Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಹಬ್ಬ ಬರುತ್ತಿದೆ, ಫಿಟ್ನೆನೆಸ್ ಪ್ರಿಯರೇ ಈ ಟಿಪ್ಸ್ ಬಳಸಿ ಹಬ್ಬದೂಟ ಸವಿಯಿರಿ
ದೀಪಾವಳಿ ಅಕ್ಟೋಬರ್ ತಿಂಗಳ ಕೊನೆ ವಾರದಲ್ಲಿ ಆಚರಣೆ ಮಾಡಲಾಗುತ್ತದೆ. ಭಾರತದಲ್ಲಿ ದೀಪಾವಳಿಯನ್ನು ಹಬ್ಬದ ರೀತಿಯಲ್ಲಿ ಕೊಂಡಾಡುತ್ತಾರೆ. ಈ ದಿನ ಹೊಸ ಬಟ್ಟೆ ಧರಿಸಿ ವಿವಿಧ ಆಹಾರಳನ್ನು ತಯಾರಿಸಿ ಮನೆಯವರೆಲ್ಲ ಕೂತು ಸೇವಿಸುತ್ತಾರೆ. ಈ ಆಹಾರ ಪೈಕಿ ಸಿಹಿ ಎಲ್ಲವೂ ಇರುತ್ತದೆ. ಹಬ್ಬ ಆಗಿರುವುದರಿಂದ ವಿಶೇಷ ಭಕ್ಷ್ಯಗಳು ಇರುತ್ತದೆ ಹೀಗಾಗಿ ಜನರು ಆಹಾರ ಸೇವನೆ ಕೊಂಚ ಜಾಸ್ತಿಯೇ ಸೇವನೆ ಮಾಡುತ್ತಾರೆ.
ಆದರೆ ಹಬ್ಬದ ಸಮಯದಲ್ಲಿ ಆಹಾರದ ಬಗ್ಗೆ ಜನರಿಗೆ ಹೆಚ್ಚು ಭಯ ಇರುತ್ತದೆ. ಹೆಚ್ಚುವರಿ ಕಿಲೋಗಳನ್ನು ಹೆಚ್ಚಿಸುವ ಭಯ ಬರುತ್ತದೆ. ಹೀಗಾಗಿ ಯಾವ ಆಹಾರ ತಿನ್ನಬೇಕೆ ಅಥವಾ ತಿನ್ನಬಾರದು, ಎಷ್ಟು ತಿನ್ನುವಾಗ ತಿನ್ನಬೇಕು, ಏನು ತಿನ್ನಬೇಕು ಎಂಬ ಚರ್ಚೆಗಳು ನಮ್ಮ ಮನಸ್ಸಿನಲ್ಲಿ ಸುತ್ತುತ್ತಲೇ ಇರುತ್ತವೆ. ಇನ್ನು ಇಡೀ ವರ್ಷ ಫಿಟ್ ನೆಸ್ ಸಮತೋಲನದಲ್ಲಿ ಇರಿಸಿ ಒಂದೇ ಬಾರಿ ಸಿಕ್ಕಿದ ಆಹಾರವನ್ನು ತಿಂದರೆ ಏನಾಗಲಿದೆ ಎನ್ನುವ ಟೆನ್ಷನ್ ಕೂಡ ಇರುತ್ತದೆ.

ನೀವು ಒಂದು ನೆನಪಿಡಿ ವರ್ಷವಿಡೀ ನಿಯಮಿತವಾಗಿ ಉತ್ತಮ ಆಹಾರ ಮತ್ತು ಮಧ್ಯಮ ದೈಹಿಕ ಚಟುವಟಿಕೆಯೊಂದಿಗೆ ಆರೋಗ್ಯಕರ ಜೀವನಶೈಲಿಯು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ. ಅದೇ ಕೆಲವು ದಿನಗಳ ವಿಚಲನವು ನಿಮ್ಮ ಆರೋಗ್ಯವನ್ನು ಒಳ್ಳೆಯದರಿಂದ ಕೆಟ್ಟದ್ದಕ್ಕೆ ಹೋಗುವಂತೆ ಮಾಡುವುದಿಲ್ಲ. ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಂಡು ಖಾದ್ಯಗಳನ್ನು ಸೇವಿಸಬಹುದಾಗಿದೆ.
ಹಾಗಾದರೆ ದೀಪಾವಳಿಯ ಹಬ್ಬದಂದು ಫಿಟ್ ಆಗೇ ಉಳಿದುಕೊಳ್ಳಲು ಯಾವೆಲ್ಲ ಆಹಾರಗಳನ್ನು ಯಾವ ರೀತಿ ಸೇವಿಸಬೇಕು..? ತಿಂದ ಬಳಿಕ ಕೊರಗುವುದಕ್ಕಿಂತ ಈ ವಿಚಾರಗಳನ್ನು ಓದಿ ತಿಳಿದುಕೊಳ್ಳಿ.

