Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಕೋವಿಡ್19 ಲಸಿಕೆ ಪಡೆಯುವ ಮುನ್ನ ಹಾಗೂ ನಂತರ ಯಾವ ಆಹಾರ ಸೇವಿಸಬೇಕು, ಯಾವುದು ಸೇವಿಸಬಾರದು?
ಕೊರೊನಾ ಎರಡನೇ ಅಲೆ ಶುರುವಾದ ಮೇಲೆ ಕೋವಿಡ್ 19 ವ್ಯಾಕ್ಸಿನ್ ಪಡೆಯಲು ಜನರು ತುಂಬಾನೇ ಉತ್ಸಾಹ ತೋರುತ್ತಿದ್ದಾರೆ. ಕೋವಿಡ್ 19 ಲಸಿಕೆ ಪಡೆದವರಲ್ಲಿ ಕೊರೊನಾ ಸೋಂಕು ತಗುಲಿದರೆ ರೋಗ ಲಕ್ಷಣಗಳು ಗಂಭೀರವಾಗುವುದಿಲ್ಲ ಎಂಬುವುದು ಈಗಾಗಲೇ ಸಾಬೀತಾಗೊದೆ.
ಈ ಕಾರಣದಿಂದಾಗಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದವರು ಕೂಡ ಈಗ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ನೀವು ಲಸಿಕೆ ಪಡೆಯಲು ಶೆಡ್ಯೂಲ್ ಮಾಡಿದ್ದರೆ ಲಸಿಕೆ ಪಡೆಯುವ ಮುನ್ನ ಹಾಗೂ ಪಡೆದ ನಂತರ ಯಾವ ಆಹಾರಗಳನ್ನು ಸೇವಿಸಬೇಕು, ಏನನ್ನು ಸೇವಿಸಬಾರದು ಎಂಬುವುದನ್ನು ನೋಡೋಣ:

ಸಾಕಷ್ಟು ನೀರು ಕುಡಿಯಿರಿ
ದಿನಕ್ಕೆ 8 ಲೋಟ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಆದ್ದರಿಂದ ಲಸಿಕೆ ಪಡೆಯುವ ಮುನ್ನ ಹಾಗೂ ನಂತರ ಸಾಕಷ್ಟು ನೀರು ಕುಡಿಯಬೇಕು. ಬಿಸಿ- ಬಿಸಿ ನೀರು ಕುಡಿಯಿರಿ. ಹಣ್ಣುಗಳ ಜ್ಯೂಸ್ ಮಾಡಿ ಕುಡಿಯಿರಿ. ಇನ್ನು ನೀರಿಗೆ ಅರಿಶಿಣ ಹಾಕಿ ಕುಡಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ನಿಂಬು ಪಾನೀಯ ಕುಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಮದ್ಯ ಮುಟ್ಟಬಾರದು
ಮದ್ಯ ಕುಡಿಯುವುದರಿಂದ ಡೀಹೈಡ್ರೇಷನ್ (ನಿರ್ಜಲೀಕರಣ) ಉಂಟಾಗುವುದು. ಈ ಕಾರಣಕ್ಕೆ ಲಸಿಕೆ ಪಡೆಯುವ ಮುನ್ನ, ಪಡೆದ ನಂತರ ಮದ್ಯ ಸೇವಿಸಬೇಡಿ. ಅಲ್ಲದೆ ಮದ್ಯ ಸೇವಿಸುವುದರಿಮದ ರೋಗ ನಿರೋಧಕ ಸಾಮರ್ಥ್ಯ ಕುಗ್ಗಿಸುತ್ತೆ ಎಂದು ಸಂಶೋಧನೆಗಳು ಕೂಡ ಹೇಳಿವೆ.

