Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಋತುಚಕ್ರದ ಸಮಯದಲ್ಲಿ ತುಂಬಾ ನೋವು ಕಾಣಿಸುವುದೇ? ಎಂಡೊಮೆಟ್ರಿಯೊಸಿಸ್ ಇರಬಹುದು, ನಿರ್ಲಕ್ಷ್ಯ ಬೇಡ
ಸಾಧಾರಣವಾಗಿ ಮುಟ್ಟಿನ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಸ್ವಲ್ಪ ಮಟ್ಟಿನ ನೋವನ್ನು ಅನುಭವಿಸುತ್ತಾರೆ. ಆದರೆ ಈ ನೋವು ಸಹನೀಯ ಪ್ರಮಾಣದಲ್ಲಿರುತ್ತದೆ ಹಾಗೂ ಹೆಚ್ಚಿನ ಸಮಯದಲ್ಲಿ ಯಾವುದೇ ನೋವುನಿವಾರಕ ಮಾತ್ರೆಗಳ ಅಗತ್ಯವಿರುವಿದಿಲ್ಲ. ಆದರೆ ಎಂಡೋಮೆಟ್ರಿಯೋಸಿಸ್ ನಿಂದ ಬಾಧಿತ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ನೋವು ಅತಿ ತೀವ್ರವಾಗಿರುತ್ತದೆ.
ಅವರಿಗೆ ನೋವುನಿವಾರಕ ಮಾತ್ರೆಗಳ ಸಹಾಯವಿಲ್ಲದೆ ನೋವನ್ನು ತಡೆದುಕೊಳ್ಳುವುದು ಕಷ್ಟಸಾಧ್ಯ. ಕೆಲವು ಎಂಡೋಮೆಟ್ರಿಯೋಸಿಸ್ ನಿಂದ ಬಾಧಿತ ಮಹಿಳೆರಿಗಂತೂ ನೋವುನಿವಾರಕ ಮಾತ್ರೆಗಳೂ ಸಾಕಾಗದೆ, ಪ್ರತಿ ಬಾರಿ ಮುಟ್ಟಾದಾಗ ಆಸ್ಪತ್ರೆಗೆ ಹೋಗಿ ನೋವುನಿವಾರಕ ಚುಚ್ಚುಮದ್ದು (ಇಂಜೆಕ್ಷನ್) ತಗೆದುಕೊಳ್ಳುವ ಅಗತ್ಯ ಇರುತ್ತದೆ.

ಎಂಡೋಮೆಟ್ರಿಯೋಸಿಸ್ ನ ನೋವು ಕೇವಲ ಮುಟ್ಟಿನ ದಿನಗಳಲ್ಲಿ ಮಾತ್ರವಲ್ಲದೆ, ಮುಟ್ಟಾಗುವುದಕ್ಕಿಂತ 4-5 ದಿನಗಳು ಮುಂಚಿತವಾಗಿ ಹಾಗೂ ಮುಟ್ಟದ ನಂತರದ 4-5 ದಿನಗಳವರೆಗೂ ಇರುತ್ತದೆ. ಅಂಡೋತ್ಪತ್ತಿಯ (ovulation) ಸಮಯದಲ್ಲೂ ಕೂಡ ಎಂಡೋಮೆಟ್ರಿಯೋಸಿಸ್ ಭಾದಿತ ಮಹಿಳೆಯರು ಅತ್ಯಂತ ತೀವ್ರ ನೋವನ್ನು ಅನುಭವಿಸುತ್ತಾರೆ.
ಆರಂಭದಲ್ಲಿ ಕೇವಲ ಮುಟ್ಟಿನ ದಿನಗಳು ಹಾಗೂ ಮುಟ್ಟಿನ ಆಸು ಪಾಸು ದಿನಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ನೋವು ಕ್ರಮೇಣವಾಗಿ ಕಾಲಕಳೆದಂತೆ (chronic endometriosis) ಅಂದರೆ ಕೆಲವು ವರ್ಷಗಳಲ್ಲಿ ಪ್ರತಿನಿತ್ಯವೂ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ವೈದ್ಯಕೀಯವಾಗಿ chronic pelvic pain ಎಂದು ಕರೆಯುತ್ತಾರೆ.
ಎಂಡೋಮೆಟ್ರಿಯೋಸಿಸ್ ನ ನೋವಿನ ತೀವ್ರತೆಯು, ಮಹಿಳೆಯರು ದಿನನಿತ್ಯದ ಮನೆ ಕಾರ್ಯಗಳನ್ನು ನಿಭಾಯಿಸಲಾಗದೆ ಸದಾಕಾಲ ಹಾಸಿಗೆಯಲ್ಲಿ ಮಲಗಿಯೇ ಇರಬೇಕಾದಂತೆ ಪರಿಸ್ಥಿತಿ ಉಂಟುಮಾಡಿ ಮಾನಸಿಕವಾಗಿಯೂ, ಶರೀರಿಕವಾಗಿಯೂ ಬಳಲುವಂತೆ ಮಾಡುತ್ತದೆ. ಹಾಗೂ ವೃತ್ತಿಪರ ಕೆಲಸಕ್ಕಾಗಿ ಕಚೇರಿಗಳಿಗೆ ತೆರಳಲಾಗದ ಸುಸ್ತು ಅಥವಾ ಪ್ರತಿ ಬಾರಿ ಮುಟ್ಟಾದಾಗ ನೋವು ನಿವಾರಣೆಗಾಗಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿಯಿಂದಾಗಿ, ಆರ್ಥಿಕವಾಗಿಯೂ ಜರ್ಜರಿತವಾಗಿಸುತ್ತದೆ. ಈ ಸಮಸ್ಯೆಯಿಂದ ಮಹಿಳೆಗೆ ಯಾವುದೇ ಚಟುವಟಿಕೆಯಿಂದ ಓಡಾಡಲು ಸಾಧ್ಯವಾಗಲ್ಲ.
ಡಾ ಶೆಫಾಲಿಕ ಸ್ ಬಿ, (ಕನ್ಸಲ್ಟೆಂಟ್ - ಮಿನಿಮಲ್ಲಿ ಇನ್ವೆಸಿವ್ ಗೈನೆಕೊಲೋಜಿ, ಮಣಿಪಾಲ ಆಸ್ಪತ್ರೆ ಯಶವಂತಪುರ) ಇವರು ಈ ರೋಗದ ಕುರಿತು ಹೀಗೆ ವಿವರಿಸಿದ್ದಾರೆ "ಎಂಡೋಮೆಟ್ರಿಯೋಸಿಸ್ ತೀವ್ರವಾದ ನೋವು ಉಂಟುಮಾಡುವಂತಹ ಸ್ತ್ರೀರೋಗ ಸ್ಥಿತಿಯಾಗಿದೆ. ಗರ್ಭಕೋಶದ ಒಳಪದರಿನ ಜೀವಕೋಶಗಳು (ಸೆಲ್ಸ್) ಗರ್ಭಕೋಶದ ಆಚೆ ಅಂದರೆ ಅಂಡಾಶಯದಲ್ಲಿ ಹಾಗೂ ಅದರ ಅಕ್ಕಪಕ್ಕದ ಅಂಗಾಂಗಗಳಲ್ಲಿ ಕಾಣಿಸಿಕೊಂಡು ಪ್ರತಿ ತಿಂಗಳು ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಮತ್ತು ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಕಿಬ್ಬೊಟ್ಟೆ, ಮೂತ್ರನಾಳಗಳು, ಗುದನಾಳ, ಮುಂತಾದ ಅಂಡಾಶಯದ ಹಾಗೂ ಅದರ ಅಕ್ಕಪಕ್ಕದ ಅಂಗಾಂಗಗಳಲ್ಲಿ ತೀವ್ರವಾದ ನೋವು ಉಲ್ಭಣವಾಗುವುದಕ್ಕೆ ವೈದ್ಯಕೀಯವಾಗಿ ಎಂಡೋಮೆಟ್ರಿಯೋಸಿಸ್ ಎನ್ನಲಾಗುತ್ತದೆ".
ಎಂಡೋಮೆಟ್ರಿಯೋಸಿಸ್ ಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪ್ರಾರಂಭ ಮಾಡದಿದ್ದಲ್ಲಿ, ದೀರ್ಘಕಾಲದ ಎಂಡೋಮೆಟ್ರಿಯೋಯ್ಸ್ (chronic endometriosis), ಅಥವಾ ತೀವ್ರವಾದ ಎಂಡೋಮೆಟ್ರಿಯೋಯ್ಸ್ (severe endometriosis) ಪ್ರಕರಣಗಳಲ್ಲಿ ಮಹಿಳೆಯರಿಗೆ ಗರ್ಭಧಾರಣೆಯಲ್ಲೂ ತೊಂದರೆಗಳು ಉಂಟಾಗಬಹುದು. ಆದಕಾರಣ ಆರಂಭದ ಹಂತದಲ್ಲಿಯೇ ಎಂಡೋಮೆಟ್ರಿಯೋಸಿಸ್ ನ ರೋಗನಿರ್ಣಯ (diagnosis) ಮಾಡುವುದು ತುಂಬ ಅಗತ್ಯ.
ಸುಧಾರಿತ ಚಿಕಿತ್ಸಾ ಕ್ರಮಗಳು ಈಗ ಲಭ್ಯವಿರುವುದರಿಂದ ನೂತನ ಸ್ಕ್ಯಾನಿಂಗ್ ವಿಧಾನಗಳ ಮೂಲಕ ಎಂಡೋಮೆಟ್ರಿಯೋಸಿಸ್ ನ ರೋಗನಿರ್ಣಯ ಈಗ ಸರಳವಾಗಿದೆ. ಸೂಕ್ತವಾದ ಚಿಕಿತ್ಸೆ ಇಂದ ಎಂಡೋಮೆಟ್ರಿಯೋಸಿಸ್ ನ ಬೆಳವಣಿಗೆ (progression) ಮತ್ತು ರೋಗಲಕ್ಷಣಗಳ ತೀವ್ರತೆಯನ್ನು ತಡೆಯಬಹುದಾಗಿದೆ. ಮುಟ್ಟಿನ ಸಮಯದಲ್ಲಿ ತೀವ್ರವಾದ ಕಿಬ್ಬೊಟ್ಟೆ ನೋವು ಹಾಗೂ ಸೆಳೆತ, ತೀವ್ರ ರಕ್ತಸ್ರಾವ, ಅಥವಾ ಅಕಾಲಿಕ ಮುಟ್ಟು, (ಅಂದರೆ ಎರಡು ಮುಟ್ಟಿನ ದಿನಗಳ ಮಧ್ಯ ರಕ್ತಸ್ರಾವ) ಇಂತಹ ರೋಗಲಕ್ಷಣಗಳನ್ನು ಕಡೆಗಣಿಸದೆ, ಶೀಘ್ರವಾಗಿ ಸ್ತ್ರೀರೋಗ ತಜ್ಞರನ್ನು ಭೇಟಿಯಾಗುವುದು ಅನಿವಾರ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


