ಚಳಿಗಾಲದಲ್ಲಿ ಕುಡಿಯಲೇಬೇಕಾದ ಸೂಪ್‌ಗಳು! ಶೀತ, ಕೆಮ್ಮು ನಿಮ್ಮ ಹತ್ತಿರವೂ ಸುಳಿಯಲ್ಲ.. ದೇಹಕ್ಕೆ ಶಕ್ತಿ ಸಿಗುತ್ತೆ!

ಚಳಿಗಾಲದಲ್ಲಿ ಕುಡಿಯಲೇಬೇಕಾದ ಸೂಪ್‌ಗಳು ಇವು! ಶೀತ, ಕೆಮ್ಮು ನಿಮ್ಮ ಹತ್ತಿರಕ್ಕೂ ಬರುವುದಿಲ್ಲ. ಹೌದು, ಎಲ್ಲೆಡೆ ಚಳಿಗಾಲ (Winter) ಆರಂಭವಾಗಿದೆ. ಈಗಾಗಲೇ ಚಳಿಗಾಳಿ ಬೀಸುತ್ತಿದ್ದು, ತಾಪಮಾನ ಕುಸಿಯುತ್ತಿದೆ. ಈ ಬದಲಾಗುತ್ತಿರುವ ವಾತಾವರಣವು ನಮ್ಮ ದೇಹಕ್ಕೆ ಅನೇಕ ಸವಾಲುಗಳನ್ನು ಒಡ್ಡುತ್ತದೆ. ಒಂದು ಕಡೆ ಚಳಿ, ಮತ್ತೊಂದೆಡೆ ಶೀತ, ಕೆಮ್ಮು, ಅಜೀರ್ಣ, ಆಯಾಸ ಮತ್ತು ರೋಗನಿರೋಧಕ ಶಕ್ತಿ ಕುಗ್ಗುವಂತಹ ಸಮಸ್ಯೆಗಳು ಕಾಡುತ್ತವೆ.

ಇಂತಹ ಸಮಯದಲ್ಲಿ ಆಯುರ್ವೇದವು (Ayurveda) ನಮಗೆ ಕೆಲವು ಅದ್ಭುತ ಪರಿಹಾರಗಳನ್ನು ನೀಡುತ್ತದೆ. ಅದರಲ್ಲಿ ಪ್ರಮುಖವಾದವು ಸೂಪ್‌ಗಳು (Soups). ಇವು ಕೇವಲ ರುಚಿಕರವಾದ ಖಾದ್ಯಗಳು ಮಾತ್ರವಲ್ಲ, ದೇಹವನ್ನು ಒಳಗಿನಿಂದ ಬಲಪಡಿಸುವ ನೈಸರ್ಗಿಕ ಔಷಧಗಳಾಗಿವೆ. ಚಳಿಗಾಲದಲ್ಲಿ ಅನಾರೋಗ್ಯಗಳಿಂದ ದೂರವಿರಲು ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ಕೆಲವು ಸೂಪ್‌ಗಳ (healthy soups in winter) ಮಾಹಿತಿ ಇಲ್ಲಿದೆ.

soups in winter
Photo Credit: ಸಾಂದರ್ಭಿಕ ಚಿತ್ರ

ಮೆಂತ್ಯ ಮತ್ತು ಬೆಳ್ಳುಳ್ಳಿ ಸೂಪ್

ಚಳಿಗಾಲದಲ್ಲಿ ಅನೇಕರಿಗೆ ಕೀಲು ನೋವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅಂತಹವರಿಗೆ ಮೆಂತ್ಯ ಮತ್ತು ಬೆಳ್ಳುಳ್ಳಿ ಸೂಪ್ (Fenugreek & Garlic Soup) ಅತ್ಯುತ್ತಮ ಪರಿಹಾರ. ಮೆಂತ್ಯ ಸೊಪ್ಪು, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ತುಪ್ಪದಲ್ಲಿ ಲಘುವಾಗಿ ಹುರಿದು, ನೀರು ಸೇರಿಸಿ ಕುದಿಸಬೇಕು. ಇದು ಮೂಳೆಗಳ ದೃಢತೆಗೆ ಮತ್ತು ಕೀಲು ನೋವು ನಿವಾರಣೆಗೆ ಪರಿಣಾಮಕಾರಿಯಾಗಿದೆ.

ಶುಂಠಿ ಮತ್ತು ಬೆಳ್ಳುಳ್ಳಿ ಸೂಪ್

ಶುಂಠಿ-ಬೆಳ್ಳುಳ್ಳಿ ಸೂಪ್ (Ginger-Garlic Soup) ಅನ್ನು ಚಳಿಗಾಲದ ಔಷಧ ಎಂದೇ ಕರೆಯಬಹುದು. ಶುಂಠಿ ಮತ್ತು ಬೆಳ್ಳುಳ್ಳಿಯ ಔಷಧೀಯ ಗುಣಗಳು ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತವೆ. ಇದು ಗಂಟಲು ನೋವು ಮತ್ತು ಗಂಟಲು ಕಿರಿಕಿರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಒಂದು ಚಿಟಿಕೆ ಕರಿಮೆಣಸು ಸೇರಿಸುವುದರಿಂದ ಇದರ ಪ್ರಭಾವ ಹೆಚ್ಚಾಗಿ, ಶೀತದಿಂದ ಶೀಘ್ರ ಉಪಶಮನ ದೊರೆಯುತ್ತದೆ. ಇದನ್ನು ಎಲೆಕೋಸು ಅಥವಾ ಪಾಲಕ್ ಸೊಪ್ಪಿನೊಂದಿಗೆ ಸೇವಿಸಿದರೆ ಉತ್ತಮ.

