Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಭಾರತಕ್ಕೆ ಕಂಚು ತಂದ ಕುಸ್ತಿ ಪಟು ಅಮನ್ ಸೆಹ್ರಾವತ್ 10 ಗಂಟೆಯೊಳಗೆ 4.6 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ?
ವಿನೇಶ್ ಫೋಗಟ್ ಬರಿ 100ಗ್ರಾಂ ತೂಕ ಹೆಚ್ಚಳದಿಂದಾಗಿ ಚಿನ್ನ ಅಥವಾ ಬೆಳ್ಳಿ ಗೆಲ್ಲುವ ಅವಕಾಶ ತಪ್ಪಿ ಹೋಗಿದ್ದಕ್ಕೆ ಇಡೀ ದೇಶವೇ ಮರುಗಿದೆ, ಇಂಥದ್ದೊಂದು ಘಟನೆ ಈ ಮೊದಲು ಕೇಳಿರಲಿಲ್ಲ, ಸೆಮಿಫೈನಲ್‌ನಲ್ಲಿ ಸರಿಯಾಗಿದ್ದ ತೂಕ ಅದ್ಹೇಗೆ ಫೈನಲ್ ದಿನ ಹೆಚ್ಚಾಯ್ತು ಎಂಬ ಪ್ರಶ್ನೆ ಮೂಡುತ್ತದೆ, ಆದರೆ ಕುಸ್ತಿಪಟುಗಳಿಗೆ ಗೊತ್ತು ಈ ರೀತಿಯಾಗುವುದು ಸಾಮಾನ್ಯ ಎಂದು. ಏಕೆಂದರೆ ಇಂಥದ್ದೇ ಸಂಗತಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚು ತಂದುಕೊಟ್ಟ ಅಮನ್ ಸೆಹ್ರಾವತ್ ಕ್ರೀಡಾಪಟುವಿಗೆ ಅನುಭವಾಗಿದೆ.

ಒಂದೇ ಬಾರಿಗೆ 4.6 ಕೆಜಿ ತೂಕ ಹೆಚ್ಚಾಗಿತ್ತು
ಅಮನ್ ಸೆಹ್ರಾವತ್ 57 ಕೆಜಿ ಕೆಟಗರಿಯಲ್ಲಿ ಸ್ಪರ್ಧಿಸಿದ್ದರು, ಆದರೆ ಸೆಮಿಪೈನಲ್ ಒಂದು ದಿನ ಇರುವಾಗ ನೋಡಿದರೆ ಅವರ ಮೈ ತೂಕ 4.6 ಕೆಜಿ ಹೆಚ್ಚಾಗಿತ್ತು, ಅಷ್ಟೂ ತೂಕವನ್ನು ಒಂದೇ ದಿನದಲ್ಲಿ ಇಳಿಸಬೇಕಾಗಿತ್ತು. ವಿನೇಶ್ ಫೋಗಟ್ ಮೈ ತೂಕ 2 ಕೆಜಿ ಹೆಚ್ಚಾಗಿ ರಾತ್ರಿಪೂರ್ತಿ ನಾನಾ ಕಸರತ್ತು ಮಾಡಿ 50.1 ಕೆಜಿ ತೂಕಕ್ಕೆ ಬಂದಿದ್ದರು, ಆದರೆ 100 ಗ್ರಾಂ ಹೆಚ್ಚಾಗಿತ್ತು, ಅದನ್ನು ಇಳಿಸಿಕೊಳ್ಳಲು ಸಾಧ್ಯವಾಗದೇ ಇರುವ ಕಾರಣ ಅವರು ಫೈನಲ್‌ಗೆ ಸ್ಪರ್ಧಿಸುವ ಸುವರ್ಣಾವಕಾಶ ಕಳೆದುಕೊಂಡಿದ್ದರು. ಅದೇ ರೀತಿ ವಿನೇಶ್ ಸೆಹ್ರಾವತ್ 4.6 ಕೆಜಿ ತೂಕ ಹೆಚ್ಚಾಗಿದ್ದರು, ಆದರೆ 10 ಗಂಟೆಯ ಒಳಗಾಗಿ 4.5 ಕೆಜಿ ಇಳಿಸಿಕೊಂಡು ಭಾರತಕ್ಕೆ ಕಂಚು ಪದಕ ತಂದುಕೊಟ್ಟಿದ್ದಾರೆ. ಇವರ ಮೂಲಕ ಭಾರತಕ್ಕೆ 6ನೇ ಪದಕ ಗೆಲ್ಲಲು ಸಾಧ್ಯವಾಗಿದೆ.
ಹತ್ತೇ ಗಂಟೆಯೊಳಗೆ 4.6 ಕೆಜಿ ಮೈ ತೂಕ ಕಳೆದುಕೊಳ್ಳಬೇಕಾಗಿತ್ತು
ನಾವೆಲ್ಲಾ ಒಂದು ಕೆಜಿ ಮೈ ತೂಕ ಇಳಿಸಲು ಎಷ್ಟೊಂದು ಕಷ್ಟಪಡುತ್ತೇವೆ, ಆದರೆ ಕೆಲವೇ ಗಂಟೆಯೊಳಗಡೆ ಕೆಜಿಗಟ್ಟಲೆ ಮೈ ತೂಕ ಕಡಿಮೆಯಾಗಬೇಕೆಂದರೆ ಅವರು ಎಷ್ಟೊಂದು ಶ್ರಮ ಹಾಕಬೇಕು, ನಮ್ಮಿಂದ ಊಹಿಸಲೂ ಅಸಾಧ್ಯ. ಆದರೆ ಅಮನ್ 4.5 ಕೆಜಿ ಮೈ ತೂಕ ಇಳಿಸಿಕೊಂಡಿದ್ದಾರೆ, ಇಷ್ಟೆಲ್ಲಾ ಶ್ರಮ ಹಾಕಿ ದೇಶಕ್ಕೆ ಕಂಚು ತಂದು ಕೊಟ್ಟಿರುವ ಇವರ ಶ್ರಮವನ್ನು ಎಷ್ಟು ಹೊಗಳಿದರೂ ಸಾಲದು.
ಇದ್ದಕ್ಕಿದ್ದಂತೆ 4.6 ಕೆಜಿ ತೂಕ ಹೆಚ್ಚಾದಾಗ ಅವರ ಕೋಚ್‌ಗಳಾದ ಜಗಮಂದರ್ ಸಿಂಗ್ ಹಾಗೂ ವೀರೇಂದ್ರ ದಹಿಯಾ 10 ಗಂಟೆಯೊಳಗಡೆ ಅವರ ಮೈ ತೂಕ ಕಡಿಮೆ ಮಾಡುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ.
10 ಗಂಟೆಯೊಳಗಡೆ ತೂಕ ಇಳಿಸಲು ಮಾಡಿದ ಕಸರತ್ತು ಏನು?
ಅವರಿಗೆ ಒಂದೂವರೆ ಗಂಟೆಯೊಳಗಡೆ ಮ್ಯಾಟ್ ಸೆಷನ್ ಮಾಡಿಸಲಾಯ್ತು
ಒಂದು ಗಂಟೆ ಬಿಸಿ ಬಿಸಿ ನೀರಿನಲ್ಲಿ ಸ್ನಾನ, ನಮಗೆ 10 ನಿಮಿಷ ಬಿಸಿ ನೀರು ಮೈಗೆ ಹಾಕಿದರೆ ಸುಸ್ತಾಗುತ್ತೇವೆ, ಆದರೆ ಇವರಿಗೆ ಒಂದು ಗಂಟೆ ಬಿಸಿ ನೀರು ಹಾಕಿದ್ದಾರೆ.
ನಂತರ ಜಿಮ್‌ನಲ್ಲಿ ವರ್ಕೌಟ್ ಮಾಡಿಸಿದ್ದಾರೆ, ನಿರಂತರ ಒಂದು ಗಂಟೆ ಥ್ರೆಡ್ ಮಿಲ್ ಮಾಡಿಸಿದ್ದಾರೆ. ಇಷ್ಟೆಲ್ಲಾ ಮಾಡಿದ್ದರು ಕೊನೆಯ ಹಂತದಲ್ಲಿ ಮತ್ತೆ 900 ಗ್ರಾಂ ತೂಕ ಹೆಚ್ಷಾಗಿತ್ತು, ನಂತರ ಮತ್ತೆ 15 ನಿಮಿಷದಲ್ಲಿ ತೂಕ ಕಳೆದುಕೊಂಡು 56.9 ಕೆಜಿ ತೂಕಕ್ಕೆ ಬಂದಿದ್ದು ಸೆಮಿಫೈನಲ್‌ಗೆ ಅರ್ಹರಾಗಿದ್ದರು.
ಒಂದೇ ದಿನದಲ್ಲಿ ಮೈ ತೂಕ ಕಡಿಮೆ ಮಾಡುವುದು ಆರೋಗ್ಯಕ್ಕೂ ಒಳ್ಳೆಯದಲ್ಲ
ಹೌದು ಒಂದೇ ದಿನದಲ್ಲಿ ಮೈ ತೂಕ ಕಡಿಮೆ ಮಾಡಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಅವರು ಕ್ರೀಡಾಪಟುಗಳು ಪ್ರತಿದಿನ ಸಾಕಷ್ಟು ವರ್ಕೌಟ್ ಮಾಡುತ್ತಾರೆ, ಹಾಗಾಗಿ ಅವರ ದೇಹಕ್ಕೆ ಕಠಿಣ ವರ್ಕೌಟ್ ತಡೆದುಕೊಳ್ಳುತ್ತದೆ
ಅಲ್ಲದೆ ಪ್ರತಿ ಗಂಟೆಗೊಮ್ಮೆ ಅವರ ಬಿಸಿ, ಎದೆ ಬಡಿತ ಎಲ್ಲಾ ಪರೀಕ್ಷೆ ಮಾಡಲಾಗುವುದು. ಹಾಗಾಗಿ ನೀವು ಒಂದೇ ದಿನದಲ್ಲಿ ತೂಕ ಇಳಿಸಿಕೊಳ್ಳುವ ಪ್ರಯತ್ನ ಮಾಡಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
