Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ದೇಹದ ಈ 5 ಭಾಗದಲ್ಲಿ ನೋವು ಅನುಭವಿಸಿದ್ದೀರಾ? ಕಿಡ್ನಿ ಸಮಸ್ಯೆಯ ಲಕ್ಷಣವೂ ಇರಬಹುದು!!
ಇತ್ತೀಚಿಗೆ ಕಿಡ್ನಿ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಛಾಗುತ್ತಲೇ ಇದೆ. ಹಲವು ಬಾಹ್ಯ ಹಾಗೂ ಆಂತರಿಕ ಕಾರಣಗಳಿವೆ. ಹಾಗೆ ಕಿಡ್ನಿ ಸಮಸ್ಯೆ ವ್ಯಕ್ತಿಯೊಬ್ಬರ ಜೀವ ಕಿತ್ತುಕೊಳ್ಳಬಹುದು. ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಬಹಳ ಮುಖ್ಯ ಅಂಗ. ಈ ಮೂತ್ರಪಿಂಡಗಳು ರಕ್ತದಿಂದ ತ್ಯಾಜ್ಯ, ಹೆಚ್ಚುವರಿ ನೀರು ಮತ್ತು ವಿಷಕಾರಿ ಅಂಶ ಫಿಲ್ಟರ್ ಮಾಡುವ ಅಂಗಗಳು.
ಈ ಕಿಡ್ನಿಗಳು ಹಲವು ಕಾರಣದಿಂದಾಗಿ ಹಾನಿಗೊಳಗಾಗುತ್ತವೆ. ಒಬ್ಬ ವ್ಯಕ್ತಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಸೋಂಕುಗಳು, ಆನುವಂಶಿಕ ಕಾಯಿಲೆಗಳು ಮತ್ತು ಮೂತ್ರಪಿಂಡದ ಕಲ್ಲುಗಳು ಇದ್ದರೆ, ಮೂತ್ರಪಿಂಡಗಳಿಗೆ ಗಂಭೀರ ಹಾನಿಯಾಗುವ ಸಾಧ್ಯತೆ ಹೆಚ್ಚು. ಈ ಮೂತ್ರಪಿಂಡದ ಹಾನಿಯನ್ನು ಚಿಕಿತ್ಸೆ ನೀಡದೆ ಬಿಟ್ಟರೆ, ಅದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಕಾರಣವಾಗಬಹುದು.

ಕಿಡ್ನಿ ಹಾನಿ ಲಕ್ಷಣವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವುದು ಬಹುಮುಖ್ಯವಾಗಲಿದೆ. ಅದ್ರಲ್ಲೂ ಆರಂಭಿಕ ಲಕ್ಷಣಗಳ ಪತ್ತೆ ಮಾಡಿ ಚಿಕಿತ್ಸೆ ಪಡೆದರೆ ತಿಂಗಳೊಳಗೆ ಮುಕ್ತಿ ಪಡೆಯಬಹುದು. ಹಾಗಾದ್ರೆ ಮೂತ್ರಪಿಂಡ ಸಮಸ್ಯೆಯ ಆರಂಭಿಕ ಲಕ್ಷಣಗಳೇನು? ಎಂಬುದನ್ನು ತಿಳಿಯೋದು ಮುಖ್ಯವಾಗಲಿದೆ.
ವ್ಯಕ್ತಿಯ ಮೂತ್ರಪಿಂಡಗಳಿಗೆ ಸಮಸ್ಯೆ ಅಥವಾ ಗಂಭೀರ ಹಾನಿ ಇದ್ದರೆ, ಅದು ನಮಗೆ ಕೆಲವು ಲಕ್ಷಣಗಳ ಬಗ್ಗೆ ತಿಳಿಸುತ್ತದೆ. ವಿಶೇಷವಾಗಿ ದೇಹದ ಕೆಲವು ಭಾಗಗಳಲ್ಲಿ ನೀವು ತೀವ್ರ ನೋವು ಅಥವಾ ಅಸ್ವಸ್ಥತೆಯನ್ನು ಅನುಭವಿಸಬಹುದು. ಈಗ ಮೂತ್ರಪಿಂಡದ ಹಾನಿಯನ್ನು ಸೂಚಿಸುವ ಕೆಲವು ಪ್ರಮುಖ ಲಕ್ಷಣಗಳನ್ನು ನೋಡೋಣ.
ಕೆಳ ಬೆನ್ನು ನೋವು
ಹಲವರು ಬೆನ್ನು ನೋವನ್ನು ಸಾಮಾನ್ಯ ನೋವಿನ ರೀತಿಯಲ್ಲಿ ನೋಡುತ್ತಾರೆ. ಆದ್ರೆ ಎಲ್ಲಾ ಬೆನ್ನು ನೋವುಗಳು ಈ ರೀತಿ ಸಾಮಾನ್ಯ ನೋವುಗಳಲ್ಲ. ಅದ್ರಲ್ಲೂ ಕೆಳ ಬೆನ್ನು ನೋವು ಕಿಡ್ನಿ ಸಮಸ್ಯೆಯ ಆರಂಭಿಕ ಲಕ್ಷಣ ಆಗಿರಬಹುದು. ವ್ಯಕ್ತಿಯೊಬ್ಬರ ಒಂದು ಬದಿಯಲ್ಲಿ ಮಾತ್ರ ಕೆಳ ಬೆನ್ನು ನೋವು ಇದ್ದರೆ, ಮೂತ್ರಪಿಂಡಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ ಎಂದರ್ಥ. ಇದಲ್ಲದೆ ಈ ನೋವು ಸ್ನಾಯು ನೋವಿನಂತೆ ಇರುವುದಿಲ್ಲ, ಆದರೆ ನೋವು ತುಂಬಾ ತೀಕ್ಷ್ಣವಾಗಿರುತ್ತದೆ, ವಾಕರಿಕೆ, ಜ್ವರ ಇತ್ಯಾದಿ ಲಕ್ಷಣ ಕೂಡ ನೋಡಬಹುದು.
ಎದೆ ನೋವು ಮತ್ತು ಉಸಿರಾಟದ ತೊಂದರೆ
ಹೃದಯದಲ್ಲಿ ಸಮಸ್ಯೆ ಇದ್ದರೆ ಮಾತ್ರ ಎದೆ ನೋವು ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಮೂತ್ರಪಿಂಡಗಳಿಗೆ ಹಾನಿಯಾಗಿದ್ದರೂ ಸಹ, ನಿಮಗೆ ಎದೆ ನೋವು ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ. ಈ ಲಕ್ಷಣವು ಮುಖ್ಯವಾಗಿ ಮೂತ್ರಪಿಂಡ ಕಾಯಿಲೆಯ ಮುಂದುವರಿದ ಹಂತಗಳಲ್ಲಿ ಕಂಡುಬರುತ್ತದೆ.
ಹೊಟ್ಟೆ ನೋವು ಮತ್ತು ವಾಕರಿಕೆ
ನೀವು ಹೊಟ್ಟೆಯ ಕೆಳಭಾಗದಲ್ಲಿ ನೋವು ಮತ್ತು ವಾಕರಿಕೆ ಅನುಭವಿಸಿದಾಗ, ಅನೇಕ ಜನರು ಅದನ್ನು ಜೀರ್ಣಕ್ರಿಯೆಯ ಸಮಸ್ಯೆ ಎಂದು ಪರಿಗಣಿಸುವುದು ನೋಡಬಹುದು. ಆದರೆ ಜೀರ್ಣಕ್ರಿಯೆ ಸಮಸ್ಯೆಯ ಬದಲಾಗಿ ಇದು ಮೂತ್ರ ಪಿಂಡ ಸಮಸ್ಯೆಗೆ ಸಂಬಂಧಿಸಿದೆ. ಹೊಟ್ಟೆಯ ಕೆಳಭಾಗದ ನೋವು ಜೀರ್ಣಕ್ರಿಯೆ ಸಂಬಂಧಿಸಿದ ನೋವಲ್ಲ. ಹಾಗೆ ಕಿಡ್ನಿಗೆ ಸಂಬಂಧಿಸಿದ ನೋವು ಆರಂಭಿಕ ಹಂತದಲ್ಲಿ ತೀಕ್ಷ್ಣವಾಗಿರಲಿದೆ.
ತಲೆನೋವು ಮತ್ತು ತಲೆತಿರುಗುವಿಕೆ
ತಲೆನೋವು ಮತ್ತು ತಲೆತಿರುಗುವಿಕೆ ಮೂತ್ರಪಿಂಡದ ಕಾರ್ಯಕ್ಕೆ ಸಂಬಂಧಿಸಿಲ್ಲ ಎಂದುಕೊಂಡಿರುತ್ತೀರಿ. ಆದರೆ ಇವು ಮೂತ್ರ ಪಿಂಡ ಸಮಸ್ಯೆಯ ಲಕ್ಷಣವೂ ಇರಬಹುದು. ಮೂತ್ರಪಿಂಡಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ರಕ್ತದೊತ್ತಡ ಹೆಚ್ಚಾಗುತ್ತದೆ, ಇದು ಹೆಚ್ಚಾಗಿ ತಲೆನೋವಿಗೆ ಕಾರಣವಾಗಬಹುದು.
ಕಾಲುಗಳು ಮತ್ತು ಪಾದಗಳಲ್ಲಿ ಊತ, ನೋವು
ನಿಮ್ಮ ಕಾಲುಗಳು ಮತ್ತು ಪಾದಗಳಲ್ಲಿ ವಿವರಿಸಲಾಗದ ನೋವು ಅಥವಾ ಊತವನ್ನು ಅನುಭವಿಸುತ್ತಿದ್ದೀರಾ? ಅದು ಕೂಡ ಮೂತ್ರಪಿಂಡದ ಹಾನಿಯ ಸಂಕೇತವಾಗಿರಬಹುದು. ಕಿಡ್ನಿಗಳು ಕಲ್ಮಶಗಳ ತೆಗೆಯಲು ಸಾಧ್ಯವಾಗದೆ ಇದ್ದಾಗ ಈ ಅಂಶವು ದೇಹದ ಭಾಗದಲ್ಲಿ ಶೇಖರಣೆಯಾಗಬಹುದು. ಉದರಿಂದ ದೇಹದಲ್ಲಿ ಊತ ಕಾಣಿಸಿಕೊಳ್ಳಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಯನ್ನು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications