70ರಲ್ಲೂ 20ರಂತೆ ಕಾಣಬೇಕೆ? ಈ ಅಭ್ಯಾಸ ನಿಮ್ಮ ಯೌವನ ಕಾಪಾಡುತ್ತೆ! ಹೇಗೆ ಗೊತ್ತಾ?

ಈ ಅಭ್ಯಾಸ ಇದ್ರೆ 70ರಲ್ಲೂ 20ರಂತೆ ಕಾಣಬಹುದು! ನೀವು ಎಂದಿಗೂ ಇದನ್ನು ಟ್ರೈ ಮಾಡಿಲ್ಲ ಬಿಡಿ. ಹೌದು, ನಿಮ್ಮ ವಯಸ್ಸಿಗಿಂತ ಚಿಕ್ಕವರಾಗಿ (young look) ಕಾಣಬೇಕೆಂದರೆ, ಇಂದೇ ಈ 10 ಅಭ್ಯಾಸಗಳನ್ನು ಶುರು ಮಾಡಿ. ದುಂದು ವೆಚ್ಚ ಮಾಡಿ ಸೌಂದರ್ಯವರ್ಧಕ ಮತ್ತು ಶಸ್ತ್ರಚಿಕಿತ್ಸೆ ಪಡೆಯುವುದನ್ನು ಮೊದಲು ಬಿಡಿ. ಕೆಲವು ಸರಳ ದೈನಂದಿನ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ನಿಮ್ಮ ಯೌವನ ಮತ್ತು ಆರೋಗ್ಯವನ್ನು ಬದಲಾಯಿಸಬಹುದು. ನೀವು ವಯಸ್ಸಾದ ಲಕ್ಷಣಗಳಿಂದ ಪಾರಾಗಲು ಮತ್ತು ಚಿಕ್ಕವರಂತೆ ಕಾಣಲು ನಾವು ತಿಳಿಸುವ 10 ಸರಳ ಅಭ್ಯಾಸಗಳನ್ನು ಫಾಲೋ ಮಾಡಿ.

ತಮ್ಮ ವಯಸ್ಸಿಗಿಂತ 10 ವರ್ಷ ಚಿಕ್ಕವರಂತೆ ಕಾಣಲು ಯಾರು ತಾನೆ ಇಷ್ಟಬಡಲ್ಲ ಹೇಳಿ? ಕೆಲವರು ಎಷ್ಟೇ ವಯಸ್ಸಾದರೂ ಚಿಕ್ಕವರಂತೆಯೇ (youthful appearance) ಕಾಣ್ತಾರೆ. ನೀವು ನಿತ್ಯ ಅನುಸರಿಸುವ ಕೆಲವು ಅಭ್ಯಾಸಗಳಿಂದ ಇದು ಸಾಧ್ಯ ಎನ್ನುವುದು ತಜ್ಞರ ಅಭಿಪ್ರಾಯ. ದುಬಾರಿ ಚಿಕಿತ್ಸೆ ಹೊರತಾಗಿ, ಶಿಸ್ತುಬದ್ಧ ದಿನಚರಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಜೊತೆಗೆ ಕೆಲವು ಸಣ್ಣ ಬದಲಾವಣೆಗಳು ನಿಮ್ಮ ಸೌಂದರ್ಯದ ಮೇಲೆ ಪ್ರಭಾವ ಬೀರುತ್ತೆ. ಬನ್ನಿ, ತಜ್ಞರು ವಯಸ್ಸಿಗಿಂತ ಚಿಕ್ಕವರಂತೆ ಕಾಣಲು ಸೂಚಿಸಿರುವ 10 ಅಭ್ಯಾಸಗಳು (Anti Aging Tips) ಯಾವುವು? ಇದರಿಂದ ಏನು ಲಾಭ? ಎನ್ನುವುದುನ್ನು ತಿಳಿಯೋಣ.

youthful

ನಿತ್ಯ ಸನ್‌ಸ್ಕ್ರೀನ್ ಬಳಸಿ

ಸೂರ್ಯನ ಬೆಳಕಿನಿಂದ ಬರುವ ಹಾನಿಕಾರಕ UV ಕಿರಣಗಳು ವಯಸ್ಸಾಗುವಿಕೆ, ಚರ್ಮದ ಸುಕ್ಕುಗಳಿಗೆ ಮುಖ್ಯ ಕಾರಣ. ಮೋಡ ಕವಿದ ವಾತಾವರಣ ಇದ್ದಾಗ ಅಥವಾ ಮನೆಯೊಳಗೆ ಕಿಟಕಿಗಳ ಬಳಿ ಇರುವಾಗಲೂ, ನಿತ್ಯ ಕನಿಷ್ಠ SPF 30 ಇರುವ (ವಿಶಾಲ ಸ್ಪೆಕ್ಟ್ರಮ್) ಸನ್‌ಸ್ಕ್ರೀನ್ ಬಳಸಿ. ಇದು ನಿಮ್ಮ ಚರ್ಮಕ್ಕೆ ರಕ್ಷಣೆ ನೀಡುತ್ತದೆ.

ಕನಿಷ್ಠ 8 ಗ್ಲಾಸ್ ನೀರು ಕುಡಿಯಿರಿ

ದೇಹವನ್ನು ಹೈಡ್ರೇಟೆಡ್ ಆಗಿರಿಸಿಕೊಳ್ಳಿ. ನೀರು ಯೌವನದ ಚಿಲುಮೆಯಂತೆ. ಹೀಗಾಗಿ, ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರು ಕುಡಿಯಿರಿ. ಇದರಿಂದ ನಿಮ್ಮ ಚರ್ಮವು ಮೃದುವಾಗುತ್ತದೆ ಮತ್ತು ಹೊಳೆಯುತ್ತದೆ. ದೇಹದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

Take a Poll

7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿ

ನಿದ್ರೆಯ ಕೊರತೆಯು ಯೌವನವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ, 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿ. ನಿದ್ರೆಯ ಸಮಯದಲ್ಲಿ ನಿಮ್ಮ ದೇಹವು ಜೀವಕೋಶಗಳನ್ನು, ವಿಶೇಷವಾಗಿ ಚರ್ಮದ ಕೋಶಗಳನ್ನು ದುರಸ್ತಿ ಮಾಡುತ್ತದೆ. ಗುಣಮಟ್ಟದ ನಿದ್ರೆಯು ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ, ಯೌವ್ವನದ ಚರ್ಮಕ್ಕೆ ಸಹಾಯ ಮಾಡುತ್ತದೆ.

ನಿತ್ಯ ಎರಡು ಬಾರಿ ಮುಖ ತೊಳೆಯಿರಿ

ಯೌವ್ವನದ ಚರ್ಮಕ್ಕೆ ಸಾಮಾನ್ಯ ಶುಚಿತ್ವ ಬಹಳ ಮುಖ್ಯ. ನೀವು ನಿತ್ಯ ಎರಡು ಬಾರಿ ಮುಖ ತೊಳೆಯಿರಿ. 'ಬೆಳಗ್ಗೆ ಒಮ್ಮೆ ಮತ್ತು ಮಲಗುವ ಮುನ್ನ ಒಮ್ಮೆ' ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ. ಇದರಿಂದ ಕೊಳಕು, ಮಾಲಿನ್ಯ, ಮೇಕಪ್ ಮತ್ತು ಹೆಚ್ಚುವರಿ ಎಣ್ಣೆ ನಿವಾರಣೆ ಆಗುತ್ತದೆ. ಇದರೊಂದಿಗೆ ಸೂಕ್ತವಾದ ಕ್ಲೆನ್ಸರ್ ಬಳಸಬಹುದು.

ಮಾಯಿಶ್ಚರೈಸರ್ ಬಳಸಿ

ವಯಸ್ಸಾದಂತೆ ಚರ್ಮವು ತೇವಾಂಶ ಮತ್ತು ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಳ್ಳುತ್ತದೆ. ನಿಮ್ಮ ದಿನಚರಿಯಲ್ಲಿ ರೆಟಿನಾಲ್, ಪೆಪ್ಟೈಡ್‌ಗಳು, ಹೈಲುರಾನಿಕ್ ಆಮ್ಲ ಅಥವಾ ಸೆರಾಮೈಡ್‌ಗಳಂತಹ ಪದಾರ್ಥಗಳನ್ನು ಒಳಗೊಂಡಿರುವ ಮಾಯಿಶ್ಚರೈಸರ್ ಬಳಸಿ. ಈ ಪದಾರ್ಥಗಳು ಚರ್ಮವನ್ನು ತೇವಾಂಶದಿಂದ ಮತ್ತು ಮೃದುವಾಗಿಡಲು ಸಹಾಯ ಮಾಡುತ್ತದೆ.

ವ್ಯಾಯಾಮ ಮಾಡಿ

ಒತ್ತಡವು ವಯಸ್ಸಾಗುವಿಕೆಗೆ ಒಂದು ಕಾರಣ. ನಿಯಮಿತವಾಗಿ ವ್ಯಾಯಾಮ ಮಾಡಿ. ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ದೈನಂದಿನ ದೈಹಿಕ ಚಟುವಟಿಕೆಯು ರಕ್ತ ಪರಿಚಲನೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಒದಗಿಸುತ್ತದೆ. ಇದು ಆರೋಗ್ಯಕರ, ಯೌವ್ವನದ ಹೊಳಪನ್ನು ಉತ್ತೇಜಿಸುತ್ತದೆ.

ಮುಖದ ಮೇಲೆ ಸದಾ 'ನಗು' ಇರಲಿ

ಇದರೊಂದಿಗೆ, ಸಮತೋಲಿತ ಆಹಾರವನ್ನು ಸೇವಿಸಿ. ಫೇಸ್ ಮಸಾಜ್ ಅಥವಾ ಫೇಸ್ ಯೋಗವನ್ನು ಅಭ್ಯಾಸ ಮಾಡಿ. ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡಿ. ಒತ್ತಡವನ್ನು ನಿಯಂತ್ರಿಸಿ. ದೀರ್ಘಕಾಲದ ಒತ್ತಡವು ವಯಸ್ಸಾಗುವಿಕೆಗೆ ಒಂದು ಕಾರಣ. ಕೊನೆಯದಾಗು ನಿಮ್ಮ ಮುಖದ ಮೇಲೆ ಸದಾ ನಗುವಿರಲಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Experts Says, This Daily Habits Can Save Your Youthful- Are You Doing It Enough?

Experts Says, This Daily Habits Can Save Your Youthful; Are You Doing It Enough?
Story first published: Friday, May 30, 2025, 15:35 [IST]
X
Desktop Bottom Promotion