Latest Updates
-
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್!
ಕೃತಕ ಸಿಹಿ ಎಷ್ಟು ಸುರಕ್ಷಿತ? ಆರೋಗ್ಯಕ್ಕೆ ಸೀಕ್ರೆಟ್ ಆಗಿ ಹಾನಿ ಮಾಡುವ ಅಂಶವಿದು..!
ಸಿಹಿ ತಿನಿಸುಗಳು ಅಂದ್ರೆ ಎಲ್ಲರಿಗೂ ಇಷ್ಟ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಈ ಸಿಹಿಯನ್ನು ಸವಿಯುವವರ ನೋಡಬಹುದು. ಸಿಹಿ ಸವಿಯಲು ಎಷ್ಟು ಅದ್ಭುತ ರುಚಿ ನೀಡುತ್ತವೋ ಹಾಗೆ ಆರೋಗ್ಯದ ಮೇಲೆಯೂ ಕೂಡ ದೊಡ್ಡ ಪರಿಣಾಮ ಉಂಟು ಮಾಡಲಿವೆ. ಸಿಹಿ ಅನ್ನೋದು ಈಗ ವಿಷವಾಗಿ ಪರಿಣಮಿಸುತ್ತಿದೆ. ಮಧುಮೇಹಿಗಳ ಸಂಖ್ಯೆ ದ್ವಿಗುಣ ಆಗುತ್ತಿರುವುದು ಇದಕ್ಕೆ ಸಾಕ್ಷಿ ಎನ್ನಬಹುದು.
ಹಾಗೆ ಸಕ್ಕರೆ ಅಂಶ ದೇಹಕ್ಕೆ ಯಾವ ರೀತಿಯಲ್ಲೆಲ್ಲಾ ಹಾನಿ ಮಾಡುತ್ತಿದೆ ಎಂಬುದನ್ನು ನಾವು ಕೂಡ ತಿಳಿದಿದ್ದೇವೆ. ಸಕ್ಕರೆಯನ್ನ ಈಗ ಬಿಳಿ ವಿಷ ಎಂದು ಕರೆಯುವಂತಾಗಿದೆ. ಸಕ್ಕರೆ ಬಳಸಿದ ಆಹಾರ ಸವಿಯುವುದು ನಿಮ್ಮ ಅನಾರೋಗ್ಯವನ್ನು ನೀವೇ ನಿರ್ಧರಿಸಿದಂತೆ. ಹಾಗೆ ಸಕ್ಕರೆ ಸವಿಯುವುದನ್ನು ನಿಲ್ಲಿಸುವುದು ನಿಮ್ಮ ಆರೋಗ್ಯಕ್ಕೆ ಕೊಡುಗೆ ನೀಡಿದಂತೆ.

ಸಿಹಿ ಅಂದ ಮೇಲೆ ಸಕ್ಕರೆ ಹಾಕಿಯೇ ಹಾಕುತ್ತಾರೆ. ಹಾಗೆ ಸಕ್ಕರೆಯ ಬದಲಾಗಿ ಸಿಹಿಗಾಗಿ ಒಂದಿಷ್ಟು ಅಂಶಗಳನ್ನು ಕೂಡ ಬಳಸುತ್ತಾರೆ. ಬೇಕರಿ ವಸ್ತುಗಳು, ಸೇರಿ ಹಲವು ಸಿಹಿ ಪದಾರ್ಥಗಳಿಗೆ ಸಕ್ಕರೆಯ ಜೊತೆಗೆ ಕೃತಕ ಸಿಹಿಯನ್ನೂ ಕೂಡ ಬಳಸುವುದು ನೋಡಬಹುದು. ಅದರಲ್ಲೂ ಸಕ್ಕರೆಯ ಬದಲಾಗಿ ಆಸ್ಪರ್ಟೇಮ್ ಮತ್ತು ಸುಕ್ರಲೋಸ್‌ನಂತಹ ಕೃತಕ ಸಿಹಿಕಾರಕಗಳ ಬಳಸುತ್ತಾರೆ.
ಕೃತಕ ಸಿಹಿಗಳು ಸಕ್ಕರೆಗಿಂತ ಕಡಿಮೆ ದರ ಹೆಚ್ಚು ಸಿಹಿ ನೀಡಲಿವೆ. ಹಾಗೆ ಇದರಿಂದ ವಿಶೇಷ ರುಚಿ ಕೂಡ ಪಡೆಯಬಹುದು. ಹೀಗಾಗಿ ಈ ಸಕ್ಕರೆ ಬಳಕೆ ಬದಲಾಗಿ ಈ ಕೃತಕ ಸಿಹಿ ಬಳಕೆ ಹೆಚ್ಚಾಗುತ್ತದೆ. ಈ ಕೃತಕ ಸಿಹಿಗಳು ದೇಹದ ಪ್ರತಿಯೊಂದು ಭಾಗಕ್ಕೂ ಹಾನಿ ಉಂಟುಮಾಡುತ್ತದೆ. ಮುಖ್ಯವಾಗಿ ಕರುಳಿನ ಬ್ಯಾಕ್ಟೀರಿಯ ಸಂಯೋಜನೆಯಲ್ಲಿ ಇದು ಹಾನಿ ಮಾಡಬಹುದು.