ಕ್ಯಾರೆಟ್ ಮತ್ತು ಬೀಟ್ರೂಟ್ ಸೂಪ್

ನೀವು ರಕ್ತಹೀನತೆಯಿಂದ ಬಳಲುತ್ತಿದ್ದರೆ ಅಥವಾ ಸದಾ ದೌರ್ಬಲ್ಯ ಅನುಭವಿಸುತ್ತಿದ್ದರೆ ಕ್ಯಾರೆಟ್, ಬೀಟ್‌ರೂಟ್ ಸೂಪ್ (Carrot & Beetroot Soup) ನಿಮಗೆ ಉತ್ತಮ ಔಷಧ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವುದಲ್ಲದೆ, ಚಳಿಗಾಲದಲ್ಲಿ ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಬೇಯಿಸಿದ ಕ್ಯಾರೆಟ್ ಮತ್ತು ಬೀಟ್‌ರೂಟ್‌ಗಳನ್ನು ಪೇಸ್ಟ್ ಮಾಡಿ, ಅದಕ್ಕೆ ಕರಿಮೆಣಸಿನ ಪುಡಿ ಮತ್ತು ನಿಂಬೆ ರಸ ಸೇರಿಸಿ ಬಿಸಿಯಾಗಿ ಸೇವಿಸಿದರೆ ರುಚಿ ಮತ್ತು ಆರೋಗ್ಯ ಎರಡೂ ಸಿಗುತ್ತದೆ.

winter soups
Photo Credit: ಸಂಗ್ರಹ ಚಿತ್ರ

ಹೆಸರುಬೇಳೆ ಸೂಪ್

ಆಯುರ್ವೇದದಲ್ಲಿ ಹೆಸರು ಬೇಳೆಗೆ ವಿಶೇಷ ಸ್ಥಾನವಿದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ. ಈ ಸೂಪ್ (Moong Dal Soup) ತಯಾರಿಸಲು, ಬೇಯಿಸಿದ ಹೆಸರುಬೇಳೆಗೆ ಅರಿಶಿನ, ಶುಂಠಿ, ಜೀರಿಗೆ ಮತ್ತು ಸ್ವಲ್ಪ ಶುದ್ಧ ತುಪ್ಪವನ್ನು ಸೇರಿಸಿ. ಆಯಾಸವೆನಿಸಿದಾಗ ಈ ಸೂಪ್ ಕುಡಿದರೆ ತಕ್ಷಣ ಉಪಶಮನ ಸಿಗುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸಲು ಸಹ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ.

ಜೋಳ ಮತ್ತು ತರಕಾರಿ ಸೂಪ್

ಚಳಿಗಾಲದಲ್ಲಿ ಏನಾದರೂ ಬಿಸಿಯಾದ್ದು ಕುಡಿಯಲು ಮನಸ್ಸು ಮಾಡಿದರೆ, ಜೋಳ ಮತ್ತು ಮಿಶ್ರ ತರಕಾರಿ ಸೂಪ್ (Corn & Vegetable Soup) ಅತ್ಯುತ್ತಮ ಆಯ್ಕೆಯಾಗಿದೆ. ಇದು ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ಕ್ಯಾರೆಟ್‌ಗಳು, ಬೀನ್ಸ್ ಮತ್ತು ಜೋಳದ ಕಾಳುಗಳನ್ನು ಸೇರಿಸುವುದರಿಂದ ಇದರ ರುಚಿ ಅದ್ಭುತವಾಗಿರುತ್ತದೆ. ಒಮ್ಮೆ ರುಚಿ ನೋಡಿದರೆ ಪ್ರತಿದಿನ ಕುಡಿಯಬೇಕೆನಿಸುವಷ್ಟು ರುಚಿಕರವಾಗಿರುತ್ತದೆ.

ತುಳಸಿ ಮತ್ತು ಶುಂಠಿ ಸೂಪ್

ನಿಮಗೆ ವಿಪರೀತ ಶೀತವಾಗಿದ್ದರೆ ತುಳಸಿ ಮತ್ತು ಶುಂಠಿ ಸೂಪ್ (Tulsi Ginger Soup) ಪ್ರಯತ್ನಿಸಿ. ತುಳಸಿ ಎಲೆಗಳು, ಶುಂಠಿ ಮತ್ತು ದಾಲ್ಚಿನ್ನಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಬೇಕು. ಈ ಸೂಪ್ ಕುಡಿದರೆ ಮುಚ್ಚಿದ ಮೂಗು ಮತ್ತು ಗಂಟಲು ನೋವಿನಿಂದ ತಕ್ಷಣ ಉಪಶಮನ ಸಿಗುತ್ತದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Healthy Soups in Winter: Top 5 Winter Soups to Fight Cold, Cough & Flu

Healthy Soups in Winter: Top 5 Winter Soups to Fight Cold, Cough & Flu
Story first published: Wednesday, November 26, 2025, 13:30 [IST]
X
Desktop Bottom Promotion