ಹೃದಯಕ್ಕೆ ಹಾನಿಯನ್ನುಂಟು ಮಾಡುವ ಕೆಟ್ಟ ಅಭ್ಯಾಸಗಳು

ನಿಮ್ಮ ಹೃದಯವನ್ನು ರಕ್ಷಿಸಿಕೊಳ್ಳುವುದು ಎನ್ನುವುದು ಒಂದೇ ದೀರ್ಘ ಕಾಲ ಜೀವಿಸುವುದು ಎಂದರೂ ಒಂದೆ. ನಿಮ್ಮ ಆರೋಗ್ಯದ ಕುರಿತು ನೀವು ಉದಾಸೀನ ಮಾಡಿದರೆ ನಿಮ್ಮ ಹೃದಯಕ್ಕೆ ಹಲವಾರು ರೀತಿಯಲ್ಲಿ ಹಾನಿಯಾಗುವುದು ಖಂಡಿತ. ಧೂಮಪಾನ, ಕುಡಿತ, ವ್ಯಾಯಾಮ ರಹಿತ ಜೀವನ ಮತ್ತು ತಪ್ಪಾದ ಆಹಾರ ಸೇವನೆ ಕ್ರಮದಂತಹ ಹವ್ಯಾಸಗಳು ಹೃದಯಕ್ಕೆ ಹಾನಿ ಮಾಡುವುದು ಖಂಡಿತ. ಇದರ ಜೊತೆಗೆ ದೀರ್ಘಕಾಲ ಸುಮ್ಮನೆ ಕೂರುವುದು, ತುಂಬಾ ಹೊತ್ತು ಟಿವಿ ಮುಂದೆ ಕುಳಿತು ಕಾಲ ಕಳೆಯುವುದು ಮತ್ತು ನಿಮ್ಮ ದೇಹಕ್ಕೆ ಕನಿಷ್ಠ 6 ಗಂಟೆಗಳ ಕಾಲವಾದರು ವಿಶ್ರಾಂತಿಯನ್ನು ನೀಡದೆ ಇರುವುದು ಸಹ ಹೃದಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಕ್ಯಾನ್ಸರ್ ರೋಗವನ್ನು ನಿರ್ಣಯಿಸುವ 11 ಅಂಶಗಳು

ಇಂತಹ ಸಂದರ್ಭಗಳಲ್ಲಿ ನಿಮ್ಮ ಹೃದಯಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ನೀಡಿ, ದುರಭ್ಯಾಸದ ಜಾಗದಲ್ಲಿ ಧನಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳಿ. ಒಂದು ವೇಳೆ ನೀವು ಆರೋಗ್ಯಕರವಾದ ಜೀವನ ಶೈಲಿ ಬಯಸಿದಲ್ಲಿ, ಮೊದಲು ಆ ದುರಭ್ಯಾಸಗಳನ್ನು ದೂರಮಾಡಿ. ಆ ದುರಭ್ಯಾಸಗಳು ಯಾವುವು ಮತ್ತು ಅವು ಹೇಗೆ ನಿಮ್ಮ ಹೃದಯಕ್ಕೆ ಹಾನಿ ಮಾಡುತ್ತವೆ ಎಂಬುದನ್ನು ಈ ಮುಂದೆ ನೋಡಿ.

ಹಲ್ಲುಗಳ ಕುರಿತು ಕಾಳಜಿ ಇಲ್ಲದಿರುವುದು

ಹಲ್ಲುಗಳ ಕುರಿತು ಕಾಳಜಿ ಇಲ್ಲದಿರುವುದು

ವಿಜ್ಞಾನಿಗಳ ಪ್ರಕಾರ ಹಲ್ಲುಗಳಿಗು ಮತ್ತು ಹೃದಯಕ್ಕು ತುಂಬಾ ಹತ್ತಿರದ ಸಂಬಂಧವಿದೆಯಂತೆ. ಹಲ್ಲುಗಳ ಆರೋಗ್ಯ ಸರಿ ಇಲ್ಲದಿದ್ದರೆ ಹೃದಯದ ಆರೋಗ್ಯ ಸರಿಯಿರುವುದಿಲ್ಲ. ಫ್ಲಾಸಿಂಗ್ ಮಾಡದಿರುವುದು ಇದಕ್ಕೆ ಕಾರಣ. ದವಡೆಗಳ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡರೆ, ಹೃದಯವು ಆರೋಗ್ಯವಾಗಿರುತ್ತದೆ.

ಕುಡಿತ ಬಿಡಿ

ಕುಡಿತ ಬಿಡಿ

ಕುಡಿದರೆ ನಿಮಗೆ ಸಂತೋಷ ಸಿಗಬಹುದು. ಆದರೆ ಈ ಕುಡಿತವು ನಿಮ್ಮ ಜೀವನವನ್ನು ಮೊಟಕುಗೊಳಿಸುತ್ತದೆ. ಹೃದ್ರೋಗದಿಂದ ದೂರವಿರಬೇಕೆಂದರೆ, ಕುಡಿತದಿಂದ ದೂರವಿರಿ.

ಅತಿಯಾದ ಆಹಾರ ಸೇವನೆ

ಅತಿಯಾದ ಆಹಾರ ಸೇವನೆ

ಸ್ಥೂಲಕಾಯವು ಹೃದ್ರೋಗಕ್ಕೆ ದಾರಿ ಮಾಡಿಕೊಡುತ್ತದೆ. ಅಧಿಕ ಆಹಾರ ಸೇವನೆಯಿಂದ ಕೊಬ್ಬು ದೇಹದಲ್ಲಿ ಶೇಖರಣೆಯಾಗುತ್ತದೆ. ಇದು ಹೃದಯದ ಸುತ್ತ ಕಟ್ಟಿಕೊಳ್ಳುತ್ತದೆ ಮತ್ತು ಅದು ಸಂಕುಚನ ವಿಕಸನ ಮಾಡಲು ತೊಂದರೆ ಉಂಟು ಮಾಡುತ್ತದೆ. ಇದರಿಂದ ಹೃದಯಾಘಾತವಾಗುವ ಸಂಭವ ಹೆಚ್ಚು.

ಅಧಿಕ ವ್ಯಾಯಾಮ ಅಪಾಯಕಾರಿ

ಅಧಿಕ ವ್ಯಾಯಾಮ ಅಪಾಯಕಾರಿ

ಅಧಿಕ ಪ್ರಮಾಣದ ವ್ಯಾಯಾಮವು ನಿಮ್ಮ ಹೃದಯಕ್ಕೆ ಮಾರಕ. ಅದರಲ್ಲೂ ದುರ್ಬಲ ಹೃದಯ ಹೊಂದಿದವರಿಗೆ ಇದು ಪ್ರಾಣಾಂತಿಕವಾಗಬಹುದು. ಆದ್ದರಿಂದ ನಿಮ್ಮ ವ್ಯಾಯಾಮವನ್ನು ಆದಷ್ಟು ನಿಯಂತ್ರಣದಲ್ಲಿ ಮಾಡಿಕೊಳ್ಳಿ.

ಅತಿಯಾದ ಉಪ್ಪು- ತಪ್ಪು ತಪ್ಪು

ಅತಿಯಾದ ಉಪ್ಪು- ತಪ್ಪು ತಪ್ಪು

ಅಧಿಕ ಪ್ರಮಾಣದ ಉಪ್ಪು ಸೇವನೆಯು ನಿಮ್ಮ ಹೃದಯಕ್ಕೆ ಸಮಸ್ಯೆಗಳನ್ನು ತಂದೊಡ್ಡಬಹುದು. ತಜ್ಞರ ಪ್ರಕಾರ ಉಪ್ಪು ಅಧಿಕವಾಗಿರುವ ಆಹಾರ ಪದಾರ್ಥಗಳು ಹೃದಯದ ಬಡಿತದಲ್ಲಿ ತಕ್ಷಣ ಏರು ಪೇರನ್ನು ಉಂಟು ಮಾಡುತ್ತದೆಯಂತೆ. ಹಾಗಾಗಿ ಉಪ್ಪು ಹೃದ್ರೋಗವನ್ನು ತಂದು ನೀಡುತ್ತದೆ ಎಂಬ ಎಚ್ಚರಿಕೆಯನ್ನು ಇರಿಸಿಕೊಳ್ಳಿ.

ಹಣ್ಣು ತರಕಾರಿ ತಿನ್ನದಿದ್ದರೆ

ಹಣ್ಣು ತರಕಾರಿ ತಿನ್ನದಿದ್ದರೆ

ಹಣ್ಣು ತರಕಾರಿ ತಿನ್ನದೆ, ಅನಾರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸುವುದು ನಿಮ್ಮ ಹೃದಯಕ್ಕೆ ಹಾನಿಯನ್ನು ತಂದೊಡ್ಡುತ್ತದೆ. ಇದರಿಂದ ಅಧಿಕ ರಕ್ತದೊತ್ತಡ, ಅಭಿದಮನಿ ಮತ್ತು ಅಪಧಮನಿಗಳ ಕಾಯಿಲೆಗಳು, ಅಧಿಕ ಕೊಲೆಸ್ಟ್ರಾಲ್ ಮತ್ತು ಇನ್ನಿತರ ಲಘು ಹಾಗು ಗಂಭೀರವಾದ ಹೃದಯದ ಸಮಸ್ಯೆಗಳು ಕಂಡು ಬರುತ್ತವೆ.

ಮೂರ್ಖರ ಪೆಟ್ಟಿಗೆ

ಮೂರ್ಖರ ಪೆಟ್ಟಿಗೆ

ಮೂರ್ಖಾರ ಪೆಟ್ಟಿಗೆಯನ್ನು 24 X 7 ನೋಡುವುದರಿಂದ ಸಹ ನಿಮಗೆ ಹೃದ್ರೋಗ ಬರುತ್ತದೆ! ಟಿವಿ ಅಧಿಕವಾಗಿ ನೋಡುವವರು ಬೇರೆ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿಲ್ಲ.

ಗೊರಕೆಯನ್ನು ಉದಾಸೀನ ಮಾಡಬೇಡಿ

ಗೊರಕೆಯನ್ನು ಉದಾಸೀನ ಮಾಡಬೇಡಿ

ನಿದ್ದೆಯಲ್ಲಿದ್ದಾಗ ಸ್ಲೀಪ್ ಅಪ್ನಿಯಾ ಎಂಬ ಸ್ಥಿತಿಯಲ್ಲಿ ನೀವು ಉಸಿರಾಟವನ್ನು ಮಾಡುವುದಿಲ್ಲ. ಈ ಅವಧಿಯಲ್ಲಿ ನಿಮ್ಮ ದೇಹಕ್ಕೆ ಸರಬರಾಜಾಗುವ ಆಮ್ಲಜನಕದಲ್ಲಿ ಕುಸಿತವುಂಟಾಗುತ್ತದೆ ಮತ್ತು ರಕ್ತದೊತ್ತಡವು ಅಧಿಕಗೊಳ್ಳುತ್ತದೆ. ಇದರಿಂದ ನಿಮ್ಮ ಹೃದಯದ ಕಾರ್ಯದಲ್ಲಿ ಸಹ ಕುಸಿತವುಂಟಾಗುತ್ತದೆ.

ಅಧಿಕ ಒತ್ತಡ ತೆಗೆದುಕೊಳ್ಳುವುದು

ಅಧಿಕ ಒತ್ತಡ ತೆಗೆದುಕೊಳ್ಳುವುದು

ಪ್ರತಿಯೊಬ್ಬರ ಜೀವನದಲ್ಲಿ ಒತ್ತಡ ಇರುತ್ತದೆ. ಇದರಿಂದ ಹೇಗೆ ಹೊರ ಬರುತ್ತೀರಿ ಎಂಬುದರ ಮೇಲೆ ನಿಮ್ಮ ಗಟ್ಟಿತನ ಅಡಗಿರುತ್ತದೆ. ಹೃದಯವನ್ನು ಹಿಂಡಿ ಹಿಪ್ಪೆ ಮಾಡುವ ಪ್ರಕ್ರಿಯೆಗಳಲ್ಲಿ ಒತ್ತಡವು ಮೊದಲು ನಿಲ್ಲುತ್ತದೆ. ಆದ್ದರಿಂದ ಇದರಿಂದ ಪಾರಾಗುವ ಮಾರ್ಗಗಳನ್ನು ಮೊದಲು ನೋಡಿ.

ಒಂಟಿ ಬಾಳು

ಒಂಟಿ ಬಾಳು

ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಇಲ್ಲದ ಜೀವನವನ್ನು ಸಾಗಿಸುವುದು ಸಹ ಹೃದಯಕ್ಕೆ ಹಾನಿ ತರುತ್ತದೆ. ಹೃದಯಕ್ಕೆ ಅದನ್ನು ಅರ್ಥ ಮಾಡಿಕೊಳ್ಳುವ ಮತ್ತಷ್ಟು ಹೃದಯಗಳ ಜೊತೆ ಬೇಕಾಗುತ್ತದೆ. ಹಾಗಾಗಿಯೇ ಒಂಟಿ ಬಾಳು ಬಾಳುವವರು ಬೇಗ ಹೃದಯಾಘಾತಕ್ಕೆ ಈಡಾಗುತ್ತಾರೆ. ಸ್ವಲ್ಪ ಜನರ ಜೊತೆಗೆ ಬೆರೆಯಿರಿ.

ವೈದ್ಯರ ಬಳಿ ತಪಾಸಣೆ ಮಾಡಿಕೊಳ್ಳದಿರುವುದು

ವೈದ್ಯರ ಬಳಿ ತಪಾಸಣೆ ಮಾಡಿಕೊಳ್ಳದಿರುವುದು

ಆಗಾಗ್ಗೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳದಿರುವುದು ಸಹ ಅಪಾಯಕಾರಿ. ಇದರಿಂದ ನಿಮ್ಮ ಆರೋಗ್ಯದ ಪ್ರಗತಿ ಕುರಿತು ಸರಿಯಾದ ಮಾಹಿತಿ ದೊರೆಯುವುದಿಲ್ಲ. ವೈಧ್ಯರನ್ನು ಕಾಣದಿದ್ದಲ್ಲಿ, ಅಗತ್ಯ ಮುಂಜಾಗರೂಕತೆಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗದಿರಬಹುದು, ಇದರಿಂದ ಮುಂದೆ ಜೀವಕ್ಕೆ ಬೆಲೆ ತೆರಬೇಕಾದೀತು. ನಿಯಮಿತವಾಗಿ ತಪಾಸಣೆಗೆ ಹೋಗಿ ಬನ್ನಿ.

ಎಣ್ಣೆಯ ಬಳಕೆಯು ಪ್ರಮುಖವಾಗುತ್ತದೆ

ಎಣ್ಣೆಯ ಬಳಕೆಯು ಪ್ರಮುಖವಾಗುತ್ತದೆ

ಕರಿದ ಆಹಾರ ಪದಾರ್ಥಗಳು ಹೃದಯಕ್ಕೆ ಮಾರಕವಾದ ಮತ್ತೊಂದು ಅಂಶ. ಎಣ್ಣೆಭರಿತವಾದ ಆಹಾರಗಳು ನಿಮ್ಮ ಹೃದಯಕ್ಕೆ ಒಳ್ಳೆಯದಲ್ಲ, ಇವು ನಿಮ್ಮ ಆಯುಸ್ಸನ್ನು ಮತ್ತಷ್ಟು ಕಡಿಮೆ ಮಾಡುತ್ತವೆ ಅಷ್ಟೇ.

ಕೆಂಪು ಮಾಂಸವು ನಿಮ್ಮ ಹೃದಯವನ್ನು ದುರ್ಬಲಗೊಳಿಸುತ್ತವೆ

ಕೆಂಪು ಮಾಂಸವು ನಿಮ್ಮ ಹೃದಯವನ್ನು ದುರ್ಬಲಗೊಳಿಸುತ್ತವೆ

ಕೆಂಪು ಮಾಂಸದಲ್ಲಿ ಅಧಿಕ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬು ಇರುತ್ತದೆ. ಇದು ಹೃದಯಕ್ಕೆ ಒಳ್ಳೆಯದಲ್ಲ. ವಾರಕ್ಕೆ ಎರಡು ಬಾರಿ ನೀವು ಕೆಂಪು ಮಾಂಸವನ್ನು ಸೇವಿಸುವ ಅಭ್ಯಾಸ ಇರಿಸಿಕೊಂಡಲ್ಲಿ, ಅದು ನಿಮ್ಮ ಹೃದಯವನ್ನು ಬೇಗ ದುರ್ಬಲಗೊಳಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಸುಮ್ಮನೆ ಕೂರುವುದು

ಸುಮ್ಮನೆ ಕೂರುವುದು

ಸೋಮಾರಿತನವನ್ನು ಬಿಡಿ, ಏಕೆಂದರೆ ಇದು ಹೃದಯಕ್ಕೆ ಒಳ್ಳೆಯದಲ್ಲ. ನಮ್ಮ ದೇಹವು ಯಾವಾಗಲು ಸುತ್ತಾಡಲು ರೂಪುಗೊಂಡಿದೆ. ಇದನ್ನು ಹಾಗೆಯೇ ಸುಮ್ಮನೆ ಇರಿಸಿದಲ್ಲಿ, ದೇಹದಲ್ಲಿರುವ ಕೊಬ್ಬು ಮತ್ತು ಸಕ್ಕರೆ ಪ್ರಮಾಣವು ತಟಸ್ಥಗೊಳ್ಳುತ್ತದೆ. ಇದರಿಂದ ಮುಂದೆ ಹೃದಯದ ಮೇಲೆ ಒತ್ತಡ ಅಧಿಕಗೊಳ್ಳುತ್ತದೆ.

Story first published: Saturday, January 10, 2015, 11:20 [IST]
X
Desktop Bottom Promotion