Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕಾಟನ್ ಸ್ಟಿಕ್ ಬಳಸಿ ಕಿವಿ ಕ್ಲೀನ್ ಮಾಡುತ್ತೀರಾ? ಎಚ್ಚರ ವೈದ್ಯರು ಹೇಳೋದು ಕೇಳಿ
ದೇಹದ ಪ್ರತಿಯೊಂದು ಭಾಗವನ್ನು ಸ್ವಚ್ಛಗೊಳಿಸುವುದು ಎಲ್ಲರ ಇಚ್ಛೆ ಆಗಿರುತ್ತೆ. ಹಾಗೆ ಕಿವಿಗಳನ್ನು ಕೂಡ ನೀವು ಆಗಾಗ ಸ್ವಚ್ಛ ಮಾಡುತ್ತಲೇ ಇರುತ್ತೀರಿ. ಬಹುತೇಕರು ಕಾಟನ್ ಸ್ಟಿಕ್ ಬಳಸಿ ಕಿವಿಯನ್ನು ಸ್ವಚ್ಛ ಮಾಡೋದು ನೋಡಬಹುದು. ಆದ್ರೆ ಬಹುತೇಕರಿಗೆ ಕಿವಿ ಸ್ವಚ್ಛ ಮಾಡುವ ಒಂದು ಹವ್ಯಾಸ ಬರುಬರುತ್ತಾ ಗೀಳಾಗಿ ಪರಿಣಮಿಸುವುದು ನೋಡಬಹುದು.
ಕಿವಿಯನ್ನು ಪದೇ ಪದೇ ಕಾಟಲ್ ಸ್ಟಿಕ್ ಬಳಸಿ ಸ್ವಚ್ಛ ಮಾಡುವುದು, ದಿನದಲ್ಲಿ ಒಂದು ಬಾರಿಯಾದರು ಕಾಟನ್ ಸ್ಟಿಕ್ ಅನ್ನು ಅವು ಕಿರಿಯಲ್ಲಿ ಹಾಕಿ ತೆಗೆಯದಿದ್ದರೆ ಸಮಾಧಾನ ಇರುವುದಿಲ್ಲ. ಹಾಗೆ ಈ ರೀತಿ ಮಾಡುವುದು ಹಲವರಿಗೆ ಇದೊಂದು ದೊಡ್ಡ ಸಮಸ್ಯೆಯನ್ನು ಸಹ ತರಬಹುದು. ಹಾಗಾದ್ರೆ ಕಿವಿಗೆ ಈ ಕಾಟನ್ ಸ್ಟಿಕ್ ಹಾಕಿಕೊಳ್ಳುವುದರಿಂದಾಗುವ ಸಮಸ್ಯೆಗಳೇನು ಎಂಬುದು ನಿಮಗೆ ಗೊತ್ತಿದ್ಯಾ?

ಕಿವಿ ಸ್ವಚ್ಛಗೊಳಿಸಲು ಹಲವು ರೀತಿಯ ಮಾರ್ಗಗಳಿದ್ದರೂ ಈ ಕಾಟನ್ ಸ್ಟಿಕ್ ಬಳಸುವುದು ಕಾಮನ್ ಆಗಿದೆ. ದಿನಕ್ಕೊಂದು ಸ್ಟಿಕ್ ಅನ್ನು ಕಿವಿಗೆ ಹಾಕಿಕೊಳ್ಳುವುದು ನೋಡಬಹುದು. ಇದರಿಂದ ಕಿವಿಯೊಳಗಿನ ಕಲ್ಮಶ ಹೊರಬರಲಿದೆ ಎಂದು ಭಾವಿಸಲಾಗಿದೆ. ಆದ್ರೆ ಇದು ಅರ್ಧ ಸತ್ಯ ಎಂಬ ವಿಚಾರ ನಿಮಗೆ ಗೊತ್ತಾ?
ನೀವು ಕಿವಿಗೆ ಈ ಕಾಟನ್ ಸ್ಟಿಕ್ ಹಾಕುವುದರಿಂದ ಕಿವಿ ಸ್ಚಚ್ಛ ಆಗುವ ಸಾಧ್ಯತೆ ಬಹಳ ಕಡಿಮೆಯಾಗಿರಲಿದೆ. ಏಕೆಂದರೆ ಕಾಟನ್ ಸ್ಟಿಕ್ ಕಿವಿಗೆ ಹಾಕಿದಾಗ ಕಿವಿಯಲ್ಲಿ ಮೇಣದಂತಹ ಕಲುಶಿತ ವಸ್ತು ಮುಂದೆ ದೂಡಲ್ಪಡುತ್ತದೆ. ಆದ್ರೆ ಕೆಲವೊಮ್ಮೆ ಕಾಟನ್‌ಗೆ ಅಂಟಿಕೊಂಡು ಹೊರಬರುತ್ತದೆ. ಆದ್ರೆ ಬಹುತೇಕ ಸಮಯ ಮುಂದೆ ದೂಡಲ್ಪಡುತ್ತದೆ ಎಂದು AIIMS, ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ ಪಡೆದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಇತ್ತೀಚೆಗೆ ತಮ್ಮ ಇನ್ಸ್‌ಸ್ಟಾಗ್ರಾಮ್ ಪೋಸ್ಟ್‌ವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕಾಟನ್ ಸ್ಟಿಕ್ ಡಬ್ಬಿಯ ಮೇಲೆಯೇ ಅದರ ಬಳಕೆ ಕುರಿತಾಗಿ ಬರೆಯಲಾಗಿರುತ್ತದೆ. ಇದನ್ನು ಕಿವಿಯ ಒಳಗೆ ಹಾಕಬೇಡಿ ಎಂದೇ ಬರೆಯಲಾಗಿರುತ್ತದೆ. ಆದ್ರೆ ಖರೀದಿಸುವ ಮಂದಿ ಇದನ್ನು ಕಿವಿ ಸ್ವಚ್ಛಗೊಳಿಸುವ ವಸ್ತು ಎಂದೇ ಭಾವಿಸುತ್ತಾರೆ. ಹೀಗೆ ಕಾಟನ್ ಸ್ಟಿಕ್ ಅನ್ನು ಕಿವಿಗೆ ಹಾಕುವುದರಿಂದ ಅದು ನಿಮ್ಮ ಕಿವಿಯ ಕಾಲುವೆಯನ್ನು ಬಂದ್ ಮಾಡುವ ಸಾಧ್ಯತೆ ಹೆಚ್ಚಾಗಿರಲಿದೆಯಂತೆ, ಕಿವಿಯಲ್ಲಿನ ಕಲ್ಮಶವು ಈ ಕಾಲುವೆಯನ್ನು ಬಂದ್ ಮಾಡಬಹುದು. ಇದರಿಂದ ಹೆಚ್ಚಿನ ಜನರಿಗೆ ಸಮಸ್ಯೆಗಳಾಗಬಹುದು ಎಂದು ವೈದ್ಯರು ಹೇಳುತ್ತಾರೆ.
ಇಯರ್‌ಬಡ್‌ಗಳನ್ನು ತುಂಬಾ ದೂರ ಸೇರಿಸುವುದರಿಂದ ಕಿವಿ ಕಾಲುವೆಯಲ್ಲಿನ ಸೂಕ್ಷ್ಮ ಚರ್ಮಕ್ಕೆ ಹಾನಿಯಾಗಬಹುದು ಅಥವಾ ಕಿವಿಯ ರಂಧ್ರವನ್ನು ದೊಡ್ಡದಾಗಿಸಬಹುದು. ಇದರ ಪರಿಣಾಮವಾಗಿ ಕಿವಿ ನೋವು ಅಥವಾ ಶ್ರವನ ದೋಷ ಕೂಡ ಉಂಟಾಗಬಹುದು. ಹಾಗೆ ಇದರಿಂದ ಕಿವಿಗೆ ಬ್ಯಾಕ್ಟೀರಿಯಾಗಳು ಪ್ರವೇಶಿಸಬಹುದು, ಇದು ಸೋಂಕುಗಳಿಗೂ ಕಾರಣವಾಗಬಹುದು, ಇದು ನೋವು, ಊತ ಅಥವಾ ಸ್ರವಿಸುವಿಕೆಯನ್ನು ಉಂಟುಮಾಡಬಹುದು.
ಸಾಮಾನ್ಯವಾಗಿ ಕಿವಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವ 70ರಷ್ಟು ಮಂದಿ ಕಿವಿ ಗಾಯಗಳು ಈ ಇಯರ್ ಬಡ್ ಬಳಕೆಯಿಂದ ಉಂಟಾಗಿರಲಿದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಕಿವಿ ಸ್ವಚ್ಛಗೊಳಿಸುವ ಅಲ್ಪಾವಧಿಯ ಪರಿಹಾರವು ದೊಡ್ಡ ವೆಚ್ಚಕ್ಕೂ ಕಾರಣವಾಗಬಹುದು. ಇಯರ್‌ಬಡ್‌ಗಳನ್ನು ಆಗಾಗ್ಗೆ ಬಳಸುವುದರಿಂದ ಕಿವಿ ಕಾಲುವೆಯಲ್ಲಿ ಕಿರಿಕಿರಿ ಅಥವಾ ಉರಿಯೂತ ಉಂಟಾಗಬಹುದು.
ಕಿವಿ ಸ್ವಚ್ಛ ಮಾಡುವುದು ಹೇಗೆ?
ಸಾಮಾನ್ಯವಾಗಿ ಕಿವಿಯಲ್ಲಿರುವ ಮೇಣದಂತಹ ರಚನೆಯು ಕಿವಿಯ ಒಳಗೆ ಧೂಳು, ಕೀಟಗಳು ಹೋಗದಂತೆ ತಡೆಯಲು ಇರುವ ವಸ್ತು. ನಾವು ಅದನ್ನೇ ತೆಗೆದು ಹೊರ ಹಾಕಿದರೆ ಕಿವಿ ಸಮಸ್ಯೆ ಉಂಟಾಗಬಹುದು, ಆದ್ರೆ ಈ ಮೇಣದಂತಹ ರಚನೆ ಗಟ್ಟಿಯಾಗಿ ತಾನಾಗಿಯೇ ಕಿವಿ ಕಾಲುವೆಯಿಂದ ಜಾರಿ ಕಿರಿ ರಂಧ್ರದ ತುದಿಗೆ ಬಂದು ತಲುಪುತ್ತದೆ ಆ ಸಮಯದಲ್ಲಿ ಅದನ್ನು ಸುರಕ್ಷಿತ ರೀತಿಯಲ್ಲಿ ತೆಗೆಯಬೇಕು ಎಂದು ಹೇಳುತ್ತಾರೆ ವೈದ್ಯರು.



Click it and Unblock the Notifications
