Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ದೀಪಾವಳಿಯ ಸಂಭ್ರಮಕ್ಕೆ ಯಾವ ಅಡೆತಡೆ ಉಂಟಾಗದಿರಲು ಇರಲಿ ಚಿಕ್ಕ ಮುನ್ನೆಚ್ಚರಿಕೆ
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು .... ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಸಂತೋಷ, ಸಮೃದ್ಧಿ ತುಂಬಲಿ, ನಿಮ್ಮ ಕನಸು ನನಸಾಗಲು ಲಕ್ಷ್ಮಿ ಕೃಪೆ ನಿಮ್ಮ ಮೇಲಿರಲಿ.
ದೀಪಾವಳಿ ಅಂದರೆ ದೀಪಾಗಳ ಸಡಗರ, ಇದರ ಜೊತೆ ಡಂ ಡಂ ಎನ್ನುವಪಟಾಕಿಗಳು, ಚುರುಚುರು ಕಟ್ಟಿ, ನೆಲಚಕ್ರ,ಬಾನೆತ್ತರಕ್ಕೆ ಹಾರುವ ಹೂಕುಂಡಗಳ ಇವೆಲ್ಲಾ ದೀಪಾವಳಿಗೆ ಮತ್ತಷ್ಟು ಮೆರಗು ನೀಡುತ್ತದೆ. ದೀಪಾವಿಗೆ ಪಟಾಕಿಗಳನ್ನು ಸಿಡಿಸುವಾಗ ಹೆಚ್ಚು ಜಾಗ್ರತೆವಹಿಸಿ, ತುಸು ನಿರ್ಲಕ್ಷ್ಯ ಕೆಲವರ ಬದುಕನ್ನು ಕತ್ತಲಾಗಿಸಬಹುದು.
ಪ್ರತಿಬಾರಿ ಹಬ್ಬದ ಸಮಯದಲ್ಲಿ ಪಟಾಕಿ ಸಿಡಿಸಿ ಕೆಲ ಮಕ್ಕಳಿಗೆ ಹಾನಿಯುಂಟಾಗಿರುತ್ತದೆ, ಹಾಗಾಗಿ ಪಟಾಕಿ ಸಂಭ್ರಮ ಇರಲಿ, ಆದರೆ ಎಚ್ಚರಿಕೆಯೂ ಇರಲಿದ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ತುರ್ತುನಿಗಾ ಘಟಕದ ಮುಖ್ಯಸ್ಥರಾದ ಡಾ. ಶೃತಿ ಭಾಸ್ಕರನ್ ಒಂದಿಷ್ಟು ಸಲಹೆ ನೀಡಿದ್ದಾರೆ.
ಈ ಸುರಕ್ಷಿತ ಕ್ರಮದೊಂದಿಗೆ ದೀಪಾವಳಿಯನ್ನು ತುಂಬಾ ಸಂಭ್ರಮದಿಂದ ಆಚರಿಸೋಣ:

ಹಸಿರು ಪಟಾಕಿಗಳಿಗೆ ಮಾತ್ರ ಸರ್ಕಾರ ಅನುಮತಿ ನೀಡಿದೆ
ಈ ಬಾರಿ ಸರ್ಕಾರ ಹಸಿರು ಪಟಾಕಿ ಮಾತ್ರ ಸಿಡಿಸಲು ಅನುಮತಿ ನೀಡಿದೆ, ಹೀಗಾಗಿ ಹಸಿರು ಪಟಾಕಿಗಳನ್ನು ಖರೀದಿಸಿ.
ಪಟಾಕಿಗಳನ್ನು ಈ ಜಾಗಗಳಲ್ಲಿ ಸಿಡಿಸಬೇಡಿ
ಮನೆಯ ಕಾಂಪೌಂಡ್ ಒಳಗಡೆ, ಗಾಡಿಗಳನ್ನು ಪಾರ್ಕ್ ಮಾಡಿರುವ ಕಡೆ, ಹೆಚ್ಚು ಜನರು ಗುಂಪು ಸೇರಿರುವ ಕಡೆ ಪಟಾಕಿಗಳನ್ನು ಸಿಡಿಸಬೇಡಿ. ನೀವು ಪಟಾಕಿಗಳನ್ನು ತೆರೆದ ಸ್ಥಳದಲ್ಲಿಯೇ ಪಟಾಕಿ ಸಿಡಿಸಿ. ಇದು ತುಂಬಾನೇ ಸುರಕ್ಷಿತ ವಿಧಾನ.
ಪಟಾಕಿಗಳನ್ನು ಹಿರಿಯರು ಹಾಗೂ ಮಕ್ಕಳನ್ನು ದೂರ ನಿಲ್ಲಿಸಿ ಸಿಡಿಸಿ: ಪಟಾಕಿ ಸಿಡಿಸುವಾಗ ಹೆಚ್ಚು ಸಂಭ್ರಮ ಪಡುವವರೇ ಮಕ್ಕಳು, ಅವರು ನಾವು ಪಟಾಕಿ ಸಿಡಿಸುವಾಗ ಓಡಾಡಿ ಬಂದು ನಿಲ್ಲುತ್ತಾರೆ, ಆದರೆ ಅವರನ್ನು ದೂರ ನಿಲ್ಲಿಸಿ ಪಟಾಕಿ ಸಿಡಿಸಿ, ಕೆಲವೊಮ್ಮೆ ಪಟಾಕಿ ನಾವು ಎಣಿಸಿದಂತೆ ಸಿಡಿಯುವುದಿಲ್ಲ, ಬೇರೆ ಕಡೆ ಹಾರಿ ಬಂದು ಸಿಡಿಯುತ್ತೆ, ಹಿರಿಯರಿದ್ದರೆ ಅಲ್ಲಿಂದ ಓಡುವುದು ಕಷ್ಟ, ಹಾಗಾಗಿ ಈ ಬಗ್ಗೆ ಸುರಕ್ಷಿತೆ ವಹಿಸಿ.
ಬೇಗನೆ ಹೊತ್ತಿಕೊಳ್ಳುವ ವಸ್ತುಗಳಿಂದ ದೂರ ಹೋಗಿ ಸಿಡಿಸಿ: ಕೆಲವೊಂದು ವಸ್ತುವಿಗೆ ಚಿಕ್ಕ ಕಿಡಿ ಬಿದ್ದರೆ ಸಾಕು ಹೊತ್ತಿ ಉರಿಯುತ್ತದೆ ಹಾಗಾಗಿ ಅಂಥ ವಸ್ತುಗಳಿಂದ ದೂರ ಹೋಗಿ ಸಿಡಿಸಿ. ಒಂದು ವೇಳೆ ಸ್ವಲ್ಪ ಬೆಂಕಿ ಹೊತ್ತಿಕೊಂಡರೂ ಅದನ್ನು ತಕ್ಷಣ ಕೆಡಿಸಲು ಬಕೆಟ್‌ನಲ್ಲಿ ನೀರು ತುಂಬಿಟ್ಟು ನಂತರ ಪಟಾಕಿಗಳನ್ನು ಸಿಡಿಸಿ. ಬೈಕ್ ಓಡಿಸುವಾಗ ಸುರಕ್ಷಿತೆಗೆ ಹೆಲ್ಮೆಟ್ ಧರಿಸುವಂತೆ ಪಟಾಕಿ ನಡೆಸುವಾಗ ಈ ಬಗೆಯ ಎಲ್ಲಾ ಮುನ್ನೆಚ್ಚರಿಕೆ ತಗೆದುಕೊಂಡರೆ ಆ ದಿನ ಯಾವುದೇ ಅವಘಡ ಸಂಭವಿಸುವುದಿಲ್ಲ, ನೀವು ಸಂತೋಷದಿಂದ ದೀಪಾವಳಿ ಸಂಭ್ರಮಿಸಬಹುದು.
ಒಂದು ವೇಳೆ ಗಾಯವಾದರೆ ಪ್ರಥಮ ಚಿಕಿತ್ಸೆ
ದೀಪಾವಳಿ ಹಬ್ಬದಲ್ಲಿ ಯಾರಿಗೂ ಏನೂ ಆಗದಿರಲಿ.. . ಆದರೂ ಪ್ರತಿವರ್ಷ ಪಟಾಕಿಯಿಂದಾಗಿ ಗಾಯಗೊಳಗಾದವರನ್ನು ನೋಡುತ್ತೇವೆ. ಒಂದು ವೇಳೆ ಪಟಾಕಿಯಿಂದ ಏನಾದರು ಗಾಯವಾದರೆ ಆ ಗಾಯವಾದ ಜಾಗಕ್ಕೆ 15 ನಿಮಿಷ ಕಾಲ ತಂಪಾದ ನೀರು ಹಾಕಿ. ನಂತರ ತಕ್ಷಣವೇ ವೈದ್ಯಕೀಯಯ ನೆರವು ಪಡೆಯಿರಿ.
ಈ ರೀತಿ ಮಾಡಬೇಡ:
ಬೆಣ್ಣೆ ಅಥವಾ ತುಪ್ಪ ಹಚ್ಚುವುದು ಮಾಡಬೇಡಿ
ಗಾಯಕ್ಕೆ ಬಟ್ಟೆ ಅಂಟಿಕೊಂಡಿದ್ದರೆ ತೆಗೆಯಬೇಡಿ
ಅರಿಶಿಣ ಮತ್ತಿತರ ಮನೆಮದ್ದು ಮಾಡಬೇಡಿ, ಆದಷ್ಟು ಬೇಗ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಿರಿ.
ಕಣ್ಣಿಗೆ ಪೆಟ್ಟಾದರೆ
ಸಾಕಷ್ಟು ಬಾರಿ ಪಟಾಕಿ ಸಿಡಿಸಿ ಕಣ್ಣಿಗೆ ಪೆಟ್ಟು ಮಾಡಿಕೊಂಡ ಮಕ್ಕಳನ್ನು ನೋಡುತ್ತೇವೆ, ಕಣ್ಣಿಗೆ ಪೆಟ್ಟಾದರೆ ಕಣ್ಣಿಗೆ ನೀರು ಹಾಕಬೇಕು
ಕಣ್ಣುಗಳನ್ನು ಉಜ್ಜಲು ಬಿಡಬಾರದು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ
ಅಸ್ತಮಾ ಕಾಯಿಲೆಯಿದ್ದರೆ
ಅಸ್ತಮಾ ಇರುವವರು ಇನ್‌ಹೇಲರ್ ಜೊತೆಯಲ್ಲಿಯೇ ಇಟ್ಟುಕೊಳ್ಳಿ, ಪಟಾಕಿ ಸಿಡಿಸುವ ಕಡೆ ಹೋಗಬೇಡಿ. ಚೆನ್ನಾಗಿ ಗಾಳಿಯಾಡುವ ಕೋಣೆಯಲ್ಲಿದ್ದರೆ ಒಳ್ಳೆಯದು ಒಂದು ವೇಳೆ ಉಸಿರಾಟದ ಸಮಸ್ಯೆ ಹೆಚ್ಚಾದರೆ ವೈದ್ಯರ ಸಹಾಯವನ್ನು ಪಡೆಯಿರಿ ಎಂದು ಡಾ. ಶೃತಿ ಭಾಸ್ಕರನ್ ತಿಳಿಸಿದ್ದಾರೆ.
ಪ್ರಾಣಿಗಳನ್ನು ಜೋಪಾನ ಮಾಡಿ
ಮನೆಯಲ್ಲಿ ನಾಯಿ, ಹಸು ಈ ಬಗೆಯ ಪ್ರಾಣಿಗಳಿದ್ದರೆ ಪಟಾಕಿ ಸಿಡಿಸುವಾಗ ಭಯ ಪಡುತ್ತವೆ, ಆ ಶಬ್ದ ಅವುಗಳಿಗೆ ತುಂಬಾ ಒತ್ತಡವನ್ನು ಉಂಟು ಮಾಡುತ್ತದೆ, ಅವುಗಳನ್ನು ಮನೆಯೊಳಗಡೆ ನಿಮ್ಮ ಸಮೀಪ ಇಟ್ಟುಕೊಂಡರೆ ಗಲಿಬಿಲಿಗೊಳ್ಳುವುದು ಕಡಿಮೆಯಾಗುವುದು.
ಈ ರೀತಿ ಚಿಕ್ಕ ಚಿಕ್ಕ ಸುರಕ್ಷಿತ ಕ್ರಮಗಳು ಸಾಕು ದೀಪಾವಳಿ ಹಬ್ಬವನ್ನು ದೊಡ್ಡದಾಗಿ ಸಂಭ್ರಮಿಸಲು...
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications