Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ನಿದ್ರೆ ಕಡಿಮೆಯಾದರೆ ಮೆದುಳು ತನ್ನನ್ನು ತಾನೇ ತಿನ್ನಲು ಆರಂಭಿಸುತ್ತಾ? ಇದರ ಸತ್ಯವೇನು?
ನಮ್ಮ ಇಡೀ ದೇಹವನ್ನು ನಿಯಂತ್ರಿಸುವುದು ಮೆದುಳು ಎಂಬುದನ್ನು ನಾವೆಲ್ಲಾ ತಿಳಿದಿದ್ದೇವೆ. ನ್ಯೂರೋ ಸಿಸ್ಟಮ್‌ನಿಂದ ಬ್ರೈನ್‌ನ ವರೆಗಿನ ಕಾರ್ಯಗಳು ನಮ್ಮ ಇಡೀ ದೇಹವನ್ನು ನಿಯಂತ್ರಿಸಲಿವೆ. ಹಾಗೆ ನಮ್ಮ ಮೆದುಳನ್ನು ಕೂಡ ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಮ್ಮ ಮೆದುಳಿನ ಕಾರ್ಯಕ್ಷಮತೆ ದಕ್ಷವಾಗಿದ್ದರೆ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡೂ ಕೂಡ ಉತ್ತಮ ಸ್ಥಿತಿಯಲ್ಲಿರಲಿದೆ.
ಇನ್ನು ಮೆದುಳನ್ನು ಆರೋಗ್ಯವಾಗಿಡಲು ಮಾನವ ಸೂಕ್ತ ಹಾಗೂ ನಿರ್ಧಿಷ್ಟ ಸಮಯ ನಿದ್ರೆ ಮಾಡಬೇಕು ಎಂದು ಹೇಳಲಾಗಿದೆ. ಆರೋಗ್ಯವಂತ ಸ್ಥಿತಿಯಲ್ಲಿ ಕನಿಷ್ಠ 6 ಗಂಟೆಗಳ ನಿದ್ರೆ ಅಗತ್ಯವಿದೆ ಎಂದು ಕೂಡ ಹೇಳಲಾಗಿದೆ. ಆದ್ರೆ ಹಲವರು ಈಗ ಹಲವು ಕಾರಣಗಳಿಂದಾಗಿ 6 ಗಂಟೆಗಳ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಅವರು ಕೆಲವೊಮ್ಮೆ ಒಂದೆರಡು ಗಂಟೆ ನಿದ್ರೆಗೆ ಜಾರುತ್ತಾರೆ.

ಹಾಗೆ ಮತ್ತೆ ಕೆಲವರು ವೃತ್ತಿ ಸಂಬಂಧಿತ ವಿಚಾರವಾಗಿ ರಾತ್ರಿ ಪಾಳಿ ಮಾಡುವವರು, ಮೊಬೈಲ್, ಟಿವಿ ವೀಕ್ಷಣೆಯ ಕಾರಣದಿಂದಾಗಿ ತಡವಾಗಿ ಮಲಗುವುದು ಹೀಗೆ ಹಲವು ರೀತಿಯಲ್ಲಿ ನಿದ್ರೆಗೆ ಅಡ್ಡಿಯಾಗುವುದು ನೋಡಬಹುದು. ಮತ್ತೊಂದಿಷ್ಟು ಪ್ರಕರಣಗಳು ವೈದ್ಯಕೀಯ ಸಮಸ್ಯೆಗಳಾಗಿವೆ. ನಿದ್ರಾಹೀನತೆಯಂತಹ ಸಮಸ್ಯೆಯ ಹೊಂದಿರುವವರು ಕೂಡ ನಿದ್ರೆಯಿಂದ ಸಮಸ್ಯೆ ಎದುರಿಸುತ್ತಾರೆ.
ಆದ್ರೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌ವೊಂದು ಎಲ್ಲರ ಗಮನ ಸೆಳೆದಿದೆ. ಸರಿಯಾಗಿ ನಿದ್ರೆ ಮಾಡದೆ ಇದ್ದರೆ ಮೆದುಳು ತನ್ನ ಭಾಗವನ್ನು ತಾನೇ ತಿನ್ನುತ್ತದೆ ಹೀಗಾಗಿ ಸರಿಯಾಗಿ ನಿದ್ರೆ ಮಾಡಬೇಕಿದೆ ಎಂದು ಪೋಸ್ಟ್‌ವೊಂದು ವಿವರಿಸುವುದು ನೋಡಬಹುದು. ಅದರಲ್ಲಿ ನಿದ್ರೆ ಬಿಟ್ಟರೆ ಮೆದುಳು ಒಂದು ಭಾಗವನ್ನು ನಿಧಾನವಾಗಿ ತಿನ್ನಲು ಆರಂಭಿಸಲಿದೆ, ಇದು ಹಲವು ರೀತಿಯ ಸಮಸ್ಯೆಗ ಉಂಟು ಮಾಡಲಿದೆ ಎಂದು ಬರೆದುಕೊಳ್ಳಲಾಗಿದೆ.
ನಿದ್ರೆಯ ಕೊರತೆಯು ನಿಮ್ಮ ಮೆದುಳನ್ನು ಆರೋಗ್ಯಕರ ಕೋಶಗಳ 'ನಾಶಗೊಳಿಸಲು' ಕಾರಣವಾಗುತ್ತದೆ, ಇದು ದೀರ್ಘಕಾಲದ ಹಾನಿಗೆ ಕಾರಣವಾಗಲಿದೆ ಎಂದು ಬರೆಯಲಾಗಿದೆ. ಈ ಪೋಸ್ಟ್ ಎಲ್ಲರ ಗಮನ ಸೆಳೆಯುವ ಜೊತೆಗೆ ಒಂದಿಷ್ಟು ಆತಂಕ ಹಾಗೆ ಕಡಿಮೆ ನಿದ್ರೆ ಮಾಡುವುದರಿಂದಾಗುವ ಅಡ್ಡಪರಿಣಾಮದ ಅಪಾಯ ಎಷ್ಟು ಭಯಾನಕವಾಗಿರಲಿದೆ ಎಂಬ ಕುರಿತಾಗಿ ವಿವರಿಸಿದೆ.
ಆದ್ರೆ ನಿಜವಾಗಲೂ ನಿದ್ರೆ ಕಡಿಮೆಯಾದಾಗ ಮೆದುಳು ತನ್ನ ಭಾಗವನ್ನು ತಾನೇ ತಿನ್ನಲು ಆರಂಭಸಲಿದ್ಯಾ? ಇದರಿಂದ ನಿಜವಾಗಿಯೂ ಮೆದುಳಿಗೆ ಹಾನಿಯಾಗಲಿದ್ಯಾ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ಕುರಿತಾಗಿ 2017ರಲ್ಲಿ ನಡೆದ ಅಧ್ಯಯನವೊಂದು ಬೆಳಕು ಚೆಲ್ಲುತ್ತದೆ. ಈ ಅಧ್ಯಯನದಲ್ಲಿ ಇಲಿಗಳನ್ನು ಬಳಸಿಕೊಳ್ಳಲಾಗಿfತ್ತು. ಈ ಇಲಿಗಳನ್ನು ಮೂರು ಭಾಗದಲ್ಲಿ ವಿಭಾಗಿಸಿ ಗುಂಪುಗಳನ್ನಾಗಿ ಮಾಡಲಾಗಿತ್ತು. ಮೊದಲನೇ ಗುಂಪಿನ ಇಲಿಗಳು ಸಾಮಾನ್ಯ ಚಟುವಟಿಕೆಯಿಂದ ಕೂಡಿರಲಿದೆ. ಮತ್ತೊಂದು ಗುಂಪು ಸತತ 8 ಗಂಟೆ ಎಚ್ಚರದಿಂದ ಇರುವುದು, ಇನ್ನೊಂದು ಸತತ 5 ದಿನಗಳ ಕಾಲ ಎಚ್ಚರದಿಂದ ಇರುವಂತೆ ನೋಡಿಕೊಳ್ಳಲಾಯಿತು.
ನಿದ್ರೆಯ ಕೊರತೆಯು ಮೈಕ್ರೋಗ್ಲಿಯಾ ಮತ್ತು ಆಸ್ಟ್ರೋಸೈಟ್‌ಗಳು ಎಂಬ ಕೆಲವು ಮೆದುಳಿನ ಕೋಶಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ, ಇದು ಸಾಮಾನ್ಯವಾಗಿ ಹಾನಿಗೊಳಗಾದ ನರಕೋಶಗಳು ಮತ್ತು ಕಲ್ಮಶಗಳ ತೆರವುಗೊಳಿಸಲಿದೆ. ಆದ್ರೆ ನಿದರೆ ಇಲ್ಲದ ಇಲಿಗಳಲ್ಲಿ ಆಸ್ಟ್ರೋಸೈಟ್ ಅಂಶ ಹೆಚ್ಚು ಸಕ್ರಿಯವಾಗಿತ್ತು. ಇದು ಮೆದುಳು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುವಂತಹ ಸಿನಾಪ್ಟಿಕ್ ಅನ್ನ ಹೆಚ್ಚಾಗಿ ನಾಶ ಮಾಡಲಿದೆ. ಇದು ಮೆದುಳಿನಲ್ಲಿನ ರಾಸಾಯನಿಕ ಕ್ರಿಯೆಗಳು ಹಾಗೂ ದೀರ್ಘಕಾಲ ನಿದ್ರಾಹೀನತೆಯಿಂದ ಬಳಲುವವರಲ್ಲಿ ನರಕ್ಷೀಣ ಸಮಸ್ಯೆಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.
ಆದ್ರೆ ಒಂದು ದಿನ ಅಥವಾ ಒಂದೆರಡು ದಿನ ನಿದ್ರೆ ಕಡಿಮೆಯಾದಾಗ ಮೆದುಳಿನ ಕೋಶಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಹಾಗೆ ಇದರಿಂದ ಮೆದುಳಿನ ಕಾರ್ಯಕ್ಷಮತೆ ಕುಗ್ಗುವಿಲ್ಲ. ದೀರ್ಘಕಾಲದ ಅಭ್ಯಾಸಗಳು ಮಾತ್ರವೇ ಹಾನಿ ಮಾಡಲಿವೆ.



Click it and Unblock the Notifications