Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಬಾಯಿಯ ವಾಸನೆಯಿಂದ ಮುಜುಗರ ಅನುಭವಿಸಿದ್ದೀರಾ..? ಇಲ್ಲಿದೆ ಸಿಂಪಲ್ ಪರಿಹಾರ
ಬಹುಶಃ ಇದು ನಮ್ಮ ಗಮನಕ್ಕೂ ಬಂದಿರುತ್ತದೆ ಏನೆಂದರೆ ನಮ್ಮ ಬಾಯಿಯಿಂದ ಕೆಟ್ಟ ವಾಸನೆ ಬರುವುದು. ಹೌದು ನಮ್ಮ ಬಾಯಿಯಿಂದ ದುರ್ವಾಸನೆ ಬರುವುದು ಸಹಜ. ಏಕೆಂದರೆ ನಾವು ಆಹಾರ ಸೇವಿಸುತ್ತಿರುತ್ತೇವೆ. ಪ್ರತಿ ಕ್ಷಣ ಬಾಯಲ್ಲಿ ಏನಾದರು ಹಾಕಿರುತ್ತೇವೆ. ಹಲ್ಲುಜ್ಜಿದರು ಸಹ ಈ ವಾಸನೆ ಇರುವುದು ಸಹಜ. ಇದು ಕೆಲವೊಮ್ಮೆ ಮುಜುಗರ ತರುವಂತಹ ಪರಿಸ್ಥಿತಿಯನ್ನು ತಂದೊಡ್ಡುತ್ತದೆ.
ಬಾಯಿಯ ವಾಸನೆ ಬರಲು ಹಲವಾರು ರೀತಿಯ ಕಾರಣಗಳು ಇವೆ. ಇದರಲ್ಲಿ ಪ್ರಮುಖವಾಗಿ ಘಾಟು ಬರುವ ಆಹಾರ ಸೇವನೆ, ವೈದ್ಯಕೀಯ ಸ್ಥಿತಿ, ಒಸಡಿನ ಕಾಯಿಲೆ, ಧೂಮಪಾನ ಮತ್ತು ಒಣಗಿದ ಬಾಯಿ. ಇದು ಬಾಯಿ ವಾಸನೆಗೆ ಕೆಲವೊಂದು ಪ್ರಮುಖ ಕಾರಣಗಳಾಗಿವೆ.

ಹಲ್ಲುಗಳು ಮತ್ತು ನಾಲಗೆಯ ಕೆಳಗಡೆ ಬ್ಯಾಕ್ಟೀರಿಯಾ ಜಮೆಯಾಗುವುದೇ ಬಾಯಿ ವಾಸನೆ ಬರಲು ಪ್ರಮುಖ ಕಾರಣವಾಗಿದೆ. ಬಾಯಿಯ ಆರೋಗ್ಯ ಕಾಪಾಡಿದರೆ ಆಗ ವಾಸನೆ ತಡೆಗಟ್ಟಬಹುದು. ಇಲ್ಲಿ ಬಾಯಿ ವಾಸನೆ ತಡೆಯಲು ಕೆಲವೊಂದು ಮನೆಮದ್ದುಗಳನ್ನು ನೀಡಲಾಗಿದೆ. ಅವುಗಳು ಯಾವುವು ಎಂಬುದನ್ನು ನಾವಿಂದು ನೋಡೋಣ.
1. ಎರಡು ಅಥವಾ ಮೂರು ಬಾರಿ ಹಲ್ಲುಜ್ಜುವುದು
ನೀವು ದಿನಕ್ಕೆ ಒಂದು ಬಾರಿ ಮಾತ್ರ ಹಲ್ಲು ಉಜ್ಜುವ ಅಭ್ಯಾಸ ಹೊಂದಿದ್ದರೆ ಅದನ್ನು ಎರಡು ಅಥವಾ ಮೂರು ಬಾರಿ ಮಾಡಲು ಪ್ರಯತ್ನಿಸಿ. ಹೀಗಾದಾಗ ನೀವು ಸೇವಿಸಿದ ಆಹಾರ ಹಲ್ಲುಗಳ ಸಂದಿ ಉಳಿಯುವುದು ತಪ್ಪುತ್ತದೆ ಇದರಿಂದ ಕೆಟ್ಟವಾಸನೆ ಬರುವುದಿಲ್ಲ.
2. ಜೀರಿಗೆ
ಜೀರಿಗೆಯು ಬಾಯಿ ವಾಸನೆ ಬರದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಇದು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದು. ಊಟದ ಬಳಿಕ ಒಂದು ಚಮಚ ಜೀರಿಗೆ ಸೇವನೆ ಮಾಡಿದರೆ ಅದರಿಂದ ಬಾಯಿ ವಾಸನೆ ಕಡಿಮೆಯಾಗುವುದು. ಒಂದು ಕಪ್ ಜೀರಿಗೆ ಚಹಾ ಕೂಡ ಕುಡಿಯಬಹುದು.
3. ಲವಂಗ
ಲವಂಗವು ಬಾಯಿಗೆ ತಾಜಾತನ ನೀಡುವುದು ಮತ್ತು ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಬಾಯಿಯ ವಾಸನೆ ನಿವಾರಣೆ ಮಾಡಲು ಪರಿಣಾಮಕಾರಿ. ಊಟದ ಬಳಿಕ ಕೆಲವು ಎಸಲು ಲವಂಗ ಜಗಿಯಿರಿ. ಲವಂಗ ಚಹಾ ಕುಡಿಯಬಹುದು.
4. ಆ್ಯಪಲ್ ಸೀಡರ್ ವಿನೇಗರ್
ಆ್ಯಪಲ್ ಸೀಡರ್ ವಿನೇಗರ್ ಬಾಯಿಯಿಂದ ಬರುವ ದುರ್ಗಂಧಕ್ಕೆ ಒಳ್ಳೆಯ ಪರಿಣಾಮಕಾರಿ ಔಷಧಿ. ಇದು ಪಿಎಚ್ ಸಮತೋಲನವನ್ನು ಕಾಪಾಡುವ ಕಾರಣದಿಂದಾಗಿ ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ನೆರವಾಗುವುದು. ಒಂದು ಲೋಟ ನೀರಿಗೆ ಆ್ಯಪಲ್ ಸೀಡರ್ ವಿನೇಗರ್ ಹಾಕಿಕೊಂಡು ಬಾಯಿ ಮುಕ್ಕಳಿಸಿದರೆ ದುರ್ಗಂಧ ಮಾಯವಾಗುವುದು.
5. ದಾಲ್ಚಿನ್ನಿ
ದಾಲ್ಚಿನ್ನಿಯು ಬಾಯಿಯ ವಾಸನೆ ತಡೆಯುವುದು. ಯಾಕೆಂದರೆ ಇದರಲ್ಲಿ ಸಿನ್ನಾಮಿಕ್ ಅಲ್ಡಿಹೈಡ್ ಇದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಇದು ಕಡಿಮೆ ಮಾಡುವುದು. ಒಂದು ಚಮಚ ದಾಲ್ಚಿನಿಯ ಹುಡಿಯನ್ನು ಕುದಿಯುವ ನೀರಿಗೆ ಹಾಕಿ. ಇದಕ್ಕೆ ಕರಿಬೇವಿನ ಸೊಪ್ಪು ಮತ್ತು ಏಲಕ್ಕಿ ಹಾಕಿ.ನೀರನ್ನು ಸೋಸಿಕೊಂಡು ಬಾಯಿ ಮುಕ್ಕಳಿಸಿಕೊಳ್ಳಲು ಈ ನೀರು ಬಳಸಿ.
6. ಲಿಂಬೆ ಜ್ಯೂಸ್
ಲಿಂಬೆಯಲ್ಲಿ ಇರುವಂತಹ ಆಮ್ಲೀಯ ಗುಣಗಳು ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಆಗದಂತೆ ತಡೆಯುತ್ತದೆ. ಒಂದು ಚಮಚ ಲಿಂಬೆರಸವನ್ನು ಒಂದು ಲೋಟ ನೀರಿಗೆ ಹಾಕಿಕೊಂಡು ಅದರಿಂದ ಬಾಯಿ ಮುಕ್ಕಳಿಸಿ.
7. ಚೂಯಿಂಗ್ ಗಮ್
ಸಕ್ಕರೆ ಇಲ್ಲದೆ ಇರುವ ಚೂಯಿಂಗ್ ಗಮ್ ಕೆಟ್ಟ ವಾಸನೆ ನಿವಾರಣೆ ಮಾಡುವುದು. ಇದು ಬಾಯಿಯಲ್ಲಿ ಜೊಲ್ಲುರಸವು ಆರೋಗ್ಯಕಾರಿಯಾಗಿ ಹರಿಯಲು ನೆರವಾಗುವುದು. ಪುದೀನಾ ಇರುವಂತಹ ಚೂಯಿಂಗ್ ಗಮ್ ಬಳಸಿಕೊಳ್ಳಿ.
8. ಪಾರ್ಸ್ಲಿ
ಪಾರ್ಸ್ಲಿ ಬಾಯಿಯ ದುರ್ಗಂಧ ನಿವಾರಣೆಗೆ ಒಳ್ಳೆಯ ಮನೆಮದ್ದು. ಇದರಲ್ಲಿ ಇರುವ ಕ್ಲೋರೊಫಿಲ್ ಬ್ಯಾಕ್ಟೀರಿಯಾ ವಿರೋಧಿಯಂತೆ ಕೆಲಸ ಮಾಡುವುದು ಮತ್ತು ಬಾಯಿಯ ವಾಸನೆ ನಿವಾರಿಸಲು ನೆರವಾಗುವುದು. ಪಾರ್ಸ್ಲಿಯ ತಾಜಾ ಎಲೆಗಳನ್ನು ಜಗಿಯಿರಿ.
9. ಚಹಾ ಮರದ ಎಣ್ಣೆ
ಚಹಾ ಮರದ ಎಣ್ಣೆಯಲ್ಲಿ ನಂಜುನಿರೋಧಕ ಗುಣವು ಸಮೃದ್ಧವಾಗಿದೆ. ಇದು ಬಾಯಿಯಲ್ಲಿ ಸೋಂಕು ನಿವಾರಕವಾಗಿ ಕೆಲಸ ಮಾಡುವುದು. ಕೆಲವು ಹನಿ ಚಹಾ ಮರದ ಎಣ್ಣೆಯನ್ನು ಪುದೀನಾ ಎಣ್ಣೆ ಮತ್ತು ಲಿಂಬೆ ಎಣ್ಣೆ ಜತೆಗೆ ಒಂದು ಲೋಟ ನೀರಿಗೆ ಹಾಕಿ. ಈ ಮಿಶ್ರಣವನ್ನು ಮೌಥ್ ವಾಶ್ ಹಾಗೆ ಬಳಸಿಕೊಳ್ಳಿ.
10. ಉಪ್ಪು ನೀರು
ಉಪ್ಪು ನೀರು ಬಾಯಿಯ ಪಿಎಚ್ ಸಮತೋಲನ ತಟಸ್ಥಗೊಳಿಸುವುದು ಮತ್ತು ಶುದ್ಧೀಕರಿಸುವುದು. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಒಂದು ಚಮಚ ಉಪ್ಪನ್ನು ಉಗುರುಬೆಚ್ಚಗಿನ ನೀರಿಗೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಕಲಸಿಕೊಂಡು ಬೆಳಗ್ಗೆ ಬಾಯಿ ಮುಕ್ಕಳಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications