Latest Updates
-
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ
ನಿತ್ಯ ಎಷ್ಟು ನಿಮಿಷ ಹಲ್ಲುಜ್ಜಬೇಕು? ನೀವು ತಪ್ಪು ಮಾಡುತ್ತಿದ್ದೀರಾ? ಇಲ್ಲಿದೆ ಮಾಹಿತಿ!
ಬೆಳಗ್ಗೆ ಎದ್ದ ಕೂಡಲೆ ನಾವು ಬ್ರಷ್ ಮಾಡುವುದು ಕಾಮನ್. ಆದ್ರೆ ಬ್ರಷ್ ಮಾಡುವ ಕುರಿತ ಅರಿವು ನಮಗೆ ಕಡಿಮೆ ಇದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆರೋಗ್ಯಕರ ಅಭ್ಯಾಸವಾಗಿ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವಂತೆ ಹೇಳಲಾಗಿದೆ. ಆದ್ರೆ ಭಾರತದಲ್ಲಿ ಬಹುತೇಕ ಮಂದಿ ಬೆಳಗ್ಗೆ ಒಂದು ಬಾರಿ ಮಾತ್ರವೇ ಹಲ್ಲುಜ್ಜುತ್ತಾರೆ. ಇನ್ನು ರಾತ್ರಿ ಊಟದ ಬಳಿಕ ಹಲ್ಲುಜ್ಜಲು ವೈದ್ಯರು ಕೂಡ ಶಿಫಾರಸು ಮಾಡುತ್ತಾರೆ. ಆದ್ರೆ ಅದನ್ನು ಕೆಲವೇ ಮಂದಿ ಅನುಸರಿಸುತ್ತಾರೆ.
ರಾತ್ರಿ ನಾವು ಹಲ್ಲುಜ್ಜುವುದರಿಂದ ಹಲ್ಲುಗಳಲ್ಲಿ ಕ್ಯಾವಿಟಿ ಉಂಟಾಗುವುದಿಲ್ಲ. ಇದರಿಂದ ಹಲ್ಲುಗಳು ಹುಳುಕಾಗುವ ಭೀತಿ ಇರುವುದಿಲ್ಲ. ಹಾಗೆ ಹಲ್ಲುಜ್ಜುವ ಪ್ರಕ್ರಿಯೆ ಸರಿಯಾಗಿ ಮಾಡಬೇಕು ಎಂಬ ಸಲಹೆ ಕೂಡ ನೀಡುವುದು ನೋಡಬಹುದು. ಆದ್ರೆ ಎಷ್ಟು ನಿಮಿಷಗಳ ಕಾಲ ಹಲ್ಲುಜ್ಜಬೇಕು ಎಂಬ ಕುರಿತು ನಿಮಗೆ ತಿಳಿದಿದ್ಯಾ?

ಇತ್ತೀಚಿನ ದಿನಗಳಲ್ಲಿ ಸಿಗುತ್ತಿರುವ ಟೂಥ್‌ಪೇಸ್ಟ್‌ಗಳು ಹೆಚ್ಚಾಗಿ ರಾಸಾಯಿನಿಗಳಿಂದಲೇ ಮಾಡಿರುತ್ತಾರೆ. ಅವು ನಮ್ಮ ಹಲ್ಲುಗಳ ರಕ್ಷಣೆಯ ಬದಲಿಗೆ ಅನೇಕ ರೀತಿಯಲ್ಲಿ ನಮಗೆ ಹಾನಿ ಮಾಡುವುದೇ ಹೆಚ್ಚು. ಹಾಗೆ ಈ ರಾಸಾಯನಿಕಗಳು ಹೆಚ್ಚು ಸಮಯ ನಮ್ಮ ಹಲ್ಲುಗಳ ಮೇಲೆ ಇದ್ದರೆ ಅದರಿಂದಲೂ ಹಾನಿಯಾಗುತ್ತದೆ ಎಂಬ ವಿಚಾರ ನಿಮಗೆ ಗೊತ್ತಾ?
ಅಮೇರಿಕನ್ ಡೆಂಟಲ್ ಅಸೋಸಿಯೇಷನ್ (ADA) ನ ಪ್ರಸ್ತುತ ಶಿಫಾರಸುಗಳು ದಿನಕ್ಕೆ ಎರಡು ಬಾರಿ ಎರಡು ನಿಮಿಷಗಳ ಕಾಲ ಹಲ್ಲುಜ್ಜುವುದನ್ನು ಶಿಫಾರಸ್ಸು ಮಾಡಿದೆ. 2 ನಿಮಿಷದಕ್ಕಿಂತಲೂ ಕಡಿಮೆ ಸಮಯ ಹಲ್ಲುಜ್ಜುವುದರಿಂದ ಹಲ್ಲುಗಳಲ್ಲಿನ ಫ್ಲೇಕ್ ತೆಗೆಯಲು ಸಾಧ್ಯವಿಲ್ಲ ತಜ್ಞರು ಹೇಳಿದ್ದಾರೆ. ಹಾಗೆ ಬಹುತೇಕ ಮಂದಿ ಕೇವಲ 45 ಸೆಕೆಂಡುಗಳ ಕಾಲ ಮಾತ್ರವೇ ಹಲ್ಲುಜ್ಜುತ್ತಾರೆ ಎಂದು ವರದಿ ಹೇಳಿದೆ.
