Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಣ್ಣೆ V/s ತುಪ್ಪ, ಯಾವುದು ಹೆಚ್ಚುಆರೋಗ್ಯಕರ?

ಅಡುಗೆ ಮನೆಯಲ್ಲಿ ಬೆಣ್ಣೆ ಅಥವಾ ತುಪ್ಪದ ಪರಿಮಳ ಮೂಗಿಗೆ ಬಡೆಯುತ್ತಿದ್ದಂತೆ ಹಸಿವು ಇಲ್ಲದಿದ್ದರು ಆ ಅಡುಗೆ ಸವಿಯಲು ನಾವು ಕಾತರದಿಂದ ಕಾಯುತ್ತೇವೆ ಅಲ್ವಾ? ಹೌದು, ಅಡುಗೆಗೆ ತುಪ್ಪ ಅಥವಾ ಬೆಣ್ಣೆ ಹಾಕಿದರೆ ಆ ಅಡುಗೆಗೆ ಎಣ್ಣೆ ಬಳಸಿ ಮಾಡುವ ಅಡುಗೆಗಿಂತ ಸ್ವಲ್ಪ ರುಚಿ ಅಧಿಕವೇ ಇರುತ್ತದೆ.

ಅದರಲ್ಲೂ ತುಪ್ಪ ಹಾಕಿ ಮಾಡುವ ಸಿಹಿ ಪದಾರ್ಥಗಳಂತೂ ರುಚಿಯಲ್ಲಿ ಅದ್ಭುತವಾಗಿರುತ್ತದೆ. ಇನ್ನು ನಾವು ಮಾಡುವ ದೋಸೆಗೆ ಬೆಣ್ಣೆ ಅಥವಾ ತುಪ್ಪ ಹಾಕಿದರೆ ಆ ದೋಸೆಯ ರುಚಿ ಹೆಚ್ಚುವುದು. ಬೆಣ್ಣೆ ಮತ್ತು ತುಪ್ಪ ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲ ಇವುಗಳಲ್ಲಿ ಪೌಷ್ಠಿಕಾಂಶಗಳಿರುವುದರಿಂದ ಇದನ್ನು ಅಡುಗೆಗೆ ಬಳಸಲಾಗುವುದು.
ಬೆಣ್ಣೆ ಮತ್ತು ತುಪ್ಪವನ್ನುಹಾಲಿನ ಕೆನೆ ಸಂಗ್ರಹಿಸಿ ಮಾಡುವುದಾದರೂ ಅದನ್ನು ತಯಾರಿಸುವ ವಿಧಾನ ಹಾಗೂ ರುಚಿ ಭಿನ್ನವಾಗಿದೆ. ಕೆಲವರಿಗೆ ತುಪ್ಪ ಇಷ್ಟವಾದರೆ, ಇನ್ನು ಕೆಲವರಿಗೆ ಬೆಣ್ಣೆ ಇಷ್ಟ. ತುಪ್ಪದಲ್ಲಿ ಒಳ್ಳೆಯ ಕೊಬ್ಬಿನಂಶವಿದ್ದರೆ ಬೆಣ್ಣೆಯಲ್ಲಿ ಕ್ಯಾಲೋರಿ ಕಡಿಮೆ.

ಬೆಣ್ಣೆ ಮತ್ತು ತುಪ್ಪದ ನಡುವಿನ ವ್ಯತ್ಯಾಸ
ಬೆಣ್ಣೆ ಮತ್ತು ತುಪ್ಪವನ್ನು ಮಾಡುವುದು ಹಾಲಿನ ಕೆನೆಯಿಂದ ಆದರೂ ಅದರ ಗುಣಗಳು ಭಿನ್ನವಾಗಿದೆ. ಇಲ್ಲಿ ನಾವು ತುಪ್ಪ ಹಾಗೂ ಬೆಣ್ಣೆಯ ಗುಣಗಳ ಬಗ್ಗೆ ಹೇಳಲಾಗಿದೆ. ಇದರ ಗುಣಗಳು ತಿಳಿದುಕೊಂಡರೆ ತುಪ್ಪ ಹಾಗೂ ಬೆಣ್ಣೆಯಲ್ಲಿ ನಿಮಗೆ ಯಾವುದು ಒಳ್ಳೆಯದು ಎಂದು ತಿಳಿಯಬಹುದು.

ಪೋಷಕಾಂಶಗಳು
100 ಗ್ರಾಂ ತುಪ್ಪದಲ್ಲಿ 0.24 ಗ್ರಾಂ ನೀರು, 876 ಕ್ಯಾಲೋರಿ, 0.28 ಪ್ರೊಟೀನ್, 4ಮಿಗ್ರಾಂ ಕ್ಯಾಲ್ಸಿಯಂ, 3 ಮಿಗ್ರಾಂ ರಂಜಕ, 22.3 ಮಿಗ್ರಾಂ ಖೊಲೈನ್, 840mcg ವಿಟಮಿನ್, 824 mcg ವಿಟಮಿನ್ ಎ, 8.2 ಎಂಜಿ ವಿಟಮಿನ್ ಇ, 8.6 mcg ವಿಟಮಿನ್ ಕೆ, 193 mcg ಕ್ಯಾರೋಟಿನ್ ಇವುಗಳ ಜೊತೆಗೆ ವಿಟಮಿನ್ ಬಿ12, ವಿಟಮಿನ್ ಬಿ6, ವಿಟಮಿನ್ ಬಿ3 ಅಂಶಗಳಿವೆ. ತುಪ್ಪದಲ್ಲಿ ಅತ್ಯುತ್ತಮವಾದ ಕೊಬ್ಬಿನಂಶವಿದ್ದು ಚಯಾಪಚಯ ಕ್ರಿಯೆಗೆ ತುಂಬಾ ಸಹಕಾರಿ.
ಇನ್ನು 100 ಗ್ರಾಂ ಬೆಣ್ಣೆಯಲ್ಲಿ 16.17ಗ್ರಾಂ ನೀರು, 717 ಕ್ಯಾಲೋರಿ ಶಕ್ತಿ, 0.85ಗ್ರಾಂ ಪ್ರೊಟೀನ್, 24 ಮಿಗ್ರಾಂ ರಂಜಕ, 684 mcg ವಿಟಮಿನ್ ಎ, 671 mcg ರೆಟಿನೋಲ್, 158 mcg ಕ್ಯಾರೋಟಿನ್ ಹಾಗೂ ಸ್ವಲ್ಪ ಕೊಬ್ಬಿನಂಶವಿದೆ.

ಬೆಣ್ಣೆ ಹಾಗೂ ತುಪ್ಪ ಮಾಡುವುದು ಹೇಗೆ?
ಬೆಣ್ಣೆ ಮಾಡುವುದು ಹೇಗೆ?
ಹಾಲನ್ನು ಕಾಯಿಸಿ ಅದು ತಣಿದ ನಂತರ ಕೆನೆಯನ್ನು ಒಂದು ಪಾತ್ರೆಗೆ ಹಾಕಿ ಫ್ರಿಡ್ಜ್‌ನಲ್ಲಿಡಿ. ಒಂದು ಕಪ್ ಅಥವಾ ಒಂದು ಲೋಟದಷ್ಟು ಕೆನೆ ಒಟ್ಟಾದ ನಂತರ ಅದನ್ನು ರಾತ್ರಿ ಫ್ರಿಡ್ಜ್‌ನಿಂದ ತೆಗೆದು ಅದಕ್ಕೆ ಒಂದು ಚಮಚ ಮೊಸರು ಹಾಕಿಟ್ಟರೆ ಅದು ಅದು ಕಡಿಯಲು ಯೋಗ್ಯವಾಗಿರುತ್ತದೆ. ಮಜ್ಜಿಗೆ ಕಡಿಯುವ ಕೋಲು ಇಲ್ಲದಿದ್ದರೆ ಗಾಜಿನ ಬಾಟಲಿನಲ್ಲಿ ಆ ಕೆನೆಯನ್ನು ಹಾಕಿ 10 ನಿಮಿಷ ಚೆನ್ನಾಗಿ ಅಲುಗಾಡಿಸಬೇಕು. ಹೀಗೆ ಮಾಡಿದರೆ ಬೆಣ್ಣೆ ಮೇಲ್ಪದರದಲ್ಲಿ ಶೇಖರವಾಗುತ್ತದೆ, ಮಜ್ಜಿಗೆ ಕೆಳಗಡೆ ಇರುತ್ತದೆ. ಈಗ ಆ ಬೆಣ್ಣೆಯನ್ನು ಒಟ್ಟು ಮಾಡಿ ಒಂದು ಪಾತ್ರೆಯಲ್ಲಿ ಹಾಕಿಡಿ. ಇದನ್ನು ತಿನ್ನಲಿ, ಅಡುಗೆಗೆ ಬಳಸಬಹುದು. ಬೆನ್ನೆಯನ್ನು ಜಿಪ್ ಇರುವ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಡಿ. ಆದರೆ ಬೆಣ್ಣೆ ತುಂಬಾ ಸಮಯ ಇಡಲು ಸಾಧ್ಯವಿಲ್ಲ, ಇದರಿಂದ ತುಪ್ಪ ಮಾಡಿದರೆ ವರ್ಷದವರೆಗೆ ಇಡಬಹುದು.
ತುಪ್ಪ ಮಾಡುವುದು ಹೇಗೆ?
ಬೆಣ್ಣೆಯನ್ನು ಫ್ರಿಡ್ಜ್‌ನಿಂದ ತೆಗೆದು ಚಿಟಿಕೆಯಷ್ಟು ಉಪ್ಪು ಹಾಕಿ 2-3 ತೊಳೆಯಿರಿ. ನಂತರ ಉಪ್ಪು ಹಾಕದೆ 3-4 ಬಾರಿ ತೊಳೆಯಬೇಕು. ಈಗ ಕಡಿಮೆ ಉರಿಯಲ್ಲಿ ಬೆಣ್ಣೆಯನ್ನು ಕರಿಗಿಸಿ, ಅದಕ್ಕೆ ಚಿಟಿಕೆಯಷ್ಟು ಬೆಲ್ಲ ಹಾಕಿ ಉರಿಯಿಂದ ಇಳಿಸಿ, ಆರಿದ ಮೇಲೆ ಘಂ ಪರಿಮಳದ ತುಪ್ಪವನ್ನು ಶುದ್ಧವಾದ ಡಬ್ಬದಲ್ಲಿ ತುಂಬಿಡಿ.

ಅಲರ್ಜಿ
ಕೆಲವರಿಗೆ ಬೆಣ್ಣೆ ತಿಂದರೆ ಅಲರ್ಜಿ ಉಂಟಾಗುತ್ತದೆ. ಅದಕ್ಕೆ ಕಾರಣ ಅದರಲ್ಲಿರುವ ಲ್ಯಾಕ್ಟೋಸ್ ಅಂಶ. ಇದರಲ್ಲಿರುವ ಹಾಲಿನ ಪ್ರೊಟೀನ್ ಲ್ಯಾಕ್ಟೋಸ್ ಅಸಮತೋಲನ ಇರುವ ವ್ಯಕ್ತಿಯಲ್ಲಿ ಗುಳ್ಳೆಗಳು, ತುರಿಕೆ, ಅಸ್ತಮಾ ಉಲ್ಭಣವಾಗುವಂತಹ ತೊಂದರೆಗಳು ಕಾಣಿಸಿಕೊಳ್ಳುವುದು.
ಆದರೆ ತುಪ್ಪದಲ್ಲಿ ಹಾಲಿನ ಯಾವುದೇ ಪ್ರೊಟೀನ್ ಅಂಶವಿಲ್ಲದಿರುವ ಕಾರಣ ಲ್ಯಾಕ್ಟೋಸ್ ಅಸಮತೋಲನ ಇರುವವರಿಗೆ ತುಪ್ಪ ಒಳ್ಳೆಯದು.

ತುಪ್ಪದ ಆರೋಗ್ಯಕರ ಗುಣಗಳು
ಅಡುಗೆಯಲ್ಲಿ ತುಪ್ಪ, ಬೆಣ್ಣೆ
ತುಪ್ಪದಲ್ಲಿ ತಿಂಡಿಗಳನ್ನು ಕರಿಯಬಹುದು, ಆದರೆ ಬೆಣ್ಣೆಯನ್ನು ಅಡುಗೆಗೆ ಬಳಸಬಹುದೇ ಹೊರತು ತಿಂಡಿ ಕರಿಯಲು ಸಾಧ್ಯವಿಲ್ಲ. ಆಹಾರದಲ್ಲಿ ತುಪ್ಪ ಹಾಕಿದರೆ ತುಪ್ಪದ ರುಚಿ ತಿಳಿಯುತ್ತದೆ. ಬೆಣ್ಣೆ ಆಹಾರಕ್ಕೆ ಬಳಸಿದರೆ ಆಹಾರ ರುಚಿಕರವಾಗಿರುತ್ತದೆ, ಆದರೆ ಬೆಣ್ಣೆಯ ಪ್ರತ್ಯೇಕ ರುಚಿ ಬಾಯಿಗೆ ಸಿಗುವುದಿಲ್ಲ. ಅದು ಆ ರುಚಿಯಂತೆಯೇ ಇರುತ್ತದೆ.
ತುಪ್ಪದ ಆರೋಗ್ಯಕರ ಗುಣಗಳು
1. ಕ್ಯಾನ್ಸರ್ ತಡೆಗಟ್ಟುತ್ತದೆ
ತುಪ್ಪದಲ್ಲಿ ವಿಟಮಿನ್ ಇ ಇದ್ದು ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ದೇಹದಲ್ಲಿರುವ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಎಣ್ಣೆಯನ್ನು ಹೆಚ್ಚಿನ ಉಷ್ಣತೆಗೆ ಕಾಯಿಸಿದಾಗ ಕೆಲವೊಂದು ಎಣ್ಣೆಗಳು ಕಾರ್ಸಿನೋಜೆನಿಕ್ ಫ್ರೀ ರ‍್ಯಾಡಿಕಲ್ ಬಿಡುಗಡೆ ಮಾಡುತ್ತದೆ. ಆದರೆ ತುಪ್ಪವನ್ನು ಎಷ್ಟೇ ಉಷ್ಣತೆಗೆ ಬೇಯಿಸಿದಾಗ ಫ್ರೀ ರ‍್ಯಾಡಿಕಲ್ ಬಿಡುಗಡೆಯಾಗುವುದಿಲ್ಲ. ಇದರಿಂದ ಕ್ಯಾನ್ಸರ್ ತಡೆಗಟ್ಟುತ್ತದೆ.
2. ಕಡಿಮೆ ಲ್ಯಾಕ್ಟೋಸ್
ತುಪ್ಪವನ್ನು ತಯಾರಿಸುವಾಗ ಅದರಲ್ಲಿ ಹಾಲಿನ ಪ್ರೊಟೀನ್ ಆದ ಲ್ಯಾಕ್ಟೋಸ್ ಅಂಶ ಇರುವುದಿಲ್ಲ. ಆದ್ದರಿಂದ ಲ್ಯಾಕ್ಟೋಸ್ ಅಸಮತೋಲನ ಇರುವ ವ್ಯಕ್ತಿಗಳು ತುಪ್ವನ್ನು ತಿನ್ನಬಹುದಾಗಿದೆ. ಇದರಲ್ಲಿ ಪರಿಗಣಿಸಬಹುದಾದ ಯಾವುದೇ ಲ್ಯಾಕ್ಟೋಸ್ ಪ್ರಮಾಣವಿಲ್ಲ ಎಂದು ಅಧ್ಯಯನ ಹೇಳಿದೆ.
3. ಹೃದಯ ಆರೋಗ್ಯಕ್ಕೆ ಒಳ್ಳೆಯದು
ತುಪ್ಪವನ್ನು ಮಿತಿಯಲ್ಲಿ ತಿನ್ನುವುದರಿಂದ ಹೃದಯ ಸಂಬಂಧಿ ಸಮಸ್ಯೆ ಉಂಟಾಗದಂತೆ ತಡೆಗಟ್ಟುತ್ತದೆ ಎಂದು ಅಮೆರಿಕನ್ ಹೃದಯ ಸಂಸ್ಥೆ ಹೇಳಿದೆ. ಅಲ್ಲದೆ ಶುದ್ಧ ತುಪ್ಪ ಕೊಲೆಸ್ಟ್ರಾಲ್ ಹಾಗೂ ಲಿಪ್ಪೋಪ್ರೊಟೀನ್ ಪ್ರಮಾಣ ಕಡಿಮೆ ಮಾಡುತ್ತದೆ.

ಬೆಣ್ಣೆಯಲ್ಲಿರುವ ಆರೋಗ್ಯಕರ ಗುಣಗಳು
1. ಜಠರಕರುಳಿನ ಆರೋಗ್ಯಕ್ಕೆ ಒಳ್ಳೆಯದು
ಇದರಲ್ಲಿರುವ ಕೊಬ್ಬಿನಂಶವಾದ ಗ್ಲೈಕೋಸ್ಫಿಂಗೊಲಿಪಿಡ್ಸ್ ಜಠರಕ್ಕೆ ಬ್ಯಾಕ್ಟಿರಿಯಾ ಸೋಂಕು ತಾಗದಂತೆ ರಕ್ಷಣೆ ಮಾಡುತ್ತದೆ.
2. ಥೈರಾಯ್ಡ್ ಆರೋಗ್ಯಕ್ಕೆ ಒಳ್ಳೆಯದು
ದೇಹದಲ್ಲಿ ವಿಟಮಿನ್ ಎ ಕೊರತೆಯಿಂದ ಥೈರಾಯ್ಡ್ ಬರುತ್ತದೆ. ಆದರೆ ಬೆಣ್ಣೆಯಲ್ಲಿ ವಿಟಮಿನ್ ಎ ಅಧಿಕ ಇರುವುದರಿಂದ ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
3. ಸಂಧಿವಾತ ತಡೆಗಟ್ಟುತ್ತದೆ
ಬೆಣ್ಣೆಯಲ್ಲಿ ವೂಲ್ಜನ್ ಫ್ಯಾಕ್ಟರ್ ಎಂಬ ಅಂಶವಿದ್ದು ಇದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಯಾವುದನ್ನು ಆಯ್ಕೆ ಮಾಡುತ್ತಾರೆ?
ತುಪ್ಪ ಹಾಗೂ ಬೆಣ್ಣೆ ಎರಡೂ ಆರೋಗ್ಯಕರವಾದ ಆಹಾರವಾಗಿದ್ದು ಅದರಲ್ಲಿರುವ ಪೋಷಕಾಂಶಗಳು ತುಂಬಾ ಒಂದೇ ರೀತಿ ಇದೆ. ತುಪ್ಪ ಹಾಗೂ ಬೆಣ್ಣೆ ಅದರದೇ ಆದ ರುಚಿ ಹಾಗೂ ಆರೋಗ್ಯಕರ ಗುಣಗಳನ್ನು ಹೊಂದಿದ್ದು ಅವರ ಆರೋಗ್ಯಕ್ಕೆ ಯಾವುದು ಸರಿ ಅನಿಸುತ್ತದೆಯೋ ಅದನ್ನು ಬಳಸಬಹುದು. ಆದರೆ ಲ್ಯಾಕ್ಟೋಸ್ ಅಸಮತೋಲನ ಇರವವರಿಗೆ ಬೆಣ್ಣೆಗಿಂತ ತುಪ್ಪ ಅತ್ಯುತ್ತಮವಾದ ಆಹಾರವಾಗಿದೆ.



Click it and Unblock the Notifications


