Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಂಗನ ಕಾಯಿಲೆಗೆ ರಾಜ್ಯದಲ್ಲಿ ಮೊದಲ ಬಲಿ:ಪ್ರಾಣಿಗಳ ಮೇಲಿರುವ ಕೆಂಪು ಚಿಗಟ ತುಂಬಾನೇ ಅಪಾಯಕಾರಿ
ಈ ವರ್ಷ ರಾಜ್ಯದಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿಯಗಿದೆ. ಶಿವಮೊಗ್ಗ ಜಿಲ್ಲೆಯ 54 ವರ್ಷದ ಮಹಿಳೆ ಮಂಗನಕಾಯಿಲೆಗೆ ಬಲಿಯಾಗಿದ್ದಾರೆ.
ಕೆಎಫ್‌ಡಿ ಸೋಂಕಿನಿಂದ ಮಹಿಳೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಹಿಳೆಯನ್ನು ಜನವರಿ 23ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆ ಮಣಿಪಾಲಕ್ಕೆ ಕರೆತರಲಾಯ್ತು, ಮಹಿಳೆಯಲ್ಲಿ ರೋಗ ಲಕ್ಷಣಗಳು ಕಡಿಮೆಯಾಗಿದ್ದರಿಂದ ಜನವರಿ 29ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು, ಆದರೆ ಚೇತರಿಕೊಂಡ ಸ್ವಲ್ಪ ದಿನಗಳಲ್ಲಿಯೇ ಮತ್ತೆ ಮಂಗನ ಕಾಯಿಲೆ ಲಕ್ಷಣಗಳು ಕಂಡು ಬಂದು ಮತ್ತೆ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಯ್ತು, ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಮಲೆನಾಡು ಪ್ರದೇಶದಲ್ಲಿ ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ಕೆಎಫ್‌ಡಿ (ಕ್ಯಾಸನೂರ್ ಫಾರೆಸ್ಟ್ ಡಿಸೀಸ್ ಅಥವಾ ಮಂಗನ ಕಾಯಿಲೆ)
ಬೇಸಿಗೆ ಬರುತ್ತಿದ್ದಂತೆ ಕರ್ನಾಟಕದಲ್ಲಿ ಜನರನ್ನು ಈ ಸಮಸ್ಯೆ ಕಾಡುವುದು. ಈ ಕಾಯಿಲೆ ಹೆಚ್ಚಾಗ ಪಶ್ಚಿಮ ಘಟ್ಟ, ಮಲೆನಾಡುಗಳಲ್ಲಿ ಕಂಡು ಬರುವುದು. ಮೊದಲಿಗೆ ಮಂಗನಕಾಯಿಲೆ 1957ರಲ್ಲಿ ಶಿವಮೊಗ್ಗದಲ್ಲಿ ಕಂಡು ಬಂದಿತ್ತಿ, ನಂತರ ಅದು ಕರಾವಳಿ, ಗೋವಾ, ಮಹಾರಾಷ್ಟ್ರಕ್ಕೂ ಹಬ್ಬಿತ್ತು.
ಈ ಮಂಗನ ಕಾಯಿಲೆ ಹೇಗೆ ಹರಡುವುದು?
ಈ ಮಂಗನ ಕಾಯಿಲೆ ನಾವು ಮಂಗನಿಂದ ಹರಡುತ್ತದೆ ಎಂದು ಭಾವಿಸುತ್ತೇವೆ, ಆದರೆ ಇದು ಇತರ ಕೀಟ, ಪ್ರಾಣಿ ಮೂಲಕ ಹರಡುವುದಕ್ಕಿಂತ ಚಿಗಟ ಮೂಲಕ ಹರಡುವುದು. ಈ ಕೆಂಪು ಚಿಗಟ ಕಚ್ಚಿದ ಜೀವಿಗಳಿಗೆ ಈ ವೈರಸ್ ಹರಡುವುದು. ಈ ಚಿಗಟ ಕಚ್ಚುವ ಇಲಿ, ಹೆಗ್ಗಣ, ಮಂಗಳಿಗೂ ಹರಡುವುದು, ಮನೆಯಲ್ಲಿ ನಾಯಿ, ಮತ್ತಿತರ ಸಾಕು ಪ್ರಾಣಿಗಳ ಮೇಲೆ ಕೂಡ ಈ ಚಿಗಟ ಕಂಡು ಬರವುದು.
ಮಂಗನ ಕಾಯಿಲೆಯ ಲಕ್ಷಣಗಳೇನು?
