Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕೋವಿಡ್ ಬಳಿಕ ಸುಸ್ತು, ಮೈಕೈ ನೋವು ಕಡಿಮೆಯಾಗಲು ಸೇವಿಸಬೇಕಾದ ಆಹಾರಗಳು
ಕೊರೊನಾ ಬಂದವರೆಲ್ಲಾ 'ಇತರ ಜ್ವರದಂತೆ ಇದು ಅಲ್ಲವೇ ಅಲ್ಲ, ತುಂಬಾ ಸುಸ್ತು, ಕೋವಿಡ್ ನೆಗೆಟಿವ್ ಬಂದು ಎರಡು ವಾರವಾದರೂ ಸುಸ್ತು ಕಡಿಮೆಯಾಗುತ್ತಿಲ್ಲ' ಎಂದು ಹೇಳುತ್ತಿದ್ದಾರೆ.
ಕೊರೊನಾ ಬಂದವರಲ್ಲಿ, ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ತುಂಬಾನೇ ಸುಸ್ತು ಕಂಡು ಬರುತ್ತಿದೆ. ಕೆಲವರಲ್ಲಿ ತಲೆಸುತ್ತು ಕೂಡ ಕಂಡು ಬರುತ್ತಿದೆ. ವೈದ್ಯರು ನೀಡಿರುವ ಔಷಧಗಳ ಜೊತೆಗೆ ನೀವು ಇವುಗಳನ್ನು ಮಾಡಿ ಕುಡಿದರೆ ಬೇಗನೆ ಸುಸ್ತು ಕಡಿಮೆಯಾಗುವುದು:

ಸೂಪ್ ಮಾಡಿ ಕುಡಿಯಿರಿ
ಅರಿಶಿಣ , ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ ಹಾಗೂ ಕಾಳು ಮೆಣಸು ಹಾಕಿ ತರಕಾರಿ ಅಥವಾ ಚಿಕನ್ ಸೂಪ್ ಮಾಡಿ ಕುಡಿಯಿರಿ. ಇದಕ್ಕೆ ಒಂದು ಚಮಚ ಶುದ್ಧ ತುಪ್ಪ ಅಥವಾ ಶುದ್ಧ ತೆಂಗಿನೆಣ್ಣೆ ಹಾಕಿ ಕುಡಿದರೆ ತುಂಬಾನೇ ಒಳ್ಳೆಯದು.

ನಿಂಬು ಪಾನೀಯ ಮಾಡಿ ಕುಡಿಯಿರಿ
ಮೂಸಂಬಿ ಜ್ಯೂಸ್, ನಿಂಬು ಪಾನೀಯ ಮಾಡಿ ಕುಡಿಯಿರಿ. ಇನ್ನು ಮಧುಮೇಹವಿದ್ದರೆ ಸಕ್ಕರೆ ಬದಲಿಗೆ ಉಪ್ಪು ಹಾಕಿ ಕುಡಿಯಿರಿ.

ಸಲಾಡ್‌ಗೆ ತೆಂಗಿನೆಣ್ಣೆ ಹಾಕಿ ಕುಡಿಯಿರಿ
ಸಲಾಡ್ ಮಾಡಿ ತಿನ್ನಿ, ಅದಕ್ಕೆ ಶುದ್ಧ ತೆಂಗಿನೆಣ್ಣೆ ಅಥವಾ ವರ್ಜಿನ್ ಆಲೀವ್ ಆಯಿಲ್ ಹಾಕಿ ಸವಿಯಿರಿ..

ಸ್ನ್ಯಾಕ್ಸ್‌ಗೆ ನಟ್ಸ್ ತಿನ್ನಿ
ಬಾದಾಮಿ, ವಾಲ್ನಟ್, ಗೋಡಂಬಿ, ನಟ್ಸ್ ಇವುಗಳಲ್ಲಿ ವಿಟಮಿನ್ಸ್, ಪ್ರೊಟೀನ್ಸ್, ಕೊಬ್ಬಿನಂಶವಿರುವುದರಿಂದ ದೇಹದ ಸುಸ್ತನ್ನು ಬೇಗನೆ ಕಡಿಮೆ ಮಾಡುತ್ತದೆ.

ಒಮೆಗಾ 3 ಕೊಬ್ಬಿನಂಶವಿರುವ ಆಹಾರ
ಅಗಸೆ ಬೀಜ, ಮೀನು, ಶಿಯಾ ಬೀಜಗಳು ಇವುಗಳಲ್ಲಿ ಒಮೆಗಾ 3 ಕೊಬ್ಬಿನಂಶವಿರುತ್ತದೆ. ಇನ್ನು ಒಮೆಗಾ 3 ಕೊಬ್ಬಿನಂಶವಿರುವ ಸಪ್ಲಿಮೆಂಟ್ ತೆಗೆದುಕೊಳ್ಳಬಹುದು.

ಮಸಾಲೆ ಪದಾರ್ಥ ತಿನ್ನಬಹುದೇ?
ಕೆಂಪು ಅಥವಾ ಹಸಿ ಮೆಣಸಿನ ಕಾಯಿ ಹಾಕಿ ಮಾಡಿದ ಪದಾರ್ಥ ಸೇವಿಸಬಹುದು.

ಈ ಆಹಾರದಿಂದ ದೂರವಿರಿ
ಸಕ್ಕರೆ, ಸಂಸ್ಕರಿಸಿದ ಮಾಂಸ, ಜಂಕ್ ಫುಡ್ಸ್, ಸಂಸ್ಕರಿಸಿದ ಕಾರ್ಬ್ಸ್, ಸಿಗರೇಟ್, ಮದ್ಯ ಇವುಗಳನ್ನು ದೂರವಿಡಿ.
ಇದನ್ನು ಪಾಲಿಸಿದರೆ ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಬೇಗನೆ ಸುಸ್ತು ಕಡಿಮೆಯಾಗುವುದು.
ಕೊನೆಯದಾಗಿ
ಇನ್ನು ಕೊರೊನಾದಿಂದ ಚೇತರಿಸಿಕೊಂಡವರು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ. ಮಾಡಬೇಕಾದ ಕೆಲಸವನ್ನು ನಂತರವೂ ಮಾಡಬಹುದು, ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಆರಾಮವಾಗಿರಿ... ಬಿಸಿ ಬಿಸಿ ತಿನ್ನಿ, ಸಾಕಷ್ಟು ನಿದ್ದೆ ಮಾಡಿ.



Click it and Unblock the Notifications