ಸಾಮಾನ್ಯವಾಗಿ ಎರಡೂವರೆ ನಿಮಿಷಕ್ಕಿಂತ ಹೆಚ್ಚು ಸಮಯ ಹಲ್ಲುಜ್ಜುವುದು ಕೂಡ ಒಳ್ಳೆಯ ಅಭ್ಯಾಸ ಅಲ್ಲವಂತೆ. ಹಲ್ಲುಗಳು ಸ್ವಚ್ಛವಾಗಲು ಕೇವಲ 120 ಸೆಕೆಂಡುಗಳು ಹಲ್ಲುಗಳ ಉಜ್ಜಬೇಕಂತೆ. ಅದಕ್ಕಿಂತ ಹೆಚ್ಚು ಸಮಯ ಹಲ್ಲುಜ್ಜುವುದು ಉತ್ತಮ ಅಭ್ಯಾಸವಲ್ಲ ಎಂದು ಹೇಳಲಾಗಿದೆ.
ಮೌತ್ ವಾಷ್ ಬಳಸಬಹುದೇ?
ಹಲವರು ದಿನದಲ್ಲಿ ಒಂದು ಭಾರಿ ಬ್ರಷ್ ಮಾಡಿ ರಾತ್ರಿ ಮೌತ್ ವಾಷ್ ಬಳಸುತ್ತಾರೆ. ಮೌತ್ ವಾಷ್‌ನಿಂದ ಬಾಯಿಯ ದುರ್ಗಂಧ ನಿವಾರಣೆ ಮಾಡಬಹುದೇ ಹೊರತು ಹಲ್ಲುಗಳನ್ನು ಸ್ವಚ್ಛ ಮಾಡಲು ಸಾಧ್ಯವಿಲ್ಲ ಹೀಗಾಗಿ ಮೌತ್ ವಾಷ್‌ಗಿಂತ ಬ್ರಷ್ ಮಾಡುವುದೇ ಉತ್ತಮ ಅಭ್ಯಾಸವಾಗಿರಲಿದೆ.
ಹಲ್ಲುಜ್ಜುವಾಗ ನೀವು ಮಾಡುವ ತಪ್ಪುಗಳೇನು?
ಸಾಮಾನ್ಯವಾಗಿ ಹಲ್ಲುಜ್ಜುವ ಸಮಯಲ್ಲಿ ನೀವು ಮಾಡುವಂತಹ ತಪ್ಪುಗಳೆಂದರೆ ಹಲ್ಲು ಬಹುಬೇಗ ಸ್ವಚ್ಛವಾಗಲಿ ಎಂಬ ಕಾರಣಕ್ಕೆ ಬಲವಾಗಿ ಒತ್ತಡ ಹಾಕಿ ಉಜ್ಜುವುದು. ಇದರಿಂದ ಹಲ್ಲು ಸ್ವಚ್ಛವಾಗುವ ಜೊತೆಗೆ ಹಲ್ಲಿನ ಮೇಲ್ಪದರಕ್ಕೆ ಹಾನಿಯಾಗುತ್ತದೆ. ಹೀಗಾಗಿ ಬ್ರಷ್ ಅನ್ನು ಸೌಮ್ಯವಾಗಿ ಹಿಡಿದು ನಿಧಾನವಾಗಿ ಉಜ್ಜಬೇಕು.
ಆಧುನಿಕ ಬ್ರಷ್‌ಗಳ ಬಳಕೆ ಕೂಡ ಈಗ ಹೆಚ್ಚಾಗಿದೆ. ವಿದ್ಯುತ್ ಚಾಲಿತ ಬ್ರಷ್‌ಗಳ ಬಳಸಿ ಹಲ್ಲುಜ್ಜುತ್ತಾರೆ. ಆದ್ರೆ ಅದಕ್ಕಿಂತ ನಿಮ್ಮ ಸಾಮಾನ್ಯ ಬ್ರಷ್‌ಗಳು ಬಹಳ ಉತ್ತಮ ಎಂದು ಹೇಳಲಾಗುತ್ತದೆ. ಈ ಬ್ರಷ್‌ಗಳು ಹಲ್ಲುಗಳ ಮೇಲಿ ಪದರ ಹಾಗೂ ಒಸಡುಗಳಲ್ಲಿನ ಕೊಳೆ ಸ್ವಚ್ಛ ಮಾಡುವುದಿಲ್ಲ ಎನ್ನಲಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
