Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ತನದಲ್ಲಿ ಈ 7 ಬದಲಾವಣೆಗಳು ಕಂಡು ಬಂದರೆ ಸ್ತನ ಕ್ಯಾನ್ಸರ್‌ವಿರಬಹುದು
ಡಾ.ಬಸಿಲಾ ಅಲಿ, ಸ್ತನ ಶಸ್ತ್ರಚಿಕಿತ್ಸಕರು,
ಕೆಎಂಸಿ ಆಸ್ಪತ್ರೆ ಡಾ. ಬಿ.ಆರ್.ಅಂಬೇಡ್ಕರ್ ವೃತ್ತ, ಮಂಗಳೂರು
ಭಾರತದಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿದ್ದು, ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ. ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಸಂಭವನೀಯತೆಯು ಪಾಶ್ಚಿಮಾತ್ಯ ದೇಶಗಳ ಮಹಿಳೆಯರಿಗಿಂತ ಕಡಿಮೆಯಿದ್ದರೂ, ಮರಣ ಪ್ರಮಾಣವು ಭಾರತದಲ್ಲಿ ತುಂಬಾ ಹೆಚ್ಚಾಗಿದೆ. ಸ್ತನ ಕ್ಯಾನ್ಸರ್ ಆರಂಭದಲ್ಲಿಯೇ ಗುರುತಿಸಿದರೆ ಗುಣಪಡಿಸುವುದು ಸುಲಭವಾಗುವುದು, ಆದರೆ ಹೆಚ್ಚಿನ ಮಹಿಳೆಯರು ಪ್ರಾರಂಭದ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಹಾಗಾಗಿ ಸ್ತನ ಕ್ಯಾನ್ಸರ್‌ನಿಂದಾಗಿ ಮರಣವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ.

ಸ್ತನ ಕ್ಯಾನ್ಸರ್‌ನ ಅಪಾಯ ತಪ್ಪಿಸುವುದು ಹೇಗೆ?
ಸ್ತನ ಕ್ಯಾನ್ಸರ್ ಬಂದರೆ ಗುಣಪಡಿಸುವ ಅತ್ಯುತ್ತಮ ವಿಧಾನವೆಂದರೆ ಪ್ರಾರಂಭದಲ್ಲಿಯೇ ಅದರ ಲಕ್ಷಣ ಗುರುತಿಸುವುದು. ಪ್ರಾರಂಭದಲ್ಲಿಯೇ ಸ್ತನ ಕ್ಯಾನ್ಸರ್ ಪತ್ತೆಯಾದರೆ ಬದುಕಿಳಿಯುವ ಸಾಧ್ಯತೆ ಹೆಚ್ಚುವುದು. ಸ್ತನ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿ ಸಹಜ ಬದುಕು ನಡೆಸಲು ಸಾಧ್ಯವಾಗುವುದು. ಸ್ತನದ ಬಗ್ಗೆ ಮಾತನಾಡಲು ಹಾಗೂ ಆ ಭಾಗದಲ್ಲಿ ಏನಾದರೂ ಅಸಹಜ ಗಡ್ಡೆ ಬಂದು ಬಂದರೆ ತುಂಬಾ ಮಹಿಳೆಯರು ಪ್ರಾರಂಭದ ಹಂತದಲ್ಲಿ ವೈದ್ಯರಿಗೆ ತೋರಿಸಲು ಮುಜುಗರ ಪಡುತ್ತಾರೆ, ಈ ರೀತಿ ಮಾಡಬಾರದು.
ಸ್ತನ ಕ್ಯಾನ್ಸರ್ ಅಪಾಯ ತಡೆಗಟ್ಟುವುದು ಹೇಗೆ?
ಸ್ತನ ಕ್ಯಾನ್ಸರ್ ತಡೆಗಟ್ಟಲು ಮುಖ್ಯವಾಗಿ ಮಾಡಬೇಕಾಗಿರುವುದು ಸ್ತನ ಕ್ಯಾನ್ಸರ್ ಕುರಿತು ಜಾಗ್ರತೆ ಮೂಡಿಸುವುದು. ಮಹಿಳೆಯರಲ್ಲಿ ಸ್ತನದ ಪರೀಕ್ಷೆ ಮಾಡಲು ಸಲಹೆ ನೀಡುವುದುಮ ಸ್ತನದಲ್ಲಿ ಏನಾದರೂ ಬದಲಾವಣೆ ಕಂಡು ಬಂದರೆ, ಸ್ತನದಲ್ಲಿ ಚಿಕ್ಕ ಗಡ್ಡೆ ಅನಿಸಿದರೆ ಕೂಡಲೇ ವೈದ್ಯರನ್ನು ಕಾಣುವಂತೆ ಸಲಹೆ ನೀಡುವುದು ಮಾಡಬೇಕಾಗಿದೆ. ಸ್ತನ ಕ್ಯಾನ್ಸರ್ ಪತ್ತೆಗೆ ಮೊದಲು ಸ್ತನ ಕ್ಯಾನ್ಸರ್ ಬಗ್ಗೆ ಭಯ ದೂರಾಗಬೇಕು ಅಂತಾರೆ ತಜ್ಞರು. 20 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು, ವೈದ್ಯಕೀಯ ವೃತ್ತಿಪರರು ಕಲಿಸಿಕೊಡುವ ಸ್ವಯಂ ಸ್ತನ ಪರೀಕ್ಷೆಗಳನ್ನು ತಿಂಗಳಿಗೊಮ್ಮೆ ಮಾಡಿಕೊಳ್ಳಬೇಕೆಂದು ಶಿಫಾರಸು ಮಾಡಲಾಗಿದೆ.
ಸ್ತನ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳೇನು?
- ಸ್ತನದಲ್ಲಿ ಗಡ್ಡೆ (ಅದು ನೋವು ರಹಿತ ಗಡ್ಡೆಯೂ ಆಗಿರಬಹುದು): ಗಡ್ಡೆ ಬಂದಿದ್ದರೂ ನೋವಿಲ್ಲ ಎಂದು ನಿರ್ಲಕ್ಷ್ಯ ಮಾಡುತ್ತಾರೆ, ಈ ತಪ್ಪು ಮಾಡಬಾರದು.
- ಸ್ತನದ ಗಾತ್ರದಲ್ಲಿ ಬದಲಾವಣೆಯಾಗುವುದು, ಸ್ತನದಲ್ಲಿ ಊತ ಕಂಡು ಬರುವುದು (ಗಡ್ಡೆ ಅಷ್ಟಾಗಿ ಗೋಚರಿಸುವುದಿಲ್ಲ, ಊತ ಕಂಡು ಬರುವುದು)
- ಮೊಲೆತೊಟ್ಟಿನಲ್ಲಿ ರಕ್ತದ ಕಲೆ ಅಥವಾ ಹೆಚ್ಚಿನ ರಕ್ತಸ್ರಾವದ ಮೂಲಕ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು.
- ಮೊಲೆತೊಟ್ಟು ಬಿರುಕು ಮತ್ತು ಮೊಲೆತೊಟ್ಟುಗಳ ಮೇಲೆ ಚರ್ಮದ ಸುಲಿತಗಳು ಸಹ ಕ್ಯಾನ್ಸರ್‌ನ ಲಕ್ಷಣವಾಗಿದೆ.
- ಕ್ಯಾನ್ಸರ್‌ನಿಂದಾಗಿ ಮೊಲೆತೊಟ್ಟು ಒಳಕ್ಕೆ ಹೋಗುವುದು ಕೂಡ ಸ್ತನ ಕ್ಯಾನ್ಸರ್ ಲಕ್ಷಣವಾಗಿದೆ.
- ಸ್ತನ ಕ್ಯಾನ್ಸರ್ ಕಂಕುಗಳಲ್ಲಿ ಗಡ್ಡೆಯಾಗಿ ಅಥವಾ ಸ್ತನದಲ್ಲಿ ಅನೇಕ ಗಡ್ಡೆಗಳಾಗಿಯೂ ಕಾಣಿಸಿಕೊಳ್ಳಬಹುದು. ಮುಂದುವರಿದ ಹಂತಗಳಲ್ಲಿ ಚರ್ಮ ಕೆಂಪಾಗುವಿಕೆ, ದ್ರವ ಶೇಖರಣೆ(ಎಡಿಮಾ), ಹುಣ್ಣು ಮತ್ತು ಸ್ರಾವದಂತಹ ಬದಲಾವಣೆಗಳು ಕಂಡು ಬರುವುದು ಈ ಹಂತಗಳಲ್ಲಿ ಸ್ತನ ಕ್ಯಾನ್ಸರ್ ನೋವಿನಿಂದ ಕೂಡಿರುತ್ತದೆ.
ಯಾವಾಗ ವೈದ್ಯರನ್ನು ಕಾಣಬೇಕು?
ಈ ಮೇಲಿನಬ ಯಾವುದೇ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿಯಾಗಿ ಪರೀಕ್ಷೆಗೆ ಒಳಪಡಬೇಕು, ವೈದ್ಯರು ನೀಡುವ ಸಲಹೆ ಸೂಚನೆಯನ್ನು ಪಾಲಿಸಬೇಕು.
ಸ್ತನ ಕ್ಯಾನ್ಸರ್‌ಗೆ ಕಾರಣವೇನು?
ಇಂಥದ್ದೇ ನಿಖರ ಕಾರಣ ಎಂದು ಹೇಳುವಂತಿಲ್ಲ, ಹಾರ್ಮೋನ್‌ಗಳ ಬದಲಾವಣೆ, ಜೀವನಶೈಲಿ, ಪರಿಸರ ಇವೆಲ್ಲಾ ಪ್ರಭಾವ ಬೀರುವುದು.
ಕೆಲವರಿಗೆ ಯಾವುದೇ ರಿಸ್ಕ್‌ಫ್ಯಾಕ್ಟರ್ ಇರುವುದಿಲ್ಲ, ಆದರೂ ಸ್ತನ ಕ್ಯಾನ್ಸರ್ ಕಂಡು ಬರುವುದು. ಡಿಎನ್‌ಎದಲ್ಲಿ ಬದಲಾವಣೆಯಾದಾಗ ಈ ಸ್ತನ ಕ್ಯಾನ್ಸರ್ ಉಂಟಾಗುವುದು. ಕ್ಯಾನ್ಸರ್ ಕಣಳು ಉಂಟಾದಾಗ ಸ್ತನ ಭಾಗದಲ್ಲಿ ಗಡ್ಡೆಗಳಾಗುತ್ತದೆ.
ಈ ಸ್ತನ ಕ್ಯಾನ್ಸರ್ ಕುಟುಂಬದಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್ ಆಗಿದ್ದರೆ ಬರುವ ಸಾಧ್ಯತೆ ಇದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


