Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಪ್ರೊಸ್ಟೇಟ್ ಕ್ಯಾನ್ಸರ್ ಬಗ್ಗೆ ಇರುವ ಈ ತಪ್ಪು ಕಲ್ಪನೆಯಿಂದಲೇ ಅಪಾಯ ಹೆಚ್ಚುತ್ತಿದೆ!
ವಿಶ್ವದಲ್ಲಿ ಪುರುಷರ ಸಾವಿಗೆ ಕಾರಣವಾಗಿರುವ 6 ಪ್ರಮುಖ ಕಾಯಿಲೆಗಳಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಕೂಡ ಒಂದಾಗಿದೆ. ಕಳೆದ 2 ದಶಕಗಳಿಂದ ಈ ಮಹಾಮಾರಿ ಪ್ರೊಸ್ಟೇಟ್ ಕ್ಯಾನ್ಸರ್‌ಗೆ ಹಲವಾರು ಅತ್ಯಾಧುನಿಕ ಔಷಧಗಳು ದೊರೆಯುತ್ತಿರುವುದರಿಂದ ಇದರಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನು ಈ ಕಾಯಿಲೆಯನ್ನು ಆರಂಭದಲ್ಲಿಯೇ ಗುರುತಿಸಿದರೆ ಗುಣ ಪಡಿಸುವುದು ಮತ್ತಷ್ಟು ಸುಲಭವಾಗುವುದು.

ಆದರೆ ಪ್ರೊಸ್ಟೇಟ್ ಕ್ಯಾನ್ಸರ್ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ, ಇದರಿಂದಾಗಿ ಕೆಲವರಿಗೆ ಪ್ರಾರಂಭದಲ್ಲಿ ಕಾಯಿಲೆ ಗುರುತಿಸಲು ಸಾಧ್ಯವಾಗುವುದಿಲ್ಲ, ಆ ತಪ್ಪು ಕಲ್ಪನೆಗಳೇನು ಎಂದು ನೋಡೋಣ ಬನ್ನಿ:

ನನಗೆ ಯಾವುದೇ ಲಕ್ಷಣಗಳಿಲ್ಲ, ಆದ್ದರಿಂದ ಪ್ರೊಸ್ಟೇಟ್ ಕ್ಯಾನ್ಸರ್ ಇರಲ್ಲ
ತುಂಬಾ ಪುರುಷರು ಪ್ರಾರಂಭದಲ್ಲಿ ಗುರುತಿಸುವುದೇ ಇಲ್ಲ, ಯಾವಾಗ ಕಾಯಿಲೆ ಉಲ್ಬಣವಾಗುತ್ತದೋ ಆವಾಗ ಮಾತ್ರ ಗೊತ್ತಾಗುತ್ತದೆ. ಕುಟುಂಬದ ಇತಿಹಾಸ ಇರುವವರು, ಮಧುಮೇಹಿಗಳು, ಒಬೆಸಿಟಿ ಇರುವವರು ನಿಯಮಿತ ತಪಾಸಣೆ ಮಾಡುವುದರಿಂದ ಈ ಅಪಾಯ ತಗ್ಗಿಸಬಹುದು.
ಭಾರತದಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಕಡಿಮೆ ಇದೆ, ಆದ್ದರಿಂದ ಸ್ಕ್ರೀನಿಂಗ್ ಬೇಕಾಗಿಲ್ಲ
ಇದು ಕೂಡ ತಪ್ಪು ಕಲ್ಪನೆಯಾಗಿದೆ. ಸ್ಕ್ರೀನಿಂಗ್ ಮಾಡುವುದರಿಂದ ಕಾಯಿಲೆ ಇದ್ದರೆ ಬೇಗನೆ ತಿಳಿಯುತ್ತದೆ, ಇಲ್ಲದಿದ್ದರೆ ನೆಮ್ಮದಿಯಿಂದ ಇರಬಹುದು. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರೊಸ್ಟೇಟ್ ಹೆಚ್ಚಾಗುತ್ತಿದೆ, ಆದ್ದರಿಂದ ಆರೋಗ್ಯ ನಿರ್ಲಕ್ಷ್ಯ ಬೇಡ.

PSA ಪ್ರಮಾಣ ಹೆಚ್ಚಾದರೆ ಪ್ರೊಸ್ಟೇಟ್ ಕ್ಯಾನ್ಸರ್ ಇರಬಹುದು
ಪಿಎಸ್‌ಎ ಅಥವಾ ಪ್ರೊಸ್ಟೇಟ್ ಸ್ಪೆಸಿಫಿಕ್ ಆಂಟಿಜೆನ್ ಕ್ಯಾನ್ಸರ್ ಇದ್ದಾಗ ಮಾತ್ರವಲ್ಲ ಪ್ರೊಸ್ಟೇಟ್ ಊತ, ಗಂಭೀರವಾದ ಮೂತ್ರ ಸಮಸ್ಯೆ ,ಪ್ರೊಸ್ಟಟೈಟಿಸ್, ಪ್ರಾಸ್ಟಾಟಿಕ್ ಬಾವು ಉಂಟಾದಾಗಲೂ ಪಿಎಸ್‌ಎ ಅಧಿಕವಾಗುವುದು.
ದೊಡ್ಡ ಪ್ರೊಸ್ಟೇಟ್ ಗ್ಲಾಂಡ್ ಇದ್ದರೆ ಕ್ಯಾನ್ಸರ್ ಅಪಾಯ ಅಧಿಕ
ಪ್ರೊಸ್ಟೇಟ್ ಗ್ಲಾಂಡ್ ದೊಡ್ಡದಾಗಿ ಇರುವುದಕ್ಕೂ ಪ್ರೊಸ್ಟೇಟ್ ಕ್ಯಾನ್ಸರ್‌ಗೂ ಸಂಬಂಧವಿಲ್ಲ .

ಪ್ರೊಸ್ಟೇಟ್ ಕ್ಯಾನ್ಸರ್‌ಗೆ ಚಿಕಿತ್ಸೆ ಕಷ್ಟ
ಅದು ತಪ್ಪು ಕಲ್ಪನೆ. ಪ್ರೊಸ್ಟೇಟ್ ಕ್ಯಾನ್ಸರ್‌ಗೆ ಅಡ್ವನ್ಸ್ಡ್ ಚಿಕಿತ್ಸೆ ಬಂದಿದೆ, ಪ್ರಾರಂಭದಲ್ಲಿಯೇ ಗುರುತಿಸಿದರೆ ಸಂಪೂರ್ಣ ಗುಣಮುಖರಾಗುವ ಸಾಧ್ಯತೆ ತುಂಬಾನೇ ಇದೆ.
ಪ್ರೊಸ್ಟೇಟ್ ಕ್ಯಾನ್ಸರ್ ಅಪಾಯಕಾರಿಯಲ್ಲ, ಚಿಕಿತ್ಸೆ ಬೇಕಿಲ್ಲ
ಇದು ಭಾರತದಲ್ಲಿ ಸಾಕಷ್ಟು ಜನರಿಗಿರುವ ತಪ್ಪು ಕಲ್ಪನೆಗಿದೆ. ಪ್ರೊಸ್ಟೇಟ್ ಕ್ಯಾನ್ಸರ್ ಅಧಿಕವಾರೆ ಮೂಳೆ ಮುರಿತ, ಕಿಡ್ನಿ ಸಮಸ್ಯೆ, ಕಾಲುಗಳಲ್ಲಿ ಊತ ಈ ಬಗೆಯ ಸಮಸ್ಯೆ ಕಂಡು ಬರುವುದು. ಕ್ಯಾನ್ಸರ್ ಹರಡುವ ಮುನ್ನವೇ ಚಿಕಿತ್ಸೆ ಪಡೆದರೆ ಈ ಕಾಯಿಲೆ ಅಪಾಯಕಾರಿಯಾಗುವುದಿಲ್ಲ, ಆದರೆ ನಿರ್ಲಕ್ಷ್ಯ ಸಲ್ಲದು.



Click it and Unblock the Notifications