ಮಾನವನ ಕರುಳಿನಲ್ಲಿ ಟ್ರಿಲಿಯನ್‌ಗಟ್ಟಲೆ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಕರುಳಿನ ಸೂಕ್ಷ್ಮಜೀವಿಯನ್ನು ರೂಪಿಸುವ ಇತರ ಸೂಕ್ಷ್ಮಜೀವಿಗಳು ವಾಸಿಸುತ್ತವೆ. ಇವು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಚಯಾಪಚಯ ಕ್ರಿಯೆಗೆ ಮುಖ್ಯವಾಗಿವೆ. ಆರೋಗ್ಯಕರ, ವೈವಿಧ್ಯಮಯ ಸೂಕ್ಷ್ಮಜೀವಿಯು ಒಟ್ಟಾರೆ ಆರೋಗ್ಯಕ್ಕೆ ಪ್ರಮುಖವಾಗಿದೆ. ಆದರೆ ಕೃತಕ ಸಕ್ಕರೆ ಅಥವಾ ಕೃತಕ ಸಿಹಿ ದೇಹದ ಈ ಸಮತೋಲನವನ್ನು ಹಾಳು ಮಾಡುತ್ತವೆ. ಹಾಗಾದ್ರೆ ಯಾವೆಲ್ಲಾ ಆಹಾರ ಕೃತಕ ಸಿಹಿಕಾರಕ ಹೊಂದಿರಲಿದೆ. ಯಾವ ಆಹಾರ
ಕೃತಕ ಸಿಹಿಕಾರಕಗಳು
ಕೃತಕ ಸಿಹಿಗಳೆಂದರೆ ಸಕ್ಕರೆ ಬದಲಿಗೆ ಬಳಸುವ ವಸ್ತುಗಳಾಗಿವೆ. ಪ್ರಮುಖವಾಗಿ ಆಸ್ಪರ್ಟೇಮ್, ಸುಕ್ರಲೋಸ್ ಮತ್ತು ಸ್ಯಾಕರಿನ್‌ನಂತಹ ಕೃತಕ ಸಿಹಿಕಾರಕಗಳು ಕರುಳಿನ ಬ್ಯಾಕ್ಟೀರಿಯಾದ ಮೇಲೆ ಹಾನಿ ಮಾಡಬಹುದು. ಇವು ದೇಹದಲ್ಲಿ ಗ್ಲೂಕೋಸ್ ಮಟ್ಟ ನಿಯಂತ್ರಣದಲ್ಲಿ ಏರುಪೇರು ಉಂಟುಮಾಡಲು ಕಾರಣವಾಗಲಿದೆ.
ಸಂಸ್ಕರಿಸಿದ ಆಹಾರಗಳು
ಪ್ಯಾಕ್ ಮಾಡಿದ ತಿಂಡಿಗಳು, ಸಿದ್ಧವಿರುವ ಮತ್ತು ತ್ವರಿತ ನೂಡಲ್ಸ್‌ನಂತಹ ಅತಿ-ಸಂಸ್ಕರಿಸಿದ ಆಹಾರಗಳು ಕರುಳಿನ ಬ್ಯಾಕ್ಟೀರಿಯಾವನ್ನು ಅಡ್ಡಿಪಡಿಸುವ ಎಮಲ್ಸಿಫೈಯರ್‌ಗಳನ್ನು ಹೊಂದಿರುತ್ತವೆ. ಸಂಸ್ಕರಿಸಿದ ಆಹಾರಗಳಲ್ಲಿರುವ ಪಾಲಿಸೋರ್ಬೇಟ್ 80 ಮತ್ತು ಕಾರ್ಬಾಕ್ಸಿಮೀಥೈಲ್ ಸೆಲ್ಯುಲೋಸ್‌ನಂತಹ ಅಂಶವು ಕರುಳಿನ ಪದರ ಹಾನಿಗೆ ಕಾರಣವಾಗುತ್ತದೆ. ಇದು ಕರುಳಿನ ಸೂಕ್ಷ್ಮ ಜೀವಿಗಳ ಹಾನಿಗೆ ಕಾರಣವಾಗಲಿದೆ.
ಕೆಂಪು ಮತ್ತು ಸಂಸ್ಕರಿಸಿದ ಮಾಂಸಗಳು
ಹೆಚ್ಚು ಕೆಂಪು ಮಾಂಸ ಮತ್ತು ವಿಶೇಷವಾಗಿ ಸಂಸ್ಕರಿಸಿದ ಆಹಾರಗಳನ್ನು ತಿನ್ನುವುದು ಕರುಳಿನ ಆರೋಗ್ಯ ಹದಗೆಡಲು ಕಾರಣವಾಗಲಿದೆ. ಇವು ಫೈಬರ್ ಅಂಶ ಕಡಿಮೆ ಇರುವುದರಿಂದ ನಿಮ್ಮ ಆರೋಗ್ಯಕ್ಕೆ ಉತ್ತಮವಲ್ಲ. ಬರ್ಗರ್‌ಗಳು, ಫ್ರೈಗಳು, ಪಿಜ್ಜಾ ಮತ್ತು ಇತರ ಫಾಸ್ಟ್ ಫುಡ್ ಕರುಳಿನ ಸೂಕ್ಷ್ಮಜೀವಿಯ ವ್ಯವಸ್ಥೆಯನ್ನೇ ಹಾಳು ಮಾಡಬಹುದು. ಹೀಗಾಗಿ ಸಕ್ಕರೆ ಅಂಶಗಳು, ಕೃತಕ ಸಿಹಿ, ಕೃತಕ ಸಕ್ಕರೆ ಅಂಶ ಇರುವ ಆಹಾರ ಸೇವನೆಯಿಂದ ದೂರ ಉಳಿಯುವುದು ಮುಖ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications