Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಗಾಲ್ ಬ್ಲೇಡರ್ ಸ್ಟೋನ್: ಇದರ ಲಕ್ಷಣಗಳು, ಚಿಕಿತ್ಸೆ ಇವುಗಳ ಕುರಿತು ವೈದ್ಯರು ಹಂಚಿಕೊಂಡ ಮಾಹಿತಿಗಳಿವು
ಗಾಲ್ ಬ್ಲೇಡರ್ ಸ್ಟೋನ್ ಇದ್ದರೆ ಅಸಾಧ್ಯವಾದ ಕಿಬ್ಬೊಟ್ಟೆ ನೋವು ಉಂಟಾಗುವುದು, ಈ ಗಾಲ್ ಬ್ಲೇಡರ್ ಸ್ಟೋನ್ ಉಂಟಾದಾಗ ಔಷಧಿ ತೆಗೆದುಕೊಂಡರೆ ಕರಗಿಸಲು ಸಾಧ್ಯನಾ? ಯಾವಾಗ ಸರ್ಜರಿ ಮಾಡಬೇಕು, ಇದಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಉಂಟಾಗುವ ಅಪಾಯಗಳೇನು ಇವುಗಳ ಬಗ್ಗೆ ಡಾ. ವಿದ್ಯಾ ಎಸ್ ಭಟ್ (ಸರ್ಜಿಕಲ್ ಗ್ಯಾಸ್ಟ್ರೋಎಂಟ್ರಾಲಜಿ, ಕೆ ಎಂಸಿ ಆಸ್ಪತ್ರೆ, ಮಂಗಳೂರು) ನೀಡಿರುವ ಹೆಚ್ಚಿನ ಮಾಹಿತಿ ನೋಡೋಣ:

ಗಾಲ್ ಬ್ಲೇಡರ್ ಸ್ಟೋನ್ ಎಂದರೇನು?
ಗಾಲ್ ಬ್ಲೇಡರ್‌ನಲ್ಲಿ ಕಲ್ಲುಗಳು ಉತ್ಪತ್ತಿಯಾಗುವುದಕ್ಕೆ ಗಾಲ್ ಬ್ಲೇಡರ್ ಸ್ಟೋನ್ ಎಂದು ಕರೆಯಲಾಗುವುದು. ಗಾಲ್ ಬ್ಲೇಡರ್ ಅಂದರೆ ಪಿತ್ತಕೋಶ ಎಂಬುವುದು ಒಂದು ಚಿಕ್ಕ ಚೀಲ, ಇದರಲ್ಲಿ ಪಿತ್ತರಸ ಸಂಗ್ರಹವಾಗುತ್ತದೆ. ಇದರಲ್ಲಿ ಕಲ್ಲು ಉತ್ಪತ್ತಿಯಾಗುವುದನ್ನು ಗಾಲ್ ಬ್ಲೇಡರ್ ಸ್ಟೋನ್ ಎಂದು ಕರೆಯಲಾಗುವುದು.
ಹೊಟ್ಟೆಯಲ್ಲಿ ಬಲ ಭಾಗದಲ್ಲಿ ನೋವು
ಕೆಲವರು ಬಲಭಾಗದಲ್ಲಿ ತೀವ್ರ ಹೊಟ್ಟೆ ನೋವು ಇದೆ ಎಂದು ವೈದ್ಯರ ಬಳಿ ಬರುತ್ತಾರೆ. ಕೆಲವರಿಗೆ ಕೊಬ್ಬಿನಂಶವಿರುವ ಆಹಾರ ಸೇವಿಸಿದರೆ ತುಂಬಾನೇ ಹೊಟ್ಟೆ ನೋವು ಉಂಟಾಗುವುದು. ಕೆಲವರಿಗೆ ತೀವ್ರ ಜ್ವರ, ಕಾಮಲೆ ರೋಗ ಕಾಣಿಸಬಹುದು. ಈ ರೀತಿಯ ಲಕ್ಷಣಗಳು ಕಂಡು ಬಂದಾಗ ವೈದ್ಯರು ರಕ್ತ ಪರೀಕ್ಷೆ, ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಲು ಸೂಚಿಸುತ್ತಾರೆ. ಈ ಪರೀಕ್ಷೆಯಲ್ಲಿ ಗಾಲಾ ಸ್ಟೋನ್ ಇದ್ದರೆ ತಿಳಿಯುತ್ತದೆ.
ಗಾಲ್‌ಬ್ಲೇಡರ್ ಸ್ಟೋನ್ ಇದ್ದಾಗ ಈ ಲಕ್ಷಣಗಳು ಕಂಡು ಬರುವುದು
ಗಾಲ್‌ಬ್ಲೇಡರ್ ಸ್ಟೋನ್ ಇದ್ದಾಗ ಗಾಲ್ ಬ್ಲೇಡ್‌ನಲ್ಲಿ ಸೋಂಕು ಉಂಟಾಗಿ ತೀವ್ರ ಹೊಟ್ಟೆ ನೋವು ಉಂಟಾಗುವುದು. ಗಾಲ್ ಬ್ಲೇಡರ್ ಸ್ಟೋನ್ ಇದ್ದಾಗ ಕಾಮಲೆ, ಸೋಂಕು, ಕೀವು, ಪ್ಯಾಂಕ್ರಿಯೈಟಿಸ್, ಅಪರೂಪದ ಕ್ಯಾನ್ಸರ್ ಕಂಡು ಬರುವುದು.
ನೋವು: ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡರೆ ಬೇಗನೆ ಕಡಿಮೆಯಾಗುವುದಿಲ್ಲ , ಅಲ್ಲದೆ ಆಹಾರ ತಿಂದ ಬಳಿಕ ಸ್ವಲ್ಪ ಹೊತ್ತಿನಲ್ಲಿಯೇ ನೋವು ಶುರುವಾಗುವುದು, ಕೊಬ್ಬಿನಂಶದ ಆಹಾರ ತಿಂದ ತಕ್ಷಣ ಕಾಣಿಸಿಕೊಳ್ಳಬಹುದು.
ಹೊಟ್ಟೆನೋವಿನ ಜೊತೆಗೆ ವಾಂತಿ, ತಲೆಸುತ್ತು ಈ ಬಗೆಯ ಸಮಸ್ಯೆ ಕಂಡು ಬರಬಹುದು.
ಜ್ವರ: ಆಗಾಗ ಜ್ವರ ಕಾಣಿಸಿಕೊಳ್ಳುವುದು
ಕಾಮಲೆ: ತ್ವಚೆ, ಕಣ್ಣುಗಳು ಹಳದಿಯಾಗುವುದು
ಮಲದ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುವುದು: ಮಲದ ಬಣ್ಣ ಮಣ್ಣು ಬಣ್ಣದಲ್ಲಿ ಇರುತ್ತದೆ, ಮೂತ್ರದ ಬಣ್ಣ ಕೂಡ ವ್ಯತ್ಯಾಸವಾಗುವುದು
ಮೈ ತುಂಬಾನೇ ಬೆವರುವುದು.
ಗಾಲ್ ಬ್ಲೇಡರ್ ಸ್ಟೋನ್ ಲಕ್ಷಣಗಳ ಈ ಅಪೆಂಡೆಕ್ಸ್, ಅಲ್ಸರ್, ಪ್ಯಾಂಂಕ್ರಿಯೈಟಿಸ್ ಉಂಟಾದಾಗ ಕಂಡು ಬರುವ ಲಕ್ಷಣದಂತೆಯೇ ಕಂಡು ಬರುವುದು. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಆರೋಗ್ಯ ಸ್ಥಿತಿ ತುಂಬಾನೇ ಗಂಭೀರವಾಗುವುದು.
ಗಾಲ್ ಬ್ಲೇಡರ್ ಸ್ಟೋನ್‌ಗೆ ಚಿಕಿತ್ಸೆಯೇನು?
ಗಾಲ್ ಬ್ಲೇಡರ್ ಸ್ಟೋನ್ ಉಂಟಾಗಿರುವುದು ಪತ್ತೆಯಾದರೆ ಲ್ಯಾಪ್ರೋಸ್ಕೋಪಿಕ್ ಸರ್ಜರಿ ಮಾಡಿ ತೆಗೆಯಲಾಗುವುದು. ಈ ಸರ್ಜರಿಗೆ 1 ಗಂಟೆಯಿಂದ 4 ಗಂಟೆಯವರೆಗೆ ಸಮಯ ಹಿಡಿಯಬಹುದು.
ಸರ್ಜರಿ ಬಳಿಕ ಚಿಕಿತ್ಸೆ ಹೇಗೆ?
ಸರ್ಜರಿ ಬಳಿಕ 4 ಗಂಟೆಯವರೆಗೆ ವ್ಯಕ್ತಿಯನ್ನು ಅಬ್ಸರ್‌ವೇಷನ್‌ನಲ್ಲಿ ಇಡಲಾಗುವುದು. ನಂತರ ರೋಗಿಯನ್ನು ವಾರ್ಡ್‌ಗೆ ಶಿಫ್ಟ್ ಮಾಡಿ ನಂತರ ದ್ರವಾಹಾರ ನೀಡಲಾಗುವುದು. ಕೆಲವರನ್ನು ಅದೇ ದಿನ ಡಿಸ್ಚಾರ್ಜ್ ಕೂಡ ಮಾಡಿಕೊಂಡು ಹೋಗಬಹುದು, ನಂತ ಹೊಲಿಗೆ ತೆಗೆಯಲು ಬರಲು ಸೂಚಿಸಿದ ದಿನ ಬರಬಹುದು.
ಲ್ಯಾಪ್ರೋಸ್ಕೋಪಿಕ್ ಚಿಕಿತ್ಸೆಯನ್ನು ಎಕ್ಸ್‌ಪರ್ಟ್ ಸರ್ಜನ್ ಬಳಿ ಮಾಡಿಸಿದರೆ ಒಳ್ಳೆಯದು?
ಗಾಲ್ ಸ್ಟೋನ್ ಇದ್ದರೆ ನೀವು ಉತ್ತಮ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಗಾಲ್ ಬ್ಲೇಡರ್ ಸ್ಟೋನ್ ಉಂಟಾದಾಗ ಆತಂಕ ಬೇಡ, ಏನೇ ಗೊಂದಲವಿದ್ದರೆ ನೀವು ವೈದ್ಯರ ಬಳಿ ಕೇಳಿ ಸಲಹೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications