Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಿಂಕ್ ಸಾಲ್ಟ್ ಬಳಸಿದರೆ ತೂಕ ಕಡಿಮೆಯಾಗುತ್ತಾ? ಹೇಗೆ ಬಳಸಬೇಕು?
ಸಾಮಾನ್ಯವಾಗಿ ಮನೆಗಳಲ್ಲಿ ಕಲ್ಲುಪ್ಪು, ಪುಡಿ ಉಪ್ಪು ಬಳಸುತ್ತೇವೆ, ಆದರೆ ಈ ಉಪ್ಪುಗಳಲ್ಲಿ ಪಿಂಕ್ ಸಾಲ್ಟ್, ಬ್ಲ್ಯಾಕ್ ಸಾಲ್ಟ್ ಸಿಗುತ್ತೆ. ಈ ಉಪ್ಪುಗಳು ತುಂಬಾನೇ ಆರೋಗ್ಯಕರ ಪ್ರಯೋಜನಗಳಿವೆ. ಇಲ್ಲಿ ನಾವು ಪಿಂಕ್ ಸಾಲ್ಟ್ ಪ್ರಯೋಜನದ ಬಗ್ಗೆ ಹೇಳಿದ್ದೇವೆ. ಪಿಂಕ್ ಸಾಲ್ಟ್ ತೂಕ ಇಳಿಕೆ ಮಾಡುತ್ತದೆ, ಹಲವು ಆರೋಗ್ಯಕರ ಪ್ರಯೋಜನ ಸಿಗಲಿದೆ. ಬನ್ನಿ ಈ ಪಿಂಕ್ ಸಾಲ್ಟ್ ಯಾವೆಲ್ಲಾ ಆರೊಗ್ಯಕರ ಗುಣಗಳನ್ನು ಹೊಂದಿದೆ ಎಂದು ನೋಡೋಣ:

ಪಿಂಕ್ ಸಾಲ್ಟ್ ತೂಕ ಇಳಿಕೆಗೆ ಸಹಕಾರಿ
ಪಿಂಕ್ ಸಾಲ್ಟ್ ತೂಕ ಇಳಿಕೆಗೆ ತುಂಬಾ ಸಹಕಾರಿಯಾಗಿದೆ. ಈ ಪಿಂಕ್ ಸಾಲ್ಟ್ ತೂಕ ಇಳಿಕೆಗೆ ಹೇಗೆ ಸಹಕಾರಿಯಾಗಿದೆ ಎಂದರೆ
ಚಯಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು: ಮೈ ತೂಕ ಕಡಿಮೆಯಾಗಬೇಕೆಂದರೆ ಚಯಪಚಯ ಕ್ರಿಯೆ ಉತ್ತಮವಾಗಿ ನಡೆದರೆ ತೂಕ ಇಳಿಕೆಗೆ ತುಂಬಾನೇ ಸಹಕಾರಿಯಾಗಿದೆ.
ಪಿಂಕ್ ಸಾಲ್ಟ್‌ನಲ್ಲಿರುವ ಪೋಷಕಾಂಶ ತೂಕ ಇಳಿಕೆ ನಿಯಂತ್ರಿಸಲು ಸಹಕಾರಿ
ಪಿಂಕ್ ಸಾಲ್ಟ್‌ನಲ್ಲಿ ಕ್ಯಾಲ್ಸಿಯಂ, ಕಬ್ಬಿಣದಂಶ, ಪೊಟಾಷ್ಯಿಯಂ ಇವೆಲ್ಲಾ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಸಹಕಾರಿ. ಈ ಪೋಷಕಾಂಶಗಳು ಹಸಿವು ನಿಯಂತ್ರಿಸಲು ಸಹಕಾರಿಯಾಗಿದೆ.
ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ
ಪಿಂಕ್ ಸಾಲ್ಟ್ ದೇಹದಲ್ಲಿ ನೀರಿನಂಶ ಕಾಪಾಡಲು ತುಂಬಾ ಸಹಕಾರಿ. ಅಲ್ಲದೆ ವ್ಯಾಯಾಮದ ಬಳಿಕ
ಕಾಡುವ ಸುಸ್ತು ನಿಯಂತ್ರಿಸಲು ಸಹಕಾರಿಯಾಗಿದೆ.
ಈ ಪಿಂಕ್ ಸಾಲ್ಟ್ ಹೇಗೆ ಬಳಸಬಹುದು?
ಒಂದು ಗ್ಲಾಸ್ ಉಗುರಿನ ಬೆಚ್ಚಗಿನ ನೀರು
1/2 ಚಮಚ ಪಿಂಕ್ ಸಾಲ್ಟ್
1 ಚಮಚ ನಿಂಬೆರಸ
ಈ ಪಾನೀಯ ಕುಡಿಯಲು ಚೆನ್ನಾಗಿರುತ್ತದೆ, ಮೈ ತೂಕ ಕರಗಿಸಲು ಸಹಕಾರಿಯಾಗಿದೆ.
ನೀವು ಪಿಂಕ್ ಸಾಲ್ಟ್ ಅನ್ನು ಟೀ ಜೊತೆ ಕೂಡ ಸೇವಿಸಬಹುದು
ಒಂದು ಕಪ್ ಟೀಗೂ ಸೇರಿಸಬಹುದು
ಅದು ಲೆಮನ್ ಟೀ ಆಗಿರಬಹುದು, ಶುಂಠಿ ಟೀ ಆಗಿರಬಹುದು, ಅದಕ್ಕೆ ಚಿಟಿಕೆಯಷ್ಟು ಪಿಂಕ್ ಸಾಲ್ಟ್ ಹಾಕಿ ಕುಡಿದರೆ ತುಂಬಾನೇನ ಒಳ್ಳೆಯದು.
ನೀವು ನೀರು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಜಜ್ಜಿದ ಶುಂಠಿ ಹಾಕಿ, ಟೀ ಪುಡಿ ಹಾಕಿ ಕುದಿಸಿ, ಅದನ್ನು ಗ್ಲಾಸ್‌ಗೆ ಸೋಸಿ, ನಿಂಬೆರಸ ಹಾಕಿ, ಚಿಟಿಕೆಯಷ್ಟು ಪಿಂಕ್ ಸಾಲ್ಟ್ ಸೇರಿಸಿ ಮಿಕ್ಸ್ ಮಾಡಿ ಕುಡಿಯಬಹುದು.
ಈ ಪಿಂಕ್ ಸಾಲ್ಟ್ ಬಳಸುವುದರಿಂದ ನೀವು ಈ ಪ್ರಯೋಜನ ಪಡೆಯಬಹುದು?
ಇದು ದೇಹವನ್ನು ಡಿಟಾಕ್ಸ್ ಮಾಡುತ್ತದೆ: ಪಿಂಕ್ ಸಾಲ್ಟ್ ಮೈ ತೂಕ ಕಡಿಮೆ ಮಾಡುವುದು ಮಾತ್ರವಲ್ಲ ದೇಹವನ್ನು ಡಿಟಾಕ್ಸ್ ಮಾಡುತ್ತದೆ,
ಪಿಂಕ್ ಸಾಲ್ಟ್ ಯಾರಿಗೆ ಒಳ್ಳೆಯದಲ್ಲ?
ಹೈಪರ್ ಟೆನ್ಷನ್ ಇರುವವರಿಗೆ ಪಿಂಕ್ ಸಾಲ್ಟ್ ಒಳ್ಳೆಯದಲ್ಲ: ಇದು ರಕ್ತದೊತ್ತಡವನ್ನು ಹೆಚ್ಚು ಮಾಡುತ್ತದೆ, ಹಾಗಾಗಿ ಹೈಪರ್ ಟೆನ್ಷನ್ ಸಮಸ್ಯೆ ಇರುವವರು ಇದನ್ನು ಬಳಸಲೇಬೇಡಿ
ಕಿಡ್ನಿ ಸಮಸ್ಯೆ ಇರುವವರೆಗೂ ಒಳ್ಳೆಯದಲ್ಲ: ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವವರು ಇದನ್ನು ಬಳಸಬೇಡಿ.
ಕೆಲವರಿಗೆ ಹೊಟ್ಟೆ ಉಬ್ಬುವುದು, ಹೊಟ್ಟೆಯಲ್ಲಿ ನೀರು ತುಂಬುವುದು ಈ ರೀತಿಯಾಗುವುದು, ಹಾಗಾಗಿ ಪಿಂಕ್ ಸಾಲ್ಟ್ ಮಿತಿ ಮೀರಿ ಸೇವಿಸಬೇಡಿ.
ಸಂಧಿವಾತ ಇರುವವರೆಗೂ ಪಿಂಕ್ ಸಾಲ್ಟ್ ಒಳ್ಳೆಯದಲ್ಲ: ಸಂಧಿವಾತ ಸಮಸ್ಯೆ ಇರುವವರು ಇದನ್ನು ಬಳಸುವುದರಿಂದ ಕೈ ಕಾಲುಗಳಲ್ಇ ಊತ ಕಂಡು ಬರುವ ಸಾಧ್ಯತೆ ಇದೆ, ಹಾಗಾಗಿ ಈ ಬಗ್ಗೆ ಗಮನಹರಿಸಿ.
ಕೊನೆಯದಾಗಿ: ನೀವು ಈ ಪಿಂಕ್ ಸಾಲ್ಟ್ ಬಳಸುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಅವರಿಗೆ ನಿಮ್ಮ ಆರೋಗ್ಯ ಸ್ಥಿತಿ ತಿಳಿದಿರುತ್ತದೆ, ಈ ಪಿಂಕ್ ಸಾಲ್ಟ್ ನಿಮಗೆ ಒಳ್ಳೆಯದಾ, ಇಲ್ವಾ ಎಂಬುವುದರ ಬಗ್ಗೆ ಮಾಹಿತಿ ನೀಡುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.
ಪಿಂಕ್ ಹಿಮಾಲಿಯನ್ ಸಾಲ್ಟ್ ಬಳಸಬಹುದು, ಪಿಂಕ್ ಸಾಲ್ಟ್ ಬಳಸುವ ಮುನ್ನ ನಿಮ್ಮ ವೈದ್ಯರ ಬಳಿ ಇದರ ಬಗ್ಗೆ ಹೇಳಿ ಸಲಹೆ ಪಡೆದ ಬಳಿಕವಷ್ಟೇ ಬಳಸಿ.
ಪಿಂಕ್ ಸಾಲ್ಟ್‌ನಲ್ಲಿ ಮೆಗ್ನಿಷ್ಯಿಯಂ, ಪೊಟಾಷ್ಯಿಯಂ , ಕ್ಯಾಲ್ಸಿಯಂ ಇರುವುದರಿಂದ ಈ ಉಪ್ಪು ಪಿಂಕ್ ಬಣ್ಣದಿಂದ ಕೂಡಿದೆ.



Click it and Unblock the Notifications