ಸಂಸ್ಕರಿಸಿದ ಧಾನ್ಯಗಳನ್ನು ಬಳಸಿ
ಬ್ರಿಟಷ್ ಜರ್ನಲ್ ಆಫ್ ನ್ಯೂಟ್ರಿಷಿಯನ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಂಸ್ಕರಿಸಿದ ಧಾನ್ಯಗಳಿಗಿಂತ ಇಡೀ ಧಾನ್ಯಗಳ ಬಳಕೆ ಒಳ್ಳೆಯದು ಎಂದು ಹೇಳಿದೆ. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆ ತುಂಬಾನೇ ಒಳ್ಳೆಯದು. ಸಂಸ್ಕರಿಸಿದ ಆಹಾರದಲ್ಲಿ ಅಧಿಕ ಪ್ರಮಾಣದ ಕ್ಯಾಲೋರಿ ಇರುವುದರಿಂದ ಅಂಥ ಆಹಾರಗಳನ್ನು ದೂರವಿಡಿ.

ನಾರಿನಂಶವಿರುವ ಹಣ್ಣುಗಳು ಹಾಗೂ ತರಕಾರಿಗಳ ಸೇವನೆ ಮಾಡಿ
ಲಸಿಕೆ ಪಡೆಯುವ ಮುನ್ನ ಹಾಗೂ ಲಸಿಕೆ ಪಡೆದ ಬಳಿಕ ಹಣ್ಣುಗಳನ್ನು ಸೇವಿಸಿ, ತರಕಾರಿಗಳನ್ನು ತಿನ್ನಿ.

ಲಸಿಕೆಗೆ ಮುನ್ನ ಸಮತೋಲಿತ ಆಹಾರ ಸೇವಿಸಿ
ಕೋವಿಡ್ 19 ಲಸಿಕೆ ಪಡೆದ ಕೆಲವರಲ್ಲಿ ತಲೆಸುತ್ತು, ಸುಸ್ತು ಮುಂತಾದ ಅಡ್ಡಪರಿಣಾಮಗಳು ಕಂಡು ಬರುವುದು. ಇದನ್ನು ತಡೆಗಟ್ಟುವಲ್ಲಿ ಸಮತೋಲಿತ ಆಹಾರ ಸೇವನೆ ಸಹಾಯ ಮಾಡುತ್ತೆ. ಲಸಿಕೆ ಪಡೆಯುವ ಮುನ್ನ ಆರೋಗ್ಯಕರವಾದ ಆಹಾರ ಸೇವಿಸಿ, ನೀರು ಕುಡಿದು ಹೋಗಿ.

ಲಸಿಕೆ ಪಡೆದ ದಿನ ಈ ಆಹಾರ ಸೇವಿಸಬೇಡಿ
ನೀವು ಲಸಿಕೆ ಪಡೆದು ಬಂದು ಮೇಲೆ ಪಿಜ್ಜಾ, ನೂಡಲ್ಸ್, ಬನ್, ಮ್ಯಾಗಿ ಈ ರೀತಿಯ ಆಹಾರಗಳನ್ನು ಸೇವಿಸಬೇಡಿ. ಬದಲಿಗೆ ಭಾರತೀಯ ಶೈಲೀಯ ಆಹಾರ ಗಂಜಿ, ಕಿಚಡಿ ಈ ರೀತಿಯ ಆರೋಗ್ಯಕರ ಆಹಾರ ಸೇವಿಸಿ. ಫಾಸ್ಟ್ ಫುಡ್‌ಗಳಿಂದ ದೂರವಿರಿ.
ವಿಟಮಿನ್ ಸಿ, ಸತುವಿನಂಶ ಆಹಾರವನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.

ಲಸಿಕೆ ಪಡೆದ ಬಳಿಕ ಅಡ್ಡಪರಿಣಾಮಗಳಾದರೆ
ಲಸಿಕೆ ಪಡೆದ ಬಳಿಕ ಒಮದು ವೇಳೆ ಅಡ್ಡ ಪರಿಣಾಮ ಉಂಟಾದರೆ 48 ಗಂಟೆಯಾದರೂ ಅದರ ಲಕ್ಷಣಗಳು ಕಡಿಮೆಯಾಗದಿದ್ದರೆ ವೈದ್ಯರನ್ನು ಭೇಟಿ ಮಾಡಿ.



Click it and Unblock the Notifications