ತೀವ್ರವಾದ ಜ್ವರ
ಕೆಮ್ಮು
ತಲೆನೋವು
ವಾಂತಿ-ಬೇಧಿ
ಒಂದು ರೀತಿಯ ಗೊಂದಲ
ಜ್ವರ ತುಂಬಾನೇ ಹೆಚ್ಚಾದಾಗ ದೃಷ್ಟಿದೋಷ ಕೂಡ ಕಂಡು ಬರುವುದು
ಯಾವುದಾದರೂ ಊರಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ ಆ ಊರಿನವರು ಬೇರೆ ಊರಿಗೆ ಸ್ವಲ್ಪ ಸಮಯ ಹೋಗಬಾರದು.
ಮಂಗನಕಾಯಿಲೆ ಸೋಂಕು ತಗುಲಿದಾಗ
ಜ್ವರ
ತುಂಬಾನೇ ತಲೆನೋವು
ಮೂಗಿನಲ್ಲಿ ರಕ್ತಸ್ರಾವ
ಗಂಟಲು, ಮಲವಿಸರ್ಜನೆಯ ಸಮಯದಲ್ಲಿ ರಕ್ತಸ್ರಾವ
ರೋಗ ಲಕ್ಷಣಗಳು ಉಲ್ಬಣಗೊಂಡಾಗ
ವಾಂತಿ
ಮೈಕೈ ನಡಗುವುದು
ಅಸ್ವಸ್ಥತೆ
ಮಂಗನಕಾಯಿಲೆಗೆ ಲಸಿಕೆ ಬಂದಿದೆ
ಮಂಗನ ಕಾಯಿಲೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದು ಮಂಗನಕಾಯಿಲೆ ಈ ರೀತಿ ಪ್ರತಿವರ್ಷ ಕಾಡಲು ಪ್ರಮುಖ ಕಾರಣವಾಗಿದೆ, ಈಗ ಮಂಗನಕಾಯಿಲೆಗೆ ಲಸಿಕೆ ಕಂಡು ಹಿಡಿಯಲಾಗಿದ್ದು ಪರೀಕ್ಷಣಾ ಹಂತದಲ್ಲಿದೆ , ಇದರ ಬಗ್ಗೆ ಕ್ಲಿನಕಲ್ ಟೆಸ್ಟ್ ನಡೆಯುತ್ತದೆ.
ಮಂಗನಕಾಯಿಲೆಗೆ ಲಸಿಕೆ ಬಂದರೆ ಪಶು ಸಂಗೋಪನೆ ಮಾಡುವವರು, ಪಶ್ಚಿಮ ಘಟ್ಟಗಳಲ್ಲಿ ವಾಸಿಸುತ್ತಿರುವವರು ಈ ರೋಗದಿಂದ ಪಾರಾಗಬಹುದು.
ಮಂಗನಕಾಯಿಲೆ Flaviviridae ಎಂಬ ವೈರಸ್ ಕುಟುಂಬಕ್ಕೆ ಸೇರಿದ ವೈರಸ್‌ನಿಂದ ಉಂಟಾಗುತ್ತದೆ, ಈ ವೈರಸ್ ಚಿಗಟ, ಹೇನು, ಪ್ರಾಣಿಗಳನ್ನುಕಡಿಯುವ ಕೀಟ ಇವುಗಳಿಂದ ಹರಡುವುದು. ಈ ಕಾಯಿಲೆ ಮಂಗ, ಇಲಿ, ಹಕ್ಕಿ ಇವುಗಳ ಮೂಲಕ ಹರಡುವುದು, ಇದು vector-borne disease ಈ ಕಾಯಿಲೆ ಆಗಿದೆ.
ಈ ರೋಗ ಹರಡುವುದನ್ನು ತಡೆಗ್ಟುವುದು ಹೇಗೆ?
ಈ ರೋಗ ಕಂಡು ಬಂದ ಪ್ರದೇಶದಲ್ಲಿ ಹೆಚ್ಚಿನ ಜಾಗ್ರತೆವಹಿಸಬೇಕು. ಕೀಟಗಳು, ಚಿಗಟಗಳು ಕಚ್ಚದಂತೆ ಜಾಗ್ರತೆವಹಿಸಬೇಕು, ಕಾಯಿಲೆ ಬಿದ್ದ ಪ್ರಾಣಿಗಳ ಆರೈಕೆ ಮಾಡುವಾಗ ಜಾಗ್ರತೆವಹಿಸಿ. ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನಹರಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
