Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
ವೈಟ್ ರೈಸ್ ಬೇಡ! ಈ 6 ವೆರೈಟಿ ಅಕ್ಕಿ ತಿಂದ್ರೆ ಹೆಲ್ತ್ ಡಬಲ್.. ನೀವು ಯಾವುದು ತಿಂತಿರಾ?
ಬಿಳಿ ಅನ್ನ ಬಿಟ್ಟುಬಿಡಿ! ಈ 6 ಪೌಷ್ಟಿಕಾಂಶ ಭರಿತ ಅಕ್ಕಿಗಳನ್ನು ಇಂದೇ ತಿನ್ನಿ. ಆರೋಗ್ಯ ಡಬಲ್ ಗ್ಯಾರಂಟಿ! ಹೌದು, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಅನ್ನವು ಪ್ರಧಾನ ಆಹಾರ. ಅನ್ನ ಆರೋಗ್ಯಕರ ಆಹಾರವೇ ಆದರೂ, ಬಿಳಿ ಅಕ್ಕಿಯಿಂದ (White Rice) ತಯಾರಿಸಿದ ಅನ್ನವನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಆದರೆ, ಇದು ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳು ಮತ್ತು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವುದರಿಂದ ಆರೋಗ್ಯದ ದೃಷ್ಟಿಯಿಂದ ಅಷ್ಟೇನೂ ಉತ್ತಮವಲ್ಲ. ನಾವು ಈ ಲೇಖನದಲ್ಲಿ ಬಿಳಿ ಅಕ್ಕಿಯ ಬದಲಿಗೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಐದು ವಿಧದ ಅಕ್ಕಿಯ (nutrition rich rice Varieties in india) ಬಗ್ಗೆ ತಿಳಿಸಿದ್ದೇವೆ.
ಭಾರತದಲ್ಲಿ ಬಿಳಿ ಅಕ್ಕಿಯ ಬಳಕೆ ಬಹಳ ಪ್ರಚಲಿತದಲ್ಲಿದೆ. ಆದರೆ, ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಬಿಳಿ ಅಕ್ಕಿಯಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಹೆಚ್ಚಿರುತ್ತದೆ. ಇದು ಸುಮಾರು 70 ರಿಂದ 90 ರವರೆಗೆ ಇರುತ್ತದೆ. ಇದರಲ್ಲಿ ಪೋಷಕಾಂಶಗಳು ಕಡಿಮೆ ಮತ್ತು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಇರುತ್ತವೆ. ಹೀಗಾಗಿ, ಇದನ್ನು ಹೆಚ್ಚಾಗಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಬೊಜ್ಜು ಮತ್ತು ಮಧುಮೇಹದ ಅಪಾಯ ಹೆಚ್ಚಿದೆ. ಮಧುಮೇಹ ಇರುವವರು ಬಿಳಿ ಅಕ್ಕಿಯನ್ನು ತಿನ್ನಲೇಬಾರದು. ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ. ಬಿಳಿ ಅಕ್ಕಿ ಬಿಟ್ಟು, ಪೋಷಕಾಂಶಗಳು ಹೆಚ್ಚಿರುವ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಅಕ್ಕಿ ತಿನ್ನಬೇಕು.

1. ಕಪ್ಪು ಅಕ್ಕಿ
ಭಾರತದ ಈಶಾನ್ಯ ರಾಜ್ಯಗಳಾದ ಮಣಿಪುರ ಮತ್ತು ಅಸ್ಸಾಂನಲ್ಲಿ ಕಪ್ಪು ಅಕ್ಕಿ ಬೆಳೆಯಲಾಗುವುದು. ಇದರಲ್ಲಿ ಅನೇಕ ಪೋಷಕಾಂಶಗಳು ಸಮೃದ್ಧವಾಗಿವೆ. ಇದನ್ನು ಅಲ್ಲಿ 'ಚಕ್ ಹಾವೊ' ಎಂದು ಕರೆಯುವರು. ಈ ಕಪ್ಪು ಅಕ್ಕಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ಇದು ಕಪ್ಪು ಅಥವಾ ಗಾಢ ನೇರಳೆ ಬಣ್ಣದಲ್ಲಿರುತ್ತದೆ. ಇದರ ಕಪ್ಪು ಬಣ್ಣಕ್ಕೆ ಕಾರಣ ಆಂಥೋಸಯಾನಿನ್ ಎಂಬ ಉತ್ಕರ್ಷಣ ನಿರೋಧಕ. ಇದು ಫ್ರೀ ರಾಡಿಕಲ್ಸ್‌ನಿಂದ ರಕ್ಷಿಸಲು ಸಹಾಯ ಮಾಡುತ್ತದೆ.
