Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೈಜರ್-ಮಾಡರ್ನಾ ಕೋವಿಡ್ ಲಸಿಕೆಯಿಂದ ಹೃದಯಾಘಾತದ ಎಚ್ಚರಿಕೆ: FDA ಹೇಳಿದ್ದೇನು?
ಕೋವಿಡ್ ಸಮಯದಲ್ಲಿ ಬಹುತೇಕ ಎಲ್ಲರು ಲಸಿಕೆ ಪಡೆದದಿದ್ದರು. ಅದ್ರಲ್ಲೂ ಮೂರು ಡೋಸ್, ಬೂಸ್ಟರ್ ಡೋಸ್ ಎಂದು 4 ಲಸಿಕೆ ಪಡೆದಿರುವವರು ಕೂಡ ಇದ್ದಾರೆ. ಸರ್ಕಾರಗಳೇ ದೃಢೀಕರಿಸಿದ ಹಲವು ಸಂಸ್ಥೆಯ ಲಸಿಕೆಗಳ ಪಡೆದಿದ್ದರು. ಆದ್ರೆ ಈ ಕೋವಿಡ್ ಲಸಿಕೆಗಳ ಅಡ್ಡಪರಿಣಾಮಗಳು ಕೂಡ ಜನರಲ್ಲಿ ಸಮಸ್ಯೆ ತಂದಿದೆ.
ಫೈಜರ್ ಹಾಗೂ ಮಾರ್ಡನಾ ತಯಾರಿಸಿದ್ದ ಕೋವಿಡ್ 19 ಲಸಿಕೆಗಳು ಹೃದಯಾಘಾತದ ಅಪಾಯವನ್ನು ಹೊಂದಿವೆ ಎಂದು ಅಮೆರಿಕ ಆಹಾರ ಮತ್ತು ಔಷಧ ಆಡಳಿತ ಎಚ್ಚರಿಸಿದೆ ಎಂದು ವರದಿಯಾಗಿದೆ. ಕಾರ್ಡಿಯೋವಾಸ್ಕುಲರ್ ಬ್ಯುಸಿನೆಸ್ ವರದಿ ಮಾಡಿದಂತೆ, ಎರಡು ಲಸಿಕೆಗಳಿಗೆ ಸಂಬಂಧಿಸಿದ ಮಯೋಕಾರ್ಡಿಟಿಸ್ ಅಥವಾ ಪೆರಿಕಾರ್ಡಿಟಿಸ್‌ನ ಸಂಭಾವ್ಯ ಅಪಾಯಗಳ ಕುರಿತು ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತದೆ. ವರದಿಯ ಪ್ರಕಾರ ಮಯೋಕಾರ್ಡಿಟಿಸ್ ಮತ್ತು ಪೆರಿಕಾರ್ಡಿಟಿಸ್ ದೀರ್ಘಕಾಲೀನ ಹೃದಯ ಹಾನಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಅಮೆರಿಕ ಆಹಾರ ಮತ್ತು ಔಷಧ ಆಡಳಿತ (FDA)ಯ ಇತ್ತೀಚಿನ ವರದಿಯು ಫೈಜರ್‌ನ ಕಮಿರ್ನಾಟಿ ಲಸಿಕೆ ಮತ್ತು ಮಾಡರ್ನಾದ ಸ್ಪೈಕ್‌ವಾಕ್ಸ್ ಲಸಿಕೆಯನ್ನು ಒಳಗೊಂಡಿದೆ, ಆದರೆ ಎರಡೂ ಕಂಪನಿಗಳು 2021 ರಿಂದ ಈ ಲಸಿಕೆಗಳ ಲೇಬಲಿಂಗ್‌ನಲ್ಲಿ ಮಯೋಕಾರ್ಡಿಟಿಸ್ ಮತ್ತು ಪೆರಿಕಾರ್ಡಿಟಿಸ್ ಬಗ್ಗೆ ಉಲ್ಲೇಖಿಸಿವೆ. ವರದಿಯ ಪ್ರಕಾರ ಇದು ಯುವಕರಿಗೆ ಹೆಚ್ಚಿನ ಅಪಾಯಗಳ ತರಬಹುದು ಎನ್ನಲಾಗಿದೆ.
ಅದ್ರಲ್ಲೂ ಲಸಿಕೆ ಪಡೆದಿರುವ ಮಂದಿಯ 1ರಿಂದ 7 ದಿನಗಳ ಅವಧಿಯಲ್ಲಿ ಮಯೋಕಾರ್ಡಿಟಿಸ್ ಮತ್ತು ಪೆರಿಕಾರ್ಡಿಟಿಸ್‌ನ ಅಂದಾಜು ಹೊಂದಾಣಿಕೆಯಾಗದ ಘಟನೆಯು 6 ತಿಂಗಳಿಂದ 64 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಮಿಲಿಯನ್ ಡೋಸ್‌ಗಳಿಗೆ ಸರಿಸುಮಾರು 8 ಪ್ರಕರಣಗಳು ಮತ್ತು 12 ರಿಂದ 24 ವರ್ಷ ವಯಸ್ಸಿನ ಪುರುಷರಲ್ಲಿ ಮಿಲಿಯನ್ ಡೋಸ್‌ಗಳಿಗೆ ಸರಿಸುಮಾರು 27 ಪ್ರಕರಣಗಳು ವರದಿಯಾಗಿದೆ ಎಂದು ತಿಳಿದುಬಂದಿದೆ.
ಈ ಮೊದಲು ಬ್ರಿಟನ್ ಮೂಲದ ಪ್ರತಿಷ್ಟಿತ ಔಷಧ ತಯಾರಿಕಾ ಕಂಪನಿ ಆಸ್ಟ್ರಾಜೆನಿಕಾ ಕೂಡ ತನ್ನ ಲಸಿಕೆಯಿಂದ ಅಡ್ಡಪರಿಣಾಮವಿದೆ ಎಂದು ಒಪ್ಪಿಕೊಂಡಿತ್ತು. ಥ್ರೋಂಬೋಸಿಸ್ ವಿತ್ ಥ್ರೋಂಬೋಸೈಟೋಪೇನಿಯಾ ಸಿಂಡ್ರೋಮ್ ಎಂಬ ಸಮಸ್ಯೆ ಉಂಟಾಗಲಿದೆ ಎಂದು ಒಪ್ಪಿಕೊಂಡಿತ್ತು. ಈ ಲಸಿಕೆಯನ್ನು ಭಾರತದಲ್ಲಿ ಸೀರಮ್ ಇನ್ಸ್‌ಸ್ಟಿಟ್ಯೂಟ್ ತಯಾರಿಸಿತ್ತು. ಭಾರತದಲ್ಲಿ ಇದು ಕೋವಿಶೀಲ್ಡ್ ಆಗಿ ನೀಡಲಾಗಿತ್ತು.
ರಾಜ್ಯದಲ್ಲಿ ಹೆಚ್ಚಾಗಿದೆ ಹೃದಯಾಘಾತ
ಕೆಲವು ತಿಂಗಳಿನಿಂದ ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರುವುದು ಆತಂಕ ಹುಟ್ಟಿಸಿದೆ. ಅದ್ರಲ್ಲೂ ಯುವ ಜನಾಂಗವು ಈ ಹೃದಯಾಘಾತಕ್ಕೆ ತುತ್ತಾಗುತ್ತಿರುವುದು ಆಈ ಆತಂಕ ಹೆಚ್ಚಾಗುವಂತೆ ಮಾಡಿದೆ. ಕಳೆದ 10 ವರ್ಷಗಳ ಪೈಕಿ ಕಳೆದ ಎರಡು ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳು ಸರಾಸರಿ 40ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ.
ಸದ್ಯ ಹಾಸನದಲ್ಲಿ ಒಂದರ ಹಿಂದೆ ಒಂದರಂತೆ ಹೃದಯಾಘಾತ ಪ್ರಕರಣಗಳು ವರದಿಯಾಗುತ್ತಿದೆ. ಅದ್ರಲ್ಲೂ ಕಳೆದೊಂದು ತಿಂಗಳಲ್ಲಿ 13 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗೆ ಹೃದಯಾಘಾತಕ್ಕೆ ಒಳಗಾದವರಲ್ಲಿ ಬಹುತೇಕರು ಯುವಕರು ಹಾಗೂ 35 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರು. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ 500ಕ್ಕೂ ಅಧಿಕ ಮಂದಿಗೆ ಹೃದಯಾಘಾತವಾಗಿದ್ದು, 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕೋವಿಡ್ ಬಳಿಕ ಹೃದಯಾಘಾತ ಪ್ರಕರಣಗಳು ಹೆಚ್ಚಳವಾಗಿದ್ದ ಹಿನ್ನಲೆ ರಾಜ್ಯ ಸರ್ಕಾರವು ಕಾರಣ ಪತ್ತೆಗಾಗಿ ಸಮಿತಿ ರಚಿಸಿತ್ತು. ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ರವೀಂದ್ರ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಅಧ್ಯಯನ ನಡೆಸಿದ್ದು, ವರದಿ ಕೂಡ ಸಿಎಂ ಸಿದ್ದರಾಮಯ್ಯ ಅವರ ಕೈ ಸೇರಿದೆ. ಸದ್ಯದಲ್ಲೇ ಈ ವರದಿ ಬಹಿರಂಗವಾಗುವ ಸಾಧ್ಯತೆ ಕೂಡ ಇದೆ.



Click it and Unblock the Notifications









