Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ಮಹಿಳೆಯರಲ್ಲಿ ಅತೀ ಹೆಚ್ಚಾಗಿ ಕಾಡುವ ಮಾನಸಿಕ ಸಮಸ್ಯೆ ಯಾವುದು? ತಜ್ಷರ ಉತ್ತರ ಇಲ್ಲಿದೆ.!
ವಿಶ್ವ ಮಹಿಳಾ ದಿನದ ಅಂಗವಾಗಿ ನಾವು ಮಹಿಳಾ ಮಾನಸಿಕ ಆರೋಗ್ಯದ ಕುರಿತಂತೆ ಚರ್ಚಿಸುವುದು ಅತ್ಯಾವಶ್ಯಕವಾಗಿದೆ. ಏಕೆಂದರೆ ಮಹಿಳೆಯರ ಮಾನಸಿಕ ಆರೋಗ್ಯವೀಗ ಪ್ರಸ್ತುತ ಸಮಸ್ಯೆಯಾತ್ಮಕವಾಗಿ ಕಂಡುಬರುತ್ತಿದೆ. ಯುವತಿಯರು ಹಾಗೂ ಮಹಿಳೆಯರಲ್ಲಿ ಹಲವು ಬಗೆಯ ಮಾನಸಿನ ಸಮಸ್ಯೆಗಳ ನಾವಿಂದು ನೋಡಬಹುದಾಗಿದೆ. ಮನಸ್ಸಿಗೆ ಸಂಬಂಧಿಸಿದ್ದಂತೆ, ಯಾರ ಬಳಿಯೂ ಹೇಳಿಕೊಳ್ಳಲು ಆಗದಂತಹ ಕೆಲವೊಂದು ಸಮಸ್ಯೆಗಳಿಗೆ ಅವರು ತುತ್ತಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಮಾಹಿತಿಯ ಪ್ರಕಾರ ಭಾರತದಲ್ಲಿ ಪುರುಷರಿಗಿಂತಲೂ ಹೆಚ್ಚಾಗಿ ಮಹಿಳೆಯರೇ ಹೆಚ್ಚಿನ ಮಾನಸಿಕ ಸಮಸ್ಯೆಗಳ ಎದುರಿಸುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು ಶೇ.39ರಷ್ಟು ಮಾನಸಿಕ ಆರೋಗ್ಯ ಸಮಸ್ಯೆಗಳು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತದೆ. ಖಿನ್ನತೆ ಮತ್ತು ಆತಂಕ ಈ ಸಮಸ್ಯೆಯಲ್ಲಿ ಬಹುತೇಕ ಸಾಮಾನ್ಯವಾಗಿ ಕಂಡು ಬರುವ ವಿಧ ಎಂದು ತಿಳಿದುಬಂದಿದೆ.

ಇನ್ನು ಮಹಿಳೆಯರಿಗಷ್ಟೇ ಕಾಡುವಂತಹ ಮಾನಸಿಕ ಸಮಸ್ಯೆಗಳ ಕುರಿತು ನಿಮಗೆ ಗೊತ್ತಾ? ಈ ಸಮಸ್ಯೆಗಳು ಮಹಿಳೆಯಲ್ಲೇ ಗಾಢವಾದ ಪ್ರಭಾವ ಉಂಟು ಮಾಡುತ್ತವೆ. ಇದರಿಂದ ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಬಹಳ ಗಂಭೀರ ಸ್ವರೂಪದ ಪರಿಣಾಮ ಬೀರುತ್ತಿರುವುದು ನೋಡಬಹುದು. ಹಾಗಾದ್ರೆ ಮಹಿಳರಲ್ಲಿ ಇತ್ತೀಚಿಗೆ ಅತ್ಯಂತ ಹೆಚ್ಚಾಗಿ ಕಾಡುತ್ತಿರುವ ಮಾನಸಿಕ ಸಮಸ್ಯೆಗಳು ಯಾವುದು?
ನಾವಿಂದು ಮಹಿಳೆಯರು ಹೆಚ್ಚಾಗಿ ಒಳಗಾಗುತ್ತಿರುವ ಮಾನಸಿಕ ಸಮಸ್ಯೆಗಳು ಯಾವುದು ಅನ್ನೋದನ್ನು ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿರುವ ಅರುಣ್ ಕುಮಾರ್ ಅವರ ಮೂಲಕ ತಿಳಿದುಕೊಳ್ಳೋಣ.
ಖಿನ್ನತೆ: ಸಾಮಾನ್ಯವಾಗಿ ಇಂದಿನ ಯುವತಿಯರಿಂದ ಹಿಡಿದು ಮಹಿಳೆಯರು ಕೂಡ ಈ ಖಿನ್ನತೆಗೆ ಇಂದು ಹೆಚ್ಚಾಗಿ ಒಳಗಾಗಿದ್ದಾರೆ. 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲಿ ಖಿನ್ನತೆಯ ಪ್ರಮಾಣವು ಶೇ. 76ರಷ್ಟಿದೆ ಎಂದು ತಿಳಿದುಬರುತ್ತದೆ. ಖಿನ್ನತೆ ಸಾಮಾನ್ಯವಾಗಿ ವಿವಾಹ ಪೂರ್ವಕ್ಕಿಂತ ವಿವಾಹದ ಬಳಿಕ ಕಾಡುವುದೇ ಹೆಚ್ಚು ಎಂಬುದು ಅರುಣ್ ಕುಮಾರ್ ಹೇಳುವ ಮಾತು.
ಮಹಿಳೆಯರಲ್ಲಿ ಮಾನಸಿಕ ಸಮಸ್ಯೆಯೂ ಪುರುಷರಿಗಿಂತ ಸ್ವಲ್ಪ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ ಪುರುಷರು ಮದ್ಯಪಾನ, ಮಾದಕ ವಸ್ತು ಸೇವನೆ, ಸಮಾಜ ವಿರೋಧಿ ನಡುವಳಿಕೆಯಂತಹ ಮಾನಸಿಕ ಕಾಯಿಲೆಗೆ ಒಳಗಾಗುವುದು ಹೆಚ್ಚು. ಆದ್ರೆ ಮಹಿಳೆಯರಲ್ಲಿ ದುಃಖ ಮತ್ತು ಆತಂಕದಂತಹ ಮಾನಸಿಕ ಕಾಯಿಲೆಗಳನ್ನು ಹೆಚ್ಚುಗಳಿಸುವ ಅಂಶ ಎಂದು ಹೇಳಬಹುದು. ಇದು ಆತಂಕ, ಒಂಟಿತನ, ಖಿನ್ನತೆಗೆ ಕಾರಣವಾಗುವಂತಹ ಅಂಶಗಳಾಗಿವೆ. ಹಾಗೆ ಮಾನಸಿಕ ಸಮಸ್ಯೆಗಳು ದೈಹಿಕ ಸಮಸ್ಯೆಯ ಮೂಲಕವು ಕಾಣಿಸಿಕೊಳ್ಳಲಿದೆ. ತಲೆನೋವು, ಹೊಟ್ಟೆ ನೋವು, ಅಧಿಕ ರಕ್ತದೊತ್ತಡ, ತೂಕ ಇಳಿಕೆಯಾಗುವುದು, ನಿದ್ರಾಹೀನತೆ, ಆಸಕ್ತಿ ಕಡಿಮೆಯಾಗವುದು ಇದೆಲ್ಲವು ಮಾನಸಿಕ ಸಮಸ್ಯೆಯ ಲಕ್ಷಣಗಳಾಗಿವೆ.
ಅರಿವಿನ ಕೊರತೆ (Cognitive Deficits)
ಋತುಬಂಧದ ಪರಿವರ್ತನೆಯ ಸಮಯದಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಈ ಸಮಸ್ಯೆಗಳ ನೋಡಬಹುದು. ಕೆಲಸದ ಕಡೆಗೆ ಗಮವಿಲ್ಲದಿರುವುದು, ಒಂದೇ ವಿಚಾರದಲ್ಲಿ ಗಮನವಿಡಲು ಆಗದೆ ಇರುವುದು. ಚಂಚಲ ಪರಿಸ್ಥಿತಿ ಎನ್ನಬಹುದು. ಇದು ಮಹಿಳೆಯಲ್ಲಿ ಇತ್ತಿಚಿಗೆ ಹೆಚ್ಛಾಗಿ ಕಾಣಿಸುತ್ತಿರುವ ಮಾನಸಿಕ ಸಮಸ್ಯೆ ಎನ್ನಬಹುದು. ಯಾವಾಗಲು ಅವರು ಗೊಂದಲದಲ್ಲಿರುವುದು, ಯಾವುದಾದರು ಕೆಲಸ ಮಾಡಲು ಹೋದಾಗ ಅದು ದೊಡ್ಡ ಸವಾಲು, ಅಥವಾ ಪ್ರಶ್ನೆಯಂತೆ ಅವರಿಗೆ ಕಾಡುವುದು, ಹೇಗೆ ಆರಂಭಿಸಬೇಕು ಎಂದು ತಿಳಿಯದೆ ಹೆಚ್ಚು ಆತಂಕಕ್ಕೆ ಒಳಗಾಗುವ ಸ್ಥಿತಿ ಇದಾಗಿದೆ.
ಪ್ರೌಢಾವಸ್ಥೆಯ ಸಮಸ್ಯೆ
ಕೆಲವು ಹುಡುಗಿಯರು ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಹಾರ್ಮೋನ್‌ಗಳ ಬದಲಾವಣೆ ಈಗ ಹೆಚ್ಚಿನ ಮಾನಸಿಕ ಚಂಚಲತೆಗೆ ಕಾರಣವಾಗುತ್ತಿದೆ. ಹಾರ್ಮೋನ್‌ಗಳ ಮಟ್ಟದಲ್ಲಿ ಬದಲಾವಣೆಯಾಗುವುದು ಅವರ ತಾತ್ಕಾಲಿಕ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕೆಲವೊಂದು ಪ್ರಕರಣದಲ್ಲಿ ಇದು ಅತೀರೇಕಕ್ಕೆ ತಿರುಗುವುದು ನೋಡಬಹುದು. ಅವರು ಸಣ್ಣ ಪುಟ್ಟ ವಿಚಾರಕ್ಕೆ ಸಿಟ್ಟುಮಾಡಿಕೊಳ್ಳುವುದು, ಒಂಟಿಯಾಗಿರುವುದು, ಯಾವ ಕೆಲಸದಲ್ಲಿಯೂ ಆಸಕ್ತಿ ಇಲ್ಲದೆ ಮಂಕಾಗುವುದು ಇಂತಹ ಸಮಸ್ಯೆ ಎದುರಿಸುತ್ತಿರುವವರು ಕೂಡ ಇಂದು ಹೆಚ್ಚಾಗಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications