Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ನಿಮಗೆ ಅಚ್ಚರಿ ಉಂಟು ಮಾಡುವ ಚೀಸ್‌ನ ಗುಣಗಳಿವು
ಚೀಸ್ ಆರೋಗ್ಯಕ್ಕೆ ಹಾನಿಕರ ಎಂದು ಬಹಳಷ್ಟು ಜನ ಇದರಿಂದ ದೂರವೇ ಉಳಿಯುತ್ತಾರೆ. ಹೆಚ್ಚಾದ ಚೀಸ್ ಸೇವನೆಯಿಂದ ದೇಹದ ತೂಕ ಹೆಚ್ಚಾಗಿ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಮುಂಬರುವ ದಿನಗಳಲ್ಲಿ ಎದುರಿಸಬೇಕಾಗಿ ಬರಬಹುದು ಎಂಬ ಭಯದಿಂದ ಅನೇಕ ಜನರು ತಮ್ಮ ಮನೆಗಳಲ್ಲಿ ಚೀಸ್ ಉಪಯೋಗಿಸುವುದಿಲ್ಲ.

ಆದರೆ ಪ್ರತಿಯೊಂದು ವಸ್ತುವಿನಲ್ಲೂ ಅನುಕೂಲಗಳು ಮತ್ತು ಅನಾನುಕೂಲಗಳು ಇರುವಂತೆ ಚೀಸ್ ನಲ್ಲೂ ಸಹ ನಮಗೆ ಗೊತ್ತಿಲ್ಲದಂತಹ ಸಾಕಷ್ಟು ಆರೋಗ್ಯ ಪ್ರಯೋಜನಗಳು ಕಂಡುಬರುತ್ತವೆ. ಚೀಸ್ ಸೇವನೆಯಿಂದ ನಮ್ಮ ದೇಹದ ಮೂಳೆಗಳು ಬಲಗೊಳ್ಳುವುದರಿಂದ ಹಿಡಿದು ನಮ್ಮ ದೇಹದ ಒಳಗಿರುವ ಹೃದಯದ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ ಎಂದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಚೀಸ್ ಬಗೆಗಿನ ಇಂತಹ ಅನೇಕ ಆಶ್ಚರ್ಯಕರ ಸಂಗತಿಗಳು ಈ ಲೇಖನದಲ್ಲಿವೆ. ಚೀಸ್ ಸೇವನೆಯ ಪ್ರಭಾವದಿಂದ ಈ ಕೆಳಕಂಡಂತೆ ಸಾಕಷ್ಟು ಒಳ್ಳೆಯ ಲಾಭಗಳಿವೆ.

ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತದೆ : -
ಚೀಸ್ ನಲ್ಲಿ ಸಾಕಷ್ಟು ಬಗೆಯ ಉತ್ತಮ ಪೌಷ್ಟಿಕ ಸತ್ವಗಳು ಲಭ್ಯವಿವೆ. ಅದರಲ್ಲಿ ಮುಖ್ಯವಾಗಿ ಕ್ಯಾಲ್ಸಿಯಂ, ಪ್ರೋಟೀನ್, ಪಾಸ್ಪರಸ್, ಜಿಂಕ್, ವಿಟಮಿನ್ ' ಎ ' ಮತ್ತು ವಿಟಮಿನ್ ' ಬಿ12 '. ಚೀಸ್ ಸೇವಿಸುವುದರಿಂದ ದೇಹದಲ್ಲಿ ನಾವು ಸೇವಿಸುವ ಇನ್ನಿತರ ಆಹಾರಗಳಲ್ಲಿನ ಕ್ಯಾಲ್ಸಿಯಂ ಅಂಶವನ್ನು ನಮ್ಮ ದೇಹ ಹೀರಿಕೊಳ್ಳಲು ಚೀಸ್ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ನಮ್ಮ ದೇಹದ ಎಲ್ಲಾ ಭಾಗಗಳ ಮೂಳೆಗಳಿಗೆ ಹೀರಿಕೊಂಡ ಕ್ಯಾಲ್ಸಿಯಂ ಅಂಶವನ್ನು ಸಮ ಪ್ರಮಾಣದಲ್ಲಿ ವಿತರಣೆ ಮಾಡುತ್ತದೆ. ಇದರಿಂದ ನಮ್ಮ ಮೂಳೆಗಳು ಪರಿಣಾಮಕಾರಿಯಾಗಿ ಮತ್ತು ಸದೃಢವಾಗಿ ಕೆಲಸ ಮಾಡಲು ನೆರವಾಗುತ್ತದೆ.

ಮಾಂಸ ಖಂಡಗಳು ಬಲಗೊಳ್ಳುತ್ತವೆ : -
ಸಾಧಾರಣವಾಗಿ ವ್ಯಾಯಾಮ ಮಾಡಿ ತಮ್ಮ ದೇಹದ ಸದೃಢತೆಯನ್ನು ಕಾಪಾಡಿಕೊಳ್ಳಲು ಹಪಹಪಿಸುತ್ತಿರುವವರಿಗೆ ಚೀಸ್ ಒಂದು ಹೇಳಿ ಮಾಡಿಸಿದ ಉತ್ತಮ ಆಹಾರ ಪದಾರ್ಥ ಎಂದೇ ಹೇಳಬಹುದು. ಏಕೆಂದರೆ ಚೀಸ್ ನಲ್ಲಿ ಮನುಷ್ಯನ ಮಾಂಸ ಖಂಡಗಳನ್ನು ಬಲಪಡಿಸುವ ಗುಣ ಲಕ್ಷಣ ಇದೆ. ಇದರಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಅಂಶ ಲಭ್ಯವಿದ್ದು, ನಾವು ಸೇವಿಸುವ ಇನ್ನಿತರ ಆಹಾರಗಳ ಜೊತೆ ಸಿಗುವ ಪ್ರೋಟಿನ್ ಅಂಶಗಳನ್ನು ಒಟ್ಟುಗೂಡಿಸಿ ದೇಹದ ಸಂಪೂರ್ಣ ಮಾಂಸ ಖಂಡಗಳನ್ನು ಸದೃಢವಾಗಿ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುತ್ತದೆ.
leucine ಅಂಶ ಚೀಸ್ ನಲ್ಲಿ ಮತ್ತು ಇನ್ನಿತರ ಡೈರಿ ಉತ್ಪನ್ನಗಳಲ್ಲಿ, ಕೋಳಿ ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ದೇಹದ ಮಾಂಸ ಖಂಡಗಳ ಬಲಗೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮಾನಸಿಕ ಒತ್ತಡ ನಿವಾರಣೆ : -
ಪ್ರತಿ ದಿನ ಕೆಲಸದ ವಿಚಾರದಿಂದ ಬೇಸತ್ತು ಮಾನಸಿಕವಾಗಿ ಖಿನ್ನತೆಗೆ ಮತ್ತು ಆತಂಕಕ್ಕೊಳಗಾದ ಮಂದಿ ಸಂಜೆಯ ಸಮಯದಲ್ಲಿ ಚೀಸ್ ಅಥವಾ ಚೀಸ್ ನಿಂದ ಮಾಡಿದ ಯಾವುದಾದರೂ ಆಹಾರವನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ತಮ್ಮ ಮಾನಸಿಕ ಆರೋಗ್ಯಕ್ಕೆ ಬಹಳ ಒಳ್ಳೆಯದು. ಏಕೆಂದರೆ ಚೀಸ್ ನಲ್ಲಿ ' ಟ್ರಿಪ್ಟೊಫಾನ್ ' ಎಂಬ ಎಸೆನ್ಸಿಯಲ್ ಅಮೈನೊ ಆಸಿಡ್ ಅಂಶ ಲಭ್ಯವಿದ್ದು, ಇದು ಮೆದುಳಿನಲ್ಲಿ ಸೆರೋಟೋನಿನ್ ಅಂಶದ ಉತ್ಪತ್ತಿಯನ್ನು ವೃದ್ಧಿಗೊಳಿಸುತ್ತದೆ.
ಮಾನಸಿಕ ತಜ್ಞರ ಪ್ರಕಾರ ಮೆದುಳಿನಿಂದ ಉತ್ಪತ್ತಿಯಾಗುವ ' ಸೆರೋಟೋನಿನ್ ' ಅಂಶ ಮನಸ್ಸನ್ನು ಪ್ರಶಾಂತಗೊಳಿಸುವ ಮತ್ತು ಮನಸ್ಸಿನ ಆತಂಕಗಳನ್ನು ದೂರ ಮಾಡುವ ಶಕ್ತಿ ಪಡೆದಿರುತ್ತದೆ. ಹಾಗಾಗಿ ಚೀಸ್ ಸೇವನೆ ಮಾನಸಿಕವಾಗಿ ವಿಪರೀತ ಬಳಲುತ್ತಿರುವವರಿಗೆ ಬಹಳ ಅವಶ್ಯಕ.

ಚೀಸ್ ಪೌಷ್ಟಿಕಾಂಶಗಳ ಆಗರ : -
ಒಬ್ಬ ಮನುಷ್ಯನ ಆರೋಗ್ಯಕ್ಕೆ ಪ್ರತಿ ದಿನ ಇಂತಿಷ್ಟು ಪೌಷ್ಟಿಕಾಂಶಗಳ ಅಗತ್ಯತೆ ಎಂದಿರುತ್ತದೆ. ವೈದ್ಯಲೋಕದ ಪ್ರಕಾರ ಅಷ್ಟು ಪ್ರಮಾಣದ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಮನುಷ್ಯನ ದೇಹ ಸೇರಿದರೆ ಮಾತ್ರ ಆತ ಸಂಪೂರ್ಣ ಆರೋಗ್ಯವನ್ನು ಆನಂದವಾಗಿ ಅನುಭವಿಸಲು ಸಾಧ್ಯವಾಗುತ್ತದೆ. ಇಲ್ಲವೆಂದರೆ ಆತನ ಪ್ರತಿ ನಿತ್ಯದ ಆಹಾರದಲ್ಲಿ ಯಾವ ಪೌಷ್ಟಿಕ ಸತ್ವ ಕಡಿಮೆಯಾಗಿರುತ್ತದೆ ಅದಕ್ಕೆ ಸಂಬಂಧ ಪಟ್ಟ ರೋಗರುಜಿನಗಳು ದಿನ ಕಳೆದಂತೆ ಅಂಟಿಕೊಳ್ಳಲು ಪ್ರಾರಂಭವಾಗುತ್ತವೆ.
ಚೀಸ್ ನಲ್ಲಿ ಶೇಕಡ 21% ಕ್ಯಾಲ್ಸಿಯಂ ಅಂಶವಿದ್ದು, ಇದು ಮನುಷ್ಯನ ದಿನದ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುತ್ತದೆ. ಚೀಸ್ ಜೊತೆ ಸಾಕಷ್ಟು ಬಗೆಯ ಹಣ್ಣುಗಳು, ತರಕಾರಿಗಳು ಮತ್ತು ದ್ವಿದಳ ಧಾನ್ಯಗಳ ಸೇವನೆ ಅಭ್ಯಾಸ ಮಾಡಿಕೊಂಡರೆ ಸಂಪೂರ್ಣ ಆರೋಗ್ಯ ಅಭಿವೃದ್ಧಿ ನಿಮ್ಮದಾಗುತ್ತದೆ

ಚೀಸ್ ಉತ್ತಮ ನಿದ್ರೆಗೆ ಸೋಪಾನ : -
ಹಲವಾರು ಮಂದಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಿದ್ರೆ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಇದಕ್ಕೆ ಅವರದೇ ಆದ ಕಾರಣಗಳು ಹಲವಾರು ಇರುತ್ತವೆ ಎಂದು ಗೊತ್ತಿದೆ. ವೈದ್ಯರ ಪ್ರಕಾರ ಒಬ್ಬ ಆರೋಗ್ಯವಂತ ಮನುಷ್ಯ ಪ್ರತಿ ರಾತ್ರಿ ಎಂಟು ಗಂಟೆಗಳ ಕಾಲ ಆರೋಗ್ಯಕರ ನಿದ್ರೆ ಮಾಡಲೇಬೇಕು. ಇದು ಆತನ ದೇಹದ ಪ್ರತಿಯೊಂದು ಅಂಗಾಂಗಗಳಿಗೂ ವಿಶ್ರಾಂತಿಯ ನೆಪದಲ್ಲಿ ಅತ್ಯವಶ್ಯಕ.
ಹಾಗಾಗಿ ರಾತ್ರಿ ಮಲಗುವ ಮುಂಚೆ ಚೀಸ್ ಸೇವನೆ ಮಾಡಿ ಮಲಗಿದರೆ ಉತ್ತಮ ನಿದ್ರೆಯ ಜೊತೆ ಒಳ್ಳೆಯ ಆರೋಗ್ಯ ಕೂಡ ನಿಮ್ಮದಾಗುತ್ತದೆ. ರಾತ್ರಿಯ ಸಮಯದಲ್ಲಿ ಆಗಾಗ ನಿದ್ರೆಯಿಂದ ಎಚ್ಚರವಾಗುವ ಸಮಸ್ಯೆಯನ್ನು ಹೊಂದಿರುವವರು ರಾತ್ರಿ ಊಟವಾದ ಬಳಿಕ ನಿದ್ರೆಗೆ ಮುಂಚೆ ಚೀಸ್ ಸೇವನೆಯ ಅಭ್ಯಾಸ ಮಾಡಿಕೊಳ್ಳಬಹುದು.

ಚೀಸ್ ನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಹೇರಳವಾಗಿವೆ : -
ಒಂದು ಅಧ್ಯಯನ ಹೇಳುವ ಪ್ರಕಾರ ನಾವು ಕುಡಿಯುವ ಮಾಮೂಲಿ ಹಾಲಿಗಿಂತ ಸಾವಯುವ ಹಾಲಿನಲ್ಲಿ ಅತಿ ಹೆಚ್ಚು ಅಂದರೆ 50% ಕ್ಕಿಂತ ಅಧಿಕ ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳು ಇರುವುದು ಕಂಡುಬಂದಿದೆ. ಇದಕ್ಕೆ ಕಾರಣ ಸಾವಯವ ಹಾಲಿನ ಉತ್ಪತ್ತಿಗೆ ಕಾರಣವಾಗುವ ಹಸುಗಳು ತಿನ್ನುವ ಹಚ್ಚ ಹಸಿರಾದ ತಾಜಾ ಹುಲ್ಲು.
ಹಾಗಾಗಿ ಸಾವಯವ ಹಾಲಿನ ಯಾವುದೇ ಪದಾರ್ಥಗಳಿಗೆ ಬಹಳಷ್ಟು ಬೇಡಿಕೆ ಮತ್ತು ಅಷ್ಟೇ ಹೆಚ್ಚಿನ ದರ ಕೂಡ. ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳು ಮನುಷ್ಯನ ದೇಹಕ್ಕೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಇದರಲ್ಲಿ ಮುಖ್ಯವಾಗಿ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವುದು, ಹೃದಯದ ಆರೋಗ್ಯವನ್ನು ರಕ್ಷಣೆ ಮಾಡುವುದು, ಮೂಳೆ ಮತ್ತು ಕೀಲು ನೋವುಗಳ ನಿವಾರಣೆ, ಮಾಂಸ ಖಂಡಗಳ ನೋವು ನಿವಾರಣೆ ಇತ್ಯಾದಿ.

ಮೆಟಬಾಲಿಸಂ ಪ್ರಕ್ರಿಯೆ ಉತ್ತಮಗೊಳ್ಳುತ್ತದೆ : -
ನಮ್ಮ ದೇಹದ ಜೀರ್ಣಾಂಗದಲ್ಲಿ ನಾವು ಸೇವಿಸುವ ಆಹಾರ ಜೀರ್ಣವಾಗುವ ಸಂದರ್ಭದಲ್ಲಿ ಮೆಟಬಾಲಿಸಂ ಪ್ರಕ್ರಿಯೆ ಬಹಳ ಅಗತ್ಯ. ಮೆಟಬಾಲಿಸಂ ಪ್ರಕ್ರಿಯೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಅದು ನಮ್ಮ ದೇಹದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ದೇಹದಲ್ಲಿ ಬೊಜ್ಜು, ಕೊಬ್ಬಿನ ಅಂಶ, ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ. ಜೊತೆಗೆ ಇವುಗಳು ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿ ಸಂಪೂರ್ಣ ಆರೋಗ್ಯವನ್ನು ಹದಗೆಡಿಸುತ್ತವೆ.
ಹಾಗಾಗಿ ನಮ್ಮ ದೇಹದಲ್ಲಿ ನಾವು ಸೇವಿಸಿದ ಆಹಾರದಲ್ಲಿನ ಶಕ್ತಿಯನ್ನು ಹೀರಿಕೊಂಡು ರಕ್ತದ ಒತ್ತಡವನ್ನಾಗಲೀ, ಮಧುಮೇಹವನ್ನಾಗಲೀ ಆಗದಂತೆ ನೋಡಿಕೊಳ್ಳಲು ನೆರವಾಗುವ ಉತ್ತಮ ಮೆಟಬಾಲಿಸಂ ಪ್ರಕ್ರಿಯೆಗೆ ನಾವು ಸೇವಿಸುವ ಚೀಸ್ ಕಾರಣವಾಗುತ್ತದೆ ಎಂದರೆ ತಪ್ಪಾಗಲಾರದು.



Click it and Unblock the Notifications