2. ಕೆಂಪು ಅಕ್ಕಿ
ಕೇರಳ ಅಥವಾ ತಮಿಳುನಾಡಿನಲ್ಲಿ ಕೆಂಪು ಅಕ್ಕಿ ಬೆಳೆಯಲಾಗುತ್ತದೆ. ದಕ್ಷಿಣ ಭಾರತದ ರಾಜ್ಯಗಳ ಜೊತೆಗೆ ಅಸ್ಸಾಂನ ಬ್ರಹ್ಮಪುತ್ರ ಕಣಿವೆಯಲ್ಲಿಯೂ ಇದು ಲಭ್ಯ. ಇದನ್ನು ಉತ್ತರಕಾಶಿ ಮತ್ತು ಬಾಗೇಶ್ವರಗಳಲ್ಲಿಯೂ ಬೆಳೆಯಲಾಗುತ್ತದೆ. ಈ ಕೆಂಪು ಅಕ್ಕಿಯನ್ನು ರಾಸಾಯನಿಕ ಗೊಬ್ಬರಗಳಿಲ್ಲದೆ ಬೆಳೆಯಲಾಗುತ್ತದೆ. ಇದನ್ನು ಡೀಪ್ ವಾಟರ್ ರೈಸ್ ಅಥವಾ 'ಬಾವೊ ಧಾನ್' ಎಂದು ಕರೆಯುವರು. ಇದು ಬಹಳ ಜನಪ್ರಿಯವಾದ ಅಕ್ಕಿ ವಿಧವಾಗಿದ್ದು, ಸುಲಭವಾಗಿ ಲಭ್ಯವಿದೆ. ಈ ಅಕ್ಕಿ ರಕ್ತದಲ್ಲಿನ ಶುಗರ್ ನಿಯಂತ್ರಿಸಲು ಮತ್ತು ತೂಕ ಇಳಿಸಲು ಸಹಕಾರಿ.
3. ನವರ ಅಕ್ಕಿ
ಭಾರತದಲ್ಲಿ ಲಭ್ಯವಿರುವ ವಿವಿಧ ಬಗೆಯ ಅಕ್ಕಿಗಳಲ್ಲಿ ನವರ ಅಕ್ಕಿಯೂ ಒಂದು. ಇದರ ಮೂಲ ಹೆಸರು ನಿವಾರ. ಇದು ಯಾವುದೇ ರೋಗವನ್ನು ನಿವಾರಿಸುವುದರಿಂದ ಈ ಅಕ್ಕಿಗೆ ನವರಾ ಅಕ್ಕಿ ಎಂದು ಕರೆಯಲಾಗುತ್ತದೆ. ಈ ಅಕ್ಕಿಯನ್ನು ಹೆಚ್ಚಾಗಿ ಕೇರಳದಲ್ಲಿ ಬೆಳೆಯಲಾಗುವುದ. ಇದರಿಂದ ಇದನ್ನು ಕೇರಳ ಅಕ್ಕಿ ಎಂದು ಸಹ ಕರೆಯುತ್ತಾರೆ. ಈ ಅಕ್ಕಿಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿವೆ. ಆದ್ದರಿಂದ ಇದು ಶಿಶುಗಳಿಂದ ವೃದ್ಧರವರೆಗೆ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ.
4. ಕಪ್ಪು ಜೀರಿಗೆ ಅಕ್ಕಿ
ನೀವು ಕಪ್ಪು ಜೀರಿಗೆ ಅಕ್ಕಿಯನ್ನು ಸಹ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಈ ಅಕ್ಕಿಯನ್ನು ಒಡಿಶಾದ ಕೋರಾಪುಟ್‌ನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಇದನ್ನು ಕೋರಾಪುಟ್ ಕಪ್ಪು ಜೀರಿಗೆ ಅಕ್ಕಿ ಎಂದು ಕರೆಯಲಾಗುತ್ತದೆ. ಈ ಅಕ್ಕಿ ತನ್ನ ಪರಿಮಳ ಮತ್ತು ರುಚಿಗೆ ಹೆಸರುವಾಸಿ. ಇದು ಕಪ್ಪು ಬಣ್ಣದಲ್ಲಿದ್ದು, ಸಣ್ಣ ಜೀರಿಗೆ ಕಾಳುಗಳಂತೆ ಕಾಣುತ್ತದೆ.
5. ಬಿದಿರಿನ ಅಕ್ಕಿ
ಈ ಅಕ್ಕಿ ಮಧುಮೇಹ ರೋಗಿಗಳಿಗೆ ಉತ್ತಮ ಆಯ್ಕೆಯಾಗಿದೆ. ಇದನ್ನು ಬಿದಿರಿನ ರೈಸ್, ಮೂಂಗಿಲ್ ಅಕ್ಕಿ ಅಥವಾ ಮುಳಯರಿ ಎಂದು ಸಹ ಕರೆಯುವರು. ಇದು ಬಿದಿರಿನ ಗಿಡಗಳಿಂದ ಪಡೆಯುವ ಅಕ್ಕಿಯಾಗಿದೆ. ಬಿದಿರಿನ ಅಕ್ಕಿ ಹಸಿರು ಬಣ್ಣದಲ್ಲಿರುತ್ತದೆ. ಸಾಮಾನ್ಯ ಅಕ್ಕಿಗೆ ಹೋಲಿಸಿದರೆ, ಇದು ಹೆಚ್ಚಿನ ಪೋಷಕಾಂಶಗಳು ಮತ್ತು ಫೈಬರ್ ಅನ್ನು ಹೊಂದಿದ್ದು, ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದೆ.
ಒಟ್ಟಾರೆಯಾಗಿ, ಈ ಐದು ಬಗೆಯ ಅಕ್ಕಿಗಳು ಬಿಳಿ ಅಕ್ಕಿಗೆ ಪರ್ಯಾಯವಾಗಿವೆ. ಇವು ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿವೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
