ಕ್ಯಾಲೋರಿ ಬಗ್ಗೆ ಗಮನದಲ್ಲಿರಲಿ
1. ಹಬ್ಬಗಳ ಸಮಯದಲ್ಲಿ ನಿಮ್ಮ ಮೆಚ್ಚಿನ ಭಕ್ಷ್ಯಗಳನ್ನು ತಿನ್ನುವಾಗ ಮಿತವಾಗಿರುವುದು ಮುಖ್ಯವಾಗಿದೆ. ಹೆಚ್ಚುವರಿ ಕ್ಯಾಲೊರಿಗಳ ಸೇವನೆಯನ್ನು ನೀವು ಪರಿಶೀಲಿಸಬೇಕು. ಅಥವಾ ಜಾಸ್ತಿ ಕ್ಯಾಲೋರಿಯ ಆಹಾರ ಇದ್ದರೆ ಕಡಿಮೆ ಆಹಾರ ಸೇವನೆ ಮಾಡಬೇಕು. ಅಂದರೆ ಪೋರ್ಷನ್ ರೀತಿಯಲ್ಲಿ ಆಹಾರ ಸೇವನೆ ಮಾಡಬೇಕು.
2.ಹಬ್ಬದ ಊಟವನ್ನು ಮಾಡಲೇಬೇಕು ಎಂದಾದರೆ ನೀವು ಆಹಾರದಲ್ಲಿ ಕೆಲವೊಂದು ಆಯ್ಕೆಯನ್ನು ಮಾಡಿಕೊಳ್ಳಬೇಕು ಹೌದು, ಅಂದರೆ ನೀವು ಸೇವಿಸುವ ಆಹಾರದಲ್ಲಿ ಯಾವುದರಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ ಎನ್ನುವುದನ್ನು ನೋಡಿಕೊಂಡು ಆ ಆಹಾರಗಳನ್ನು ನಿಮ್ಮ ತಟ್ಟೆಗೆ ಹಾಕಿಕೊಂಡು ಸೇವಿಸಬೇಕು. ಈ ಮೂಲಕ ನೀವು ಫಿಟ್ ಆಗಿರಬಹುದು.
3. ಸಾಧ್ಯವಾದರೆ ರಾತ್ರಿಯ ಬದಲು ಡೇ ಸಮಯದ ಊಟದಲ್ಲಿ ಭಾಗಿಯಾಗಿ. ಹೌದು, ದಿನದ ಸಮಯದಲ್ಲಿ ಹಬ್ಬದ ಊಟದಲ್ಲಿ ಭಾಗಿಯಾಗಿ ನಿಮ್ಮ ಇಷ್ಟದ ಆಹಾರವನ್ನು ಸೇವಿಸಿದರೆ ಸಮಸ್ಯೆ ಇರುವುದಿಲ್ಲ. ಯಾಕೆಂದರೆ ನಿಮಗೆ ದಿನ ಪೂರ್ತಿ ಅದನ್ನು ಕರಗಿಸಲು ಸಮಯ ಇರುತ್ತದೆ. ಒಂದು ವೇಳೆ ರಾತ್ರಿ ಹಬ್ಬದ ಆಹಾರ ಸೇವಿಸಿ ಬಂದು ಮಲಗಿದರೆ ಅದು ಸರಿಯಾಗಿ ಕರಗುವುದಿಲ್ಲ.

ಖಾಲಿ ಹೊಟ್ಟೆಯಲ್ಲಿ ಇರಬೇಡಿ
4.ಪಾರ್ಟಿ ಅಥವಾ ಗೆಟ್-ಟುಗೆದರ್ ನಂತಹ ಕಾರ್ಯಕ್ರಮಕ್ಕೆ ಹೋಗುವ ಮೊದಲು ಹಣ್ಣು ಅಥವಾ ಸ್ಮಾಲ್ ಮೀಲ್ಸ್ ಸೇವಿಸಿದರೆ ಉತ್ತಮ
5. ಹಬ್ಬದ ಪಾರ್ಟಿಗೆ ಹೋಗುವ ಮೊದಲು ಇಡೀ ದಿನ ಉಪವಾಸ ಇರುತ್ತೀರಾ..? ಹಾಗಾದರೆ ಆ ರೀತಿ ಯಾವಾಗಲೂ ಮಾಡಲು ಹೋಗಬೇಡಿ. ಏಕೆಂದರೆ ನೀವು ಖಾಲಿ ಹೊಟ್ಟೆಯಲ್ಲಿ ಹೋದರೆ ಹಸಿವು ಜಾಸ್ತಿ ಇರುವುದರಿಂದ ಹಬ್ಬದ ಊಟವನ್ನು ಜಾಸ್ತಿ ಮಾಡುತ್ತೀರಿ. ಸೇವನೆಯಲ್ಲಿ ನಿಯಂತ್ರಣ ಇರುವುದಿಲ್ಲ. ಹೀಗಾಗಿ ಹೊಟ್ಟೆ ಸ್ವಲ್ಪ ತುಂಬಿದ್ದರೆ ಬೇಕಾದಷ್ಟು ಊಟ ಸೇವಿಸಬಹುದು. ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಪ್ರೊಟೀನ್ ಆಹಾರ ಸೇವಿಸಿ
6.ಹಬ್ಬದ ಊಟವನ್ನು ಸೇವಿಸುವುದಾದರೆ ನೀವು ಯಾವಾಗಲೂ ಯಾವುದೇ ಆಹಾರ ಸೇವಿಸುವುದಕ್ಕಿಂತ ಮೊದಲು ಸೂಪ್, ಮಜ್ಜಿಗೆ ಅಥವಾ ನಿಂಬೆ ಜ್ಯೂಸ್ ನಂತಹ ದ್ರವ ಪಾನೀಯದೊಂದಿಗೆ ನಿಮ್ಮ ಊಟವನ್ನು ಪ್ರಾರಂಭಿಸಿ ಏಕೆಂದರೆ ಅದು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಕ್ಕರೆ-ಸಿಹಿ ಪಾನೀಯಗಳನ್ನು ತಪ್ಪಿಸಿದರೆ ಉತ್ತಮ ಯಾಕೆಂದರೆ ಇವುಗಳು ಹಸಿವನ್ನು ಜಾಸ್ತಿ ಮಾಡುತ್ತದೆ.
7.ಹಬ್ಬದ ಅಥವಾ ಪಾರ್ಟಿಯ ಊಟಕ್ಕೆ ಹೋದರೆ ಮೊದಲು ಪ್ರೋಟೀನ್ ಆಯ್ಕೆಯೊಂದಿಗೆ ತಿನ್ನಲು ಪ್ರಾರಂಭಿ. ಪ್ರೋಟೀನ್ ಭರಿತ ಆಹಾರಗಳಾದ ಬೇಳೆಕಾಳುಗಳು, ಮೊಳಕೆಕಾಳುಗಳು, ಮೊಸರು, ಮಜ್ಜಿಗೆ, ಗ್ರಿಲ್ಡ್ ಚಿಕನ್, ಮೀನು ಇತ್ಯಾದಿಗಳನ್ನು ಸೇರಿಸಿಕೊಂಡು ಸೇವಿಸಬಹುದು.

ಕರಿದ ಆಹಾರಗಳನ್ನು ಕಡಿಮೆ ಸೇವಿಸಿ
8. ಕರಿದ ಆಹಾರ ಮತ್ತು ಸಿಹಿ ಸೇವನೆ ಬಗ್ಗೆ ಗಮನವಿರಲಿ. ಜಾಸ್ತಿ ಸಿಹಿ ಮತ್ತು ಕರಿದ ಆಹಾರ ಸೇವಿಸಬೇಡಿ. ಒಂದು ವೇಳೆ ಸೇವಿಸಬೇಕು ಎಂದಾದರೆ ಎರಡನ್ನು ಒಟ್ಟಿಗೆ ಸೇವಿಸಲು ಹೋಗಬೇಡಿ.
ಹಬ್ಬದ ಊಟ ಮಿಸ್ ಮಾಡಲು ಯಾರು ಹೋಗುವುದಿಲ್ಲ. ಒಂದು ದಿನ ತಿಂದರೆ ಏನು ಆಗುವುದಿಲ್ಲ ಎನ್ನುವ ಅಭಿಪ್ರಾಯ ಎಲ್ಲರಿಗೂ ಇರುತ್ತದೆ. ಹೀಗಾಗಿ ಬೇಕಾಬಿಟ್ಟಿ ತಿನ್ನುತ್ತಾರೆ. ನೀವು ಫಿಟ್ ಆಗಲು ಬಯಸಿದರೆ ಹಬ್ಬದ ಸಮಯದಲ್ಲಿ ಹೇಗೆ ಮತ್ತು ಯಾವ ರೀತಿ ಆಹಾರ ಸೇವಿಸಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ.



Click it and Unblock the Notifications











