Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಕ್ಯಾನ್ಸರ್‌ಗೆ ಕಾರಣವಾಗ್ತಿದೆ ಹೆಪಟೈಟಿಸ್ ಡಿ! ವಿಶ್ವ ಆರೋಗ್ಯ ಸಂಸ್ಥೆ ವರದಿ
ನೀವು ಹಲವರ ಬಾಯಲ್ಲಿ ಹೆಪಟೈಟಿಸ್ ಬಿ ಸಮಸ್ಯೆ ಕುರಿತು ಕೇಳಿರಬಹುದು. ಹೆಪಟೈಟಿಸ್ ಬಿ ಎಂಬುದು ವಿಶ್ವದಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಗಂಭೀರವಾದ ಪಿತ್ತಜನಕಾಂಗದ ಸೋಂಕು ಎನ್ನಬಹುದು. ಇದು ಯಕೃತ್ತಿನ ಮೇಲೆ ದಾಳಿ ಮಾಡಿ ಗಾಯಗೊಳಿಸುವ ಹೆಪಟೈಟಿಸ್ ಬಿ ವೈರಸ್‌ನಿಂದ ಉಂಟಾಗುತ್ತದೆ.
ವಿಶ್ವದಾದ್ಯಂತ ಸುಮಾರು 300 ಮಿಲಿಯನ್ ಜನರು ಈ ಹೆಪಟೈಟಿಸ್ ಬಿ ಸೋಂಕಿಗೆ ತುತ್ತಾಗಿ ಅದರೊಂದಿಗೆ ಬದುಕುವಂತಾಗಿದೆ. ಹಾಗೆ ಪ್ರತಿ ವರ್ಷ 1 ಮಿಲಿಯನ್ ಜನರು ಹೆಪಟೈಟಿಸ್ ಬಿ ಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ತಿಳಿದುಬಂದಿದೆ. ಹೆಪಟೈಟಿಸ್ ಬಿ ಸೋಂಕಿತ ರಕ್ತ ಅಥವಾ ಕೆಲವು ದೈಹಿಕ ದ್ರವಗಳ ನೇರ ಸಂಪರ್ಕದ ಮೂಲಕ ಹರಡುತ್ತದೆ.

ಅದ್ರಲ್ಲೂ ತಾಯಿ ಮತ್ತು ಮಗುವಿನ ನಡುವೆ ನಡೆಯುವ ರಕ್ತ ವಿನಿಮಯದಿಂದಾಗಿ, ಸೋಂಕಿತ ಗರ್ಭಿಣಿಯಿಂದ ಮಗುವಿಗೆ ಈ ವೈರಸ್ ಸಾಮಾನ್ಯವಾಗಿ ಹರಡುತ್ತದೆ. ಟೂತ್ ಬ್ರಷ್‌ಗಳು, ಉಗುರು ಕತ್ತರಿಸಲು ಬಳಸುವ ಕಟರ್‌ಗಳು, ದೇಹದ ಮೇಲೆ ಹಾಕುವ ಆಭರಣಗಳ ಮೂಲಕವು ಹರಡಬಹುದು. ಆದ್ರೆ ಈಗ ಹೆಪಟೈಟಿಸ್ ಬಿ ಬದಲಾಗಿ ಹೆಪಟೈಟಿಸ್ ಡಿ ಅಪಾಯ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಈಗ ಹೆಪಟೈಟಿಸ್ ಡಿ ವೈರಸ್ ಅನ್ನು ಕ್ಯಾನ್ಸರ್ ಜನಕ ಎಂದು ಘೋಷಿಸಿದೆ. ಇದು ಮಾರಕ ವೈರಸ್ ಆಗಿದ್ದು ಯಕೃತ್ತಿನ ಹಾನಿಗೆ ಇದು ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಇದು ಸಾಮಾನ್ಯವಾಗಿ ಐದು ತಿಳಿದಿರುವ ಹೆಪಟೈಟಿಸ್ ವೈರಸ್‌ಗಳಿಂದ ಉಂಟಾಗುತ್ತದೆ. A, B, C, D, ಮತ್ತು E. ಇವುಗಳಲ್ಲಿ ಹೆಪಟೈಟಿಸ್ ಬಿ, ಸಿ ಮತ್ತು ಡಿ ಮಾತ್ರ ದೀರ್ಘಕಾಲದ ಸೋಂಕುಗಳಿಗೆ ಕಾರಣವಾಗಬಹುದು.
ನೀವು ಹೆಪಟೈಟಿಸ್ ಬಿ ಸೋಂಕಿಗೆ ತುತ್ತಾದ ಬಳಿಕ ಹೆಪಟೈಟಿಸ್ ಡಿ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಎಂದು ತಿಳಿದುಬಂದಿದೆ. ಪ್ರತಿ 30 ಸೆಕೆಂಡುಗಳಿಗೊಮ್ಮೆ ಹೆಪಟೈಟಿಸ್ ಸಂಬಂಧಿತ ತೀವ್ರ ಯಕೃತ್ತಿನ ಕಾಯಿಲೆ ಅಥವಾ ಯಕೃತ್ತಿನ ಕ್ಯಾನ್ಸರ್‌ನಿಂದ ಸಾಯುತ್ತಾರೆ ಎಂದು WHO ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಹೆಪಟೈಟಿಸ್ ಡಿ ಎಂದರೇನು?
ಹೆಪಟೈಟಿಸ್ ಡಿ ಸೋಂಕು ತೀವ್ರ ಅಥವಾ ದೀರ್ಘಕಾಲದದ್ದಾಗಿರಬಹುದು. ತೀವ್ರವಾದ ಸೋಂಕಿನ ಲಕ್ಷಣಗಳು ತ್ವರಿತವಾಗಿ ಬರಬಹುದು ಮತ್ತು ಕೆಲವು ವಾರಗಳು ಅಥವಾ ತಿಂಗಳುಗಳವರೆಗೆ ಇದು ಕಾಡಬಹುದು. ಇದ್ರ ಲಕ್ಷಣಗಳು 6 ತಿಂಗಳಿಗೂ ಹೆಚ್ಚು ಕಾಲ ಇರಬಹುದು. ಅದ್ರಲ್ಲೂ ಈ ಹೆಪಟೈಟಿಸ್ ಬಿ ಮತ್ತು ಡಿ ಎರಡೂ ಸೋಂಕಿನ ಲಕ್ಷಣ ಒಂದೇ ಆಗಿರಲಿದೆ.
ಹೆಪಟೈಟಿಸ್ ಡಿಯ ಲಕ್ಷಣಗಳು
- ಹೆಚ್ಚಿನ ಜ್ವರ
- ಹೊಟ್ಟೆ ನೋವು
- ವಾಕರಿಕೆ ಮತ್ತು ವಾಂತಿ
- ಹಸಿವಾಗದೆ ಇರುವುದು
- ಮೂತ್ರದ ಬಣ್ಣ ಬದಲಾಗುವುದು
- ಕಣ್ಣು, ಚರ್ಮದ ಬಣ್ಣ ಹಳದಿಯಾಗುವುದು
ಹೆಪಟೈಟಿಸ್ ಡಿ ಕಾಣಿಸಿಕೊಳ್ಳಲು ಕಾರಣವೇನು?
ಈಗಾಗಲೆ ಹೆಪಟೈಟಿಸ್ ಬಿ ಸೋಂಕಿಗೆ ತುತ್ತಾಗಿದ್ದರೆ ಹೆಪಟೈಟಿಸ್ ಡಿ ಸೋಂಕು ಕಾಣಿಸಿಕೊಳ್ಳುವ ಅಪಾಯ ಹೆಚ್ಚಾಗುತ್ತದೆ. ಹೆಪಟೈಟಿಸ್ ಬಿ ವೈರಸ್ ಹೊಂದಿರುವ ವ್ಯಕ್ತಿಯ ಸಂಪರ್ಕದ ಮೂಲಕವೇ ಈ ಸೋಂಕು ಹರಡುವ ಅಪಾಯ ಹೆಚ್ಚು. ಸದ್ಯ ಇತ್ತೀಚಿಗೆ ಹೆಪಟೈಟಿಸ್ ಡಿ ಸೋಂಕಿಗೆ ತುತ್ತಾಗಿರುವವರ ಸಂಖ್ಯೆ ಕೂಡ ಅಧಿಕವಾಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
(ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ)



Click it and Unblock the Notifications