Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
ಕ್ಯಾನ್ಸರ್ ಕೋಶ ನಾಶ ಮಾಡುವ 4 ಆಹಾರ ಇದು: ಯಾವುದೆಲ್ಲಾ ಗೊತ್ತಾ?
ವಿಶ್ವದಲ್ಲಿ ಅತೀ ಹೆಚ್ಚು ಮಂದಿ ಯಾವುದಾದರು ಅನಾರೋಗ್ಯದಿಂದ ಬಳಲುತ್ತಿದ್ದರೆ, ಹಾಗೆ ಅತಿ ಹೆಚ್ಚು ಸಾವಿನ ಪ್ರಮಾಣ ಹೊಂದಿರುವುದು ಕ್ಯಾನ್ಸರ್. ಅದ್ರಲ್ಲೂ ಚೀನಾ, ಅಮೆರಿಕಾ, ಭಾರತ, ಜಪಾನ್‌ನಲ್ಲಿ ಅತ್ಯಧಿಕ ಕ್ಯಾನ್ಸರ್ ರೋಗಿಗಳಿದ್ದರೆ ಅದರಲ್ಲಿ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿರುವವರು ಕೂಡ ಹೆಚ್ಚಾಗಿದ್ದಾರೆ. ಭಾರತದಲ್ಲಿ ಈ ಪ್ರಮಾಣ ಏರಿಕೆಯಾಗುತ್ತಲೇ ಇದೆ.
ವಾಯುಮಾಲಿನ್ಯದಿಂದ ಹಿಡಿದು ನಮ್ಮ ಜೀವನ ಶೈಲಿ, ಆಹಾರ ಕ್ರಮಗಳು ಕ್ಯಾನ್ಸರ್ ಅಪಾಯ ಹೆಚ್ಚಿಸಲಿವೆ ಎಂಬುದು ನಿಮಗೂ ತಿಳಿದಿದೆ. ಇನ್ನು ಕ್ಯಾನ್ಸರ್ ತಡೆಗಾಗಿ ಮುನ್ನೆಚ್ಚರಿಕಾ ಕ್ರಮ ಬಹಳ ಮುಖ್ಯವಾಗುತ್ತದೆ. ಹಾಗೆ ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯುವುದು ಕೂಡ ಜೀವ ಹಾನಿ ಪ್ರಮಾಣವನ್ನು ಕಡಿಮೆ ಮಾಡಲಿದೆ.

ಆದ್ರೆ ಕ್ಯಾನ್ಸರ್ ಯಾವ ಕಾರಣದಿಂದ ಉಂಟಾಗಲಿದೆ ಎಂಬುದನ್ನು ಪತ್ತೆ ಮಾಡುವುದು ಬಹಳ ಕಷ್ಟವಾಗಲಿದೆ. ಕುಟುಂಬದಲ್ಲಿ ಯಾರಿಗಾದರು ಕ್ಯಾನ್ಸರ್ ಹೊಂದಿದ್ದರೆ ಆ ಕುಟುಂಬದಲ್ಲಿ ಕ್ಯಾನ್ಸರ್ ತಗುಲುವ ಅಪಾಯ ಹೆಚ್ಚಾಗಿರುತ್ತದೆ. ಹಾಗೆ ಹತ್ತು ಹಲವು ಬಾಹ್ಯ ಕಾರಣಗಳು ಕೂಡ ಇವೆ. ಇನ್ನು ಕ್ಯಾನ್ಸರ್‌ಗೆ ತುತ್ತಾದರೆ ಅದರ ಚಕಿತ್ಸೆ ಕೂಡ ಯಾತನೆ ತರಲಿದೆ, ಕ್ಯಾನ್ಸರ್ ಚಿಕಿತ್ಸೆಯೂ ಕೂಡ ದುಬಾರಿ ಜೊತೆಗೆ ಯಾತನಮಯವಾಗಿರಲಿದೆ.
ಆದ್ರೆ ಕೆಲವೊಂದು ಬದಲಾವಣೆಗಳನ್ನ ನಾವು ಮಾಡಿಕೊಂಡರೆ ಸಾಕು ಕ್ಯಾನ್ಸರ್ ನಮ್ಮ ಹತ್ತಿರವೂ ಸುಳಿಯೋದಿಲ್ಲ. ಅದ್ರಲ್ಲೂ ಕೆಲವು ತರಕಾರಿಗಳ ಸೇವೆನೆ ಆಹಾರ ಸೇವನೆ ಮಾಡೋದ್ರಿಂದ ಕ್ಯಾನ್ಸರ್ ಅನ್ನು ಕೂಡ ದೂರ ಮಾಡಬಹುದು. ಅಥವಾ ಈ ಆಹಾರಗಳು ಕ್ಯಾನ್ಸರ್ ಕೋಶಗಳನ್ನು ನಾಶ ಮಾಡುವಂತಹ ಶಕ್ತಿಯನ್ನು ಕೂಡ ಹೊಂದಿವೆ. ಹಾಗಾದ್ರೆ ಯಾವ ಆಹಾರ ಸೇವನೆಯು ಕ್ಯಾನ್ಸರ್ ಕೋಶಗಳ ಸಾಯಿಸಲಿದೆ ಎಂಬುದನ್ನು ತಿಳಿದುಕೊಳ್ಳಿ.
ಕ್ರೂಸಿಫೆರಸ್ ತರಕಾರಿಗಳು
ತರಕಾರಿಗಳಲ್ಲಿ ಹಲವು ರೀತಿಯ ಆರೋಗ್ಯಕರ ಅಂಶಗಳಿವೆ. ಅದ್ರಲ್ಲು ಎಲೆಕೋಸು, ಹೂಕೋಸು, ಬ್ರೊಕೊಲಿ, ಬ್ರಸೆಲ್ಸ್ ಮೊಗ್ಗುಗಳು, ಕೇಲ್, ಕ್ರೆಸ್, ಹಾರ್ಸ್‌ರಾಡಿಶ್, ಗಡ್ಡೆ ಕೋಸು, ಮರಗೆಣಸು, ಸಾಸಿವೆ, ಮೂಲಂಗಿ ಸೇರಿದಂತೆ ಕ್ರೂಸಿಫೆರಸ್ ತರಕಾರಿಗಳು ಅತ್ಯಂತ ಶಕ್ತಿಶಾಲಿ ಕ್ಯಾನ್ಸರ್ ವಿರೋಧಿ ಆಹಾರಗಳಾಗಿವೆ. ಈ ತರಕಾರಿಗಳು ಗ್ಲುಕೋಸಿನೋಲೇಟ್‌ಗಳಿಂದ ತುಂಬಿರುತ್ತವೆ, ಇದು ಕ್ಯಾನ್ಸರ್ ಕೋಶಗಳು ಬೆಳೆಯದಂತೆ ಕಾಪಾಡಲಿದೆ. ಹಾಗೆ ಇವು ಹೆಚ್ಚಿನ ಫೈಬರ್, ವಿಟಮಿನ್, ಬೀಟಾ ಕ್ಯಾರೋಟಿನ್ ಅಂಶ ಹೊಂದಿವೆ. ಇದು ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮವಾಗಿವೆ.
ಅರಿಶಿನ
ಅರಿಶಿಣ ನಾವು ನಿತ್ಯವು ಅಡುಗೆಯಲ್ಲಿ ಬಳಸುವಂತಹ ವಸ್ತು ಆಗಿರಲಿದೆ. ಇದರಲ್ಲಿನ ಕರ್ಕ್ಯೂಮಿನ್ ಅಂಶವು ಕ್ಯಾನ್ಸರ್ ತಡೆಗಟ್ಟುವಿಕೆಗೆ ಮತ್ತು ಚಿಕಿತ್ಸೆಗಾಗಿ ಹೆಚ್ಚು ಸಂಶೋಧಿಸಲ್ಪಟ್ಟ ನೈಸರ್ಗಿಕ ಪದಾರ್ಥಗಳಲ್ಲಿ ಒಂದಾಗಿದೆ. 1,300 ಕ್ಕೂ ಹೆಚ್ಚು ಅಧ್ಯಯನಗಳು (ಮಾನವರಲ್ಲಿ ಕ್ಲಿನಿಕಲ್ ಪ್ರಯೋಗಗಳು ಸೇರಿದಂತೆ), ಕರ್ಕ್ಯುಮಿನ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಾಶ ಮಾಡಲಿದೆ ಎಂದು ತಿಳಿದುಬಂದಿದೆ. ಕ್ಯಾನ್ಸರ್ ಲೆಟರ್ಸ್ (2015) ನಲ್ಲಿ ಪ್ರಕಟವಾದ ಅಧ್ಯಯನವು ಕರ್ಕ್ಯುಮಿನ್ ಉರಿಯೂತ ಮತ್ತು ಕ್ಯಾನ್ಸರ್ ಕೋಶಗಳ ಹರಡುವಿಕೆಗೆ ಕಾರಣವಾಗಿರುವ ಅಂಶಗಳನ್ನು ನಿರ್ಬಂಧಿಸಲಿದೆ ಎಂದು ತಿಳಿಸಲಾಗಿದೆ.
ವೈಲ್ಡ್ ಬೆರಿಗಳು
ಕಾಡುಗಳಲ್ಲಿ ಸಿಗುವಂತಹ ಅಥವಾ ನೈಸರ್ಗಿಕವಾಗಿ ಬೆಳೆದ ಬೆರಿಗಳು ಕ್ಯಾನ್ಸರ್ ತಡೆಯಲು ಸಹಕಾರಿಯಾಗಲಿವೆ. ಅದ್ರಲ್ಲೂ ಕ್ಯಾನ್ಬೆರಿಗಳು, ಚೆರಿಗಳು, ಹಾರ್ಥಾನ್, ಬ್ಲಾಕ್‌ಬೆರಿ, ನೇರಳೆ ಹಣ್ಣು, ರಾಸ್ಬೆರಿ, ಸ್ಟ್ರಾಬೆರಿ ಹಣ್ಣಗಳು ಕೂಡ ಕ್ಯಾನ್ಸರ್ ವಿರೋಧಿ ಗುಣಗಳ ಹೊಂದಿರುವ ಹಣ್ಣುಗಳಾಗಿವೆ. ಇವು ಸ್ವತಂತ್ರ ರಾಡಿಕಲ್‌ಗಳ ತಟಸ್ಥಗೊಳಿಸಲು ಹಾಗೆ ಉರಿಯೂತ ಕಡಿಮೆ ಮಾಡಲು ಜೀವ ಕೋಶಗಳಿಗೆ ಬೆಂಬಲ ನೀಡುವ ಅಂಶಗಳ ಒಳಗೊಂಡಿವೆ. ಇವುಗಳಲ್ಲಿ ಆಂಥೋಸಯಾನಿನ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಪಾಲಿಫಿನಾಲ್ ಅಂಶ ಕಂಡುಬರುತ್ತದೆ. ಇದು ಕ್ಯಾನ್ಸರ್ ನಿವಾರಕವಾಗಿ ಕೆಲಸ ಮಾಡಲಿದೆ.
ಬೆಳ್ಳುಳ್ಳಿ
ಬೆಳ್ಳುಳ್ಳಿಯು ಸಲ್ಫರ್ ಹೊಂದಿರುವ ಅಮೈನೋ ಆಮ್ಲಗಳು, ಗ್ಲುಟಾಥಿಯೋನ್ ಮತ್ತು ಸಿಸ್ಟೀನ್ ಸೇರಿದಂತೆ 200 ಕ್ಕೂ ಹೆಚ್ಚು ಜೈವಿಕವಾಗಿ ಕ್ರಿಯವಾಗಿರುವ ಸಂಯುಕ್ತಗಳ ಹೊಂದಿದೆ. ಇದು ಕ್ಯಾನ್ಸರ್ ರಚನೆ, ಬೆಳವಣಿಗೆ, ಮೆಟಾಸ್ಟಾಸಿಸ್ ವಿರುದ್ಧ ರಕ್ಷಣೆ ನೀಡಲಿದೆ. ನೈಟ್ರೋಸಮೈನ್‌ಗಳು ಮತ್ತು ಹೆಟೆರೊಸೈಕ್ಲಿಕ್ ಅಮೈನ್‌ಗಳ (HCAs) ರಚನೆಯನ್ನು ಪ್ರತಿಬಂಧಿಸುತ್ತದೆ.



Click it and Unblock the Notifications