Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಎಂಥ ಉರಿ ಬಿಸಿಲು: ಮೈ ಉಷ್ಣಾಂಶ ಹೆಚ್ಚಾಗುವುದು ತಡೆಗಟ್ಟಲು ಸಿಂಪಲ್ ಟಿಪ್ಸ್
ಅಬ್ಬಾ ಎಂಥ ಉರಿ ಬಿಸಿಲ, ಬೇಸಿಗೆ ಶುರುವಾಗಿದೆಯಷ್ಟೇ, ಈಗಲೇ ಜನರಿಗೆ ಬಿಸಿಲಿನ ಧಗೆ ಸಹಿಸಲು ಸಾಧ್ಯವಾಗುತ್ತಿಲ್ಲ, ಇನ್ನು ಉಷ್ಣಾಂಶ ಅಧಿಕವಿರುವ ಸ್ಥಳಗಳಲ್ಲಿ ಅಂತೂ ಈ ವರ್ಷ ಉಷ್ಣಾಂಶ ಮತ್ತಷ್ಟು ಹೆಚ್ಚಾಗಿದೆ. ಮಧ್ಯಾಹ್ನ ಹೊತ್ತಿನಲ್ಲಿ ಸ್ವಲ್ಪ ಓಡಾಡಲು ಭಯ ಉಂಟಾಗುತ್ತೆ, ಅಷ್ಟೊಂದು ತೀವ್ರವಾಗಿದೆ ಬಿಸಿಲು. ಈ ಸಮಯದಲ್ಲಿ ನಾವು ಆರೋಗ್ಯದ ಕಡೆಗೆ ಗಮನಹರಿಸದಿದ್ದರೆ ಅನೃಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಈ ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಲು ಈ ಸಿಂಪಲ್ ವಿಷಯಗಳ ಕಡೆ ಗಮನಹರಿಸಿ:

ಸಾಕಷ್ಟು ನೀರು ಕುಡಿಯಿರಿ
ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯಿರಿ, ಎಳನೀರು, ಜ್ಯೂಸ್ ಅಂತ ಕುಡಿಯಿರಿ, ಇದರಿಂದ ದೇಹದಲ್ಲಿ ನೀರಿನಂಶ ಕಾಪಾಡಲು ತುಂಬಾನೇ ಸಹಕಾರಿ.
ಬೇಸಿಗೆಯಲ್ಲಿ ಸಡಿಲವಾದ ಕಾಟನ್ ಬಟ್ಟೆ ಧರಿಸಿ: ಬೇಸಿಗೆಯಲ್ಲಿ ನಾವು ಸಡಿಲವಾದ ಕಾಟನ್ ಬಟ್ಟೆ ಧರಿಸುವುದರಿಂದ ಅಷ್ಟೊಂದು ಸೆಕೆಯಾಗಲ್ಲ, ಮೈ ಬೆವರುವುದು, ಇದರಿಂದ ಉಂಟಾಗುವ ತುರಿಕೆ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
ತಣ್ಣೀರಿನ ಸ್ನಾನ: ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡಿ. ಇದರಿಂದ ಮೈ ಉಷ್ಣಾಂಶ ಕಡಿಮೆಯಾಗುವುದು.
ಬೇಸಿಗೆಯಲ್ಲಿ ಮಸಾಲೆ ಕಡಿಮೆ ಇರುವ ಆಹಾರ ಸೇವಿಸಿ: ಬೇಸಿಗೆಯಲ್ಲಿ ತುಂಬಾ ಮಸಾಲೆ ಇರುವ ಆಹಾರ ಸೇವನೆ ಒಳ್ಳೆಯದಲ್ಲ, ಇದು ಚಯಪಚಯ ಕ್ರಿಯೆಗೆ ತೊಂದರೆ ಉಂಟಾಗುವುದು. ಹೆಚ್ಚು ಮಸಾಲೆ ಪದಾರ್ಥ ಸೇವನೆ ಮಾಡುವುದರಿಂದ ಮತ್ತಷ್ಟುಸೆಕೆ ಅನಿಸುವುದು.
ಬಿಸಿಲಿನಲ್ಲಿ ಓಡಾಡುವಾಗ ಕೊಡೆ ಹಿಡಿದು ಓಡಾಡಿ: ಬಿಸಿಲಿನಲ್ಲಿ ಓಡಾಡುವಾಗ ನೀವು ಕೊಡೆ ಹಿಡಿದು ಓಡಾಡುವುದರಿಂದ ಹೀಟ್ ಸ್ಟ್ರೋಕ್‌ನಂಥ ಅಪಾಯ ತಡೆಗಟ್ಟಬಹುದು.
ಈ ಪಾನೀಯ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ:
ಮಜ್ಜಿಗೆ ಸೇವಿಸಿ: ಬೇಸಿಗೆಯಲ್ಲಿ ಮಜ್ಜಿಗೆಯನ್ನು ಸೇವಿಸಿ, ಇದು ದೇಹವನ್ನು ತಂಪಾಗಿಡುವುದು ಮಾತ್ರವಲ್ಲ, ಬೇಸಿಗೆಯಲ್ಲಿ ಕಾಡುವ ಅನೇಕ ಆರೋಗ್ಯ ಸಮಸ್ಯೆಯಿಂದ ದೇಹವನ್ನು ರಕ್ಷಣೆ ಮಾಡುತ್ತದೆ.
ಮೆಂತೆ ನೀರು ಸೇವಿಸಿ: ಸ್ವಲ್ಪ ಮೆಂತೆ ನೀರಿನಲ್ಲಿ ನೆನೆಹಾಕಿ ಆ ನೀರನ್ನು ಕುಡಿಯುವುದು ಕೂಡ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.
ಹಣ್ಣುಗಳ ಸೇವನೆ ಮಾಡಿ: ಬೇಸಿಗೆಯಲ್ಲಿ ಹಣ್ಣುಗಳನ್ನು ತಿನ್ನಿ, ಜಂಕ್ಸ್ ಫುಡ್ಸ್‌ನಿಂದ ದೂರವಿರಿ.
ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರಿಗೆ ಈ ಅತಿಯಾದ ಉಷ್ಣಾಂಶ ತಡೆಯುವುದು ಕಷ್ಟವಾಗುವುದು, ಅವರ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿವಹಿಸಬೇಕು.
ಮಕ್ಕಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರ ಬಳಿ ಕರೆದುಕೊಂಡು ಹೋಗಿ
ಉಸಿರಾಟದ ಸಮಸ್ಯೆ
ಸುಸ್ತು
ಕುತ್ತಿಗೆ ಬಿಗಿಯಾಗುವುದು
ವಾಂತಿ
ಆಹಾರ ಸೇವಿಸದೆ ಇರುವುದು, ನೀರು, ಹಾಲು ಕುಡಿಯಲು ನಿರಾಕರಿಸುವುದು
ಮೈಯಲ್ಲಿ ಗುಳ್ಳೆಗಳು ಏಳುವುದುಸ
ಬೇಸಿಗೆಯಲ್ಲಿ ಬೆಳಗ್ಗೆ 9 ಗಂಟೆ ಮೇಲೆ ವ್ಯಾಯಾಮ ಮಾಡಬೇಡಿ
ನೀವು ಒಂದೋ ಬೆಳಗ್ಗೆ ವ್ಯಾಯಾಮ ಮಾಡಬೇಕು, ಇಲ್ಲಾಂದ್ರೆ ಸಂಜೆ ಹೊತ್ತಿನಲ್ಲಿ ಮಾಡಬೇಡಿ, ಬೆಳಗ್ಗೆ 9 ಗಂಟೆಯ ಮೇಲೆ ವ್ಯಾಯಾಮ ಮಾಡಬೇಡಿ, ಸೆಕೆ ಹೆಚ್ಚಾದಾಗ ವ್ಯಾಯಾಮ ಮಾಡುವುದರಿಂದ ತಲೆಸುತ್ತು, ಎದೆನೋವು ಈ ಬಗೆಯ ಸಮಸ್ಯೆ ಕಂಡು ಬರುವುದು.
ಬಿಸಿಲಿನಲ್ಲಿ ಕೆಲಸ ಮಾಡುವವರಾದರೆ: ಗಾರೆಕೆಲಸ, ಹೊಲದ ಕೆಲಸ, ರೋಡ್ ಕೆಲಸ ಇಂಥ ಕೆಲಸವನ್ನು ಮಾಡುವವರು ಮಧ್ಯಾಹ್ನ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಿ, ಬೆಳಗ್ಗೆ ನಿಮ್ಮ ಕೆಲಸ ಪ್ರಾರಂಭಿಇಸ 11 ಗಂಟೆಗೆ ನಿಲ್ಲಿ ನಂತರ 3 ಗಂಟೆಯ ಬಳಿಕ ಮತ್ತೆ ಕೆಲಸ ಶುರು ಮಾಡಿ, ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಉಂಟಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
