ಟಾಯ್ಲೆಟ್ ಕ್ಲೀನ್ ಆಗಿ ಇಟ್ಟಿಲ್ಲ ಎಂದು ದೂರುವ ಬದಲಿಗೆ ನಾವು ಕೂಡ ಸಾರ್ವಜನಿಕ ಟಾಯ್ಲೆಟ್‌ಗೆ ಹೋದಾಗ ಪ್ಯಾಡ್ ಬೇಕಾದಂತೆ ಬಿಸಾಡುವ ಅಭ್ಯಾಸ ಬಿಡಬೇಕು ಅಲ್ವಾ?
4. ಟಾಯ್ಲೆಟ್‌ನಲ್ಲಿ ಫ್ಲಷ್ ಮಾಡಬೇಡಿ
ತುಂಬಾ ಜನ ಈ ತಪ್ಪು ಮಾಡುತ್ತಾರೆ. ಸಾರ್ವಜನಿಕ ಟಾಯ್ಲೆಟ್‌ಗೆ ಹೋದಾಗ ಅಥವಾ ಬೇರೆ ಕಡೆ ಹೋದಾಗ ಪ್ಯಾಡ್ ಎಲ್ಲಿ ಹಾಕುವುದು ಎಂದು ಕೇಳಲು ಮುಜುಗರವಾಗಿ ಟಾಯ್ಲೆಟ್‌ನಲ್ಲಿ ಪ್ಲಷ್ ಮಾಡುತ್ತಾರೆ. ಈ ರೀತಿ ಮಾಡಲೇಬೇಡಿ. ಇದರಿಂದ ಟಾಯ್ಲೆಟ್ ಬ್ಲಾಕ್ ಆಗುವುದು. ಆದ್ದರಿಂದ ಯಾರೇ ಆಗಲಿ ಟಾಯ್ಲೆಟ್‌ಗೆ ಪ್ಯಾಡ್ ಹಾಕಿ ಫ್ಲಷ್ ಮಾಡಲೇಬಾರದು. ಅದನ್ನು ಕಸದ ಬುಟ್ಟಿಯಲ್ಲಿಯೇ ಹಾಕಿ.
ಪ್ಯಾಡ್‌ನ ಕಿರಿಕಿರಿ ಬೇಡ ಎಂದರೆ ಮುಟ್ಟಿನ ಕಪ್ ಬಳಸಿ
ಮುಟ್ಟಿನ ಕಪ್ ಬಳಸಿದರೆ ಇಂಥ ಯಾವ ಕಿರಿಕಿರಿ ಇರುವುದಿಲ್ಲ. ಸಾರ್ವಜನಿಕ ಸ್ಥಳಗಳಿಗೆ ಹೋದಾಗ ತುಂಬಾನೇ ಕಂಫರ್ಟ್ ಆಗಿರಬಹುದು, ಅಲ್ಲದೆ ಇದನ್ನು ಬಳಸುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟಬಹುದು.
ಆದ್ದರಿಂದ ಸ್ನೇಹಿತೆಯರೇ ಮುಟ್ಟಿನ ದಿನಗಳಲ್ಲಿ ನಮ್ಮ ಶುದ್ಧತೆ ಜೊತೆಗೆ ನಮ್ಮ ಸುತ್ತಲಿನ ಪರಿಸರವನ್ನು ಶುದ್ಧವಾಗಿಡುವುದು ನಮ್ಮ ಕರ್ತವ್ಯವಾಗಿದೆ. ಮನೆಗಳಲ್ಲಿ ಈ ಕುರಿತು ಎಚ್ಚರವವಹಿಸುತ್ತೇವೆ. ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿಯೂ ವರ್ತಿಸಿದರೆ ಶುದ್ಧತೆ ಕಾಪಾಡಬಹುದು. ಈ ಅಭಿಪ್ರಾಯಕ್ಕೆ ಸಹಮತದಿಂದ ಒಪ್ಪುತ್ತೀರಿ ತಾನೆ?
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications